ಮುದ್ದೇಬಿಹಾಳ : ತಾಲ್ಲೂಕ ಆರೋಗ್ಯ ಅಧಿಕಾರಿ ಡಾ. ಸತೀಶ್ ತಿವಾರಿ ನೇತೃತ್ವದಲ್ಲಿ ಮುದ್ದೇಬಿಹಾಳ ಪಟ್ಟಣದಲ್ಲಿ ತಂಬಾಕು ನಿಯಂತ್ರಣ ಕೋಶ ಹಾಗೂ ತಾಲ್ಲೂಕು ತಂಬಾಕು ತನಿಖಾದಳದ ಸದಸ್ಯರೊಂದಿಗೆ ಕೊಟ್ಟಾ 2003 ಕಾಯ್ದೆ ಅಡಿ ಗುರುವಾರ ದಾಳಿ ನಡೆಸಲಾಯಿತು.
ಪಟ್ಟಣದ ಬಸವೇಶ್ವರ ವೃತ್ತದಿಂದ ಆಲಮಟ್ಟಿ ರಸ್ತೆ ವರಗೆ ಹಾಗೂ ಮುಖ್ಯ ರಸ್ತೆ ಬಜಾರ್ ಸುತ್ತ ಮುತ್ತ ಮಾರ್ಗಮಧ್ಯದಲ್ಲಿ ಪಾನ್ ಶಾಪ್ ಹಾಗೂ ಹೋಟೆಲ್‌ಗಳಿಗೆ ದಾಳಿ ಮಾಡಿ ದಂಡವನ್ನು ವಿಧಿಸಲಾಯಿತು. ದಾಳಿಯಲ್ಲಿ ಸಾರ್ವಜನಿಕರಿಗೆ ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಲಾಯಿತು.
ತಂಬಾಕು ಉತ್ಪನ್ನ ಮಾರಾಟಗಾರರಿಗೆ ದಂಡ; ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿ ಮಾಲೀಕರಿಗೆ, ವ್ಯಾಪಾರಸ್ಥರಿಗೆ ಕೊಟ್ಟಾ ಕಾಯ್ದೆ ಅಡಿ 10 ಪ್ರಕರಣವನ್ನು ದಾಖಲಿಸಿ ರೂ.3700 ದಂಡ ವಸೂಲು ಮಾಡಲಾಯಿತು.
ಜಾಗೃತಿ ನಾಮಫಲಕಗಳನ್ನು ಅಳವಡಿಸಿ ತಂಬಾಕು ಉತ್ಪನ್ನಗಳ ಜಾಹಿರಾತು ಫಲಕಗಳನ್ನು ತೆರವುಗೊಳಿಸಲಾಯಿತು. ದಾಳಿಯಲ್ಲಿ ಅಬಕಾರಿ ಮುಖ್ಯ ಪೇದೆ ಬಿ.ಎಸ್.ತಡಕಲ್, ಗ್ರಹ ರಕ್ಷಕ ಶರಣು ಹೆಬ್ಬಾಳ, ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಯಲ್ಲಪ್ಪ ಚಲವಾದಿ, ಎಂ.ಎಸ್. ಗೌಡರ, ಆರ್.ಎಸ್. ಸಜ್ಜನ, ಇಸ್ಮಾಯಿಲ್ ವಾಲಿಕಾರ, ಪುರಸಭೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.