ಬೆಳಗಾವಿ: ಬಿಜೆಪಿ (BJP) ರಾಜ್ಯಾಧ್ಯಕ್ಷ ವಿಜಯೇಂದ್ರ ಪಟ್ಟಾಭಿಷೇಕ ಆದ ನಂತರ ಬಿಜೆಪಿಯಲ್ಲಿ ಅತೃಪ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಮತ್ತೊಂದೆಡೆ ಕುಟುಂಬ ರಾಜಕಾರಣ, ಹಣ ಆಮಿಷಕ್ಕೆ ನಿಷ್ಠಾವಂತ ಕಾರ್ಯಕರ್ತರನ್ನು ಬಲಿಕೊಟ್ಟು, ಹಣ ಇದ್ದರೆ ಸಾಕು ಎಂತಹ ಅನರ್ಹರಿಗೂ ಟಿಕೆಟ್ ನೀಡಲಾಗುತ್ತಿದೆ ಎಂಬ ಆಕ್ರೋಶದ ಕೂಗು ವ್ಯಾಪಕವಾಗಿದೆ.
ಮತ್ತೊಂದೆಡೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್, ವಿಜಯೇಂದ್ರ ನೇತೃತ್ವದ ಬಿಜೆಪಿ ರಾಜ್ಯ ನಾಯಕರ ವಿರುದ್ಧ, ಪದೇ ಪದೇ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣಗಳನ್ನು ಬಯಲು ಮಾಡುತ್ತ, ಮುಜುಗರಕ್ಕೆ ಕಾರಣವಾಗುತ್ತಿದ್ದಾರೆ.
Join Our Telegram: https://t.me/dcgkannada
ಇದರ ಬೆನ್ನಲ್ಲೇ ಪಕ್ಷದಲ್ಲಿ ಅಸಮಾಧಾನದ ಕೂಗು ತೀವ್ರವಾಗುತ್ತಿದ್ದು, ಮೈಸೂರು ಚಲೋ ಪಾದಯಾತ್ರೆಗೆ ಪರ್ಯಾಯವಾಗಿ ಪಾದಯಾತ್ರೆ ನಡೆಸುವ ಕುರಿತು ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ಅತೃಪ್ತರು ಸಿದ್ದರಾಗಿದ್ದಾರೆ.
ಇಂದು ಬೆಳಗಾವಿಯ ಹೊರವಯಲದಲ್ಲಿರುವ ಖಾಸಗಿ ರೆಸಾರ್ಟ್ನಲ್ಲಿ ಬಿಜೆಪಿಯ ರೆಬೆಲ್ ನಾಯಕರು ಮಹತ್ವದ ಸಭೆ ನಡೆಸಿದ್ದಾರೆ. ಸಭೆಯಲ್ಲಿ 10ಕ್ಕೂ ಹೆಚ್ಚು ಮಂದಿ ನಾಯಕರು ಭಾಗಿಯಾಗಿದ್ದಾರೆ.
ಇದನ್ನೂ ಓದಿ: DKS vs HDK: ಮತ್ತೆ ಜೈಲಿಗೆ ಡಿಕೆಶಿ… ಮಹತ್ವದ ಸುಳಿವು ಬಿಟ್ಟುಕೊಟ್ಟ ಕುಮಾರಸ್ವಾಮಿ!
ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಬಿಜೆಪಿ(BJP) ಶಾಸಕ ಯತ್ನಾಳ್ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಅದರಲ್ಲೂ ಬಿಎಸ್ವೈ ಮಾಜಿ ಆಪ್ತ ಸಹಾಯಕ ಭಾಗಿಯಾಗಿರುವುದು ಕುತೂಹಲಕ್ಕೂ ಕಾರಣವಾಗಿದೆ.
ಮಾಜಿ ಸಚಿವ ಅರವಿಂದ ಲಿಂಬಾವಳಿ, ಮಾಜಿ ಸಂಸದ ಪ್ರತಾಪ್ ಸಿಂಹ, ಅಣ್ಣಾಸಾಹೇಬ್ ಜೊಲ್ಲೆ, ಕುಮಾರ ಬಂಗಾರಪ್ಪ, ಜಿ.ಎಂ.ಸಿದ್ದೇಶ್ವರ ಭಾಗಿಯಾಗಿದ್ದಾರೆ.
ಈ ಸಭೆಯಲ್ಲಿ ಮೈಸೂರು ಪಾದಯಾತ್ರೆಗೆ ಟಕ್ಕರ್ ನೀಡಲು ಬಿಜೆಪಿ ರೆಬೆಲ್ ಟೀಂ ಮುಂದಾಗಿದೆ. ಪ್ರತ್ಯೇಕ ಪಾದಯಾತ್ರೆ ಮಾಡೋ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಪಾದಯಾತ್ರೆಗೆ ರೆಬೆಲ್ ಮುಖಂಡರಿಂದ ಮುಹೂರ್ತವೂ ಫಿಕ್ಸ್ ಮಾಡಿದಂತಿದೆ.
ಸೆಪ್ಟೆಂಬರ್ 17ರಿಂದಲೇ ರೆಬೆಲ್ ಮುಖಂಡರಿಂದ ಕೂಡಲಸಂಗಮದಿಂದ ಬಳ್ಳಾರಿವರೆಗೆ ಪಾದಯಾತ್ರೆಗೆ ಮಾಡೋ ಸಾಧ್ಯತೆಯೂ ಇದ್ದು, ವಾಲ್ಮೀಕಿ ನಿಗಮ ಹಗರಣ, ಎಸ್ಸಿ, ಎಸ್ಟಿ ಅನುದಾನ ದುರ್ಬಳಕೆಗೆ ವಿರೋಧ ಹೋರಾಟಕ್ಕೆ ಚಿಂತನೆ ನಡೆಸಲಾಗಿದೆ.
ಈ ಕುರಿತು ಹೈಕಮಾಂಡ್ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿ ತೀರ್ಮಾನ ಮಾಡಲಿದ್ದಾರೆ ಎನ್ನಲಾಗಿದ್ದು, ಮುಡಾ ಪಾದಯಾತ್ರೆ ಕೇವಲ ಮೈಸೂರಿಗೆ ಮಾತ್ರ ಸೀಮಿತ ಹೋರಾಟ ಆಗಿತ್ತು. ಆದರೆ ವಾಲ್ಮೀಕಿ ನಿಗಮದ ಹಗರಣ, ಎಸ್ಸಿ, ಎಸ್ಟಿ ಹಣ ದುರ್ಬಳಕೆ, ಇದೆಲ್ಲವೂ ರಾಜ್ಯಕ್ಕೆ ಸಂಬಂಧಿಸಿದ್ದು ಆಗಿದೆ. ಇದರ ವಿರುದ್ಧ ನಾವೂ ಹೋರಾಟ ಮಾಡಬೇಕಿದೆ.
ಪ್ರತ್ಯೇಕ ಪಾದಯಾತ್ರೆಯ ಬಗ್ಗೆ ಕೇಂದ್ರ ನಾಯಕರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಿದ್ದಾರೆ. ಇನ್ನು ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲು ಶೀಘ್ರದಲ್ಲೇ ಮತ್ತೊಮ್ಮೆ ಸಭೆ ಸೇರಲು ಬಿಜೆಪಿ ರೆಬೆಲ್ ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.