ಮುದ್ದೇಬಿಹಾಳ : ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಮುದ್ದೇಬಿಹಾಳದ ಎಸ್.ಎಸ್.ಶಿವಾಚಾರ್ಯರ ಸ್ವತಂತ್ರö್ಯ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಪಪೂ ಕಾಲೇಜು ತಂಡ ವಿಜಯಪುರ ತಂಡ ಪ್ರತಿನಿಧಿಸಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ಈ ಕಾಲೇಜಿನ ಮೂವರು ಆಟಗಾರರು ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ.ಎಸ್.ಎಸ್.ಶಿವಾಚಾರ್ಯ ಕಾಲೇಜಿನ ಸಂದೀಪ ಚವ್ಹಾಣ,ವಿವೇಕಾನಂದ ಲಮಾಣಿ ಹಾಗೂ ಅನೀಲ ತಳಗೇರಿ ಆಯ್ಕೆಯಾದ ಕ್ರೀಡಾಪಟುಗಳು.
ಸ್ಪರ್ಧೆಯಲ್ಲಿ ಸಂದೀಪ ಚವ್ಹಾಣ ಅತ್ಯುತ್ತಮ ದಾಳಿಗಾರನಾಗಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಕ್ರೀಡಾಪಟುಗಳ ಸಾಧನೆಗೆ ವಿಜಯಪೂರ ಜಿಲ್ಲೆಯ ಪಿಯು ಡಿಡಿ ಚಂದ್ರಶೇಖರ ಹೊಸಮನಿ, ಶಾಖಾಧಿಕಾರಿ ಪ್ರಕಾಶ ಗೊಂಗಡಿ, ಕಾಲೇಜಿನ ಕಾರ್ಯದರ್ಶಿ ರವಿ ನಾಯಕ, ಕಾಲೇಜಿನ ಪ್ರಾಚಾರ್ಯರಾದ ಆಯ್.ಎ.ಬಿರಾದಾರ , ತರಬೇತಿದಾರ ಬಸವರಾಜ ಚಿನ್ನಾಪೂರ, ತಂಡದ ಮ್ಯಾನೇಜರ ಚೇತನ ರಾಠೋಡ, ಸಿಬ್ಬಂದಿ ಕ್ರೀಡಾಪಟುಗಳಿಗೆ ಅಭಿನಂದಿಸಿದ್ದಾರೆ.
ರಾಜ್ಯಮಟ್ಟದ ತಂಡದಲ್ಲಿ ವಿಜಯಪುರ ಜಿಲ್ಲಾ ತಂಡವನ್ನು ಸಂದೀಪ ಚವ್ಹಾಣ, ವಿವೇಕಾನಂದ ಲಮಾಣಿ, ಅನೀಲ ತಳಗೇರಿ, ಶಿವ ರಾಠೋಡ,ಭರತ ಕಾಂಬಳೆ, ಸಂಪತ್ ತೊರ್ಲಿ, ದರ್ಶನ ಹುಗ್ಗಿನ್ನವರ, ಆಕಾಶ ಪೂಜಾರಿ, ಅಬ್ದುಲರಜಾಕ ಮಕಾನದಾರ, ಪ್ರಜ್ವಲ ಈಟಿ, ಸಂದೀಪ ಗಾಯಕವಾಡ, ದೇವಾಂಶ ದಯನ್ನವರ ಪ್ರತಿನಿಧಿಸಿದ್ದರು.







