ಮುದ್ದೇಬಿಹಾಳ: ಹಾಕಿ ಬಳಿಕ ಇದೀಗ ಬ್ಯಾಂಡಿ ಹಾಕಿಯಲ್ಲಿ ಮಿಂಚಲು ವಿಜಯಪುರ ಜಿಲ್ಲೆಯ ಪ್ರತಿಭೆಗಳು ಸಿದ್ದರಾಗಿದ್ದಾರೆ.
ಐಸ್ ಸ್ಕೇಟಿಂಗ ಗುರಗಾಂವ್ (ದೆಹಲಿ) ನಲ್ಲಿ ಆಗಸ್ಟ್ 4 ರಿಂದ 6 ರ ವರೆಗೆ ನಡೆಯುವ ಹಾಕಿ ಬ್ಯಾಂಡಿ ಕ್ರೀಡಾ ತರಬೇತಿ ಶಿಬಿರದಲ್ಲಿ
ಮುದ್ದೇಬಿಹಾಳ ಪಟ್ಟಣದ ಏಕಲವ್ಯ ರೋಲರ್ ಸ್ಕೇಟಿಂಗ್ ಸಂಸ್ಥೆಯ 7 ಜನ ಕ್ರೀಡಾಪಟುಗಳಾದ, ಮಹ್ಮದ್ ಆಹಿಲ್ ಎಂ ಅಕ್ಕಲಕೋಟ್, ಹೃದಯಾನಂದ ಅರವಿಂದ ಕೊಪ್ಪ, ಅಬ್ದುಲ್ ರಜಾಕ್ ಗುಡ್ನಾಳ, ವಿಕ್ರಾಂತ ಶಾರದಳ್ಳಿ, ಶಕುಂತಲಾ ಶಾರದಳ್ಳಿ, ಪೃತ್ವಿಗೌಡ ಪಾಟೀಲ್, ನುಮಾನ ಹಾದಿಮನಿ, ಟೀಮ್ ಮ್ಯಾನೇಜರ್ ಆಗಿ ಉಮಾ ಶಾರದಳ್ಳಿ ಅವರು ತರಬೇತಿ ಶಿಬಿರ ಕ್ಕೆ ಆಯ್ಕೆಯಾಗಿದ್ದಾರೆ ಎಂದು ಶಿವಕುಮಾರ ಶಾರದಳ್ಳಿ ಉತ್ತರ ಕರ್ನಾಟಕ ಮತ್ತು ವಿಜಯಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬ್ಯಾಂಡಿ ಅಸೋಸಿಯೇಷನ, ಗುರುಮೂರ್ತಿ ಪ್ರಧಾನ ಕಾರ್ಯದರ್ಶಿ ಕರ್ನಾಟಕ ಬ್ಯಾಂಡಿ ಅಸೋಸಿಯೇಷನ್ ತಿಳಿಸಿದ್ದಾರೆ.
ತರಬೇತಿ ಬಳಿಕ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಹಾಗೂ ಇತರೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಈ ಕ್ರೀಡಾಪಟುಗಳು ಭಾಗವಹಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಏನಿದು ಬ್ಯಾಂಡಿ(ಐಸ್) ಹಾಕಿ: ಸಾಮಾನ್ಯವಾಗಿ
ಹಾಕಿ ಚಿರಪರಿಚಿತ ಕ್ರೀಡೆ ಆದರೆ, ಇತ್ತೀಚೆಗೆ ಬ್ಯಾಂಡಿ ಹಾಕಿ ವೇಗವಾಗಿ ಬೆಳೆಯುತ್ತಿರುವ ಕ್ರೀಡೆಯಾಗಿದೆ. ಸಾಂಪ್ರದಾಯಿಕ ಹಾಕಿಗಿಂತ ಈ ಆಟದ ನಿಯಮಗಳು ಭಿನ್ನವಾಗಿವೆ. ಬ್ಯಾಂಡಿ ಚಳಿಗಾಲದ ಕ್ರೀಡೆಯಾಗಿದೆ. ಪಂದ್ಯಗಳು ಹಿಮಾವೃತ ನೆಲದಲ್ಲಿ ನಡೆಯುತ್ತದೆ. ಐಸ್ ಹಾಕಿ(ಬ್ಯಾಂಡಿ) ಯನ್ನು ದೊಡ್ಡದಾದ ಸಮತಟ್ಟಾದ ಐಸ್ ಮೇಲೆ, ಮೂರು ಇಂಚಿನ (76.2 ಮಿ.ಮೀ) ವಿಸ್ತೀರ್ಣವುಳ್ಳ ಬಿರುಸು ಅಥವಾ ಮೆದು ರಬ್ಬರ್‌ನ ಪಕ್ ಎಂದು ಕರೆಯಲ್ಪಡುವ ಡಿಸ್ಕ್ ನಿಂದ ಆಡಲಾಗುತ್ತದೆ. ಪಕ್ ಅನ್ನು ಉನ್ನತ ಶ್ರೇಣಿಯ ಆಟಗಳಲ್ಲಿ ಐಸ್‌ನ ಮೇಲೆ ಜಿಗಿತ ಮತ್ತು ಘರ್ಷಣೆಯನ್ನು ಕಡಿಮೆ ಮಾಡಲು ಗಟ್ಟಿಗೊಳಿಸಲಾಗಿರುತ್ತದೆ. ಎರಡು ಸ್ಟೇಟರ್ ತಂಡಗಳ ಮಧ್ಯೆ ಆಟದ ಸ್ಪರ್ಧೆ ಏರ್ಪಡುತ್ತದೆ.