ಶಹಾಪೂರ : ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕು ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಸಮೂಹ ಶಿಕ್ಷಣ ಸಂಸ್ಥೆಯಿAದ ಜ.25ರಂದು ಶಹಾಪೂರದಲ್ಲಿ ಆಕ್ಸಫಡ ಪಾಟೀಲ್ಸ್ ಡೈಮಂಡ್ ಹಂಟ್ ಅವಾರ್ಡ್ ಸ್ಪರ್ಧೆ ಆಯೋಜಿಸಿದೆ ಎಂದು ಸಂಸ್ಥೆಯ ಚೇರಮನ್ ಎಂ.ಎಸ್.ಪಾಟೀಲ, ಆಡಳಿತಾಧಿಕಾರಿ ಅಮೀತಗೌಡ ಪಾಟೀಲ ತಿಳಿಸಿದ್ದಾರೆ.
ಪರೀಕ್ಷೆಯನ್ನು 10ನೇ ತರಗತಿ ಪರೀಕ್ಷೆ ಬರೆದಿರುವ ರಾಜ್ಯ ಪರೀಕ್ಷಾ ಮಂಡಳಿ, ಐಸಿಎಸ್‌ಇ,ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯಲಿದ್ದು ಇದನ್ನು ಪ್ರಥಮ ಪಿಯುಸಿ ಪರೀಕ್ಷೆಯ ಪ್ರವೇಶ ಪರೀಕ್ಷೆ ಎಂದು ಪರಿಗಣಿಸಲಾಗುತ್ತದೆ.ಪರೀಕ್ಷೆ ಶಹಾಪೂರದ ಕೋರ್ಟ್ ಹತ್ತಿರ ಇರುವ ಶಾರದಾ ವಿದ್ಯಾನಿಕೇತನ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಮದ್ಯಾಹ್ನ 12ಕ್ಕೆ ಪರೀಕ್ಷೆ ನಡೆಯಲಿದೆ.
ಪ್ರಥಮ ಸ್ಥಾನ ಪಡೆದುಕೊಳ್ಳು ವಿದ್ಯಾರ್ಥಿಗೆ 50 ಸಾವಿರ ರೂ.,ಎರಡನೇ ಬಹುಮಾನ 40 ಸಾವಿರ ರೂ., ಮೂರನೇ ಬಹುಮಾನ 30 ಸಾವಿರ ರೂ., ನಾಲ್ಕನೇ ಬಹುಮಾನ 15 ಸಾವಿರ ರೂ., ಐದನೇ ಬಹುಮಾನ 10 ಸಾವಿರ, ಆರನೇ ಬಹುಮಾನ ಐದು ಸಾವಿರ ರೂ. ಹಾಗೂ ಅತೀ ಹೆಚ್ಚು ಅಂಕ ಪಡೆದ ಮೊದಲ ಹತ್ತು ವಿದ್ಯಾರ್ಥಿಗಳಿಗೆ 2500 ರೂ. ನಗದು ಬಹುಮಾನ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಆಸಕ್ತ ವಿದ್ಯಾರ್ಥಿಗಳು ವಿದ್ಯಾರ್ಥಿ ಹೆಸರು,ತರಗತಿ,ಶಾಲೆ ಹೆಸರು,ಮೊಬೈಲ್ ನಂಬರ್‌ನ್ನು 9380095756ಗೆ ಮೆಸೇಜ್ ಕಳುಹಿಸಬಹುದಾಗಿದೆ.ಹೆಚ್ಚಿನ ಮಾಹಿತಿಗೆ 7483147040,8310035858ನ್ನು ಸಂಪರ್ಕಿಸಬಹುದಾಗಿದೆ.



