ಭಾರತ ಸ್ವರ್ಗಕ್ಕೆ ದ್ವಾರ ; ಪುನೀತ ಕೆರೆಹಳ್ಳಿ
ಮುಧೋಳ: ಭಾರತ ಸ್ವರ್ಗಕ್ಕೆ ದ್ವಾರ ಇಲ್ಲಿ ಹುಟ್ಟಿದವರು ಎಲ್ಲವನ್ನೂ ದೈವಸಮಾನವಾಗಿ ಕಾಣುತ್ತಾರೆ ಇಲ್ಲಿನ ಸಂಸ್ಕಾರ ಸಂಸ್ಕೃತಿ ಅಂತದ್ದು ಎಂದು ದೇವಾನುದೇವತೆಗಳು ಭಾರತದ ಬಗ್ಗೆ ಮೆಚ್ಚುವೆ ವ್ಯಕ್ತಪಡಿಸಿದ್ದಾರೆ.
ನಮ್ಮಲ್ಲಿ ರಾಜರ ಆಡಳಿತವಿದ್ದಾಗ. ಪ್ರತಿಯೊಬ್ಬ ರಾಜ ತಾನು ಯುದ್ದಗೆದ್ದ ಬಳಿಕ ಜಯದ ಸಂಕೇತವಾಗಿ ಒಂದು ದೇವಾಲಯ ಕಟ್ಟಿಸುತ್ತಿದ್ದರು. ಇಂತಹ ಸುಸಂಸ್ಕೃತ ರಾಷ್ಟ್ರದ ಮೇಲೆ ಇಸ್ಲಾಂ ಧರ್ಮದ ಕ್ರೂರತೆಯ ದಾಳಿ ನಡೆದು ನಮ್ಮ ಸಂಸ್ಕೃತಿಯ ಮೇಲೆ ಹಾನಿಯೆಸಗಿತು ಎಂದು ಪುನೀತ ಕೆರೆಹಳ್ಳಿ ಹೇಳಿದರು.
ಶನಿವಾರ ನಗರದ ವೆಂಕಟೇಶ ಮಹಾರಾಜ ಕೆರೆಯ ಹತ್ತಿರ ಶಿವಾಜಿ ನಗರದಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಕಂಚಿನ ಮೂರ್ತಿ ಅನಾವರಣಾ ಸಮಾರಂಭದಲ್ಲಿ ಅನೀರಿಕ್ಷಿತವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಧರ್ಮಪಾಲನೆಗೆ ಹೆಸರಾಗಿದ್ದ ಪೃಥ್ವಿರಾಜ್ ಚೌವಾಣ ಮಹ್ಮದ ಘೋರಿಯ ಸೈನ್ಯ ನಿರಾಯುಧವಾಗಿದ್ದಾಗ ಕತ್ತಿ ಎತ್ತುವುದಿಲ್ಲ. ಆದರೆ ಸೂರ್ಯಾಸ್ತದ ಸಮಯದಲ್ಲಿ ನಿರಾಯಧರಾದ ಪೃಥ್ವಿರಾಜ್ ಚೌವಾಣ್ ಸೈನ್ಯದ ಮೇಲೆ ಘೋರಿ ದಾಳಿ ಮಾಡಿ ಮೋಸದಿಂದ ಯುದ್ದ ಗೆಲ್ಲುತ್ತಾನೆ. ಇಸ್ಲಾಮಿಗರಿಗೆ ನಿಯತ್ತು ಇಲ್ಲ ಎಂಬುದು ಇತಿಹಾಸದಿಂದಲೇ ಗೊತ್ತಾಗುತ್ತದೆ ಎಂದರು.
ನಮ್ಮ ರಾಜರು ಆರಂಭದಲ್ಲಿ ಯದ್ದವನ್ನು ಸೋತಿರುವ ಇತಿಹಾಸವೇ ಇಲ್ಲ. ಆದರೆ ನಾವು ಧರ್ಮಪಾಲನೆಯಿಂದ ಯುದ್ದವನ್ನು ಸೋತಿರುವೆವು. ಆದರೂ ಇಂದಿಗೂ ನಮ್ಮ ಧರ್ಮ ತನ್ನ ಶ್ರೇಷ್ಠತೆ ಕಾಪಾಡಿಕೊಳ್ಳುವುದಕ್ಕೆ ನಮ್ಮ ಧರ್ಮನಿಷ್ಠೆಯೇ ಕಾರಣ ಎಂದರು.
ರಜಪೂತರು ನಮ್ಮ ಧರ್ಮ ರಕ್ಷಣೆಗೆ ಅಪಾರ ಕೊಡುಗೆ ನೀಡಿದ್ದಾರೆ ಒಬ್ಬರ ನಂತರ ಒಬ್ಬರಂತೆ ಮುಸ್ಲಿಂ ರಾಜರು ಮುಕ್ಕಾಲು ಭಾಗ ಭಾರತವನ್ನು ವಶಪಡಿಸಿಕೊಂಡಿರುತ್ತಾರೆ. 15-16ನೇ ಶತಮಾನದಲ್ಲಿ ದಕ್ಷಿಣ ಭಾರತದಲ್ಲಿ ಓರ್ವ ಜಹಾಗೀರದಾರನ ಮಗನಾಗಿ ಹುಟ್ಟಿ ಛತ್ರಪತಿ ಶಿವಾಜಿ ಮಹಾರಾಜ ಕ್ರೌರ್ಯಕ್ಕೆ ಕ್ರೌರ್ಯ, ಶೌರ್ಯಕ್ಕೆ ಶೌರ್ಯದಿಂದ ವೈರಿಗಳ ಭಾಷೆಯಲ್ಲಿಯೇ ಉತ್ತರ ನೀಡಿ ಹಿಂದು ಧರ್ಮರಕ್ಷಣೆಗೆ ಕಂಕಣ ಕಟ್ಟಿನಿಂತ ಕೀರ್ತಿ ಶಿವಾಜಿ ಮಹಾರಾಜರಿಗೆ ಸಲ್ಲುತ್ತದೆ ಎಂದರು.
ಕನ್ಹೇರಿಮಠದ ಶ್ರೀ ಅದೃಷ್ಯ ಕಾಡಸಿದ್ದೇಶ್ವರ ಮಹಾ ಸ್ವಾಮೀಜಿ ಮಾತನಾಡಿ ಶಿವಾಜಿ ಮಹಾರಾಜರ ತತ್ವ ಆದರ್ಶ ಇಂದಿನಜನರಿಗೆ ಸ್ಪೂರ್ತಿ ಅವರಲ್ಲಿನ ಶೌರ್ಯ,ಸಾಹಸದ ವ್ಯಕ್ತಿತ್ವ ಅನುಕರಣೀಯ ಎಂದು ಅವರ ಜೀವನದ ಹಲವಾರು ಘಟನೆಗಳನ್ನು ನೆನಪಿಸಿದರು.
ಶಿರೋಳದ ರಾಮಾರೂಢ ಮಠದ ಶ್ರೀ ಶಂಕರಾರೂಢ ಮಹಾ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಶ್ಯಾಮ ನಿಂಬಾಳಕರ, ಆನಂದ ತೋಟದಾರ,ಸುರೇಶ ಶಿಂಧೆ,ಯುವರಾಜ ಪವಾರ,ಸಾಗರ ರಜಪೂತ ,ಮಂಜುನಾಥ ಘೋರ್ಪಡೆ,ಸುನೀಲ ನಿಂಬಾಳಕರ,ಸದಾ ಜಾದವ ಸೇರಿದಂತೆ ಇತರರು ಇದ್ದರು.
ಶ್ರೀ ಕಾಂತ ಶೆಟ್ಟಿಗೆ ನಿರ್ಬಂಧ ಕೋಮು ಸಾಮರಸ್ಯಕ್ಕೆ ಧಕ್ಕೆ : ನಗರದ ಶಿವಾಜಿ ನಗರದಲ್ಲಿ ಹಿಂದು ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜ ಅವರ ಕಂಚಿನ ಮೂರ್ತಿ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭಾರಿ ಪ್ರಮಾಣದಲ್ಲಿ ಹಿಂದು ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಮುಖ್ಯ ಭಾಷಣಕಾರರಾಗಿ ಶ್ರೀಕಾಂತ ಶೆಟ್ಟಿ ಪಾಲ್ಗೊಳ್ಳುವವರಿದ್ದರು. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದನ್ನು ತಡೆಯಲು ಅವರಿಗೆ ಜಿಲ್ಲೆಯ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನಗರ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು, ಮತೀಯವಾಗಿ ಸಣ್ಣ ಘಟನೆ ಸಂಭವಿಸಿದರೂ ರಾಜ್ಯ, ರಾಷ್ಟ್ರ ವ್ಯಾಪ್ತಿಯಲ್ಲಿ ಪ್ರಚಾರ ಪಡೆಯುತ್ತದೆ. ಬಳಿಕ ವಿವಿಧ ಅನ್ಯ ಧಮೀರ್ಯ ನಾಯಕರು ಭೇಟಿ ನೀಡಿ ಭಾಷಣ ಮಾಡುವುದರಿಂದ ಸಾಮರಸ್ಯದ ಜೀವನಕ್ಕೆ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಸಂಭವ ಇರುತ್ತದೆ. ಮುಧೋಳದಲ್ಲಿದ್ದ ಮತೀಯ ದ್ವೇಷಮಯ ವಾತಾವರಣ ತಿಳಿಯಾಗುತ್ತಿದ್ದು, ಉಭಯ ಕೋಮಿನವರು ಹಿಂದಿನ ಕಹಿ ಘಟನೆ ಮರೆತು ಸಾಮರಸ್ಯದಿಂದ ಇದ್ದಾರೆ. ಮತ್ತೆ ಈ ಪ್ರದೇಶದಲ್ಲಿ ಶ್ರೀಕಾಂತ ಶೆಟ್ಟಿ ಪ್ರಚೋದನಕಾರಿ ಭಾಷಣ ಮಾಡಿ, ಕೋಮು ಸಾಮರಸ್ಯ ಹದಗೆಡಬಹುದು. ಅವರ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಹಿನ್ನೆಲೆಯಲ್ಲಿ ವಿವಿಧೆಡೆ ಪ್ರಕರಣವೂ ದಾಖಲಾಗಿದೆ ಎಂಬ ಒಕ್ಕಣೆ ಜಿಲ್ಲಾಡಳಿತದ ಆದೇಶದಲ್ಲಿದೆ. ಈ ಕಾರಣಕ್ಕಾಗಿ ಅವರ ಬದಲಿಗೆ ಪುನೀತ ಕೆರೆಹಳ್ಳಿ ಅಗಮಿಸಿ ಭಾಷಣ ಮಾಡಿದರು.
ನಗರದೆಲ್ಲೆಡೆ ಪೋಲಿಸ್ ಬಂದೂಬಸ್ತ ಎದ್ದು ಕಾಣುತ್ತಿತ್ತು ಯಾವೂದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿದರು.