Soon installation of Rayanna's idol in Muddebihala: M.N.Madari

ಮುದ್ದೇಬಿಹಾಳದಲ್ಲಿ ಶೀಘ್ರ ರಾಯಣ್ಣನವರ ಮೂರ್ತಿ ಪ್ರತಿಷ್ಠಾಪನೆ : ಎಂ.ಎನ್.ಮದರಿ

ಮುದ್ದೇಬಿಹಾಳದಲ್ಲಿ ಶೀಘ್ರ ರಾಯಣ್ಣನವರ ಮೂರ್ತಿ ಪ್ರತಿಷ್ಠಾಪನೆ : ಎಂ.ಎನ್.ಮದರಿ

ಮುದ್ದೇಬಿಹಾಳ : ಕೊಲ್ಹಾಪೂರದಲ್ಲಿ ಸಂಗೊಳ್ಳಿ ರಾಯಣ್ಣನವರ ಕಂಚಿನ ಮೂರ್ತಿ ಸಿದ್ಧವಾಗಿದ್ದು ಎರಡ್ಮೂರು ದಿನಗಳಲ್ಲಿ ಮುದ್ದೇಬಿಹಾಳಕ್ಕೆ ಕರೆತರುವ ಕೆಲಸ ಮಾಡುತ್ತೇವೆ ಎಂದು ಕುರುಬ ಸಮಾಜದ ತಾಲ್ಲೂಕು ಅಧ್ಯಕ್ಷ ಎಂ. ಎನ್. ಮದರಿ ಹೇಳಿದರು.

ತಾಲ್ಲೂಕು ಕುಂಟೋಜಿಯ ಪರಮಹಂಸ ವಿದ್ಯಾವರಣ್ಯ ಆಶ್ರಮದ ಆವರಣದಲ್ಲಿ ಶುಕ್ರವಾರ ಸಂಗೊಳ್ಳಿ ರಾಯಣ್ಣನವರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕುಂಟೋಜಿ, ಕವಡಿಮಟ್ಟಿ ಗ್ರಾಮಗಳಲ್ಲಿ ರಾಯಣ್ಣನ ಮೂರ್ತಿಗಳು ಪ್ರತಿಷ್ಠಾಪನೆಯಾಗಿವೆ. ಆದರೆ, ಮುದ್ದೇಬಿಹಾಳ ನಗರದಲ್ಲಿ ಆದಷ್ಟು ಶೀಘ್ರ ಮೂರ್ತಿ ಅನಾವರಣ ಕಾರ್ಯಕ್ರಮ ಎಲ್ಲ ಸಮಾಜದ ಸಹಕಾರದೊಂದಿಗೆ ದೊಡ್ಡಮಟ್ಟದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಸರೂರು ಅಗತೀರ್ಥದ ರೇವಣಸಿದ್ದೇಶ್ವರ ಶಾಂತಮಯ ಸ್ವಾಮೀಜಿ ಮಾತನಾಡಿ, ಶೌರ್ಯ ಸಾಹಸ, ತ್ಯಾಗಕ್ಕೆ ಹೆಸರಾದ ಸಂಗೊಳ್ಳಿ ರಾಯಣ್ಣನವರ ಮೂರ್ತಿ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಡೊಳ್ಳು ಬಡಿದು ಕುಣಿದು ಕುಪ್ಪಳಿಸುವ ಬದಲು ಹಾಲುಮತ ಜಾಗೃತಿ ಹೊಂದಬೇಕಾಗಿದೆ. ಸಮಾಜ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು ಎಂದು ಹೇಳಿದರು.

ಎಂ.ಜಿ.ಎಂ.ಕೆ ಕಾಲೇಜಿನ ಪ್ರಾಚಾರ್ಯ ಎಸ್.ಕೆ.ಹರನಾಳ ಮಾತನಾಡಿ, ಸಂಗೊಳ್ಳಿ ರಾಯಣ್ಣನವರ ತ್ಯಾಗ, ಬಲಿದಾನದ ಆದರ್ಶಗಳು ಯುವಕರಲ್ಲಿ ಬರಬೇಕು. ಬೇರೊಂದು ಸಮಾಜದ ಮಹಿಳೆಯನ್ನು ತನ್ನ ತಾಯಿ ಎಂದು ಒಪ್ಪಿಕೊಂಡು ಅವರ ಜೀವ ಕಾಪಾಡಿದ ಹೋರಾಟಗಾರ ರಾಯಣ್ಣ ಎಂದರು.

ತಿಂಥಣಿ ಕನಕ ಗುರುಪೀಠದ ಸಿದ್ದರಮಾನಂದಪುರಿ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಸರೂರ ಹಾಲುಮತ ಗುರುಪೀಠದ ಶಿವಕುಮಾರ ಸ್ವಾಮೀಜಿ, ವಿದ್ಯಾವರಣ್ಯಯೋಗೇಶ್ವರ ಆಶ್ರಮದ ಮುರುಳೀಧರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಬಸವೇಶ್ವರ ದೇವಸ್ಥಾನ ಕಮೀಟಿ ಅಧ್ಯಕ್ಷ ಗುರುಲಿಂಗಪ್ಪ ಸುಲ್ಲಳ್ಳಿ, ಮುಖಂಡರಾದ ರುದ್ರಯ್ಯ ಮಠ, ಸಂಗನಗೌಡ ಪಾಟೀಲ, ರವಿ ಜಗಲಿ, ಬಿ.ಬಿ.ಚಿಗರಿ, ಎಸ್.ಎನ್.ಕಂಬಳಿ, ಎಂ.ಎಂ.ನಾಟೇಕರ, ಬಿ.ಎಸ್.ಹೂಗಾರ, ಶ್ರೀಶೈಲ ಸಜ್ಜನ, ಸೋಮಲಿಂಗಪ್ಪ ಹೊಸಮನಿ, ಬಸವರಾಜ ಹುಲಗಣ್ಣಿ, ಬಸವರಾಜ ಬಡಿಗೇರ, ಕಾಳಿದಾಸ ಜಟಗುಣಿ ಮೊದಲಾದವರು ಇದ್ದರು.
ಕಾರ್ಯಕ್ರಮದಲ್ಲಿ ದಾನಿಗಳನ್ನು ಸನ್ಮಾನಿಸಲಾಯಿತು. ಮುದ್ದೇಬಿಹಾಳ ಪಟ್ಟಣದಿಂದ ಕುಂಟೋಜಿಯವರೆಗೆ ಅದ್ದೂರಿಯಾಗಿ ರಾಯಣ್ಣನವರ ಮೂರ್ತಿ ಮೆರವಣಿಗೆ ನಡೆಸಲಾಯಿತು.

Latest News

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸದುಗೌಡ ಆಯ್ಕೆ

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸದುಗೌಡ ಆಯ್ಕೆ

ಮುಧೋಳ : ನಗರದ ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಕೋ ಅರ್ಡಿನೆಟರ್ ಅಗಿದ್ದ ನಗರದ

ಮಹಿಳಾ ಕಾಂಗ್ರೆಸ್‌ಗೆ ಅಕ್ಷತಾ ಚಲವಾದಿ ನೇಮಕ

ಮಹಿಳಾ ಕಾಂಗ್ರೆಸ್‌ಗೆ ಅಕ್ಷತಾ ಚಲವಾದಿ ನೇಮಕ

ಮುದ್ದೇಬಿಹಾಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷೆಯಾಗಿ ಅಕ್ಷತಾ ಶರಣು ಚಲವಾದಿ ಅವರನ್ನು

ರಾಜಕಾರಣ ಹೊರಗಿಟ್ಟು ಮಠದೊಳಕ್ಕೆ ಬನ್ನಿ-ಅಮರೇಶ್ವರ ದೇವರು

ರಾಜಕಾರಣ ಹೊರಗಿಟ್ಟು ಮಠದೊಳಕ್ಕೆ ಬನ್ನಿ-ಅಮರೇಶ್ವರ ದೇವರು

ಮುದ್ದೇಬಿಹಾಳ : ಆಸ್ತಿ ನೋಡಿಕೊಂಡು ನಾವು ಈ ಮಠಕ್ಕೆ ಬಂದಿಲ್ಲ. ಭಕ್ತರ ಭಕ್ತಿಯೇ ಶ್ರೀಮಠಕ್ಕೆ

ಅನಿರ್ದಿಷ್ಟವಧಿ ಧರಣಿಯಲ್ಲಿ ಭಾಗವಹಿಸುವ‌ ಕಾರ್ಮಿಕರಿಗೆ ನೆರವು ಘೋಷಿಸಿದ ಅಶ್ವಥ ಟಿ ಮರೀಗೌಡ್ರು

ಅನಿರ್ದಿಷ್ಟವಧಿ ಧರಣಿಯಲ್ಲಿ ಭಾಗವಹಿಸುವ‌ ಕಾರ್ಮಿಕರಿಗೆ ನೆರವು ಘೋಷಿಸಿದ ಅಶ್ವಥ ಟಿ ಮರೀಗೌಡ್ರು

ಹುಬ್ಬಳ್ಳಿ : ಧಾರವಾಡ ವಿಭಾಗದ ನೊಂದಾಯಿತ ಕಾರ್ಮಿಕ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ನಡೆಯಲಿರುವ ಧರಣಿಯಲ್ಲಿ

ಕೀರ್ತಿ ಚಾಲಕ್ ನೂತನ ತಹಸೀಲ್ದಾರ್ ಅಧಿಕಾರ ಸ್ವೀಕಾರ

ಕೀರ್ತಿ ಚಾಲಕ್ ನೂತನ ತಹಸೀಲ್ದಾರ್ ಅಧಿಕಾರ ಸ್ವೀಕಾರ

ಮುದ್ದೇಬಿಹಾಳ : ಪಟ್ಟಣದ ತಾಲ್ಲೂಕು ಆಡಳಿತ ಸೌಧದಲ್ಲಿ ನೂತನ ತಹಸೀಲ್ದಾರ್ ಕೀರ್ತಿ ಚಾಲಕ ಅವರು ಶುಕ್ರವಾರ ಅಧಿಕಾರ ವಹಿಸಿಕೊಂಡರು. ಅವರನ್ನು ನಿಡಗುಂದಿ ತಹಸೀಲ್ದಾರ್ ಎ.ಡಿ.ಅಮರವಾದಗಿ, ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ ಜೂಲಗುಡ್ಡ, ಕಂದಾಯ ನಿರೀಕ್ಷಕ ಶ್ರೀನಿವಾಸ ಹುನಗುಂದ, ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ತಾಲ್ಲೂಕು ಅಧ್ಯಕ್ಷ ಮನೋಜ ರಾಠೋಡ, ಪದಾಧಿಕಾರಿಗಳಾದ ರಿಯಾಜ್ ನಾಯ್ಕೋಡಿ, ಆರ್.ಎಸ್.ಹೊಸೂರ, ಎ.ಎಸ್.ಬಾಬಾನಗರ ಇದ್ದರು. ಈ ಮುಂಚೆ ತಾಳಿಕೋಟಿ ತಾಲ್ಲೂಕು ತಹಸೀಲ್ದಾರ್ ಆಗಿ ಸೇವೆ

ಸರ್ಕಾರದ ಅಣಕು ಶವಯಾತ್ರೆಗೆ ದೊರೆಯದ ಅವಕಾಶ: ಒಳಮೀಸಲಿಗಾಗಿ ಮಾದಿಗ ಸಮುದಾಯದಿಂದ ಪ್ರತಿಭಟನೆ

ಸರ್ಕಾರದ ಅಣಕು ಶವಯಾತ್ರೆಗೆ ದೊರೆಯದ ಅವಕಾಶ: ಒಳಮೀಸಲಿಗಾಗಿ ಮಾದಿಗ ಸಮುದಾಯದಿಂದ ಪ್ರತಿಭಟನೆ

ಮುದ್ದೇಬಿಹಾಳ : ಮಾದಿಗ ಒಳಮೀಸಲಾತಿ ಹೋರಾಟ ಸಮಿತಿಯಿಂದ ಶುಕ್ರವಾರ ಪಟ್ಟಣದಲ್ಲಿ ಏರ್ಪಡಿಸಿದ್ದ ಸರ್ಕಾರದ ಅಣಕು ಶವಯಾತ್ರೆಗೆ ಪೊಲೀಸರು ಅವಕಾಶ ಮಾಡಿಕೊಡಲಿಲ್ಲ. ಆದರೆ ಪ್ರತಿಭಟನಾಕಾರರು ಅಂಬೇಡ್ಕರ್ ಸರ್ಕಲ್‌ದಿಂದ ತಹಸೀಲ್ದಾರ್ ಕಚೇರಿಯವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿದರು. ವಕೀಲ ಕೆ.ಬಿ.ದೊಡಮನಿ ಮಾತನಾಡಿ, ಆಳುವ ಸರ್ಕಾರಗಳು ಸಾರ್ವಜನಿಕ ನ್ಯಾಯ ಕೊಟ್ಟಿಲ್ಲ. ಸುಪ್ರೀಂಕೋರ್ಟ್ ನಿರ್ದೇಶನ ಇದ್ದರೂ ಸಿಎಂ ಸಿದ್ಧರಾಮಯ್ಯ ಅಹಿಂದ ನಾಯಕ, ಶೋಷಿತ ಸಮುದಾಯದ ಪರ ಎಂದು ಹೇಳುತ್ತಾ ಮೇಲ್ವರ್ಗದ ಗುಲಾಮರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.