
ಕಲಕೇರಿ: ವಿಧ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುವದರ ಜೊತೆಗೆ ಅವರಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವದು ಮುಖ್ಯವಾಗಿದೆ. ವಿಧ್ಯಾರ್ಥಿಗಳನ್ನು ಕೇವಲ ಅಂಕಗಳಿಕೆಗಾಗಿ ಅವರನ್ನು ತಯಾರು ಮಾಡುವ ಬದಲಾಗಿ ದೇಶದ ಸತ್ಪಜೆಯಾಗಿ ಹೊರಹೊಮ್ಮುವಂತ ನೈತಿಕ ಶಿಕ್ಷಣದ ಅವಶ್ಯಕತೆಯಿದ್ದು ಈ ಕೆಲಸವನ್ನು ತುರಕನಗೇರಿಯ ಶ್ರೀ ಸಿದ್ದಗಂಗಾ ಶಿಕ್ಷಣ ಸಂಸ್ಥೆ ಈ ಭಾಗದ ಅನಾಥ ಹಾಗೂ ನಿರ್ಗತಿಕ, ಕಡುಬಡವ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವದರ ಮೂಲಕವಾಗಿ ಮಾಡುತ್ತಿದೆ ಎಂದು ದೇವರಹಿಪ್ಪಗಿ ಶಾಸಕ ರಾಜುಗೌಡ ಪಾಟೀಲ ಕುದರಿಸಾಲೋಡಗಿ ಅವರು ಹೇಳಿದರು.

ಕಲಕೇರಿ ಸಮಿಪದ ತುರಕುನಗೇರಿ ಗ್ರಾಮದಲ್ಲಿ ಶನಿವಾರ ಸಂಜೆ ನಡೆದ ಶ್ರೀ ಸಿದ್ದಗಂಗಾ ಕಿರಿಯ ಪ್ರಾಥಮಿಕ ಶಾಲೆಯ 7 ನೇ ವರ್ಷದ ವಾರ್ಷಿಕೋತ್ಸವ ಹಾಗೂ ತುಮಕುರಿನ ಸಿದ್ದಗಂಗಾ ಮಠದ ಲಿಂ. ಶ್ರೀ ಶಿವಕುಮಾರ ಸ್ವಾಮಿಜಿಯವರ 118 ನೇ ಜಯಂತ್ಯೋತ್ಸವ ಹಾಗೂ ವಿವಿದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ “ಸಿದ್ದಗಂಗಾ ಶ್ರೀ ಕಾಯಕ ರತ್ನ” ಹಾಗೂ “ಸಿದ್ದಗಂಗಾ ಶ್ರೀ ರತ್ನ” ಪ್ರಶಸ್ತಿ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಂಸ್ಥೆಯ ಕಾರ್ಯದರ್ಶಿ ಶಾಮಶುದ್ದಿನ ಇನಾಮದಾರ ಅವರು ಹುಟ್ಟಿನಿಂದ ಇಸ್ಲಾಂ ಧರ್ಮದವರಾದರು ಅವರು ತಮ್ಮ ಬಾಲ್ಯದ ಶಿಕ್ಷಣವನ್ನು ಸಿದ್ದಗಂಗಾ ಮಠದಲ್ಲಿ ಪಡೆದಿರುವ ಹಿನ್ನೆಲೆಯಲ್ಲಿ ಇಗೆ ತುರಕುನಗೇರಿಯಲ್ಲಿ ಸಿದ್ದಗಂಗಾ ಶ್ರೀಗಳ ಹೆಸರಿನಲ್ಲಿ ಅನಾಥನಿರ್ಗತಿಕ. ಕಡುಬಡವ ಮಕ್ಕಳಿಗೆ ಉಚಿತ ಶಿಕ್ಷಣ ನಿಡುತ್ತಿರುವದು ನಿಜಕ್ಕೂ ಶ್ಲಾಘನೀಯವಾಗಿದೆ. ಮುಂದಿನ ದಿನಮಾನಗಳಲ್ಲಿ ಈ ಸಂಸ್ಥೆ ಇನ್ನೂ ಹೆಚ್ಚಿನ ಸಾಧನೆ ಮಾಡುವಂತಾಗಲಿ ಎಂದು ಶುಭಹಾರೈಸಿದರು.
ಗುಂಡಕನಾಳದ ಗುರುಲಿಂಗ ಶಿವಾಚಾರ್ಯರು, ಮಳಖೇಡದ ಅಲ್ಲಾಜ್ ಸೈಯ್ಯದಶಾ ಮುಸ್ತಪಾ ಖಾದ್ರಿ, ಕಲಕೇರಿ ಹಿರೇಮಠದ ಸಿದ್ದರಾಮ ಶಿವಾಚಾರ್ಯರು ಮಾತನಾಡಿ, ಮಾನವ ಜೀವನ ಅಮೂಲ್ಯವಾದದ್ದು ಧರ್ಮದ ಆದರ್ಶ ಮೌಲ್ಯಗಳನ್ನು ಜೀವನದ ಪರಿಪಾಲನೆಯಲ್ಲಿ ಅಳವಡಿಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ, ಹುಟ್ಟು ಎಷ್ಟು ಸಹಜವೋ ಸಾವು ನಿಶ್ಚಿತವಾದುದೆಂದು ತಿಳಿದುಕೊಂಡು ಬದುಕಿನಲ್ಲಿ ಒಂದಿಷ್ಟು ಓಳಿತನ್ನು ಮಾಡಲು ಮುಂದಾಗಬೇಕು ಈ ದಿಸೇಯಲ್ಲಿ ತುರಕುನಗೇರಿಯ ಸಿದ್ದಗಂಗಾ ಶಿಕ್ಷಣ ಸಂಸ್ಥೆಯ ನಿಜಕ್ಕೂ ಎಲ್ಲರಿಗೂ ಪ್ರೇರಣೆಯಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಅನುಗ್ರಹ ಕಣ್ಣಿನ ಆಸ್ಪತ್ರೆಯ ಡಾ.ಪ್ರಭುಗೌಡ ಲಿಂಗದಳ್ಳಿ, ದಲಿತ ವಿಧ್ಯಾರ್ಥಿ ಪರಿಷತ್ತಿನ ರಾಜ್ಯಾಧ್ಯಕ್ಷ ಶ್ರೀನಾಥ ಪೂಜಾರಿ ಸೇರಿದಂತೆ ಇತರರು ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಶಾಮಶುದ್ದಿನ್ ಇನಾಮದಾರ ಪ್ರಸ್ತಾವಿಕವಾಗಿ ಮಾತನಾಡಿದರು. ಇದೇ ವೇಳೆ ವಿವಿದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸಿದ್ದಗಂಗಾ ಶ್ರೀ ಕಾಯಕ ರತ್ನ ಹಾಗೂ ಸಿದ್ದಗಂಗಾ ಶ್ರೀ ರತ್ನ ಮತ್ತು ಸಿದ್ದಗಂಗಾ ಶ್ರೀ ಬಾಲಪ್ರತಿಭೆ ರತ್ನ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಲಲಿತಾ ದೊಡ್ಡಮನಿ. ಸೈಯ್ಯದ್ ಶಕಿಲ ಅಹ್ಮದ ಖಾಜಿ, ಮಾವಿನಭಾವಿಯ ಬಸವರಾಜ್ ದೇವರು, ಬೆಕಿನಾಳದ ಮಹೇಶ ಮುತ್ಯಾ. ಪ್ರಕಾಶ ಪೂಜಾರಿ, ಫಿರಮಮ್ಮದ ಇನಾಮದಾರ, ಅಹ್ಮದಸಾಬ ಜಾಡಗಾರ, ಜಾವೀದ್ ಕರ್ನಾಳ, ಸಿದ್ದು ಬುಳ್ಳಾ, ಕನಕರಾಜ್ ವಡ್ಡರ್, ಸಿದ್ದನಗೌಡ ಬಿರಾದಾರ, ಹಣಮಂತ ವಡ್ಡರ್, ಸಿಆರ್‌ಪಿ ಎಸ್ ಎಲ್ ನಾಲ್ನೋಡಿ, ಬಾಗ್ಯಶ್ರೀ ಸುದಾಕರ, ಯಮನೂರಿ ಸಿಂದಗಿರಿ, ಜೆ ಬಿ ಕುಲಕರ್ಣಿ, ಡಿ ಎನ್ ಚಿಕ್ಕಮಠ,ಕಾಶಿನಾಥ ತಾಳಿಕೋಟಿ ಸೇರಿದಂತೆ ಇತರರು ಇದ್ದರು.