
ಮುದ್ದೇಬಿಹಾಳ : ಮಕ್ಕಳ ಕೈಗೆ ಮೊಬೈಲ್ ಬದಲಾಗಿ ಪುಸ್ತಕಗಳನ್ನು ಕೊಟ್ಟರೆ ಅವರು ದೇಶವೇ ಹೊರಳಿ ನೋಡುವಂತ ಸಾಧನೆ ಮಾಡಲು ಪ್ರೇರೆಪಿಸುತ್ತದೆ ಎಂದು ಜಮಖಂಡಿ ಓಲೇಮಠದ ಆನಂದ ದೇವರು ಹೇಳಿದರು.

ತಾಲ್ಲೂಕಿನ ಹುಲ್ಲೂರು ಎಸ್.ಎನ್.ಡಿ ನ್ಯಾಶನಲ್ ಪಬ್ಲಿಕ್ ಶಾಲೆಯ ವತಿಯುಂದ ಶನಿವಾರ ಲಿಂ. ಅಭಿನವ ಕುಮಾರ ಚನ್ನಬಸವ ಶ್ರೀಗಳ ನುಡಿನಮನ ಮತ್ತು ರಾಜ್ಯ ಮಟ್ಟದ ಚನ್ನಬಸವಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಯುವಕರು ಗುಟ್ಖಾ , ಮಟ್ಖಾ ಚಟಕ್ಕೆ ಬಿದ್ದಿದ್ದಾರೆ. ಮಕ್ಕಳ ಕೈಯಲ್ಲಿ ಒಳ್ಳೆಯ ಪುಸ್ತಕಗಳನ್ನು ನೀಡಿ. ಆಚಾರ, ವಿಚಾರ ಸಂಸ್ಕೃತಿಗಳನ್ನು ಕಲಿಸಲು ಪಾಲಕರು ಮುಂದಾಗಬೇಕು ಎಂದರು.
ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್ಲ, ಸಾನಿಧ್ಯ ವಹಿಸಿದ್ದ ಯರಝರಿಯ ಯಲ್ಲಾಲಿಂಗ ಮಠದ ಮಲ್ಲಾರಲಿಂಗ ಸ್ವಾಮೀಜಿ, ಸಂಸ್ಥೆಯ ಅಧ್ಯಕ್ಷ ಎಂ.ಎಸ್.ಕೊಪ್ಪ ಮಾತನಾಡಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಿದ್ದನಗೌಡ ಮಂಗಳೂರ, ಪತ್ರಕರ್ತ ಚೇತನ ಶಿವಶಿಂಪಿ, ಶಿವಾನಂದ ವಾಲಿ, ಪ್ರಶಾಂತ ಕಾಳೆ, ಎಸ್.ಎಚ್.ಲೊಟಗೇರಿ, ಚಂದ್ರಶೇಖರ ಶಿವಯೋಗಿಮಠ, ಹೇಮಾ ಬಿರಾದಾರ, ಶರಣು ಟಕ್ಕಳಕಿ, ಅನಿಲ ತೇಲಂಗಿ ಇವರುಗಳಿಗೆ ರಾಜ್ಯಮಟ್ಟದ ಚನ್ನಬಸವಶ್ರೀ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
ಜೀರಲಭಾವಿಯ ನಿತ್ಯಾನಂದ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ, ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಮನಗೂಳಿಯ ಪಟ್ಟಣ ಪಂಚಾಯತ ಅಧ್ಯಕ್ಷ ಎಂ.ಡಿ.ಮೆತ್ರಿ, ತಾಪಂ ಮಾಜಿ ಅಧ್ಯಕ್ಷ ಮುತ್ತಣ್ಣ ಹುಗ್ಗಿ, ಗ್ರಾ.ಪಂ ಮಾಜಿ ಅಧ್ಯಕ್ಷ ಜಾವಿದ ಇನಾಮದಾರ, ಮುಖಂಡರಾದ ನಿತ್ಯಾನಂದ ಹಿರೇಮಠ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಸೇರಿದಂತೆ ಇತರರು ಇದ್ದರು. ಅಶೋಕ ಗುಂಡಿನಮನಿ ನಿರೂಪಿಸಿದರು. ರೇಖಾವತಿ ಎಂ. ಎಸ್. ವಂದಿಸಿದರು.