ಡಿಜಿಟಲ್ ಇ-ಸ್ಟ್ಯಾಂಪ್ ತರಬೇತಿ; ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಮಾಹಿತಿ

ಡಿಜಿಟಲ್ ಇ-ಸ್ಟ್ಯಾಂಪ್ ತರಬೇತಿ; ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಮಾಹಿತಿ

ಮುದ್ದೇಬಿಹಾಳ : ಉಪ ನೋಂದಣಿ ಕಛೇರಿಯಲ್ಲಿ ನೋಂದಾಯಿತವಲ್ಲದ ಡಿಜಿಟಲ್ ಈ ಸ್ಟ್ಯಾಂಪಿoಗ್ ಆನ್‌ಲೈನ್‌ನಲ್ಲಿ ಸೇವೆ ಸಲ್ಲಿಸುವ ಕುರಿತು ತರಬೇತಿ ಕಾರ್ಯಕ್ರಮ ಈಚೇಗೆ ಜರುಗಿತು.

ಜಿಲ್ಲಾ ನೋಂದಣಿ ಇಲಾಖೆಯ ಅಭಿಯಂತರ ಚಂದ್ರಶೇಖರ ಕೊಣ್ಣೂರ,ತಹಶೀಲ್ದಾರ್ ಕೀರ್ತಿ ಚಾಲಕ್, ಉಪ ನೋಂದಣಾಧಿಕಾರಿ ಸಚಿನ ಖೈನೂರ ಅವರು ತಿಳಿವಳಿಕೆ ನೀಡಿದರು.

ದಸ್ತು ಬರಹಗಾರ ಸಂಘದ ಅಧ್ಯಕ್ಷ ಎಚ್.ಆರ್.ಬಾಗವಾನ ಮಾತನಾಡಿ, ಡಿಜಿಟಲ್ ಈ ಸ್ಟ್ಯಾಂಪ ಯಾವ ರೀತಿ ಪಡೆದುಕೊಳ್ಳಬೇಕು ಎಂಬುದರ ಕುರಿತು ಮಾಹಿತಿ ನೀಡಿದರು.ವಿಜಯಪುರ ಜಿಲ್ಲಾ ನೋಂದಣಾಧಿಕಾರಿ ಡಿ.ಜಿ.ಮಠ ಅಧ್ಯಕ್ಷತೆ ವಹಿಸಿದ್ದರು.

ತಹಶೀಲ್ದಾರ್ ಕೀರ್ತಿ ಚಾಲಕ ಮಾತನಾಡಿ, ನೋಂದಣಿ ಅಲ್ಲದ ಕರಾರು ಪತ್ರ ಪ್ರತ್ಯೇಕ ಬಾಂಡ ಪಡೆಯದೆ ಸಿಟಿಜನ್ ಲಾಗಿನ ಮೂಲಕ ಪಡೆದು ಏಕಕಾಲಕ್ಕೆ ಕರಾರು ಮುದ್ರಿಸಿ ಸಾರ್ವಜನಿಕರು ಖಾತೆ ಮೂಲಕ ಹಣ ಸಂದಾಯ ಮಾಡಬಹುದಾಗಿದ್ದು ನಂತರ ಕರಾರು ಮಾಡಿದವರು ದಸ್ತು ಬರಹಗಾರರ ಮುದ್ರೆ ಅಥವಾ ನೋಟರಿಗಳನ್ನು ಮಾಡಿಸುವುದು ನಾಗರಿಕರಿಗೆ ಬಿಟ್ಟ ವಿಚಾರ ಎಂದರು.

ಡಿಜಿಟಲ್ ಸ್ಟಾö್ಯಂಪ್ ಪ್ರಯೋಜನ ಪಡೆದುಕೊಳ್ಳುವಂತೆ ತಹಶೀಲ್ದಾರ್‌ರು ತಿಳಿಸಿದರು. ಕಂದಾಯ ಇಲಾಖೆಯ ಸಿಬ್ಬಂದಿ ಎಸ್.ಬಿ.ಕಟ್ಟಿಮನಿ, ದಸ್ತು ಬರಹಗಾರರಾದ ಡಿ.ಎಚ್.ತೊಗರಿ, ರಾಜೇಂದ್ರ ಪಾವಲೆ, ಎಸ್.ಬಿ.ಕಡಿ, ಸಲೀಮ ಮುಲ್ಲಾ, ಆರ್.ಎಸ್.ಶಂಕೀನ್,ಗ್ರಾಮ ಒನ್ ಕರ್ನಾಟಕ ಒನ್ ಸಿಬ್ಬಂದಿ,ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ನಿರೀಕ್ಷಕರು, ನಾಗರಿಕರು ಭಾಗವಹಿಸಿದ್ದರು. ಗಣಕ ಚಾಲಕ ಶಾಂತು ಹಿರೇಮಠ ಸ್ವಾಗತಿಸಿದರು. ಮಹಾಂತೇಶ ಬಿರಾದಾರ ವಂದಿಸಿದರು.

Latest News

ದಿ.ದೇಶಮುಖ ದಂಪತಿ ಪುಣ್ಯಸ್ಮರಣೆ:                                           ಸಕ್ರಿಯ ರಾಜಕಾರಣಕ್ಕೆ ದೇಶಮುಖ ಮನೆತನದ ಕುಡಿ ಮರಳಲಿ-ಕತ್ತಿ

ದಿ.ದೇಶಮುಖ ದಂಪತಿ ಪುಣ್ಯಸ್ಮರಣೆ: ಸಕ್ರಿಯ ರಾಜಕಾರಣಕ್ಕೆ ದೇಶಮುಖ ಮನೆತನದ ಕುಡಿ ಮರಳಲಿ-ಕತ್ತಿ

ಮುದ್ದೇಬಿಹಾಳ : ಕಲುಷಿತಗೊಂಡಿರುವ ರಾಜಕೀಯ ಕ್ಷೇತ್ರದ ಶುದ್ಧೀಕರಣಕ್ಕೆ ದೇಶಮುಖ ಮನೆತನದಂತ ಕುಟುಂಬದವರು ಸಕ್ರಿಯ ರಾಜಕಾರಣದಲ್ಲಿರಬೇಕು

ನನ್ನ ಜನ ರಾಜೀನಾಮೆ ಕೊಡು ಎಂದರೆ ಕೊಡುತ್ತೇನೆ-ಸಿ.ಎಸ್.ನಾಡಗೌಡ

ನನ್ನ ಜನ ರಾಜೀನಾಮೆ ಕೊಡು ಎಂದರೆ ಕೊಡುತ್ತೇನೆ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ತಮಗೆ ಷಡ್ಯಂತ್ರದಿಂದ ಸಚಿವ ಸ್ಥಾನ ಕೈ ತಪ್ಪಿದ್ದು ಇದಕ್ಕಾಗಿ ತಮ್ಮ ಸ್ಥಾನಕ್ಕೆ

ಪತ್ರಕರ್ತ ಗುಲಾಂ ದಫೇದಾರ ನಾಮಪತ್ರ ಸಲ್ಲಿಕೆ:                            ಅಂಜುಮನ್ ಗತವೈಭವ ಮರುಸ್ಥಾಪಿಸಲು ಯತ್ನ-ಅಬ್ದುಲಗಫೂರ್ ಮಕಾನದಾರ

ಪತ್ರಕರ್ತ ಗುಲಾಂ ದಫೇದಾರ ನಾಮಪತ್ರ ಸಲ್ಲಿಕೆ: ಅಂಜುಮನ್ ಗತವೈಭವ ಮರುಸ್ಥಾಪಿಸಲು ಯತ್ನ-ಅಬ್ದುಲಗಫೂರ್ ಮಕಾನದಾರ

ಮುದ್ದೇಬಿಹಾಳ : ಸ್ವಾತಂತ್ರ ಪೂರ್ವದಲ್ಲಿ ಹುಟ್ಟಿರುವ ಅಂಜುಮನ್ ಇಸ್ಲಾಂ ಕಮೀಟಿಯ ಆರಂಭದಲ್ಲಿದ್ದ ವೈಭವವನ್ನು ಮರಳಿ

ಎಕರೆಗೆ 50 ಸಾವಿರ ರೂ.ಪರಿಹಾರ ನೀಡಿ-ಎನ್.ರವಿಕುಮಾರ್

ಎಕರೆಗೆ 50 ಸಾವಿರ ರೂ.ಪರಿಹಾರ ನೀಡಿ-ಎನ್.ರವಿಕುಮಾರ್

ಮುದ್ದೇಬಿಹಾಳ : ರಾಜ್ಯದಲ್ಲಿ ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಭೀಕರ ಬರಗಾಲ ತಲೆದೋರಿದ್ದು ರೈತರ

ಜು.26 ರಂದು ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ:      ನಿವೃತ್ತ ನೌಕರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ

ಜು.26 ರಂದು ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ: ನಿವೃತ್ತ ನೌಕರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ

ಮುದ್ದೇಬಿಹಾಳ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ(ರಿ) ಹಾಗೂ ಮದರಿಯ ಚೈತ್ರಾ ಆರೋಗ್ಯ ಮತ್ತು ಶಿಕ್ಷಣ ಸೇವಾ ಟ್ರಸ್ಟ್(ರಿ) ಸಹಯೋಗದಲ್ಲಿ ಪತ್ರಿಕಾ ಹಾಗೂ ವೈದ್ಯರ ದಿನಾಚರಣೆಯ ಅಂಗವಾಗಿ ಜು.26 ರಂದು ಬೆಳಗ್ಗೆ 10.00ಕ್ಕೆ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಿವೃತ್ತ ನೌಕರರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ, ಪ್ರತಿಭಾ ಪುರಸ್ಕಾರ ಸಮಾರಂಭ ಆಯೋಜಿಸಲಾಗಿದೆ. ಹುನಗುಂದ-ಮುದ್ದೇಬಿಹಾಳದ ಗಚ್ಚಿನಮಠ-ಹೊಸಮಠದ ಅಮರೇಶ್ವರ ದೇವರು ದಿವ್ಯ ಸಾನಿಧ್ಯ ವಹಿಸುವರು.ಕಾನಿಪ ಧ್ವನಿ ರಾಜ್ಯ ಅಧ್ಯಕ್ಷ

650 ಅಂಕ ಪಡೆದ ಮಾನಸಾ ಎಚ್. ಪ್ರಥಮ:                 ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ 190 ಮೆಡಿಕಲ್ ಸೀಟು ನಿರೀಕ್ಷೆ

650 ಅಂಕ ಪಡೆದ ಮಾನಸಾ ಎಚ್. ಪ್ರಥಮ: ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ 190 ಮೆಡಿಕಲ್ ಸೀಟು ನಿರೀಕ್ಷೆ

ಮುದ್ದೇಬಿಹಾಳ : ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜು ಹಾಗೂ ನೀಟ್ ಅಕಾಡೆಮಿಯ 2026ರ ನೀಟ್ ಫಲಿತಾಂಶ ಪ್ರಕಟಗೊಂಡಿದ್ದು 12 ವಿದ್ಯಾರ್ಥಿಗಳು 600ಕ್ಕೂ ಅಧಿಕ ಅಂಕ ಪಡೆದುಕೊಂಡಿದ್ದಾರೆ. ನೀಟ್ ಫಲಿತಾಂಶದ ಕುರಿತು ಮಾಹಿತಿ ನೀಡಿರುವ ಸಂಸ್ಥೆಯ ಚೇರಮನ್ ಎಂ.ಎಸ್.ಪಾಟೀಲ್, ಆಡಳಿತಾಧಿಕಾರಿ ಅಮೀತಗೌಡ ಪಾಟೀಲ ಅವರು, ಈ ಬಾರಿ 190ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಮೆಡಿಕಲ್ ಸೀಟು ದೊರೆಯುವ ನಿರೀಕ್ಷೆ ಇದೆ ಎಂದು ತಿಳಿಸಿದರು.ನೀಟ್‌ನಲ್ಲಿ 500ಕ್ಕೂ ಅಧಿಕ 140 ವಿದ್ಯಾರ್ಥಿಗಳು,