ಮುದ್ದೇಬಿಹಾಳ : ಸ್ವಾತಂತ್ರö್ಯಕ್ಕಾಗಿ ಮಡಿದ ಮಹನೀಯರ ತ್ಯಾಗ ಬಲಿದಾನದ ಸ್ಮರಣೆ ಮಾಡುವ ಕಾರ್ಯ ಆಗಬೇಕು.ಜಾತಿ, ಧರ್ಮ ಮರೆತು ನಾವೆಲ್ಲ ದೇಶದ ಅಭಿವೃದ್ಧಿಗೆ ಶ್ರಮಿಸೋಣ ಎಂದು ತಹಶೀಲ್ದಾರ್ ಕೀರ್ತಿ ಚಾಲಕ್ ಹೇಳಿದರು.
ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಸೋಮವಾರ 72ನೇ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ಮಾಡಿ ಅವರು ಮಾತನಾಡಿದರು.
ಯುವ ಪೀಳಿಗೆ,ವಿದ್ಯಾರ್ಥಿಗಳು ಮೊಬೈಲ್‌ದಲ್ಲಿ ಒಳ್ಳೆಯದನ್ನು ಗ್ರಹಿಸಬೇಕು.ಸ್ವಾತಂತ್ರ‍್ಯಕ್ಕಾಗಿ ದುಡಿದವರ ಚರಿತ್ರೆಯನ್ನು ಓದಬೇಕು.ದೇಶದ ಕೀರ್ತಿ ಹೆಚ್ಚಿಸಿ ಸಂಸ್ಕೃತಿ,ಆಟ,ಪಾಠದಲ್ಲಿ ಹೆಸರು ತರಬೇಕು ಎಂದರು.
ಕಾAಗ್ರೆಸ್ ಮುಖಂಡ ವಾಯ್.ಎಚ್.ವಿಜಯಕರ್ ಮಾತನಾಡಿ, ಮಹಿಳೆಯರ ಅಸಮಾನತೆ ಸಂವಿಧಾನದ ಫಲದಿಂದಲೇ ನಿವಾರಣೆಯಾಗಿದೆ.ದೇಶದ ಐಕ್ಯತೆಗೆ ದುಡಿಯಬೇಕು.ಪ್ರಜೆಗಳೇ ಪ್ರಭುಗಳು ಎನ್ನುವ ಮಹತ್ವದ ಸಂದೇಶವನ್ನು ಸಂವಿಧಾನ ನೀಡಿದೆ.ಆದರೆ ಸಂವಿಧಾನ ಜಾರಿ ಬಂದಾಗಿನಿAದ ಬ್ರಷ್ಟಾಚಾರ ದೇಶದಲ್ಲಿ ಮುಗಿಲು ಮುಟ್ಟಿದೆ.ಶೇ.40 ರಷ್ಟು ಜನ ಈವರೆಗೂ ಯಾವುದೇ ಸೌಲಭ್ಯ ಪಡೆದುಕೊಳ್ಳುವುದಿಲ್ಲ ಎಂದು ಸ್ವತಃ ಸರ್ಕಾರದ ಕಾರ್ಯದರ್ಶಿಗಳೇ ಹೇಳಿರುವುದು ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕು ಎಂಬುದು ತೋರುತ್ತದೆ ಎಂದರು.
ತಾಪA ಇಒ ವೆಂಕಟೇಶ ವಂದಾಲ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ,ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ,ಗಣ್ಯರಾದ ಎಂ.ಬಿ.ನಾವದಗಿ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ,ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ,ಸಿಪಿಐ ಮೊಹ್ಮದ ಫಸಿವುದ್ದೀನ್, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಎಂ.ಎA.ಬೆಳಗಲ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಬಸಂತಿ ಮಠ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಡಿ.ಭಾವಿಕಟ್ಟಿ,ಡಾ.ಸತೀಶ ತಿವಾರಿ,ಡಾ.ಶಿವಾನಂದ ಮೇಟಿ,ಗ್ಯಾರಂಟಿ ಸಮೀತಿ ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ, ಪಿಎಸ್‌ಐ ಸಂಜಯ ತಿಪರೆಡ್ಡಿ, ಶಿವಲೀಲಾ ಕೊಣ್ಣೂರ,ವೀರೇಶ ಹೂಗಾರ ಇದ್ದರು.
ಸಂಗಮೇಶ ಶಿವಣಗಿ ಸಂಗಡಿಗರು ರಾಷ್ಟçಗೀತೆ ಹಾಡಿದರು. ಬಿ.ಇ.ಒ ಬಿ.ಎಸ್.ಸಾವಳಗಿ ಸ್ವಾಗತಿಸಿದರು.ಟಿ.ಡಿ.ಲಮಾಣಿ ನಿರೂಪಿಸಿದರು.





