ಮುದ್ದೇಬಿಹಾಳ : ವಿದ್ಯಾರ್ಥಿಗಳು ನಿರಂತರ ಅಧ್ಯಯನಶೀಲರಾಗಬೇಕು. ಸಮಯವನ್ನು ವ್ಯರ್ಥ ಮಾಡಿಕೊಳ್ಳದೆ ಶಾಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಯಶಸ್ಸು ಸಾಧ್ಯವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.
ಪಟ್ಟಣದ ವಿದ್ಯಾಚೇತನ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಪಾಲಕರು ಹಾಗೂ ಶಿಕ್ಷಕರು ಮಕ್ಕಳಲ್ಲಿರುವ ಸೂಕ್ತವಾದ ಪ್ರತಿಭೆಯನ್ನು ಗುರುತಿಸಿ ಪೂರಕವಾದ ಶೈಕ್ಷಣಿಕ ವಾತಾವರಣ ಸೃಷ್ಟಿಸಬೇಕು. ಶಿಕ್ಷಕರು ಮಗುವಿನ ಮೌಲ್ಯಮಾಪನ ಕಾರ್ಯ ನಿರಂತರ ಮಾಡಬೇಕು ಎಂದರು.
ಕುAಟೋಜಿ ಭಾವೈಕ್ಯತಾ ಹಿರೇಮಠದ ಚೆನ್ನವೀರ ಶಿವಾಚಾರ್ಯರು ಮಾತನಾಡಿ,ವಿದ್ಯಾರ್ಥಿಗಳು ಆತ್ಮ ವಿಶ್ವಾಸದಿಂದ ಪರೀಕ್ಷೆ ಬರೆಯಬೇಕು. ಅಂಕಗಳು ಅಲ್ಪ ಸ್ವಲ್ಪ ಕಡಿಮೆಯಾದರೂ ನಿರಾಶೆಯಾಗದೆ ಮುಂದಿನ ತರಗತಿ ವ್ಯಾಸಂಗ ಮಾಡುವಾಗ ಹೆಚ್ಚು ಗಮನ ಹರಿಸಬೇಕು.ಜ್ಞಾನಾರ್ಜನೆಯಿಂದ ಬದುಕು ಕಟ್ಟಿಕೊಳ್ಳಬೇಕು ಎಂದರು.
ಬೀಳಗಿ ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗುರುರಾಜ ಲೂತಿ
ಮಾತನಾಡಿ , ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಬೇಕು. ಗಂಡು ಹೆಣ್ಣೆಂಬ ಬೇದವಿಲ್ಲದ ಪಾಲಕರು ಶಿಕ್ಷಣ ನೀಡಬೇಕು. ವಿದ್ಯಾಭ್ಯಾಸದೊಂದಿಗೆ ಸಹ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಸಂಸ್ಥೆಯ ಅಧ್ಯಕ್ಷ ರವಿಕುಮಾರ ಬೆನಕಟಗಿ,ನಿರ್ದೇಶಕರಾದ ಶ್ರೀದೇವಿ ಬೆನಕಟಗಿ,ಪ್ರಮುಖರಾದ ಎಸ್.ಬಿ. ಲಿಂಗದಳ್ಳಿ. ಅಂಬಿಕಾ ಪ್ರೆಸ್ನ ಬಸವರಾಜ ಸಿದ್ದಾಪುರ, ಎನ್.ಎಸ್.ಹಿರೇಮಠ. ಪಿ.ಸಿ.ಹಡಗಿನಹಾಳ,ಕೆ.ಎಂ.ಪಾಟೀಲ, ಚೈತನ್ಯಾ ಮಠ ಇದ್ದರು.







