ಮುದ್ದೇಬಿಹಾಳ : ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರಿಗೆ ಖಾಸಗಿ ಮಾರುಕಟ್ಟೆಯಲ್ಲಿ ನಡೆಯುವ ಶೋಷಣೆ ತಪ್ಪಿಸಲು ಬೆಂಬಲ ಬೆಲೆ ನಿಗದಿಗೊಳಿಸಿ ಖರೀದಿ ಕೇಂದ್ರಗಳನ್ನು ತೆರೆದಿದೆ ಎಂದು ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಹೇಳಿದರು.
ಪಟ್ಟಣದ ಏಪಿಎಂಸಿಯಲ್ಲಿರುವ ಟಿಎಪಿಸಿಎಂಎಸ್ ಆವರಣದಲ್ಲಿ ಸೋಮವಾರ ತೊಗರಿ ಖರೀದಿ ಕೇಂದ್ರಕ್ಕೆ ಶಾಸಕ ಸಿ.ಎಸ್.ನಾಡಗೌಡ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ಕಾರಗಳ ಉದ್ದೇಶ ಮಾರುಕಟ್ಟೆಯಲ್ಲಿ ನಿಗದಿತ ಬೆಂಬಲ ಬೆಲೆಗಿಂತ ಕೆಳಗೆ ಬೆಲೆ ಇಳಿಯಬಾರದು.ರೈತರು ಖರೀದಿ ಕೇಂದ್ರಗಳಿಗೆ ಬಂದು ತೊಗರಿ ಕೊಡಬೇಕು ಎಂಬ ನಿಯಮ ಕಡ್ಡಾಯ ಏನಿಲ್ಲ. ಆದರೆ ಬೆಲೆ ಇಲ್ಲಿಗಿಂತ ಹೆಚ್ಚಿನ ಬೆಲೆ ಮಾರುಕಟ್ಟೆಯಲ್ಲಿ ಸಿಕ್ಕರೆ ಅಲ್ಲಿಯೂ ಮಾರಾಟ ಮಾಡಬಹುದಾಗಿದೆ ಎಂದರು.
ಮುದ್ದೇಬಿಹಾಳ ತಾಲ್ಲೂಕಿನಲ್ಲಿ 42 ಸಾವಿರ ಹೆಕ್ಟೇರ್,ತಾಳಿಕೋಟಿ ತಾಲ್ಲೂಕಿನಲ್ಲಿ 63 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿದೆ.ರಾಜ್ಯ ಹಾಗೂ ಕೇಂದ್ರಗಳ ಸಹಯೋಗದಲ್ಲಿ ರೈತರಿಗೆ ಪ್ರೋತ್ಸಾಹಧನ ಒದಗಿಸಲು ತೀರ್ಮಾನಿಸಿದ್ದು ಹೆಚ್ಚಿನ ಸಂಖ್ಯೆಯಲ್ಲಿ ತೊಗರಿ ಖರೀದಿ ಕೇಂದ್ರಗಳನ್ನು ತೆರೆದಿದ್ದು ರೈತರು ಆತಂಕ ಪಡಬೇಕಾಗಿಲ್ಲ. ಪ್ರತಿ ಎಕರೆಗೆ ನಾಲ್ಕು ಕ್ವಿಂಟಾಲ್‌ನAತೆ ತೊಗರಿ ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದೆ.ಮಧ್ಯವರ್ತಿಗಳು ರೈತರಿಗೆ ಕಡಿಮೆ ದರದಲ್ಲಿ ತೊಗರಿ ತೆಗೆದುಕೊಳ್ಳಲು ಮುಂದಾದರೆ ಅದಕ್ಕೆ ರೈತರು ಕಿವಿಗೊಡಬೇಡಿ.ಬೆಂಬಲ ಬೆಲೆಯಡಿ ತೊಗರಿ ನೀಡಿದರೆ ಹೆಚ್ಚಿನ ಬೆಲೆ ರೈತರಿಗೆ ದೊರೆಯಲಿದೆ ಎಂದರು.
ಸಹಕಾರ ಅಭಿವೃದ್ಧಿ ಅಧಿಕಾರಿ, ಟಿಎಪಿಸಿಎಂಎಸ್ ಕಾರ್ಯದರ್ಶಿ ವಿಜಯಕುಮಾರ ಉತ್ನಾಳ,ಟಿಎಪಿಸಿಎಂಎಸ್ ಅಧ್ಯಕ್ಷ ಮನೋಹರ ಎಸ್.ಮೇಟಿ,ಉಪಾಧ್ಯಕ್ಷ ಚಿದಾನಂದ ಸೀತಿಮನಿ, ನಿರ್ದೇಶಕರಾದ ಬಿ.ಎಂ.ಇಸ್ಲಾoಪೂರ,ಎo.ಕೆ.ಮುತ್ತಣ್ಣವರ,ಸುರೇಶ ಹಳೇಮನಿ,ಮಲ್ಲನಗೌಡ ಬಿರಾದಾರ, ಕೊಡಗಾನೂರ,ಗುರಣ್ಣ ಹತ್ತೂರ,ಶಿವನಗೌಡ ಪಾಟೀಲ,ಅಶೋಕ ಇಲಕಲ್ಲ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ,ಗುರುಲಿಂಗಪ್ಪ ಹಿಪ್ಪರಗಿ,ಸಹ ಕಾರ್ಯದರ್ಶಿ ಗುರುರಾಜ ಕೋನರೆಡ್ಡಿ,ಸಿಬ್ಬಂದಿ ಮಹಾಂತಗೌಡ ಪಾಟೀಲ ,ಸವಿತಾ ಚೌಧರಿ, ಶರಣಗೌಡ ಬಿರಾದಾರ ಇದ್ದರು.







