Swachcha Bharath Abhiyan: ಬಸ್ ನಿಲ್ದಾಣಗಳಲ್ಲಿ ಶುಚಿತ್ವ ಕಾಪಾಡಿ: ಮದಭಾವಿ

Swachcha Bharath Abhiyan: ಬಸ್ ನಿಲ್ದಾಣಗಳಲ್ಲಿ ಶುಚಿತ್ವ ಕಾಪಾಡಿ: ಮದಭಾವಿ


ಮುದ್ದೇಬಿಹಾಳ : ಪಟ್ಟಣದ ಬಸ್ ನಿಲ್ದಾಣವೂ ಸೇರಿದಂತೆ ಪಕ್ಕದ ನಿಡಗುಂದಿ, ನಾಲತವಾಡ ಬಸ್ ನಿಲ್ದಾಣಗಳಲ್ಲಿ ಇಲಾಖೆಯ ಮೇಲಧಿಕಾರಿಗಳ ಸೂಚನೆಯ ಮೇರೆಗೆ ಎರಡು ದಿನಗಳ ಕಾಲ ಸ್ವಚ್ಛತಾ ಅಭಿಯಾನ (Swachcha Bharath Abhiyan) ಹಮ್ಮಿಕೊಂಡಿರುವುದಾಗಿ ಸಾರಿಗೆ ಘಟಕ ವ್ಯವಸ್ಥಾಪಕ ಅಬೂಬಕರ್ ಮದಭಾವಿ ಹೇಳಿದರು.

Join Our Telegram: https://t.me/dcgkannada
ಪಟ್ಟಣದ ಬಸ್ ನಿಲ್ದಾಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನಕ್ಕೆ (Swachcha Bharath Abhiyan) ಚಾಲನೆ ನೀಡಿ ಅವರು ಮಾತನಾಡಿದರು.

ಬಸ್ ನಿಲ್ದಾಣ ನಮ್ಮ ಆಸ್ತಿ ಎಂಬುದು ಸಾರ್ವಜನಿಕರು ಅರಿತುಕೊಳ್ಳಬೇಕಿದೆ. ನಿಲ್ದಾಣದ ಕಂಬಗಳಿಗೆ ಎಲ್ಲೆಂದರಲ್ಲಿ ಭಿತ್ತಿಪತ್ರ ಅಂಟಿಸಿ ನಿಲ್ದಾಣದ ಅಂದವನ್ನು ಹಾಳು ಮಾಡುವ ಕೆಲಸ ಆಗಬಾರದು ಎಂದರು.

ಇದನ್ನೂ ಓದಿ: ಅನ್ನದಾತನಿಗೆ ವಾಣಿಜ್ಯ ರತ್ನ ಪ್ರಶಸ್ತಿ ಗರಿ.. ಯುವ ಉದ್ಯಮಿಗೆ ಸಂದ ಗೌರವ


ಯುವ ಮುಖಂಡ ಉದಯ ರಾಯಚೂರ ಮಾತನಾಡಿ, ಸಾರಿಗೆ ಇಲಾಖೆಯ ಸಿಬ್ಬಂದಿಯೇ ಬಸ್ ನಿಲ್ದಾಣದ ಸ್ವಚ್ಛತೆ ಕೈಗೊಂಡಿರುವುದಕ್ಕೆ ಸಾರ್ವಜನಿಕರ ಪರವಾಗಿ ಧನ್ಯವಾದ ಹೇಳುತ್ತೇವೆ.ನಿಲ್ದಾಣಕ್ಕೆ ಬರುವವರು ಎಲ್ಲೆಂದರಲ್ಲಿ ಗುಟ್ಖಾ ಅಗೆದು ಉಗಿಯುವುದು, ಎಲ್ಲೆಂದರಲ್ಲಿ ಬಹಿರ್ದೆಸೆ, ಮೂತ್ರ ವಿಸರ್ಜನೆ ಮಾಡುವುದನ್ನು ಮಾಡಬಾರದು. ನಿಲ್ದಾಣದ ಸ್ವಚ್ಛತೆಗೆ ಯುವಕರು ಕೈಜೋಡಿಸಬೇಕು ಎಂದರು.


ಘಟಕದ ಎಡಿಎಂ ಸೂಪರವೈಸರ್ ಎಸ್.ಬಿ.ಪಾಟೀಲ್, ಎನ್.ಎಸ್.ಮಠ, ಬಸವರಾಜ ಬಿರಾದಾರ,ಎಸ್.ಡಿ.ಪತ್ತಾರ, ಎಸ್.ಎಂ.ಹೊಳಿ, ಎಸ್.ಆರ್.ಮುಲ್ಲಾ ಹಾಗೂ ಆಡಳಿತ ವರ್ಗ, ತಾಂತ್ರಿಕ ಸಿಬ್ಬಂದಿ, ಚಾಲಕ ನಿರ್ವಾಹಕ, ಸಿಬ್ಬಂದಿ ಪಾಲ್ಗೊಂಡಿದ್ದರು.

Latest News

ಮುದ್ದೇಬಿಹಾಳ : TAPCMS  ಆಡಳಿತ ಮತ್ತೆ ಮನೋಹರ ಮೇಟಿ ‘ಕೈ’ಗೆ

ಮುದ್ದೇಬಿಹಾಳ : TAPCMS ಆಡಳಿತ ಮತ್ತೆ ಮನೋಹರ ಮೇಟಿ ‘ಕೈ’ಗೆ

ಮುದ್ದೇಬಿಹಾಳ : ಇಲ್ಲಿನ ಟಿ.ಎ.ಪಿ.ಸಿ.ಎಂ.ಎಸ್ ಆಡಳಿತ ಮತ್ತೆ ಎರಡನೇ ಬಾರಿಗೆ ಅಧ್ಯಕ್ಷರಾಗಿ ಮನೋಹರ ಮೇಟಿ

ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಗೆ ಆಯ್ಕೆ :            ಕರ್ನಾಟಕ ತಂಡಕ್ಕೆ ಮುದ್ದೇಬಿಹಾಳದ ಮೂವರು ಆಟಗಾರರ ಆಯ್ಕೆ

ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಗೆ ಆಯ್ಕೆ : ಕರ್ನಾಟಕ ತಂಡಕ್ಕೆ ಮುದ್ದೇಬಿಹಾಳದ ಮೂವರು ಆಟಗಾರರ ಆಯ್ಕೆ

ಮುದ್ದೇಬಿಹಾಳ : ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ

ಗುಡಿಮನಿಗೆ ಕರ್ನಾಟಕ ವಾಲ್ಮೀಕಿ ರತ್ನ ಪ್ರಶಸ್ತಿ

ಗುಡಿಮನಿಗೆ ಕರ್ನಾಟಕ ವಾಲ್ಮೀಕಿ ರತ್ನ ಪ್ರಶಸ್ತಿ

ಮುದ್ದೇಬಿಹಾಳ : ತಾಲ್ಲೂಕಿನ ಢವಳಗಿ ಗ್ರಾಮ ಪಂಚಾಯಿತಿ ನೌಕರ ಎಂ.ಕೆ.ಗುಡಿಮನಿ ಅವರಿಗೆ 2025ನೇ ಸಾಲಿನ

ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿನಲ್ಲಿ ಸನ್ಮಾನ ಕಾರ್ಯಕ್ರಮ: 2026ಕ್ಕೆ  200 ಮೆಡಿಕಲ್ ಸೀಟು ಆಯ್ಕೆಯ ಗುರಿ-ಅಮೀತಗೌಡ ಪಾಟೀಲ್

ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿನಲ್ಲಿ ಸನ್ಮಾನ ಕಾರ್ಯಕ್ರಮ: 2026ಕ್ಕೆ 200 ಮೆಡಿಕಲ್ ಸೀಟು ಆಯ್ಕೆಯ ಗುರಿ-ಅಮೀತಗೌಡ ಪಾಟೀಲ್

ಮುದ್ದೇಬಿಹಾಳ : ಉತ್ತರ ಕರ್ನಾಟಕ ಭಾಗದಲ್ಲಿ ಅತೀ ಹೆಚ್ಚು ಮೆಡಿಕಲ್ ಸೀಟುಗಳನ್ನು ಪಡೆದುಕೊಳ್ಳುವಲ್ಲಿ ಹಿರಿಮೆ

ರಾಯಚೂರು: ವಿವಿಧ ವರ್ಗದ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ

ರಾಯಚೂರು: ವಿವಿಧ ವರ್ಗದ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ

ರಾಯಚೂರು ಅಕ್ಟೋಬರ್ 15: ಇ- ಕಾಮರ್ಸ್‌ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗಿಗ್ ಕಾರ್ಮಿಕರಿಗೆ ವಿಮಾ ಯೋಜನೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಉದ್ಯೋಗ ನೀಡುವ ಖಾಸಗಿ ಉದ್ಯೋಗದಾತರಿಗೆ ಮರುಪಾವತಿಯ ಆಶಾದೀಪ ಹಾಗೂ ಕರ್ನಾಟಕ ಸಿನೆಮಾ ಮತ್ತು ಸಾಂಸ್ಮೃತಿಕ‌ ಚಟುವಟಿಕೆಯಲ್ಲಿ ತೊಡಗಿದ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಸೌಲಭ್ಯ ಒದಗಿಸಲು ಹೊಸದಾಗಿ ಸಿನೇಮಾ ಕಾರ್ಮಿಕರ ಸುಂಕ ಅಧಿನಿಯಮ ಜಾರಿಯಂತಹ ವಿನೂತನ ಯೋಜನೆಗಳನ್ನು ರಾಜ್ಯ ಕಾರ್ಮಿಕ ಇಲಾಖೆಯು ರೂಪಿಸಿ ಇಡೀ ದೇಶವೇ ಕರ್ನಾಟಕ

ಅಸಂಘಟಿತ ವಲಯದ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ಹಲವು ಕ್ರಮ: ಸಚಿವ ಲಾಡ್

ಅಸಂಘಟಿತ ವಲಯದ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ಹಲವು ಕ್ರಮ: ಸಚಿವ ಲಾಡ್

ಯಾದಗಿರಿ, ಅಕ್ಟೋಬರ್.15: ರಾಜ್ಯದ ಅಸಂಘಟಿತ ವಲಯದ ಎಲ್ಲ ವರ್ಗಗಳ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ, ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಸ್ಥಾಪಿಸಲಾಗಿದೆ. ರಾಜ್ಯದಲ್ಲಿ ಈಗಾಗಲೇ ಗುರುತಿಸಿರುವ 101 ಅಸಂಘಟಿತ ಕಾರ್ಮಿಕ ವರ್ಗಗಳ ಕಾರ್ಮಿಕರು ತಕ್ಷಣ ನೋಂದಣಿ ಮಾಡಿಕೊಂಡು ಸ್ಮಾರ್ಟ್ ಕಾರ್ಡ್ ಮೂಲಕ ಸವಲತ್ತುಗಳ ಲಾಭ ಪಡೆದುಕೊಳ್ಳುವಂತೆ ರಾಜ್ಯ ಕಾರ್ಮಿಕ ಖಾತೆ ಸಚಿವರಾದ ಶ್ರೀ ಸಂತೋಷ್ ಲಾಡ್ ಅವರು ಹೇಳಿದರು. ನಗರದ ಶುಭಂ ಪೆಟ್ರೋಲ್ ಪಂಪ್ ಹಿಂಭಾಗದ, ಪಾಟೀಲ್ ಕನ್ವೆನ್ಷನ್