ಮುದ್ದೇಬಿಹಾಳ : ಉತ್ತರ ಕರ್ನಾಟಕ ಭಾಗದ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದು ಅಶ್ಲೀಲತೆಯ ಸೋಂಕಿಲ್ಲದoತೆ ಪ್ರದರ್ಶನ ನೀಡಲು ತಾಕೀತು ಮಾಡಿದ್ದೇವೆ ಎಂದು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಎಸ್.ಬಾಲಾಜಿ ಹಾಗೂ ಜಿಲ್ಲಾ ಅಧ್ಯಕ್ಷ ಪುಂಡಲೀಕ ಮುರಾಳ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ಇತರೆ ಸಂಘಟನೆಗಳ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದರ 163ನೇ ಜಯಂತಿ ಅಂಗವಾಗಿ ಮುದ್ದೇಬಿಹಾಳ ಪಟ್ಟಣದ ವಿಬಿಸಿ ಹೈಸ್ಕೂಲ್ ಆವರಣದಲ್ಲಿರುವ ಸಿದ್ದೇಶ್ವರ ವೇದಿಕೆಯಲ್ಲಿ ಜ.31 ರಂದು ಹಲವು ಕಾರ್ಯಕ್ರಮ ಆಯೋಜಿಸಲಾಗಿದೆ.
ಖಾಸ್ಗತೇಶ್ವರ ಮಠದಿಂದ ಮದ್ಯಾಹ್ನ 3ಕ್ಕೆ ಸ್ವಾಮಿವಿವೇಕಾನಂದರ ಭಾವಚಿತ್ರದ ಮೆರವಣಿಗೆಯೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ.ಹೊಸಮಠದ ಅಮರೇಶ್ವರ ದೇವರು ದಿವ್ಯ ಸಾನಿಧ್ಯ ವಹಿಸುವರು.ದುರ್ಗಾದೇವಿ ಉಪಾಸಕ ಲಾಲ್‌ಲಿಂಗೇಶ್ವರ ಶರಣರು,ಮಾವಿನಭಾವಿಯ ಬಸವರಾಜ ಗುರೂಜಿ,ಗ್ಯಾರಂಟಿ ಸಮಿತಿ ತಾಲ್ಲೂಕು ಅಧ್ಯಕ್ಷ ಶಂಕರಗೌಡ ಹಿರೇಗೌಡರ,ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ,ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಎಸ್.ಬಾಲಾಜಿ ಸೇರಿದಂತೆ ಹಲವರು ಆಗಮಿಸುವರು.
ಸಂಜೆ 5ಕ್ಕೆ ಸ್ವಾಮಿ ವಿವೇಕಾನಂದರ ರಾಜ್ಯ, ರಾಷ್ಟç ಮತ್ತು ಅoತರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ರಾಷ್ಟ್ರೀಯ ಯುವ ವೈಭವ, ವಿವೇಕ ಯುವ ಚೈತನ್ಯ ಕೃತಿ ಹಾಗೂ ಧರ್ಮ ಯುದ್ಧ ದಿನದರ್ಶಿಕೆ ಲೋಕಾರ್ಪಣಾ ಸಮಾರಂಭ ನಡೆಯಲಿದೆ ಎಂದು ಮಾಹಿತಿ ನೀಡಿದರು.
ದಿವ್ಯ ಸಾನಿಧ್ಯ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ,ಸಿದ್ಧನಕೊಳ್ಳದ ಶಿವಕುಮಾರ ಸ್ವಾಮೀಜಿ ಸಾನಿಧ್ಯ ವಹಿಸುವರು.ಶಾಸಕ ಸಿ.ಎಸ್.ನಾಡಗೌಡ ಉದ್ಘಾಟಿಸುವರು.ಅಕ್ಕಮಹಾದೇವಿ ಕುಲಸಚಿವ ಶಂಕರಗೌಡ ಸೋಮನಾಳ ಹಾಗೂ ಯುವ ಸಬಲೀಕರಣ ಇಲಾಖೆಯ ಉಪನಿರ್ದೇಶಕ ರಮೇಶ ಎಂ.ಸಿ. ಪ್ರಶಸ್ತಿ ಪ್ರದಾನ ಮಾಡುವರು.ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಎಸ್.ಬಾಲಾಜಿ ಅಧ್ಯಕ್ಷತೆ ವಹಿಸುವರು.
ಪ್ರಮುಖರಾದ ಎಂ.ಎನ್.ನಟರಾಜನ್, ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೀಣಾ ಕಾಶಪ್ಪನವರ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ಎನ್.ಮದರಿ,ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ,ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ,ಬಾಲಾಜಿ ಶುರ‍್ಸ್ನ ಅಧೀಕ ಪಾಟೀಲ, ಬಿಜೆಪಿ ಜಿಲ್ಲಾ ನಿಕಟಪೂರ್ವ ಕಾರ್ಯದರ್ಶಿ ಕಾಶೀಬಾಯಿ ರಾಂಪೂರ , ಸಮಾಜ ಸೇವಕಿ ಸಂಗೀತಾ ನಾಡಗೌಡ,ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಸಮಾಜ ಸೇವಕ ನೇತಾಜಿ ನಲವಡೆ ಆಗಮಿಸುವರು.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಯುವಕರನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಮಾಡಲು ಯುವನೀತಿ ಜಾರಿಗೆ ಒತ್ತಾಯಿಸಲಾಗುತ್ತ ಬರುತ್ತಿದೆ.ರಾಜ್ಯದಲ್ಲೂ ಯುವ ನೀತಿ ಜಾರಿಗೆ ತರಬೇಕು ಎಂದು ಒತ್ತಾಯಿಸುವುದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಯುವ ಸಂಘಗಳ ಒಕ್ಕೂಟದ ಪದಾಧಿಕಾರಿಗಳಾದ ಸಂಗಣ್ಣ ಕಂಚ್ಯಾಣಿ, ಚಂದ್ರು ಕರೇಕಲ್,ಬಸವರಾಜ ದಡ್ಡಿ,ಸಾಬಣ್ಣ ಚಳ್ಳಗಿ, ವಿರೇಶ ಗುರುಮಠ, ಅಪ್ಪುಗೌಡ ಪಾಟೀಲ, ಮಹ್ಮದರಫೀಕ ಶಿರೋಲ,ಮಹಾಂತೇಶ ಬಿಜ್ಜೂರ, ಕೃಷ್ಣಾ ಕುಂಬಾರ, ದೀಪರತ್ನಶ್ರೀ, ರಾಜು ವಾಲೀಕಾರ, ಬಸವರಾಜ ಯಂಕoಚಿ, ಚಂದ್ರು ಮೂಕಿಹಾಳ ಇದ್ದರು.



