ಮುದ್ದೇಬಿಹಾಳ : ರಾಜ್ಯ ಸರ್ಕಾರ ಸಕ್ಕರೆ ಕಾರ್ಖಾನೆ ಮಾಲೀಕರು, ರೈತ ಮುಖಂಡರ ಸಭೆಯ ಬಳಿಕ ಘೋಷಣೆ ಮಾಡಿರುವ ೩೩೦೦ ರೂ.ಬೆಲೆ ನೀಡಲಾಗುತ್ತದೆ.ಹೋರಾಟ ಸ್ಥಗಿತಗೊಳಿಸಿ ಕಾರ್ಖಾನೆಗೆ ಕಬ್ಬು ಪೂರೈಸುವಂತೆ ತಹಶೀಲ್ದಾರ್‌ರು ಮಾಡಿದ ಮನವಿಗೆ ರೈತರು ಸ್ಪಂದಿಸಿಲ್ಲ.
ತಾಲ್ಲೂಕಿನ ತಂಗಡಗಿ ಸಮೀಪದ ಅಮರಗೋಳ ಕ್ರಾಸನಲ್ಲಿ ನಾಲ್ಕು ದಿನಗಳಿಂದ ಕಬ್ಬಿನ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ರೈತರು ನಡೆಸಿರುವ ಹೋರಾಟದ ಸ್ಥಳಕ್ಕೆ ಶುಕ್ರವಾರ ಸಂಜೆ ತಹಶೀಲ್ದಾರ್ ಕೀರ್ತಿ ಚಾಲಕ ಭೇಟಿ ನೀಡಿ ಹೋರಾಟಗಾರರೊಂದಿಗೆ ಮಾತುಕತೆ ನಡೆಸಿದರು.ಮುಖ್ಯಮಂತ್ರಿಗಳು ಈಗಾಗಲೇ ಕಬ್ಬಿಗೆ ಬೆಂಬಲ ಬೆಲೆಯನ್ನಾಗಿ ನೀಡುವುದಾಗಿ ಘೋಷಣೆ ಮಾಡಿದ್ದು ಹೋರಾಟ ಹಿಂಪಡೆದುಕೊಳ್ಳುವAತೆ ಮನವಿ ಮಾಡಿದರು.
ಇದಕ್ಕೆ ಒಪ್ಪದ ಕರ್ನಾಟಕ ರಾಜ್ಯ ರೈತ ಸಂಘದ ತಾಳಿಕೋಟಿ ಅಧ್ಯಕ್ಷ ಬಾಲಪ್ಪ ಲಿಂಗದಳ್ಳಿ, ನಮಗೆ ಅಧಿಕೃತ ಆದೇಶ ಕಾರ್ಖಾನೆಯವರಿಂದ ಬರಬೇಕು.ಅಲ್ಲಿಯವರೆಗೂ ಹೋರಾಟ ಮುಂದುವರೆಸುವುದಾಗಿ ತಿಳಿಸಿದರು.ರೈತರ ಮುಖಂಡರು ಲಿಖಿತ ಆದೇಶ ಕಾರ್ಖಾನೆಯವರು ನೀಡಿದ್ದಲ್ಲಿ ಹೋರಾಟ ಹಿಂದಕ್ಕೆ ಪಡೆದು ಕಬ್ಬು ಪೂರೈಕೆಗೆ ಮುಂದಾಗುವುದಾಗಿ ತಿಳಿಸಿದ್ದರಿಂದ ತಹಶೀಲ್ದಾರರು ವಾಪಸ್ ಆಗಬೇಕಾಯಿತು.
ಕಾರ್ಖಾನೆಯವರು, ನಮಗೆ ಲಿಖಿತ ಆದೇಶ ಈವರೆಗೂ ಬಂದಿಲ್ಲ ಎಂದು ತಿಳಿಸಿದ್ದರಿಂದ ಹೋರಾಟ ಮುಂದುವರೆದಿದೆ. ಸಿಪಿಐ ಮೊಹ್ಮದಫಸಿವುದ್ದೀನ, ಪಿಎಸ್‌ಐ ಸಂಜಯ ತಿಪರೆಡ್ಡಿ, ರೈತ ಮುಖಂಡರಾದ ಸಂಗಪ್ಪ ಬಾಗೇವಾಡಿ, ಗುರುಸಂಗಪ್ಪ ಹಂಡರಗಲ್, ರಾಜು ತಿಳಗೂಳ,ಶಿವು ಕನ್ನೊಳ್ಳಿ, ಶಿವನಗೌಡ ಜಲಪೂರ ಇದ್ದರು.







