ಹುಣಸಗಿ: ಸುರಪುರ ತಾಲೂಕಿನಾದ್ಯಂತ ವಸತಿಸಹಿತ ನಡೆಸುತ್ತಿರುವ ಖಾಸಗಿ ಶಾಲೆಗಳ ಮಾನ್ಯತೆಯನ್ನು ಹಿಂಪಡೆಯುವಂತೆ ಜಯ ಕರ್ನಾಟಕ ಜನಪರ ವೇದಿಕೆಯ ಹುಣಸಗಿ ತಾಲೂಕು ಅಧ್ಯಕ್ಷ ಪ್ರಭುಗೌಡ. ಬಿ. ಪೋತರೆಡ್ಡಿ ಆಗ್ರಹಿಸಿದ್ದಾರೆ.
ಸುರಪುರ ಮತ್ತು ಹುಣಸಗಿ ತಾಲೂಕಿನ ಖಾಸಗಿ ಶಾಲೆಗಳಲ್ಲಿ ಪರವಾನಿಗೆ ಇಲ್ಲದೇ ವಸತಿ ರಹಿತ ಶಾಲೆಗಳನ್ನು ಪ್ರಾರಂಭಿಸಿರುವ ಶಾಲೆಯ ಆಡಳಿತ ಮಂಡಳಿಗಳ ಹಗಲು ದರೋಡೆ ವಿರುದ್ಧ ಧ್ವನಿಯತ್ತಿರುವ ಕರ್ನಾಟಕ ಜನಪರ ವೇದಿಕೆಯ ಹುಣಸಗಿ ತಾಲೂಕು ಅಧ್ಯಕ್ಷ ಪ್ರಭುಗೌಡ. ಬಿ. ಪೋತರೆಡ್ಡಿ ಈ ವಿಷಯ ಕುರಿತು ಕ್ಷೇತ್ರಶಿಕ್ಷಣ ಇಲಾಖೆಯ ಅಧಿಕಾರಿಗೆ ಮನವಿ ನೀಡಿದ್ದಾರೆ.
ಈ ವಿಷಯದ ಬಗ್ಗೆ ಮಾತನಾಡಿದ ಅವರು ಸುರಪುರ ಮತ್ತು ಹುಣಸಗಿ ತಾಲೂಕಿನಾಧ್ಯಂತ ಕಾನೂನು ಬಾಹಿರವಾಗಿ ಸರಕಾರದಿಂದ ಯಾವುದೇ ರೀತಿಯಾಗಿ ಪರವಾನಿಗೆ ಪಡೆಯದೆ ವಸತಿ ಸಹಿತಿ ಖಾಸಗಿ ಶಾಲೆಗಳಲ್ಲಿ ಪಾಲಕರಿಂದ ಹೆಚ್ಚಿನ ಶುಲ್ಕ ವಸುಲಿಗೆ ಇಳಿದಿವೆ. ಈ ಕುರಿತು ಹಲವು ಬಾರಿ ಪೋಷಕರು ನನ್ನ ಗಮನಕ್ಕೆ ತಂದಿದ್ದು, ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿಯನ್ನು ನೀಡಿದ್ದು , ಅಲ್ಲದೇ ಕಳೆದ ಕೆಲವು ತಿಂಗಳುಗಳ ಹಿಂದೆ ಪರವಾನಿಗೆ ಇಲ್ಲದೇ ವಸತಿ ಸಹಿತ ಶಾಲೆಯನ್ನು ನಡೆಸುತ್ತಿದ್ದ ಶ್ರೀ ಖಾಸ್ಗತೇಶ್ವರ ಪ್ರೌಢ ಶಾಲೆ ಹುಣಸಗಿ ಶಾಲೆಗೆ ಭೇಟಿ ನೀಡಿದ್ದ ಶಿಕ್ಷಣ ಇಲಾಖೆಯ ತಂಡ ಆ ಶಾಲೆಯ ಪರವಾನಿಗೆಯನ್ನು ರದ್ದು ಮಾಡಿದೆ. ಅದೇ ರೀತಿಯಾಗಿ ಇನ್ನೂ ಕೂಡ ಸುರಪುರ ಮತ್ತು ಹುಣಸಗಿ ತಾಲೂಕಿನಲ್ಲಿ ಹಲವು
ಶಾಲೆಗಳು ಪರವಾನಿಗೆ ಇಲ್ಲದೇ ವಸತಿ ಸಹಿತ ಖಾಸಗಿ ಶಾಲೆಗಳನ್ನು ನಡೆಸುತ್ತಿದ್ದು, ಕ್ಷೇತ್ರ ಶಿಕ್ಷಣ ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸಿ ಶಿಸ್ತು ಕ್ರಮ ಜರುಗಿಸುವಲ್ಲಿ ಶಾಲಾ ಆಡಳಿತ ಮಂಡಳಿಯವರ ಆಮೀಷಕ್ಕೆ ಬಲಿಯಾಗದೆ ಮತ್ತು ಮಲತಾಯಿ ಧೋರಣೆಯನ್ನು ಅನುಸರಿಸದೇ ಕ್ರಮ ವಹಿಸಬೇಕೇಂದು ಆಗ್ರಹಿಸಿದ್ದರೆ. ಇಲ್ಲವಾದಲ್ಲಿ ಬಡ ಪೋಷಕರಿಂದ ಹೆಚ್ಚಿನ ಶುಲ್ಕಗಳನ್ನು ಪಡೆಯುತ್ತಿರುವ ಶಾಲೆಗಳ ವಿರುದ್ಧ ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ.
ಮುಂತಾದ ಶಾಲೆಗಳು ಶಿಕ್ಷಣ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೆ ಕಾನೂನುಬಾಹಿರವಾಗಿ ವಸತಿ ಸಹಿತ ಶಿಕ್ಷಣ ಆರಂಭಿಸಿದ್ದರೆಂದು ಅವರು ಆರೋಪಿಸಿದ್ದಾರೆ.
ಜೀನಿಯಸ್ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮಾವಿನಗಿಡದ ತಾಂಡ, ಪುರಾನಾಯಕ್ ಕಿರಿಯ ಪ್ರಾಥಮಿಕ ಶಾಲೆ ಕೊಡೇಕಲ್ ಆರ್ ಟಿ ಜೆ ಸೂಲ್ ಗಣೇಶ್ ಪಬ್ಲಿಕ್ ಸ್ಕೂಲ್ ಕೋಳಿಹಾಳ ಬಸವೇಶ್ವರ್ ಸ್ಕೂಲ್ ಮುದನೂರು, ಆರ್ಶೀವಾದ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಹುಣಸಗಿ ವಿದ್ಯಾ ವಿಕಾಸ ಶಾಲೆ ಎಲ್ ಪಿ ಎಸ್ ಕುಪ್ಪಿ ಕ್ರಾಸ್ ಹುಣಸಗಿ, ರಾಮಲಿಂಗೇಶ್ವರ ಹಿರಿಯ ಪ್ರಾಥಮಿಕ ಶಾಲೆ ಗುಳಬಾಳ, ಕನಕದಾಸ ಕಿರಿಯ ಪ್ರಾಥಮಿಕ ಶಾಲೆ ಯಡಹಳ್ಳಿ, ರೇವಣಸಿದ್ದೇಶ್ವರ ಕಿರಿಯ ಪ್ರಾರ್ಥಮಿಕ ಶಾಲೆ ಯಡಹಳ್ಳಿ, ಶೆಟ್ಟಿ ಕಾಂಪಿಟೇಟಿವ್ ಸ್ಕೂಲ್ ಸುರಪುರ , ವಿದ್ಯಾ ವಿಕಾಸ್ ಸ್ಕೂಲ್ ಕೆಂಭಾವಿ, ಶ್ರೀ ಸಾಯಿ ಪಬ್ಲಿಕ್ ಸ್ಕೂಲ್ ಕೆಂಭಾವಿ, ಬ್ರಿಲಿಯಂಟ್ ಸ್ಕೂಲ್ ಕೆಂಭಾವಿ, ನಂದನ್ ಸ್ಕೂಲ್, ಕೆಂಭಾವಿ ಶ್ರೀ ವಿದ್ಯಾಲಕ್ಷ್ಮಿ ಪಬ್ಲಿಕ್ ಸ್ಕೂಲ್ ಕೆಂಭಾವಿ , ಹೋಲಿ ಫೇಥ ಸ್ಕೂಲ್ ಕೆಂಭಾವಿ.
ವರದಿಗಾರ : ಶಿವು ರಾಠೋಡ