ಗ್ರಾಮಗಳ ಅಭಿವೃದ್ಧಿಗೆ ತೆರಿಗೆ ಪಾವತಿ ಅಗತ್ಯ ; ಪಿಡಿಓ ನಿರ್ಮಲಾ ತೋಟದ

ಗ್ರಾಮಗಳ ಅಭಿವೃದ್ಧಿಗೆ ತೆರಿಗೆ ಪಾವತಿ ಅಗತ್ಯ ; ಪಿಡಿಓ ನಿರ್ಮಲಾ ತೋಟದ

ನಾಲತವಾಡ : ಹೋಬಳಿ ವ್ಯಾಪ್ತಿಯ ಅಡವಿ ಸೋಮನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚವನಭಾವಿ ಗ್ರಾಮದಲ್ಲಿ ಶುಕ್ರವಾರ ಶ್ರೀ ಮಾರುತೇಶ್ವರ ದೇವಸ್ಥಾನ ಆವರಣದಲ್ಲಿ ಸನ್ 2026-27 ಸಾಲಿನ ನರೇಗಾ ಯೋಜನೆಯ ಕಾಮಗಾರಿಯ ಪಟ್ಟಿ ತಯಾರಿಸಲು ವಿಶೇಷ ವಾರ್ಡ ಸಭೆ ಜರುಗಿತು.

.ಅಡವಿ ಸೋಮನಾಳ ಪಿಡಿಓ ನಿರ್ಮಲಾ ತೋಟದ ಮಾತನಾಡಿ, ರೈತರಿಗೆ,ಕೂಲಿ ಕಾರ್ಮಿಕರಿಗೆ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಬರುವ ಕಾಮಗಾರಿಗಳಾದ ಕೃಷಿ ಹೊಂಡ,ಬದು ನಿರ್ಮಾಣ, ಚೆಕ್ ಡ್ಯಾಮ್ ದನದ ಕೊಟ್ಟಿಗೆ ಹಾಗೂ ವಿವಿಧ ಕಾಮಗಾರಿಗಳಿಗೆ ರೈತರು,ಸಾರ್ವಜನಿಕರು ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ ಎಂದು ಹೇಳಿದರು.
ಚವನಭಾವಿ ಗ್ರಾಮದಲ್ಲಿರುವ ಬಿದ್ದ ಮನೆಗಳ ಮಾಲೀಕರು ಪಂಚಾಯಿತಿಗೆ ಅರ್ಜಿ ಸಲ್ಲಿಸಿದರೆ ಜಾಗೆಗೆ ಒದಗುವ ತೆರಿಗೆಯ ಮೊತ್ತವನ್ನು ಭರಣಾ ಮಾಡಿಕೊಳ್ಳಲಾಗುತ್ತದೆ.ಅರ್ಜಿ ಸಲ್ಲಿಸಿದವರ ಮನೆಗಳ ಜಾಗೆಯನ್ನು ಖುದ್ದಾಗಿ ಪರಿಶೀಲನೆ ನಡೆಸಿ ಕರ ನಿರ್ಧಾರ ಮಾಡಲಾಗುತ್ತದೆ ಎಂದರು.

ಗ್ರಾಮೀಣ ಭಾಗದ ಪ್ರದೇಶಗಳ ಅಭಿವೃದ್ಧಿ ಆಗಬೇಕಾದರೆ ಸಾರ್ವಜನಿಕರು ತೆರಿಗೆ ಸರಿಯಾದ ಸಮಯಕ್ಕೆ ಕಟ್ಟಿದರೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅವಕಾಶ ದೊರೆಯುತ್ತದೆ ಎಂದರು.

ಅಡವಿ ಸೋಮನಾಳ ಗ್ರಾಪಂ ಅಧ್ಯಕ್ಷೆ ಸಂಗಮ್ಮ ಹಂಚಿನಾಳ, ಗ್ರಾಪಂ ಸದಸ್ಯ ಆಂಜನೇಯ ಪವಾರ, ಗ್ರಾಪಂ ಕಾರ್ಯದರ್ಶಿ ಬಸನಗೌಡ ಬಿರಾದಾರ,ಸಿಬ್ಬಂದಿ ಬಲವಂತ ಜೋಗಿನ,ಬಸಣ್ಣ ಬಿರಾದಾರ, ಗುರುರಾಜ ಗುಡಗುಂಟಿ,ಅAಗನವಾಡಿ ಕಾರ್ಯಕರ್ತೆರಾದ ಇಂದಿರಾ ಕುಂಬಾರ,ಶಾAತಾ ಈಳಗೇರ,ಸಾವಿತ್ರಿ ನಾಲತವಾಡ, ಬಸಮ್ಮ ಸೋಮನಾಳ,ಸೇರಿದಂತೆ ಗ್ರಾಪಂ ಸದಸ್ಯರು ಇದ್ದರು.

Latest News

500-1000 ರೂ.ಗೆ ಓಟು ಮಾರಿಕೊಳ್ಳಬೇಡಿ- ತಹಶೀಲ್ದಾರ್ ಚಾಲಕ್

500-1000 ರೂ.ಗೆ ಓಟು ಮಾರಿಕೊಳ್ಳಬೇಡಿ- ತಹಶೀಲ್ದಾರ್ ಚಾಲಕ್

ಮುದ್ದೇಬಿಹಾಳ : 500-1000 ರೂ.ಗಳಿಗೆ ನಿಮ್ಮ ಓಟು ಮಾರಿಕೊಂಡರೆ ಐದು ವರ್ಷಗಳ ಕಾಲ ಅವರು

ಪರೀಕ್ಷೆ ಬರೆಯಿರಿ ನಗದು ಹಣ ಗೆಲ್ಲಿ:                                      ಶಹಾಪೂರ : ಜ.25 ರಂದು ಆಕ್ಸಫರ್ಡ್ ಡೈಮಂಡ್ ಹಂಟ್ ಆವಾರ್ಡ್

ಪರೀಕ್ಷೆ ಬರೆಯಿರಿ ನಗದು ಹಣ ಗೆಲ್ಲಿ: ಶಹಾಪೂರ : ಜ.25 ರಂದು ಆಕ್ಸಫರ್ಡ್ ಡೈಮಂಡ್ ಹಂಟ್ ಆವಾರ್ಡ್

ಶಹಾಪೂರ : ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕು ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಸಮೂಹ ಶಿಕ್ಷಣ

ಶಿಕ್ಷಕ,ಶಿಕ್ಷಕಿಯರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ;                                                ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುವುದು ಬೇಡ-ನಾಗರಳ್ಳಿ

ಶಿಕ್ಷಕ,ಶಿಕ್ಷಕಿಯರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ; ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುವುದು ಬೇಡ-ನಾಗರಳ್ಳಿ

ಮುದ್ದೇಬಿಹಾಳ : ನಾವು ಶಿಕ್ಷಣ ಕೊಡುವ ನೆಪದಲ್ಲಿ ನಮ್ಮ ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುತ್ತಿದ್ದೇವೆ.ಅವರು ಆಟಗಳಲ್ಲಿ

ವಿಜಯಪುರ ಡಿಡಿಪಿಐ ಕಚೇರಿ 14 ಸಿಬ್ಬಂದಿ ಎತ್ತಂಗಡಿ..!

ವಿಜಯಪುರ ಡಿಡಿಪಿಐ ಕಚೇರಿ 14 ಸಿಬ್ಬಂದಿ ಎತ್ತಂಗಡಿ..!

ವಿಜಯಪುರ : ಧಾರವಾಡದ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯಿಂದ ಅ.3 ,

ಜ.23 ರಂದು ಜಾಗತಿಕ ಶಾಂತಿ,ಸೌಹಾರ್ದತೆ ಕುರಿತು ದತ್ತಿ ಉಪನ್ಯಾಸ

ಜ.23 ರಂದು ಜಾಗತಿಕ ಶಾಂತಿ,ಸೌಹಾರ್ದತೆ ಕುರಿತು ದತ್ತಿ ಉಪನ್ಯಾಸ

ಮುದ್ದೇಬಿಹಾಳ : ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ ದಿ.ನಾರಾಯಣರಾವ ಭೋಸಲೆ ಹಾಗೂ ರಾಮರಾವ ಕುಲಕರ್ಣಿ ಸ್ಮರಣಾರ್ಥ ಜ.23 ರಂದು ಸಂಜೆ 5.45ಕ್ಕೆ ಪಟ್ಟಣದ ಓಂ ಶಾಂತಿ ಭವನದಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಾಗತಿಕ ಶಾಂತಿ ಹಾಗೂ ಸೌಹಾರ್ದತೆ ಕುರಿತು ಉಪನ್ಯಾಸ ನಡೆಯಲಿದೆ.ದಿವ್ಯ ಸಾನಿಧ್ಯವನ್ನು ಓಂಶಾAತಿ ಭವನದ ಬ್ರಹ್ಮಕುಮಾರಿ ಮಂಜುಳಾ ಅಕ್ಕನವರು, ಬ್ರಹ್ಮಕುಮಾರಿ ರೇಣುಕಾ ಅಕ್ಕನವರು ವಹಿಸುವರು.ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಅಧ್ಯಕ್ಷತೆ ವಹಿಸುವರು. ಅರಿಹಂತ ಶಿಕ್ಷಣ ಸಂಸ್ಥೆ ಅಧ್ಯಕ್ಷ

ಜಮಖಂಡಿ ARTO ಜಯರಾಮ ನಾಯಕ ಮನೆ ಕಳ್ಳತನ

ಜಮಖಂಡಿ ARTO ಜಯರಾಮ ನಾಯಕ ಮನೆ ಕಳ್ಳತನ

ಮುದ್ದೇಬಿಹಾಳ : ತಾಲ್ಲೂಕಿನ ನೇಬಗೇರಿ ತಾಂಡಾದ ನಿವಾಸಿ,ಜಮಖಂಡಿ ARTO ಜಯರಾಂ ನಾಯಕ ಅವರ ಮುದ್ನಾಳ ಗ್ರಾಮದ ತೋಟದ ಮನೆಯಲ್ಲಿ ಜ.21 ರಂದು ಮಧ್ಯರಾತ್ರಿ ಮನೆಯ ಬೀಗ ಮುರಿದು ಚಿನ್ನಾಭರಣ ಹಾಗೂ ನಗದು ಕಳುವು ಮಾಡಿಕೊಂಡು ಕಳ್ಳರು ಪರಾರಿಯಾದ ಘಟನೆ ಬುಧವಾರ ನಡೆದಿದೆ.ಜಮಖಂಡಿಯಲ್ಲಿ ಎ.ಆರ್.ಟಿ.ಒ ಆಗಿ ಸೇವೆಯಲ್ಲಿರುವ ಜಯರಾಮ ನಾನಪ್ಪ ನಾಯಕ ಅವರ ಮನೆಗಳ್ಳತನ ಮಾಡಲಾಗಿದೆ.ದಿನಾಂಕ:21/01/2026 ರಂದು ಸಾಯಂಕಾಲ 06:00 ಗಂಟೆಯಿಂದ ದಿನಾಂಕ:22/01/2026 ರಂದು 00-20 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ