ಸುರಪುರ : ಸುರಪುರ ತಾಲ್ಲೂಕಿನ ಕುರುಬನ ತಳ್ಳಳ್ಳಿ ಗ್ರಾಮದ ಹೊರ ವಲಯದಲ್ಲಿರುವ ಗೋಣಿಮಟ್ಟಿ ಶ್ರೀ ಬಸವೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಬಸವ ಮಾಲಾಧಾರಿಗಳಿಂದ ನಡೆದಿದೆ.
ಸುಮಾರು 20 ವರ್ಷಗಳಿಂದ ದೇವಸ್ಥಾನದ ವಿಚಾರದಲ್ಲಿ ಯಾವುದೇ ಕಾರ್ಯ ಚಟುವಟಿಕೆಗಳು ನೆರವೇರದಿರುವುದನ್ನು ಗಮನಿಸಿ, ನೆನೆಗುದಿಗೆ ಬಿದ್ದಿರುವ ಹಾಗೂ ಅಳಿವಿನಂಚಿನಲ್ಲಿರುವ ಶ್ರೀ ಗೊಣಿಮಟ್ಟಿ ಬಸಪ್ಪಯ್ಯ ದೇವಸ್ಥಾನಕ್ಕೆ ಸಂಪರ್ಕಿಸುವ ರಸ್ತೆ ಸೇರಿದಂತೆ ದೇವಸ್ಥಾನದ ಸುತ್ತ ಮುತ್ತಲಿನ ಕಲ್ಲು-ಮುಳ್ಳು – ಗಿಡ ಗಂಟಿಗಳನ್ನು ಜೆಸಿಬಿ ಯಂತ್ರದ ಸಹಾಯದಿಂದ ತೆರವುಗೊಳಿಸುವ ಮೂಲಕ ಸ್ವಚ್ಛತೆ ಕಾರ್ಯ ಕೈಗೊಳ್ಳಲಾಯಿತು.
ಶ್ರಾವಣ ಮಾಸದ ಕೊನೆಯ ಸೋಮವಾರ ದಿನದಂದು ಗೊಣಿಮಟ್ಟಿ ಬಸಪ್ಪಯ್ಯ ದೇವಸ್ಥಾನದಲ್ಲಿ (ಖಾಂಡ) ಮಹಾ ಪ್ರಸಾದ ನಡೆಸಲು ನಿರ್ಧರಿಸಲಾಗಿದೆ. ಮಾಲಾಧಾರಿಗಳ ಸ್ವಚ್ಛತಾ ಕಾರ್ಯಕ್ಕೆ ತಳ್ಳಳ್ಳಿ ಗ್ರಾಮಸ್ಥರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ಸಂದರ್ಭದಲ್ಲಿ ಶರಣಗೌಡ ವಡಿಗೇರಿ, ಚನ್ನಗೌಡ ಚನ್ನೂರ, ಅಶೋಕ ಕಾಕರಗಲ್ಲ, ರಾಘವೇಂದ್ರ ಮಾಸ್ತರ, ನಾಗರಾಜ ಪತ್ತಾರ, ಕುಮಾರ ದೊರೆ, ಕರಿಬಸಪ್ಪಗೌಡ ಚನ್ನೂರ, ದೇವಣ್ಣ ಆಲಗೂರ, ಶ್ರೀಕಾಂತ್ ಕಮತಗಿ, ವಿಶ್ವರಾಧ್ಯ ಮಾಲಿ ಪಾಟೀಲ್, ಆನಂದ ಆಲಗೂರ, ಶಿವರಾಜ ಕಮತಗಿ, ಶರಣಗೌಡ ಕಾಕರಗಲ್ಲ ಸೇರಿದಂತೆ ಇತರರು ಇದ್ದರು.
ವರದಿಗಾರ : ಶಿವು ರಾಠೋಡ