ಮುದ್ದೇಬಿಹಾಳ : ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಜಾರಿಗೊಳಿಸುತ್ತಿರುವ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ 2025 ಕಾಯ್ದೆಯು ಅಂಬೇಡ್ಕರ್ ಅವರು ಕೊಟ್ಟಿರುವ ಸಾಂವಿಧಾನಿಕ ಹಕ್ಕುಗಳಿಗೆ ಕೊಡಲಿಪೆಟ್ಟು ನೀಡುತ್ತದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಗೆ ಬುಧವಾರ ಆಗಮಿಸಿದ್ದ ಬಿಜೆಪಿ ಕಾರ್ಯಕರ್ತರು ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ 2025 ವಿರುದ್ಧ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.ಸಂವಿಧಾನದ 19(1) ಹಾಗೂ (2)ರ ವಾಕ್ ಅಥವಾ ಅಭಿವ್ಯಕ್ತಿ ಸ್ವಾತಂತ್ರö್ಯದ ಉಲ್ಲಂಘನೆ ಆಗುತ್ತದೆ.ಸರ್ಕಾರದ ವಿರುದ್ಧ ಮಾತನಾಡುವರ ಬಾಯಿ ಮುಚ್ಚಿಸುವ ಹುನ್ನಾರವಾಗಿದೆ ಎಂದು ಆರೋಪಿಸಿದರು.
ಸರ್ಕಾರದ ನೀತಿಗಳ ವಿರುದ್ಧ ಟೀಕೆ,ಸಾಮಾಜಿಕ ಚರ್ಚೆ, ವ್ಯಂಗ್ಯ ಮಾಡುವುದು, ಅಥವಾ ಸತ್ಯವನ್ನು ಹೇಳುವುದನ್ನೂ ಕೂಡ ದ್ವೇಷ ಎಂದು ಪರಿಗಣಿಸುವ ಅಪಾಯವಿದೆ ಎಂದು ದೂರಿದರು.ಈ ಕಾಯ್ದೆ ಪೊಲೀಸರಿಗೆ ಹಾಗೂ ಸರ್ಕಾರಕ್ಕೆ ನಿರಂಕುಶ ಅಧಿಕಾರ ನೀಡುತ್ತದೆ.ಅಪರಾಧಿಗಳಿಗೆ ಜಾಮೀನು ಇಲ್ಲ.ಕೀಳುಮಟ್ಟದ ಕಾಯ್ದೆ ಅನುಷ್ಠಾನ ಅಗತ್ಯವೇ ಎಂದು ಪ್ರಶ್ನಿಸಿದರು.
ತಹಶೀಲ್ದಾರ್‌ಗೆ ಸಲ್ಲಿಸಿದ ಮನವಿಯಲ್ಲಿ ಸಾರ್ವಜನಿಕ ಸಭೆಗಳು,ಚಳವಳಿಗಳನ್ನು ತಡೆಯುವ ಉದ್ದೇಶ ಇದರಲ್ಲಿದೆ. ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು, ಸಾಮಾಜಿಕ ಮಾಧ್ಯಮ ಬಳಕೆ ಮಾಡುವವರು ಹೆಚ್ಚು ತೊಂದರೆಗೆ ಸಿಲುಕುವ ಅಪಾಯ ಇದೆ ಎಂದು ತಿಳಿಸಲಾಗಿದೆ.
ಮನವಿಯನ್ನು ತಹಶೀಲ್ದಾರ್ ಕೀರ್ತಿ ಚಾಲಕ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಸಂಜು ಬಾಗೇವಾಡಿ, ಪದಾಧಿಕಾರಿಗಳಾದ ಗಿರೀಶಗೌಡ ಪಾಟೀಲ,ರವಿಕುಮಾರ ಹವಾಲ್ದಾರ್,ಸಂಗಣ್ಣ ಹತ್ತಿ,ಅಶೋಕ ರಾಠೋಡ, ಲಕ್ಷö್ಮಣ ಬಿಜ್ಜೂರ,ಸಿದ್ಧರಾಜ ಹೊಳಿ, ಎಸ್.ಎಚ್.ಲೊಟಗೇರಿ,ಮುತ್ತಣ್ಣ ಹುಗ್ಗಿ,ಪುನೀತ ಹಿಪ್ಪರಗಿ, ನಿಖಿಲ ಮಲಗಲದಿನ್ನಿ,ಪುರಸಭೆ ಸದಸ್ಯರು ಇದ್ದರು.







