ಮುದ್ದೇಬಿಹಾಳ : ಪುರಾಣ,ಪ್ರವಚನಗಳು ನಮ್ಮ ಬದುಕಿಗೆ ನೆಮ್ಮದಿಯ ಭಾವವನ್ನು ನೀಡುತ್ತವೆ ಎಂದು ತಾಳಿಕೋಟಿ-ಮುದ್ದೇಬಿಹಾಳ ಖಾಸ್ಗತೇಶ್ವರ ಮಠದ ಸಿದ್ಧಲಿಂಗ ದೇವರು ಹೇಳಿದರು.
ಪಟ್ಟಣದ ಖಾಸ್ಗತೇಶ್ವರ ಮಠದಲ್ಲಿ ಏರ್ಪಡಿಸಿರುವ ಸಜ್ಜಲಗುಡ್ಡದ ಶರಣಮ್ಮನವರ ಪುರಾಣ ಕಾರ್ಯಕ್ರಮದಲ್ಲಿ ತೊಟ್ಟಿಲೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಮದುವೆಗಳನ್ನು ಹಣ ನೋಡಿ ಮಾಡಬೇಡಿ.ನಿಮ್ಮ ಮಕ್ಕಳು ಎಲ್ಲಿ ಒಳ್ಳೆಯ ಬದುಕು ಸಾಗಿಸಲು ಸಾಧ್ಯವಿದೆಯೋ ಅಂತಹ ಸ್ಥಳಕ್ಕೆ ಕೊಟ್ಟು ಮದುವೆ ಮಾಡಿ.ಹಣ ನೋಡದೇ ಗುಣ ನೋಡಿ ಮದುವೆ ಮಾಡಿಕೊಡುವ ಕೆಲಸಗಳಾದರೆ ಸಣ್ಣ ವಯಸ್ಸಿನಲ್ಲಿಯೇ ಹೆಣ್ಣು ಮಕ್ಕಳು ತವರು ಮನೆ ಸೇರುವುದು ನಿಲ್ಲುತ್ತದೆ ಎಂದರು.
ಪುರಾಣಿಕ ವೇ.ಸಂಗಯ್ಯ ಸರಗಣಾಚಾರಿ, ಮುದ್ದೇಬಿಹಾಳದ ಶ್ರೀಮಠದ ಶರಣೆ ನೀಲಮ್ಮ ವಿರಕ್ತಮಠ ಇದ್ದರು.ಸಂಗೀತ ಬಳಗದ ಕಲಾವಿದರಾದ ರಾಜು ಗುಬ್ಬೇವಾಡ,ಕಾಂತೇಶ ಹೂಗಾರ ಇದ್ದರು.ಇದೇ ಸಂದರ್ಭದಲ್ಲಿ ಬಾಲ ಶರಣಮ್ಮ ತಾಯಿಯವರ ತೊಟ್ಟಿಲೋತ್ಸವ ಕಾರ್ಯಕ್ರಮ ಜರುಗಿತು.







