ಮುದ್ದೇಬಿಹಾಳ : ತಾಲ್ಲೂಕಿನೆಲ್ಲೆಡೆ 79ನೇ ಸ್ವಾತಂತ್ರ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಪಟ್ಟಣದ ಪುರಸಭೆಯಲ್ಲಿ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಕೃಷಿ ಇಲಾಖೆಯಲ್ಲಿ ಸಹಾಯಕ ಕೃಷಿ ನಿರ್ದೇಶಕ ಎಸ್. ಡಿ. ಭಾವಿಕಟ್ಟಿ, ತಾಪಂನಲ್ಲಿ ಇಒ ಎನ್. ಎಸ್. ಮಸಳಿ, ಸಿಪಿಐ ಕಚೇರಿಯಲ್ಲಿ ಸಿಪಿಐ ಮೊಹ್ಮದಫಸಿವುದ್ದೀನ್, ಪೊಲೀಸ್ ಠಾಣೆಯಲ್ಲಿ ಸಂಜಯ ತಿಪರೆಡ್ಡಿ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಡಾ. ಸತೀಶ ತಿವಾರಿ, ಸಾರ್ವಜನಿಕ ಆಸ್ಪತ್ರೆಯಲ್ಲಿ ಡಾ. ಅನೀಲಕುಮಾರ ಶೇಗುಣಸಿ, ಗ್ರಾಮೀಣ ಕುಡಿವ ನೀರು ಪೂರೈಕೆ ಇಲಾಖೆಯಲ್ಲಿ ಎಇಇ ಆರ್. ಎಸ್. ಹಿರೇಗೌಡರ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಹಾಯಕ ನಿರ್ದೇಶಕಿ ಬಸಂತಿ ಮಠ, ಹೆಸ್ಕಾಂನಲ್ಲಿ ಎಇಇ ರಾಜಶೇಖರ ಹಾದಿಮನಿ, ಪ್ರಾದೇಶಿಕ ಅರಣ್ಯ ಇಲಾಖೆಯಲ್ಲಿ ಅಧಿಕಾರಿ ಬಸನಗೌಡ ಬಿರಾದಾರ, ಅಭ್ಯುದಯ ಇಂಟರ್ ನ್ಯಾಶನಲ್ ಸ್ಕೂಲ್‌ನಲ್ಲಿ ಸಂಸ್ಥೆಯ ಕಾರ್ಯದರ್ಶಿ ಎಂ.ಎನ್.ಮದರಿ, ಬಿದರಕುಂದಿ ರಸ್ತೆಯಲ್ಲಿರುವ ಆಕ್ಸಫರ್ಡ ಪಾಟೀಲ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ನಿರ್ದೇಶಕ ದರ್ಶನಗೌಡ ಪಾಟೀಲ, ಶಿಕ್ಷಣ ಇಲಾಖೆಯಲ್ಲಿ ಬಿಇಒ ಬಿ.ಎಸ್.ಸಾವಳಗಿ ರಾಷ್ಟ್ರಧ್ವಜಾರೋಹಣ ಮಾಡಿದರು.