ಮುದ್ದೇಬಿಹಾಳ : ಕೋವಿಡ್ ಸಮಯದಲ್ಲಿ ಜೀವ ಒತ್ತೆ ಇಟ್ಟು ಸೇವೆ ಸಲ್ಲಿಸಿದ ವೈದ್ಯರು,ಶುಶ್ರೂಷಕರ ಸೇವೆ ಅನುಪಮವಾದದ್ದು ಎಂದು ಕಾಳಗಿ ಸಮುದಾಯ ಕೇಂದ್ರದ ವೈದ್ಯ ಡಾ.ಅನೀಲಕುಮಾರ ಶೇಗುಣಸಿ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬುಧವಾರ ಕರ್ನಾಟಕ ರಾಜ್ಯ ಸರ್ಕಾರಿ ಶುಶ್ರೂಷಾಧಿಕಾರಿಗಳ ಕೇಂದ್ರ ಸಂಘದ ತಾಲೂಕು ಘಟಕದಿಂದ ನೂತನ ವರ್ಷದ ದಿನದರ್ಶಿಕೆ ಉದ್ಘಾಟನೆ,ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಪರಶುರಾಮ ವಡ್ಡರ ಮಾತನಾಡಿ, ವೈದ್ಯಕೀಯ ಸೇವೆಯನ್ನು ಜನರು ಮೆಚ್ಚುವಂತೆ ನೀಡುತ್ತಿರುವ ಎಲ್ಲ ಸಿಬ್ಬಂದಿಯನ್ನು ಅಭಿನಂದಿಸುತ್ತೇನೆ. ಎಲ್ಲರೂ ತುಂಬಾ ಚೆನ್ನಾಗಿ ಕೆಲಸ ಮಾಡುತ್ತಾರೆ ಎಂದರು.
ಡಾ.ಅನುಪಮಾ ಶೆಟ್ಟಿ, ಹಿರಿಯ ಶುಶ್ರೂಷಅಧಿಕಾರಿಗಳಾದ ಸಂಜಯ ಭೋಸಲೆ,ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳದ ನಿರ್ದೇಶಕ ಆನಂದಗೌಡ ಬಿರಾದಾರ,ಅಯ್ಯಮ್ಮ ಕೊಣ್ಣೂರ, ಶಾಂತಾ ಮೇಟಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕ ವಿಠ್ಠಲ ಕಿಲಾರಟ್ಟಿ ಮಾತನಾಡಿದರು.
ಸಂಘದ ಉಪಾಧ್ಯಕ್ಷ ಅವಪ್ಪ ಅವನ್ನವರ, ಖಜಾಂಚಿ ಶೇಖಪ್ಪ ಬಿರಾದಾರ, ಸಂಘಟನಾ ಕಾರ್ಯದರ್ಶಿ ಮುನಾವರಪಾಷಾ ಹೊನ್ನುಟಗಿ, ಜಂಟಿ ಕಾರ್ಯದರ್ಶಿ ಜ್ಯೋತಿ ಕೋಳೂರಗಿ, ಸಚೀನ ರಾಥೋಡ, ಸಂತೋಷ ಅಂಗಡಿಗೇರಿ, ಜಿಲ್ಲಾ ಕಾರ್ಯದರ್ಶಿ ಯಲಗೂರೇಶ ತೊನಶ್ಯಾಳ,ಆಸ್ಪತ್ರೆಯ ಸಿಬ್ಬಂದಿ ಬಸವರಾಜ ಹಾವೇರಿ, ವಿಜಯ ಮಾಂತೇಶ ಪವಾಡಶೆಟ್ಟಿ, ದಾವೂದ ಮಕಾನದಾರ, ಬಸವರಾಜ ಬಡಿಗೇರ, ಎಂ.ಎಸ್. ಗೌಡರ, ಮಲ್ಲು ತಂಗಡಗಿ, ಶ್ರೀಕಾಂತ ಸಜ್ಜನ, ಕಲ್ಯಾಣಿ ಕೊಣ್ಣೂರ, ಓಲೆಕಾರ್, ರಾಜಶ್ರೀ ಹೊಕ್ರಾಣಿ, ರೇಖಾ ಜಾಯಗೊಂಡ, ನಸ್ರೀನ ಕೆ, ಶಿಲ್ಪ, ಭಾರತಿ, ರೇಷ್ಮಾ, ಸಲೀಂ ನದಾಫ,ಎಲ್ಲ ವಿಭಾಗದ ಇದ್ದರು.
ಪ್ರಧಾನ ಕಾರ್ಯದರ್ಶಿ ಮಹಮ್ಮದರಫೀಕ ಬಾಗವಾನ ಸ್ವಾಗತಿಸಿದರು.ಸಂಘದ ಅಧ್ಯಕ್ಷ ಶಿವಣ್ಣ ಎಸ್.ಮಾಗಿ ನಿರೂಪಿಸಿದರು. ಹಿರಿಯ ಸಲಹೆಗಾರರಾದ ಕಾಶಿನಾಥ ವಗದುರ್ಗಿ ವಂದಿಸಿದರು.



