
ವಿಜಯಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿ ಪಕ್ಷದಿಂದ ನಿನ್ನೆಯಷ್ಟೇ 6 ವರ್ಷಗಳ ಕಾಲ ಉಚ್ಚಾಟನೆ ಮಾಡಿ ಕೇಂದ್ರೀಯ ಶಿಸ್ತು ಸಮಿತಿ ಆದೇಶ ಹೊರಡಿಸಿದೆ. ಈ ಆದೇಶ ವಿರೋಧಿಸಿದ್ದ ಯತ್ನಾಳ ಅವರ ಬೆಂಬಲಿಗ ಕಾರು ಅಫಘಾತದಲ್ಲಿ ಇಂದು ಸಾವನ್ನಪ್ಪಿದ್ದಾನೆ!

ಯತ್ನಾಳ ಅವರನ್ನು ಉಚ್ಚಾಟನೆ ಮಾಡಿದ್ದನ್ನು ವಿರೋಧಿಸಿ ನಿನ್ನೆಯೇ ಅವರ ಬೆಂಬಲಿಗ ಹಾಗೂ ಎಸ್‌ಟಿ ಮೋರ್ಚಾದ ಪದಾಧಿಕಾರಿ ಸಂತೋಷ ಎಂಬುವವರು ರಾಜೀನಾಮೆ ನೀಡಿದ್ದರು. ಇಂದು ಕಾರು ನಿಯಂತ್ರಣ ಕಳೆದುಕೊಂಡು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಇನ್ನು ಯತ್ನಾಳ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿರಬಹುದು, ಜನರಿಂದ ಉಚ್ಚಾಟನೆ ಮಾಡಲು ಸಾಧ್ಯವಿಲ್ಲ. ಕಾದು ನೋಡಿ.. ಭಾವಪೂರ್ಣ ಶ್ರದ್ಧಾಂಜಲಿ ಎಂದು ಬಿಜೆಪಿ ನಡೆಗೆ ವಿರೋಧಿಸಿ ಆಕ್ರೋಶ ವ್ಯಕ್ತಪಡಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಸಹ ಸಂತೋಷ್ ಮಾಡಿದ್ದರು. ಇದೀಗ ದುರಂತವೆಂಬಂತೆ ಅಪಘಾತದಲ್ಲಿ ಅವರೇ ಕೊನೆಯುಸಿರೆಳೆದಿದ್ದಾರೆ.
ಯತ್ನಾಳ ಅವರ ಉಚ್ಚಾಟನೆ ಹಿನ್ನೆಲೆಯಲ್ಲಿ ಈಗಾಗಲೇ ಅವರ ಬೆಂಬಲಿಗರು, ಪದಾಧಿಕಾರಿಗಳು ರಾಜೀನಾಮೆ ನೀಡುತ್ತಿರುವುದಲ್ಲದೇ ಹೋರಾಟಕ್ಕೂ ಸಜ್ಜಾಗುತ್ತಿದ್ದಾರೆ.
ಯತ್ನಾಳ ಪಕ್ಷದಲ್ಲಿ ಇದ್ದಾಗಲೇ ಅವರನ್ನು ನಿಯಂತ್ರಿಸಲು ವಿಫಲವಾದ ಹೈಕಮಾಂಡ್ ಈಗ ಅವರಿಂದ ಪಕ್ಷಕ್ಕೆ ಆಗುವ ನಷ್ಟವನ್ನು ಹೇಗೆ ಸರಿದೂಗಿಸುತ್ತದೆ. ಇಲ್ಲಿಯ ವರೆಗೂ ಅವರೊಂದಿಗೆ ಗುರುತಿಸಿಕೊಂಡ ಮಿತ್ರರ ನಡೆ ಏನು ಎಂಬುದನ್ನು ಕಾದು ನೋಡಬೇಕಿದೆ.
ಉಚ್ಚಾಟನೆಯ ನಮತರ ಈವರೆಗೂ ಮಾಧ್ಯಮಗಳು ಸೇರಿದಂತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.
ಸದ್ಯ ಯತ್ನಾಳ ಅವರು ಚಿಂಚೊಳ್ಳಿಯಲ್ಲಿ ಇದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಇದನ್ನು ಓದಿ: ಹೈಕಮಾಂಡ್ ನಿರ್ಧಾರದ ವಿರುದ್ಧ ವ್ಯರ್ಘನಾಗಿ ಆಕ್ರೋಶ ಹೊರಹಾಕಿದ ಯತ್ನಾಳ