ಮುದ್ದೇಬಿಹಾಳ : ಮನುಕುಲಕ್ಕೆ ಮಾರ್ಗದರ್ಶಿಯಾದ ಸರ್ವಜ್ಞರ ತ್ರಿಪದಿಗಳು ಇಂದಿಗೂ ಸಾರ್ವಕಾಲಿಕ ಸತ್ಯಗಳಾಗಿವೆ. ತಮ್ಮ ಸರಳ ಸಾಹಿತ್ಯದ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ತಹಶೀಲ್ದಾರ್ ಕೀರ್ತಿ ಚಾಲಕ್ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಲಾಗಿದ್ದ ತ್ರಿಪದಿ ಕವಿ, ಸರ್ವಜ್ಞರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಲೋಕಕ್ಕೆ ಸರ್ವಜ್ಞರ ಕೊಡುಗೆ ಅಪಾರ ಎಂದು ಸ್ಮರಿಸಿದ ಅವರು, “ಸರ್ವಜ್ಞರು ಕೇವಲ ಕವಿಯಷ್ಟೇ ಅಲ್ಲ, ಒಬ್ಬ ಮಹಾನ್ ದಾರ್ಶನಿಕರೂ ಆಗಿದ್ದರು. ಅವರ ಜೀವನದ ಮೌಲ್ಯಗಳು ಮತ್ತು ಸಂದೇಶಗಳು ಇಂದಿನ ಆಧುನಿಕ ಸಮಾಜಕ್ಕೆ ಅತ್ಯಂತ ಅವಶ್ಯಕವಾಗಿವೆ” ಎಂದರು.
ತಹಶಿಲ್ದಾರರ ಕಚೇರಿಯಲ್ಲಿ ತ್ರಿಪದಿ ಕವಿ ಸರ್ವಜ್ಞರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು.
ಉಪತಹಶೀಲ್ದಾರ ಎನ್.ಬಿ. ಮಾವಿನಮಟ್ಟಿ, ಎಂ.ಎಸ್. ಗೋನಾಳ, ಹಾಗೂ ಶಿರಸ್ತೇದಾರರಾದ ಎಸ್.ಎಂ. ಸಜ್ಜನ, ಜಿ.ಎನ್. ಕಟ್ಟಿ,ಬಿ.ಎಸ್. ಮುದ್ದೇಬಿಹಾಳ, ಕುಂಬಾರ ಸಮಾಜದ ಮುಖಂಡರಾದ ಸಂಗಣ್ಣ ಕುಂಬಾರ, ಸಿದ್ರಾಮಪ್ಪ ಕುಂಬಾರ,ಅoಬಣ್ಣ ಕುಂಬಾರ, ಬಸವರಾಜ ಕುಂಬಾರ (ಚವನಬಾವಿ), ಮಹಾಂತೇಶ ಕುಂಬಾರ, ಶ್ರೀಶೈಲ ಕುಂಬಾರ, ಶಂಕ್ರಪ್ಪ ಕುಂಬಾರ, ಸುಭಾಸ ಕುಂಬಾರ, ಹಣಮಂತ ಕುಂಬಾರ,ಮಲ್ಲಣ್ಣ ಕುಂಬಾರ ನಂದವಾಡಗಿ ಪತ್ರಕರ್ತರಾದ ಕೆ.ಎಂ. ರಿಸಾಲದಾರ, ಮುತ್ತು ಟಕ್ಕಳಕಿ ಇದ್ದರು.







