ಮುದ್ದೇಬಿಹಾಳ : ಮುಖ್ಯಮಂತ್ರಿ ಸಿದ್ದರಾಮಯ್ಯ ಬದಲಾವಣೆ ಪ್ರಶ್ನೆಯೆ ಇಲ್ಲ. ಅದು ಹೈಕಮಾಂಡ್ ನಿರ್ಧಾರ.ಈ ವಿಷಯದ ಬಗ್ಗೆ ಮಾತನಾಡಲು ನಾವೆಲ್ಲ ಬಹಳ ಸಣ್ಣವರು.ಈ ವಿಷಯದ ಕುರಿತು ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯವರೇ ಹೇಳಿಕೆ ಕೊಟ್ಟಿದ್ದಾರೆ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದರು. ಸುಗಮವಾಗಿ ,ಸರಳವಾಗಿ ಸರಕಾರ ನಡೆದಿದೆ.ಮಂತ್ರಿ ಮಂಡಲದ ಬದಲಾವಣೆ ಆಗುವುದು ಸಹಜ.ಕೆಲವರು ಬದಲಾಗುತ್ತಾರೆ.ಹೋದ ಸಲ ನನ್ನ ಹೆಸರು ಲೀಸ್ಟ್ನಲ್ಲಿ ಹೆಸರಿತ್ತು.ಕೊನೆಯ ಕ್ಷಣದಲ್ಲಿ ಕೈ ಬಿಟ್ಟರು.ಜಿಲ್ಲೆಯಲ್ಲಿ ಇಬ್ಬರು ಸಚಿವರಿದ್ದು ಅವರಲ್ಲಿ ಯಾರಾದರೂ ಸಚಿವ ಸ್ಥಾನ ತ್ಯಾಗ ಮಾಡಿದರೆ ಆ ಸ್ಥಾನಕ್ಕೆ ಹಿರಿಯನಾದ ನನ್ನನ್ನು ಪರಿಗಣಿಸಬೇಕು ಎಂದು ಹೈಕಮಾಂಡ್‌ಗೆ ವಿನಂತಿಸಿದ್ದೇನೆ.ಹೈಕಮಾಂಡ್ ಯಾರಿಗೆ ಸೂಚನೆ ಕೊಡುತ್ತದೆಯೋ ಅದರಂತೆ ನಡೆಯುತ್ತೇವೆ.ನಾನು ಯಾರಿಗೂ ಸ್ಥಾನ ತ್ಯಾಗ ಮಾಡಲು ಹೇಳುವುದಿಲ್ಲ.ಅಲ್ಲದೇ ಅಷ್ಟು ದೊಡ್ಡವನು ನಾನಲ್ಲ ಎಂದು ತಿಳಿಸಿದ ನಾಡಗೌಡ, ಈ ಬಾರಿ ನನ್ನನ್ನು ಮಂತ್ರಿ ಮಾಡುವ ಆಶ್ವಾಸನೆಯನ್ನು ಹೈಕಮಾಂಡ್‌ನಿoದ ಸಿಕ್ಕಿದೆ.ಸಂಪುಟದಲ್ಲಿ ಇರುವ ವಿಶ್ವಾಸ ಇದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ,ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ, ಉದ್ಯಮಿ ಶರಣು ಸಜ್ಜನ,ಸಿಕಂದರ ಜಾನ್ವೆಕರ,ರಾಜು ರಾಯಗೊಂಡ,ಶಿವು ಶಿವಪೂರ, ರಾಜು ಗೌಡರ,ರಾಯನಗೌಡ ತಾತರೆಡ್ಡಿ ಇದ್ದರು.
‘ನನಗೆ ನೋವಾಗಿದೆ’:
ಈ ಸಲದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ಮುದ್ದೇಬಿಹಾಳದಿಂದ ಹಿರಿಯ ಸಾಹಿತಿ ಬಿ.ಎಂ.ಹಿರೇಮಠ ಅವರ ಹೆಸರನ್ನು ಶಿಫಾರಸ್ಸು ಮಾಡಿದ್ದೇವು.ಆದರೆ ಅದಕ್ಕೆ ಸಂಬoಧಿಸಿದ ಇಲಾಖೆಯಿಂದ ಸ್ಪಂದನೆ ದೊರೆಯಲಿಲ್ಲ.ಅಲ್ಲದೇ ಕೆಲವು ನಿಗಮ ಮಂಡಳಿಗಳಿಗೆ ಕಾರ್ಯಕರ್ತರಿಗೆ ಸ್ಥಾನಮಾನ ನೀಡುವಂತೆ ಪತ್ರ ಬರೆದಿದ್ದರೂ ಅದಕ್ಕೂ ಈವರೆಗೆ ಯಾವುದೇ ಉತ್ತರ ಬಂದಿಲ್ಲ.ಇದರಿoದ ನನ್ನ ಮನಸ್ಸಿಗೆ ನೋವಾಗಿದೆ ಎಂದು ಶಾಸಕ ನಾಡಗೌಡ ತಿಳಿಸಿದರು.ಹೈಕಮಾಂಡ್ ಹೇಳಿದರೆ ಇವತ್ತೇ ನನ್ನ ನಿಗಮದ ಅಧ್ಯಕ್ಷಗಿರಿಗೆ ರಾಜೀನಾಮೆ ನೀಡುವೆ ಎಂದೂ ತಿಳಿಸಿದರು.







