ಮುದ್ದೇಬಿಹಾಳ : ಗ್ಯಾರಂಟಿ ಯೋಜನೆಗಳಿಗಾಗಿ ರಾಜ್ಯ ಸರ್ಕಾರ 50 ಸಾವಿರ ಕೋಟಿ ರೂ.ವೆಚ್ಚ ಮಾಡುತ್ತಿದೆ.ಗ್ಯಾರಂಟಿ ಯೋಜನೆಗಳನ್ನು ಟೀಕಿಸುವವರು, ಸ್ಥಿತಿವಂತರು ಈ ಯೋಜನೆಗಳನ್ನು ಪಡೆದುಕೊಳ್ಳದೇ ಬಿಟ್ಟುಕೊಡುವ ಕಾರ್ಯ ಮಾಡಿ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.
ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿ ರಾಜ್ಯ ರಸ್ತೆ ಸುರಕ್ಷತಾ ನಿಧಿ ಯೋಜನೆಯಡಿ ಸನ್ 2025-26ನೇ ಸಾಲಿನಲ್ಲಿ ರಾಜ್ಯ ಹೆದ್ದಾರಿ 161ರಲ್ಲಿ ಚತುಷ್ಪಥ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.
ಜನ ಅಭಿವೃದ್ಧಿ ಮಾಡಲು ಜನ ಆಯ್ಕೆ ಮಾಡಿ ಕಳಿಸಿದ್ದಾರೆ.ನಿರೀಕ್ಷಿತ ಅಭಿವೃದ್ಧಿ ಆಗಿಲ್ಲ ಎಂಬ ಕೊರಗು ಹಲವರಲ್ಲಿದೆ.ಆದರೆ ಹಿಂದಿನ ಸರ್ಕಾರ 1.20 ಲಕ್ಷ ಕೋಟಿ ರೂ.ಬಿಲ್ ಕೊಡುವ ಹೊಣೆಯನ್ನು ಕಾಂಗ್ರೆಸ್ ಸರ್ಕಾರದ ಮೇಲೆ ಬಿದ್ದಿವೆ.ಹಿಂದಿನ ಸರ್ಕಾರದಲ್ಲಿ ಬಾಕಿ ಇರಿಸಿದ್ದ ಬಿಲ್‌ನ್ನು ನಾವು ಕೊಡಬೇಕಾಯಿತು.ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡುವವರು ಯೋಜನೆಗಳನ್ನು ಹಿಂದಿರುಗಿಸಿ ಅಥವಾ ನಿರಾಕರಿಸಬೇಕು ಎಂದು ಹೇಳಿದರು.
33 ಸಾವಿರ ಕೋಟಿ ರೂ.ಗುತ್ತಿಗೆದಾರರ ಬಿಲ್ ಬಾಕಿ ಇದೆ. ಅಭಿವೃದ್ಧಿ ನಿಲ್ಲದ ಹಾಗೆ ಸರ್ಕಾರ ಪ್ರಯತ್ನ ಮಾಡುತ್ತಿದೆ. ಮತಕ್ಷೇತ್ರದ ಅಭಿವೃದ್ಧಿಗೆ ಸಿಎಂ ಸಿದ್ಧರಾಮಯ್ಯ ಎರಡು ವರ್ಷದಲ್ಲಿ ಸಾಕಷ್ಟು ಅನುದಾನ ನೀಡಿದ್ದಾರೆ.ಹಿಂದೆ 15 ಲಕ್ಷ ರೂ.ಗಳಲ್ಲಿ ಒಂದು ಕಿ.ಮೀ ರಸ್ತೆ ಮಾಡುತ್ತಿದ್ದರೆ ಈಗ ಒಂದು ಕೋಟಿ ರೂ.ಗೆ ಕಿ.ಮೀ ರಸ್ತೆಗೆ ವೆಚ್ಚ ಆಗುತ್ತಿದೆ.ನಾವು ರಾಜಕೀಯ ಭಾಷಣ ಮಾಡುವವರನ್ನು ನಂಬುತ್ತೇವೆ.ನಾವು ಅಭಿವೃದ್ಧಿ ಮಾಡಿದ್ದೇವೆ.ಅವಕಾಶ ಸಿಕ್ಕಾಗ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತಂದಿದ್ದೇವೆ ಎಂದರು.
ನಮ್ಮ ಅಭಿವೃದ್ಧಿ ಕೆಲಸಗಳಿಗೆ ಪ್ರಚಾರ ಕೊಡುವಂತಹದ್ದಲ್ಲ.ಪ್ರಚಾರ ಮಾಡುವುದೇನಿದೆ.ಜನರು ಕೊಟ್ಟ ದುಡ್ಡನ್ನು ಜನರ ಅಭಿವೃದ್ದಿಗೆ ಬಳಸುತ್ತಿದ್ದೇವೆ ಎಂದರು.
ಪಿಡಬ್ಲೂö್ಯಡಿ ಎಇಇ ಅಯ್ಯಪ್ಪಗೌಡ ರೆಡ್ಡಿ ಮಾತನಾಡಿ, ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿ 500 ಮೀ ರಸ್ತೆಯನ್ನು 6.83 ಕೋಟಿ ರೂ.ವೆಚ್ಚದಲ್ಲಿ ಚತುಷ್ಪಥ ರಸ್ತೆಯನ್ನಾಗಿ ನಿರ್ಮಿಸಲಾಗುತ್ತಿದ್ದು ಅಕ್ಕಪಕ್ಕದಲ್ಲಿ ಚರಂಡಿ,ಮಧ್ಯೆದಲ್ಲಿ ಡಿವೈಡರ್,ಬೀದಿ ದೀಪ ಅಳವಡಿಸಲಾಗುತ್ತದೆ ಎಂದರು. ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಕೆಪಿಸಿಸಿ ಸದಸ್ಯ ರಮೇಶ ಓಸ್ವಾಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಉದ್ಯಮಿ ಎ.ಗಣೇಶ ನಾರಾಯಣಸ್ವಾಮಿ, ಸತೀಶ ಓಸ್ವಾಲ್, ಸ್ಥಾಯಿ ಸಮಿತಿ ಅಧ್ಯಕ್ಷ ಯಲ್ಲಪ್ಪ ನಾಯ್ಕಮಕ್ಕಳ,ಪ್ರಥಮ ದರ್ಜೆ ಗುತ್ತಿಗೆದಾರ ಕೆ.ಎಸ್.ಪಾಟೀಲ,ವಾಸುದೇವ ಶಾಸ್ತಿçÃ,ಪ್ರಭುರಾಜ ಕಲ್ಬುರ್ಗಿ, ಕಾಮರಾಜ ಬಿರಾದಾರ,ಶರಣು ಸಜ್ಜನ, ಸಂಗನಗೌಡ ಬಿರಾದಾರ, ಸುರೇಶಗೌಡ ಪಾಟೀಲ ಇಂಗಳಗೇರಿ,ಪುರಸಭೆ ಸದಸ್ಯರು,ನಾಮನಿರ್ದೇಶಿತ ಸದಸ್ಯರು,ಕಾಂಗ್ರೆಸ್ ಮುಖಂಡರು ಇದ್ದರು.
80 ಮರಗಳ ತೆರವು :
ಈ ರಸ್ತೆ ಅಭಿವೃದ್ಧಿಗಾಗಿ ಆಲಮಟ್ಟಿ ರಸ್ತೆಯಲ್ಲಿ ಬೆಳೆದು ನಿಂತಿರುವ ಸುಮಾರು 30-40 ವರ್ಷದಷ್ಟು ಹಳೆಯದಾಗಿರುವ ಬೇವಿನ ಮರಗಳನ್ನು ತೆರವುಗೊಳಿಸಲಾಗುವುದು ಎಂದು ಪಿಡಬ್ಲೂö್ಯಡಿ ಎಇಇ ಮಾಹಿತಿ ನೀಡಿದರು.ಅಂದಾಜು 80 ಮರಗಳನ್ನು ರಸ್ತೆಯ ಅಭಿವೃದ್ಧಿಗಾಗಿ ತೆರವು ಮಾಡಲಾಗುತ್ತದೆ ಎಂದಾಗ ಶಾಸಕರು ಮಧ್ಯಪ್ರವೇಶಿಸಿ ಈಗಿರುವ ಮರಗಳಿಗಿಂತ ಒಳ್ಳೆಯ ಗಿಡಗಳನ್ನು ನೆಡುವ ಕಾರ್ಯ ಮಾಡಬೇಕು ಎಂದು ಸೂಚಿಸಿದರು.







