E-Shrama Card: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ BPL ಪಡಿತರ ಚೀಟಿ ಪಡೆಯಲು ಜನರು ಪರದಾಡುತ್ತಿದ್ದಾರೆ. ಈಗ ಸರ್ಕಾರ ಒಂದು ಆದೇಶ ಹೊರಡಿಸಿದ್ದು, E-Shrama Card ಇದ್ದವರಿಗೆ ಆದ್ಯತೆ ನೀಡಿ BPL Ration Card ನೀಡಲು ಮುಂದಾಗಿದೆ.
ನೀವು ಈಗ BPL Ration Card ಪಡೆಯಲು E-Shrama Card ಮಾಡಿಸುವುದು ಅನಿವಾರ್ಯವಾಗಿದೆ.
ಇ-ಶ್ರಮ ಕಾರ್ಡ್ ನ ಪ್ರಯೋಜನ ಏನು?
- ಅಪಘಾತದಿಂದ ಮರಣ ಹೊಂದಿದಲ್ಲಿ ಅಥವಾ ಶಾಶ್ವತ ದುರ್ಬಲತೆ ಹೊಂದಿದಲ್ಲಿ 2 ಲಕ್ಷ ರೂಪಾಯಿ ಹಾಗೂ ಭಾಗಶಃ ಅಂಗವೈಕಲ್ಯಕ್ಕೆ 1 ಲಕ್ಷ ರೂಪಾಯಿ ಪರಿಹಾರ ಸಿಗಲಿದೆ
- ರಾಷ್ಟ್ರೀಯ ವಿಪತ್ತು ಅಥವಾ ಕೋವಿಡ್- 19ರ ಸಾಂಕ್ರಾಮಿಕ ಪಿಡುಗಿನಂತಹ ಪರಿಸ್ಥಿತಿಯಲ್ಲಿ, ಅರ್ಹ ಕಾರ್ಮಿಕರಿಗೆ ನೆರವು ದೊರೆಯುತ್ತದೆ
- ಇನ್ನಿತರ ಸರ್ಕಾರಿ ಸೌಲಭ್ಯ ಹಾಗೂ ಮೆಡಿಕಲ್ ಎಮರ್ಜೆನ್ಸಿ ಸಂದರ್ಭಗಳಲ್ಲಿ ಉಪಯೋಗ,
ಸೂಚನೆ: ಸದ್ಯಕ್ಕೆ ಇ-ಶ್ರಮ್ ಕಾರ್ಡ್ ಹೊಂದಿರುವ ಕಾರ್ಮಿಕರಿಗೆ ಹೊಸ ರೇಷನ್ ಕಾರ್ಡ ಅರ್ಜಿ ಸಲ್ಲಿಸಲು ನರೆವು ಒದಗಿಸಲಾಗಿದೆ.
ಯಾರೆಲ್ಲ ಅರ್ಜಿ ಸಲ್ಲಿಸಲು ಅರ್ಹರು?
- ಸಣ್ಣ ರೈತರು, ಕೂಲಿ ಕಾರ್ಮಿಕರು
- ಕೃಷಿ ಕಾರ್ಮಿಕರು, ಮೀನುಗಾರರು, ಬೀಡಿ ಕಟ್ಟುವವರು, ಕಟ್ಟಡ ಕಾರ್ಮಿಕರು,
- ಕಲ್ಲಿನ ಕೆಲಸಗಾರರು ಕ್ವಾರಿಗಳು, ಸಾಮಿಲ್, ಕೆಲಸಗಾರರು, ನೇಕಾರರು, ಕಾಪೆರ್ಂಟರ್ಸ್
- ಶುಶೂಷಕಿಯರು, ಗೃಹ ಕಾರ್ಮಿಕರು, ತರಕಾರಿ ಮತ್ತು ಹಣ್ಣು ಮಾರಾಟಗಾರರು, ಪತ್ರಿಕೆ ಮಾರಾಟಗಾರರು ರಿಕ್ಷಾ ಎಳೆಯುವವರು
- ಆಟೋ ಚಾಲಕರು, ಕ್ಷೌರಿಕರು,ಗೃಹ ಸೇವಕರು, ಬೀದಿ ಬದಿ ವ್ಯಾಪಾರಿಗಳು, ನರೇಗಾ, ಆಶಾ ಕಾರ್ಯಕರ್ತರು
ಅರ್ಜಿ ಸಲ್ಲಿಸಲು ದಾಖಲಾತಿಗಳು
- ಆಧಾರ ಕಾರ್ಡ್
- ಬ್ಯಾಂಕ್ ಅಕೌಂಟ್
3.ಆಧಾರ್ ಲಿಂಕ್ ಇರುವ ಮೊಬೈಲ್ ಸಂಖ್ಯೆ