ಬಾಲಾಜಿ ಸಕ್ಕರೆ ಕಾರ್ಖಾನೆಗೆ ಡಿಸಿ ಭೇಟಿ: ಕಬ್ಬಿನ ತೂಕದಲ್ಲಿ ಪಾರದರ್ಶಕತೆ, ಕಾಲಮಿತಿಯಲ್ಲಿ ಬಿಲ್ ಪಾವತಿ

ಬಾಲಾಜಿ ಸಕ್ಕರೆ ಕಾರ್ಖಾನೆಗೆ ಡಿಸಿ ಭೇಟಿ: ಕಬ್ಬಿನ ತೂಕದಲ್ಲಿ ಪಾರದರ್ಶಕತೆ, ಕಾಲಮಿತಿಯಲ್ಲಿ ಬಿಲ್ ಪಾವತಿ

ಮುದ್ದೇಬಿಹಾಳ : ತಾಲ್ಲೂಕಿನ ಯರಗಲ್ ಮದರಿ ಬಾಲಾಜಿ ಸಕ್ಕರೆ ಕಾರ್ಖಾನೆಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಬುಧವಾರ ಜಿಲ್ಲಾ ಮಟ್ಟದ ಸಕ್ಕರೆ ಇಳುವರಿ ಹಾಗೂ ತೂಕದ ಯಂತ್ರಗಳ ಪರಿಶೀಲನಾ ತಂಡ ಬುಧವಾರ ಭೇಟಿ ನೀಡಿ ಕಾರ್ಖಾನೆಯ ಕಾರ್ಯಾಚರಣೆಯನ್ನು ವೀಕ್ಷಿಸಿದರು.

ಪತ್ರಿಕೆಯೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಆನಂದ ಕೆ., ರಾಜ್ಯ ಸರ್ಕಾರ ಆದೇಶಿಸಿತ ಹೆಚ್ಚುವರಿ ಪರಿಹಾರವನ್ನು ಕಾರ್ಖಾನೆಯಿಂದ ರೈತರಿಗೆ ಪಾವತಿಸಲಾಗುತ್ತಿದೆ.ಕಾರ್ಖಾನೆಯ ತೂಕದ ಯಂತ್ರದ ಕುರಿತು ಈಚೇಗೆ ರೈತರು ಆಕ್ಷೇಪಿಸಿದ್ದಕ್ಕೆ ಕಬ್ಬು ಪರೈಸುವ ರೈತರು, ರೈತಪರ ಸಂಘಟನೆ ಮುಖಂಡರು,ಅಧಿಕಾರಿಗಳನ್ನು ಕರೆದುಕೊಂಡು ಖುದ್ದಾಗಿ ಪರಿಶೀಲನೆ ನಡೆಸಿದ್ದೇನೆ.ತೂಕ ಅಳತೆ ಮಾಪನ ಅಧಿಕಾರಿಗಳು ತೂಕದ ಯಂತ್ರವನ್ನು ಪರಿಶೀಲನೆ ನಡೆಸಿದ್ದು ಕಾರ್ಖಾನೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯ ಎಲ್ಲ ಕಾರ್ಖಾನೆಗಳಲ್ಲೂ ರೈತರನ್ನೊಳಗೊಂಡ ಪರಿಶೀಲನಾ ಸಮೀತಿ ರಚಿಸಲಾಗಿದ್ದು ಕಾಲಕಾಲಕ್ಕೆ ಕಾರ್ಖಾನೆಗೆ ಭೇಟಿ ನೀಡಿ ಅಲ್ಲಿನ ಚಟುವಟಿಕೆಗಳ ಮಾಹಿತಿ ಪಡೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಆಹಾರ ಪೂರೈಕೆ ಇಲಾಖೆ ಉಪ ನಿರ್ದೇಶಕ ವಿನಯಕುಮಾರ ಪಾಟೀಲ ಮಾತನಾಡಿ, ಬಾಲಾಜಿ ಸಕ್ಕರೆ ಕಾರ್ಖಾನೆಗೆ ರೈತರೊಂದಿಗೆ ಭೇಟಿ ನೀಡಿದ್ದೇವೆ.ಪ್ರಯೋಗಾಲಯಕ್ಕೆ ಭೇಟಿ ನೀಡಿ ಸಕ್ಕರೆ ಅಂಶವನ್ನು ಹೇಗೆ ನಿರ್ಧರಿಸಲಾಗುತ್ತದೆ ಎಂಬುದನ್ನು ರೈತರಿಗೆ ಖುದ್ದಾಗಿ ಮನವರಿಕೆ ಮಾಡಿಕೊಡಲಾಗಿದೆ.ಸರ್ಕಾರ ಸೂಚಿಸಿದ ದರವನ್ನು ಕಾರ್ಖಾನೆಯವರು ನೀಡುತ್ತಿದ್ದು ಈಗಾಗಲೇ ನ.30ರವರೆಗಿನ ಕಬ್ಬು ಪೂರೈಸಿದ ರೈತರಿಗೆ ಬಿಲ್ ಪಾವತಿಸಲಾಗಿದೆ.132 ಕೋಟಿ ರೂ.ಗಳಲ್ಲಿ 84 ಕೋಟಿ ರೂ.ಬಿಲ್ ಪಾವತಿಸಲಾಗಿದ್ದು ಡಿ.10ರವರೆಗೆ ಕಬ್ಬು ಪೂರೈಸಿದ ರೈತರಿಗೆ ಬಿಲ್ ಪಾವತಿಸುವ ಕಾರ್ಯ ಮಾಡುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.

ಕಾರ್ಖಾನೆ ಅಧ್ಯಕ್ಷ ಹಣಮಂತಗೌಡ ಪಾಟೀಲ, ನಿರ್ದೇಶಕರಾದ ರಾಹುಲ್‌ಗೌಡ ಪಾಟೀಲ,ಅಧಿಕ ಪಾಟೀಲ,ಶ್ರೀನಿವಾಸ ಅರಕೇರಿ,ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ವಿವೇಕ,ಉಪ ವಿಭಾಗಾಧಿಕಾರಿ ಗುರುನಾಥ ದಡ್ಡಿ,ಕೃಷಿ ಇಲಾಖೆ ಅಧಿಕಾರಿ ಎಸ್.ಡಿ.ಭಾವಿಕಟ್ಟಿ, ನಿಡಗುಂದಿ ತಹಶೀಲ್ದಾರ್ ಎ.ಡಿ.ಅಮರವಾಡಗಿ, , ಆಹಾರ ಶಿರಸ್ತೇದಾರ ಶಶಿಧರ ಕುಮಚಗಿ, ಆಹಾರ ಇಲಾಖೆ ನಿರೀಕ್ಷಕ ಎಸ್.ಎ.ಗುಮತಿಮಠ ,ಕಂದಾಯ ನಿರೀಕ್ಷಕ ಪವನ ತಳವಾರ,ರೈತ ಸಂಘಟನೆಯ ಮುಖಂಡರಾದ ಸೋಮನಗೌಡ ಪಾಟೀಲ, ಬಾಲಪ್ಪಗೌಡ ಲಿಂಗದಳ್ಳಿ, ಅರವಿಂದ ಕುಲಕರ್ಣಿ,ಶಿವನಗೌಡ ಜಲಪೂರ ಸೇರಿದಂತೆ ಕಂದಾಯ,ಆಹಾರ ಇಲಾಖೆ ಅಧಿಕಾರಿಗಳು ಇದ್ದರು.

Latest News

ನನ್ನ ಹಕ್ಕುಬಿಟ್ಟುಕೊಡಲು ಸಿದ್ದನಿದ್ದೇನೆ, ಆರೋಪದ ಚರ್ಚೆಗೆ ಸಿದ್ಧ: ಕೃಷ್ಣ ಬೈರೇಗೌಡರ ಸವಾಲ್..!

ಬೆಳಗಾವಿ ಡಿಸೆಂಬರ್ 18: ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ

ಬಾಲಾಜಿ ಸಕ್ಕರೆ ಕಾರ್ಖಾನೆಗೆ ಡಿಸಿ ಭೇಟಿ:                           ಕಬ್ಬಿನ ತೂಕದಲ್ಲಿ ಪಾರದರ್ಶಕತೆ, ಕಾಲಮಿತಿಯಲ್ಲಿ ಬಿಲ್ ಪಾವತಿ

ಬಾಲಾಜಿ ಸಕ್ಕರೆ ಕಾರ್ಖಾನೆಗೆ ಡಿಸಿ ಭೇಟಿ: ಕಬ್ಬಿನ ತೂಕದಲ್ಲಿ ಪಾರದರ್ಶಕತೆ, ಕಾಲಮಿತಿಯಲ್ಲಿ ಬಿಲ್ ಪಾವತಿ

ಮುದ್ದೇಬಿಹಾಳ : ತಾಲ್ಲೂಕಿನ ಯರಗಲ್ ಮದರಿ ಬಾಲಾಜಿ ಸಕ್ಕರೆ ಕಾರ್ಖಾನೆಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಬುಧವಾರ

ಪತ್ರಕರ್ತರ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಬದ್ಧ-ಸಚಿವ ಮುನಿಯಪ್ಪ ಭರವಸೆ

ಪತ್ರಕರ್ತರ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಬದ್ಧ-ಸಚಿವ ಮುನಿಯಪ್ಪ ಭರವಸೆ

ಬೆಳಗಾವಿ(ಸುವರ್ಣ ವಿಧಾನಸೌಧ ): ಕಾರ್ಯನಿರತ ಪತ್ರಕರ್ತರ ಸಂಘಟನೆಯವರು ಮುಂದಿರಿಸಿರುವ ಬೇಡಿಕೆಗಳನ್ನು ಸಿಎಂ ಗಮನಕ್ಕೆ ತಂದು

TP, ZP Election: ತಾಪಂ, ಜಿಪಂ ಚುನಾವಣೆಗೆ ಮೂಹುರ್ತ ನಿಗದಿ

TP, ZP Election: ತಾಪಂ, ಜಿಪಂ ಚುನಾವಣೆಗೆ ಮೂಹುರ್ತ ನಿಗದಿ

ಬೆಂಗಳೂರು: ​ಕರ್ನಾಟಕದಲ್ಲಿ ಹಲವು ವರ್ಷಗಳಿಂದ ಬಾಕಿ ಉಳಿದಿರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳನ್ನು

ಕಾರ್ಮಿಕ ಇಲಾಖೆಯಿಂದಲೂ ವಸತಿ ಶಾಲೆಗೆ ಪ್ರಸ್ತಾವನೆ-ಶಾಸಕ ನಾಡಗೌಡ

ಕಾರ್ಮಿಕ ಇಲಾಖೆಯಿಂದಲೂ ವಸತಿ ಶಾಲೆಗೆ ಪ್ರಸ್ತಾವನೆ-ಶಾಸಕ ನಾಡಗೌಡ

ಮುದ್ದೇಬಿಹಾಳ : ಪಟ್ಟಣದ ವ್ಯಾಪ್ತಿಯಲ್ಲಿ ಕಾರ್ಮಿಕ ಇಲಾಖೆಯಿಂದಲೂ ವಸತಿ ಶಾಲೆ ಆರಂಭಿಸಲು ಪ್ರಸ್ತಾವನೆ ಕಳಿಸಲಾಗಿದೆ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು. ತಾಲ್ಲೂಕಿನ ಬಿದರಕುಂದಿ ಗ್ರಾಮದ ಆರ್.ಎಂ.ಎಸ್.ಎ ಶಾಲೆಯ ಹತ್ತಿರ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ನಂ-೨ ನೂತನ ಕಟ್ಟಡವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು. ಈ ಕ್ಷೇತ್ರದಲ್ಲಿ ಆರ್.ಎಂ.ಎಸ್.ಎ ಶಾಲೆ, ಮಹಿಳಾ ಹಾಸ್ಟೆಲ್,ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆಗಳು ನಿರ್ಮಾಣವಾಗಿದ್ದು ಇದೊಂದು ವಿದ್ಯಾಗಿರಿ ಎಂದು ನಾಮಕರಣ ಮಾಡುವಂತೆ ಗ್ರಾಪಂ ಅಧ್ಯಕ್ಷರಿಗೆ

ಪ್ರಸ್ತುತ ಕರ್ನಾಟಕ ರಾಜಕೀಯ ಚಿತ್ರಣ: ಸವಾಲು ಮತ್ತು ಗ್ಯಾರಂಟಿಗಳು

ಪ್ರಸ್ತುತ ಕರ್ನಾಟಕ ರಾಜಕೀಯ ಚಿತ್ರಣ: ಸವಾಲು ಮತ್ತು ಗ್ಯಾರಂಟಿಗಳು

ಬೆಂಗಳೂರು: 2023ರ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಪ್ರಸ್ತುತ ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಸರ್ಕಾರವು ಕಾರ್ಯನಿರ್ವಹಿಸುತ್ತಿದ್ದು, ಅದರ ಚುನಾವಣಾ ಭರವಸೆಯಾದ 'ಐದು ಗ್ಯಾರಂಟಿ' ಯೋಜನೆಗಳ ಅನುಷ್ಠಾನವು ರಾಜಕೀಯ ಚಟುವಟಿಕೆಗಳ ಕೇಂದ್ರಬಿಂದುವಾಗಿದೆ. ​ಆಡಳಿತದ ಪ್ರಮುಖ ಕೇಂದ್ರ: ಐದು ಗ್ಯಾರಂಟಿಗಳು ​'ಶಕ್ತಿ' (ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ), 'ಗೃಹ ಲಕ್ಷ್ಮಿ' (ಮಹಿಳಾ ಮುಖ್ಯಸ್ಥರಿಗೆ ಮಾಸಿಕ