ಮುದ್ದೇಬಿಹಾಳ : ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲ್ಲೂಕಾ ಪತ್ರಕರ್ತರ ಸಂಘದಿAದ ಶುಕ್ರವಾರ ರಾಘವೇಂದ್ರ ಮಠದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ, ಪತ್ರಕರ್ತರ ಸನ್ಮಾನ ಕಾರ್ಯಕ್ರಮದಲ್ಲಿ ಢವಳಗಿಯ ಹನಮಂತ ಬೀರಗೊಂಡ, ಬಂದೇನವಾಜ ಕುಮಸಿ, ಹಣಮಂತ ನಲವಡೆ ಅವರನ್ನು ಸನ್ಮಾನಿಸಲಾಯಿತು. ಶಾಸಕ ಸಿ.ಎಸ್.ನಾಡಗೌಡ, ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ,ಅಸ್ಕಿ ಫೌಂಡೇಶ ಅಧ್ಯಕ್ಷ ಸಿ.ಬಿ.ಅಸ್ಕಿ, ತಾಪಂ ಪ್ರಭಾರ ಇಒ ವೆಂಕಟೇಶ ವಂದಾಲ,ಹಿರಿಯ ಪತ್ರಕರ್ತ ಅನೀಲ ಹೊಸಮನಿ, ಜಿ.ಟಿ.ಘೋರ್ಪಡೆ,ಸತೀಶ ಓಸ್ವಾಲ,ಕಾಮರಾಜ ಬಿರಾದಾರ ,ಗಂಗಾಧರ ಜೂಲಗುಡ್ಡ,ಸಂಘದ ಅಧ್ಯಕ್ಷ ಎಚ್.ಬಿ.ಬೆಳಗಲ್ಲ ಮೊದಲಾದವರು ಇದ್ದರು.
