Accident news Accident board on road

ಕಬ್ಬು ತುಂಬಿದ್ದ ಟ್ರ್ಯಾಲಿ ಪಲ್ಟಿ: ಕಾರ್ಖಾನೆ ಕಾರ್ಮಿಕ ದುರ್ಮರಣ

ಕಬ್ಬು ತುಂಬಿದ್ದ ಟ್ರ್ಯಾಲಿ ಪಲ್ಟಿ: ಕಾರ್ಖಾನೆ ಕಾರ್ಮಿಕ ದುರ್ಮರಣ

ಮುದ್ದೇಬಿಹಾಳ : ಕಬ್ಬನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್-ಟ್ರ್ಯಾಲಿ ಕಬ್ಬಿನ ರಾಶಿ ಸಮೇತ ಮೇಲೆ ಬಿದ್ದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಗರಸಂಗಿ ಕ್ರಾಸ್ ಬಳಿ ನ.12ರ ಮಂಗಳವಾರ ಸಂಜೆ ಸುಮಾರು 7 ಗಂಟೆಗೆ ನಡೆದಿದೆ.

ತಾಲ್ಲೂಕಿನ ಹಿರೇಮುರಾಳ ಗ್ರಾಮದ ಸಂಗಮೇಶ ಚಲವಾದಿ (35) ಮೃತಪಟ್ಟ ವ್ಯಕ್ತಿ.ಸಂಗಮೇಶ, ಬಾಲಾಜಿ ಸಕ್ಕರೆ ಕಾರ್ಖಾನೆಯಲ್ಲಿ ಜೆಸಿಬಿ ಚಾಲಕನಾಗಿ ಕೆಲಸ ಮಾಡುತ್ತಿದ್ದು, ತನ್ನ ಕೆಲಸ ಮುಗಿದ ನಂತರ ಬೈಕ್ ನಲ್ಲಿ ತನ್ನೂರಿಗೆ ಹೊರಟಿದ್ದರು. ಎದುರಿಗೆ ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ವೇಗವಾಗಿ ಬರುತ್ತಿರುವುದನ್ನು ಕಂಡು ಬೈಕ್‌ ಅನ್ನು ಪಕ್ಕದಲ್ಲಿ ನಿಲ್ಲಿಸಿದ್ದ. ಆದರೆ ಆತನ ಹತ್ತಿರ ಬರುತ್ತಿದ್ದಂತೆ ಟ್ರ್ಯಾಕ್ಟರ್ ಎಂಜಿನ್ ಮುಂದಕ್ಕೆ ಚಲಿಸುವಾಗ ಹಿಂಭಾಗದ ಟ್ರ್ಯಾಲಿಗಳು ಕಬ್ಬು ಸಮೇತ ಆಯತಪ್ಪಿ ಆತನ ಮೇಲೆ ಬಿದ್ದಿವೆ.ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest News

Exploring the Lucky Spins on Chicken Road Slots

Introduction Chicken Road is a popular online casino slot developed by

Winners on the Long and Winding Chicken Road to Riches

Overview Chicken Road is a 5-reel, 3-row online casino slot developed

Chicken Road

Strada degli Uccelli doro: Scommesse di Casino sulla Strada dell'Aquila La

Chicken Road par InOut

L'Histoire de Chicken Road Par InOut En Faisant des Mises sur

ಶಿಕ್ಷಕ,ಶಿಕ್ಷಕಿಯರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ;                                                ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುವುದು ಬೇಡ-ನಾಗರಳ್ಳಿ

ಶಿಕ್ಷಕ,ಶಿಕ್ಷಕಿಯರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ; ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುವುದು ಬೇಡ-ನಾಗರಳ್ಳಿ

ಮುದ್ದೇಬಿಹಾಳ : ನಾವು ಶಿಕ್ಷಣ ಕೊಡುವ ನೆಪದಲ್ಲಿ ನಮ್ಮ ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುತ್ತಿದ್ದೇವೆ.ಅವರು ಆಟಗಳಲ್ಲಿ ಭಾಗಿಯಾಗುವ ಸಮಯವನ್ನು ಕಡಿಮೆಗೊಳಿಸಿದ್ದೇವೆ.ಶೇ.95 ಪಡೆದುಕೊಂಡರೂ ಮಗುವಿಗೆ ಪ್ರೋತ್ಸಾಹಿಸದೇ ಶೇ.98 ತಗೆದುಕೊಳ್ಳುವವರೆಗೂ ನಮಗಿಂದು ಸಮಾಧಾನ ಇರುವುದಿಲ್ಲ.ಅಂಕಗಳ ಬೆನ್ನು ಹತ್ತಿದ್ದೇವೆ ಎಂದು ಗದಗನ ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಎ.ಎನ್.ನಾಗರಳ್ಳಿ ಹೇಳಿದರು. ಪಟ್ಟಣದ ಶ್ರೀ ಕೃಷ್ಣ ಮಂಗಲಭವನದಲ್ಲಿ ಶನಿವಾರ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದಿoದ ಸಾವಿತ್ರಿಬಾಯಿ ಫುಲೆ ಜಯಂತಿ ಹಾಗೂ ಶೈಕ್ಷಣಿಕ

ವಿಜಯಪುರ ಡಿಡಿಪಿಐ ಕಚೇರಿ 14 ಸಿಬ್ಬಂದಿ ಎತ್ತಂಗಡಿ..!

ವಿಜಯಪುರ ಡಿಡಿಪಿಐ ಕಚೇರಿ 14 ಸಿಬ್ಬಂದಿ ಎತ್ತಂಗಡಿ..!

ವಿಜಯಪುರ : ಧಾರವಾಡದ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯಿಂದ ಅ.3 , 2025 ರಿಂದ ಅ.6,2025ರವರೆಗೆ ವಿಜಯಪುರ ಶಾಲಾ ಶಿಕ್ಷಣ ಇಲಾಖೆಯ ಕಚೇರಿ ತಪಾಸಣೆ ನಡೆಸಿದಾಗ ಸಾರ್ವಜನಿಕರ ಕೆಲಸಗಳನ್ನು ವಿಳಂಬವಾಗಿ ಮಾಡುತ್ತಿದ್ದ 14 ಜನ ಸಿಬ್ಬಂದಿಯನ್ನು ಬೇರೆಡೆ ಎತ್ತಂಗಡಿ ಮಾಡಿ ಧಾರವಾಡದ ಅಪರ ಆಯುಕ್ತರು ಆದೇಶಿಸಿರುವ ಸಂಗತಿ ಬೆಳಕಿಗೆ ಬಂದಿದೆ. ಯಾಕೆ ಎತ್ತಂಗಡಿ : ವಿಜಯಪುರ ಡಿಡಿಪಿಐ ಕಚೇರಿಗೆ ಧಾರವಾಡದ ಆಯುಕ್ತರು ಭೇಟಿ ನೀಡಿದ್ದ ವೇಳೆ ಪತ್ರಾಂಕಿತ