ಮುದ್ದೇಬಿಹಾಳ : ಬೆಳೆದ ಬೆಳೆ ಸರಿಯಾಗಿ ಕೈಗೆ ಬಾರದ್ದನ್ನೇ ಮನಸಿಗೆ ಹಚ್ಚಿಕೊಂಡ ರೈತರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಗಂಗೂರ ಗ್ರಾಮದಲ್ಲಿ ಬುಧವಾರ ನಡೆದಿದೆ.
ಆತ್ಮಹತ್ಯೆಗೆ ಶರಣಾದ ರೈತನನ್ನು ಗಂಗೂರ ಗ್ರಾಮದ ರಾಮಣ್ಣ ಮಲ್ಲಪ್ಪ ಓಲೇಕಾರ (65) ಎಂದು ಗುರುತಿಸಲಾಗಿದೆ.ಇವರಿಗೆ 3.10 ಎಕರೆ ಜಮೀನು ಗಂಗೂರದಲ್ಲಿದ್ದು ತೊಗರಿ ಬೆಳೆ ಬಿತ್ತನೆ ಮಾಡಿದ್ದರು.ಅತಿವೃಷ್ಟಿಯಿಂದ ಬೆಳೆ ಸರಿಯಾಗಿ ಬಂದಿರಲಿಲ್ಲ.ಬೆಳೆಗಾಗಿ ತಂಗಡಗಿ ಪಿಕೆಪಿಎಸ್‌ನಲ್ಲಿ 65 ಸಾವಿರ ರೂ.ಸಾಲ ಹಾಗೂ ಅವರಿವರ ಬಳಿ 15 ಲಕ್ಷ ಕೈಸಾಲ ಮಾಡಿಕೊಂಡಿದ್ದರು.ಬೆಳೆ ಕೈಗೆ ಬಾರದ್ದರಿಂದ ಮಾಡಿದ ಸಾಲ ಹೇಗೆ ತೀರಿಸುವುದು ಎಂದು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸ್ಥಳಕ್ಕೆ ಪಿಎಸ್‌ಐ ಸಂಜಯ ತಿಪರೆಡ್ಡಿ ಭೇಟಿ ನೀಡಿದ್ದಾರೆ.







