Unorganized sector workers are the biggest asset of this state: Minister Lad

ಅಸಂಘಟಿತ ವಲಯದ ಕಾರ್ಮಿಕರು ಈ ರಾಜ್ಯದ ಬಹು ದೊಡ್ಡ ಆಸ್ತಿ: ಸಚಿವ ಲಾಡ್

ಅಸಂಘಟಿತ ವಲಯದ ಕಾರ್ಮಿಕರು ಈ ರಾಜ್ಯದ ಬಹು ದೊಡ್ಡ ಆಸ್ತಿ: ಸಚಿವ ಲಾಡ್

ಬೀದರ್‌, ಅಕ್ಟೋಬರ್ 14, ಅಸಂಘಟಿತ ವಲಯದ ಕಾರ್ಮಿಕರು ಈ ರಾಜ್ಯದ ಬಹು ದೊಡ್ಡ ಆಸ್ತಿ ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್‌ ಲಾಡ್‌ ಅವರು ತಿಳಿಸಿದರು.

ನಗರದ ಘಾಳೆ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಹಾಗೂ ಸಾರಿಗೆ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಬೀದರ ಜಿಲ್ಲೆಯ ವಿವಿಧ ವರ್ಗದ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ವಿವಿಧ ಯೋಜನೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದ ದುಡಿಯುವ ಜನರಲ್ಲಿ 85% ಅಸಂಘಟಿತ ವಲಯದ ಕಾರ್ಮಿಕರಾಗಿದ್ದಾರೆ. ವಿವಿಧ ವಲಯದಲ್ಲಿ ಕಾರ್ಯ ನಿರ್ವಹಿಸುವುದರ ಮೂಲಕ ರಾಜ್ಯಕ್ಕೆ ದೊಡ್ಡ ಶಕ್ತಿಯಾಗಿದ್ದಾರೆ. ರಾಜ್ಯದಲ್ಲಿ ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಮೂಲಕ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆʼ ಅನುಷ್ಠಾನಗೊಳಿಸಲಾಗಿದೆ. ಈ ಯೋಜನೆಯಡಿ 101 ಅಸಂಘಟಿತ ವರ್ಗಗಳ ಕಾರ್ಮಿಕರನ್ನು ಗುರುತಿಸಲಾಗಿದ್ದು, ಸುಮಾರು 35 ಲಕ್ಷ ಕಾರ್ಮಿಕರು ಒಳಗೊಂಡಿದ್ದಾರೆ. ಅವರಿಗೆ ಉಚಿತವಾಗಿ ನೊಂದಾಯಿಸಿ ಸ್ಮಾರ್ಟ್ ಕಾರ್ಡ್ ನೀಡಲಾಗಿದೆ ಎಂದರು.

ಬೀದರ್‌ ಜಿಲ್ಲೆಯಲ್ಲಿ 59,493 ಕಾರ್ಮಿಕರು ನೋಂದಾಯಿಸಿಕೊಂಡಿದ್ದು ಅವರಿಗೆ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತಿದೆ. ಅಪಘಾತ ಸಂಭವಿಸಿದಲ್ಲಿ ರೂ.1 ಲಕ್ಷ ಪರಿಹಾರ ನೀಡಲಾಗುವುದು ಎಂದರು. ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆಯಡಿ 4 ಲಕ್ಷದವರೆಗೆ ವಿಮಾ ಸೌಲಭ್ಯ ನೀಡಲಾಗುವುದು. ಆಶಾದೀಪ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಜನರಿಗೆ ಉದ್ಯೋಗ ನೀಡಿದಲ್ಲಿ 50% ವೇತನ ಕಾರ್ಮಿಕ ಇಲಾಖೆ ಕಡೆಯಿಂದ ನೀಡಲಾಗುವುದು ಎಂದರು. ಮೋಟಾರು ಸಾರಿಗೆ ಹಾಗೂ ಸಂಬಂಧಿತ ಕಾರ್ಮಿಕರಿಗೆ ಮತ್ತು ಸಿನಿ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಸೌಲಭ್ಯಗಳನ್ನು ಒದಗಿಸಲಾಗಿದ ಎಂದರು.

ಬೀದರ ಜಿಲ್ಲೆಯಲ್ಲಿ ಯಾವ ರೀತಿ ಸಂಸ್ಥೆ ಮೂಲಕ ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಮಿಕರನ್ನು ನೇಮಿಸಲಾಗುತ್ತದೆಯೋ ಅದೇ ರೀತಿಯಲ್ಲಿ ಇಡೀ ಕರ್ನಾಟಕದಲ್ಲಿ ಆಗುವ ಹಾಗೆ ಮಾಡುವುದಾಗಿ ಹಾಗೂ ಕರ್ನಾಟಕ ಗೃಹ ಕಾರ್ಮಿಕರ (ಸಾಮಾಜಿಕ ಭದ್ರತಾ ಮತ್ತು ಕಲ್ಯಾಣ) ಅಧಿನಿಯಮ ರೂಪಿಸುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ತಿಳಿಸಿದರು.

ಅರಣ್ಯ , ಪರಿಸರ ಮತ್ತು ಜೀವಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಸಂತೋಷ್‌ ಲಾಡ್‌ ಅವರು ಕಾರ್ಮಿಕ ಸಚಿವರಾದ ಮೇಲೆ ಶ್ರಮೀಕರಿಗಾಗಿ ಅನೇಕ ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೆ ತಂದು ಕಾರ್ಮಿಕರ ಬಾಳಿಗೆ ಬೆಳಕಾಗಿದ್ದಾರೆ. ದೇಶದಲ್ಲೇ ಮೊದಲ ಬಾರಿಗೆ ಕಾರ್ಮಿಕರ ಮಕ್ಕಳಿಗಾಗಿ ವಸತಿ ಶಾಲೆ ನಿರ್ಮಾಣ ಮಾಡುವ ಕಾರ್ಯ ಮಾಡುತ್ತಿದ್ದಾರೆ. ಈಗಾಗಲೇ ವಸತಿ ಶಾಲೆಗೆ ಖಾನಾಪೂರದಲ್ಲಿ ಸ್ಥಳ ಸೂಚಿಸಲಾಗಿದೆ ಎಂದರು.

ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಮಾತನಾಡಿ, ಸಂತೋಷ ಲಾಡ್ ಅವರು ಬಡವರ, ದಲಿತರ, ಕಾರ್ಮಿಕರ ಬಗ್ಗೆ ಅಪಾರವಾದ ಪ್ರೀತಿ ಉಳ್ಳವರು. ಸಾಮಾಜಿಕ ನ್ಯಾಯ, ಸಮ ಸಮಾಜದ ನಿರ್ಮಾಣ ಮಾಡಲು ಹಾಗೂ ಕಾರ್ಮಿಕರ ಕಲ್ಯಾಣಕ್ಕಾಗಿ ಸದಾ ಶ್ರಮಿಸುವರು ಎಂದರು. ಈ ಸಂದರ್ಭದಲ್ಲಿ ಆಶಾದೀಪ ಯೋಜನೆಯಡಿ ವೇತನ ಮರುಪಾವತಿ ಚೆಕ್ ವಿತರಣೆ, ಖಾಸಗಿ ವಾಹನ ಚಾಲಕರ ಅಪಘಾತ ಮರಣ ಪರಿಹಾರ ಧನ ಸಹಾಯ ಹಾಗೂ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಹಾಗೂ ಕೃಷ್ಣ ಮೇಲ್ದಂಡೆ ಯೋಜನೆ ಅಧ್ಯಕ್ಷರಾದ ಬಾಬು ಹೊನ್ನನಾಯ್ಕ, ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ ಚಿಮಕೋಡೆ, ಬಾಬು ಜಗಜೀವನರಾಂ ನಿಗಮದ ಅಧ್ಯಕ್ಷ ನಾಗರಾಜ ಮುಂಡರಗಿ, ಕಾರ್ಮಿಕ ಇಲಾಖೆಯ ಕಾರ್ಯದರ್ಶಿಗಳಾದ ಮೊಹಮದ್ ಮೋಸಿನ್, ಕಾರ್ಮಿಕ ಆಯುಕ್ತ ಹಾಗೂ ರಾಜ್ಯ ವಿಮಾ ಯೋಜನಾ ವೈದ್ಯಕೀಯ ಆಯುಕ್ತರಾದ ಡಾ. ಎಚ್.ಎನ್. ಗೋಪಾಲಕೃಷ್ಣ, ಸಾರಿಗೆ ಇಲಾಖೆಯ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಯೋಗೇಶ್ ಎಂ.ಎಂ, ಜಂಟಿ ಕಾರ್ಮಿಕ ಆಯುಕ್ತ ಹಾಗೂ ಜಂಟಿ ಕಾರ್ಯದರ್ಶಿ ಎಸ್.ಬಿ. ರವಿಕುಮಾರ, ಕಲಬುರಗಿ ಪ್ರಾದೇಶಿಕ ಸಹಾಯಕ ಆಯುಕ್ತ ಮಹಮ್ಮದ ಬಶೀರ ಅನ್ಸಾರಿ ಸೇರಿದಂತೆ ಇತರೆ ಕಾರ್ಮಿಕ ಅಧಿಕಾರಿಗಳು, ಕಾರ್ಮಿಕರು ಉಪಸ್ಥಿತರಿದ್ದರು.

Latest News

JavaScript isn’t montys millions slot free spins readily available

ArticlesTotally free Revolves | montys millions slot free spinsTrendy Fruits Slot

ಕೆಲವು ಸ್ವಾಮೀಜಿಗಳು ಮಾತನಾಡಿದಂತೆ ನಡೆದುಕೊಳ್ಳುವುದಿಲ್ಲ-ಮಹಾಂತೇಶ ಬಿರಾದಾರ

ಕೆಲವು ಸ್ವಾಮೀಜಿಗಳು ಮಾತನಾಡಿದಂತೆ ನಡೆದುಕೊಳ್ಳುವುದಿಲ್ಲ-ಮಹಾಂತೇಶ ಬಿರಾದಾರ

ಮುದ್ದೇಬಿಹಾಳ : ಕೆಲವು ಸ್ವಾಮೀಜಿಗಳಿರುತ್ತಾರೆ.ಜನರಿಗೆ ತಾವು ಯೂಟ್ಯೂಬ್ , ಸೋಷಿಯಲ್ ಮೀಡಿಯಾದಲ್ಲಿ ಪುಕ್ಕಟೆ ಉಪದೇಶ

ರಸ್ತೆಯ ನಿಯಮಗಳನ್ನು ಪಾಲಿಸಿ-ಪಿಎಸ್‌ಐ ತಿಪರೆಡ್ಡಿ

ರಸ್ತೆಯ ನಿಯಮಗಳನ್ನು ಪಾಲಿಸಿ-ಪಿಎಸ್‌ಐ ತಿಪರೆಡ್ಡಿ

ಮುದ್ದೇಬಿಹಾಳ : ವಿದ್ಯಾರ್ಥಿಗಳು ರಸ್ತೆಯ ನಿಯಮಗಳನ್ನು ಅರಿತುಕೊಂಡು ಅವುಗಳನ್ನು ಪಾಲಿಸಬೇಕು ಎಂದು ಪಿಎಸ್‌ಐ ಸಂಜಯ

ಮುದ್ದೇಬಿಹಾಳ : ಕೃಷ್ಣಾ ನದಿ ತೀರದಲ್ಲಿ ಆಂಧ್ರ ಮೀನುಗಾರರಿಂದ ಅಕ್ರಮ ಮೀನುಗಾರಿಕೆ

ಮುದ್ದೇಬಿಹಾಳ : ಕೃಷ್ಣಾ ನದಿ ತೀರದಲ್ಲಿ ಆಂಧ್ರ ಮೀನುಗಾರರಿಂದ ಅಕ್ರಮ ಮೀನುಗಾರಿಕೆ

ಮುದ್ದೇಬಿಹಾಳ : ತಾಲ್ಲೂಕಿನ ಮದರಿ ಗ್ರಾಮದಿಂದ ಘಾಳಪೂಜಿ ಗ್ರಾಮದ ಕೃಷ್ಣಾ ನದಿ ತೀರದಲ್ಲಿ ಆಂಧ್ರಪ್ರದೇಶದಿAದ

ಬಡವರ ಸ್ನೇಹದಿಂದ ಬದುಕಿನ ಪಾಠ-ಇಬ್ರಾಹಿಂ ಮುಲ್ಲಾ

ಬಡವರ ಸ್ನೇಹದಿಂದ ಬದುಕಿನ ಪಾಠ-ಇಬ್ರಾಹಿಂ ಮುಲ್ಲಾ

ಮುದ್ದೇಬಿಹಾಳ : ಸಿರಿವಂತರು ಸಿರಿವಂತಿಕೆಯ ಬಗ್ಗೆ ಮಾತನಾಡುತ್ತಾರೆಯೇ ಹೊರತು ಬಡವರ ಕುರಿತು ಮಾತನಾಡುವುದು ಅಪರೂಪ.ಆದರೆ ಬಡವನ ಸ್ನೇಹ ಮಾಡಿದರೆ ಆತ ಬದುಕಿನ ಅನುಭವದ ಪಾಠ ಹೇಳುತ್ತಾನೆ ಎಂದು ಹಿರಿಯ ಕಾರ್ಮಿಕ ಮುಖಂಡ ಇಬ್ರಾಹಿಂ ಮುಲ್ಲಾ ಹೇಳಿದರು. ಪಟ್ಟಣದ ಗಣೇಶ ನಗರದಲ್ಲಿ ಕಾರ್ಮಿಕ ಮುಖಂಡ ಇಬ್ರಾಹಿಂ ಮುಲ್ಲಾ ಅವರ ನೇತೃತ್ವದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸದಾಶಿವ ಮಠ ಹಾಗೂ ಮೊಹ್ಮದ ರಫೀಕ ಶಿರೋಳ ಅವರ ತಂದೆಯವರು ನನಗೆ ಆಪ್ತರು.ಅವರ

ಹುಲ್ಲೂರು ತಾಂಡಾದ ಡಾ.ಮೋತಿಲಾಲ್ ಚವ್ಹಾಣಗೆ ಗೌರವ: ಕರ್ನಾಟಕ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಗೆ ನೂತನ ಅಧ್ಯಕ್ಷರ ನೇಮಕ

ಹುಲ್ಲೂರು ತಾಂಡಾದ ಡಾ.ಮೋತಿಲಾಲ್ ಚವ್ಹಾಣಗೆ ಗೌರವ: ಕರ್ನಾಟಕ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಗೆ ನೂತನ ಅಧ್ಯಕ್ಷರ ನೇಮಕ

ಮುದ್ದೇಬಿಹಾಳ : ಮೂಲತಃ ಮುದ್ದೇಬಿಹಾಳ ತಾಲ್ಲೂಕಿನ ಹುಲ್ಲೂರು ತಾಂಡಾದ ಡಾ.ಮೋತಿಲಾಲ ರೂ.ಚವ್ಹಾಣ ಅವರನ್ನು ಕರ್ನಾಟಕ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಅಧಿಸೂಚನೆ ಹೊರಡಿಸಿದೆ. ಡಾ. ಎ.ಆರ್. ಗೋವಿಂದಸ್ವಾಮಿ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ ತೆರವಾಗಿದ್ದ ಸ್ಥಾನಕ್ಕೆ ಡಾ. ಮೋತಿಲಾಲ ಚವ್ಹಾಣ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.ಡಾ. ಮೋತಿಲಾಲ ರೂ. ಚವ್ಹಾಣ