ಶಂಕರಗೌಡ ಬಿರಾದಾರಗೆ ಗೆಲುವು: ಸರ್ಕಾರಿ ನೌಕರರ ಸಂಘದ ಒಂದು ಸ್ಥಾನಕ್ಕೆ ಚುನಾವಣೆ

ಶಂಕರಗೌಡ ಬಿರಾದಾರಗೆ ಗೆಲುವು: ಸರ್ಕಾರಿ ನೌಕರರ ಸಂಘದ ಒಂದು ಸ್ಥಾನಕ್ಕೆ ಚುನಾವಣೆ

Ad
Ad

Ad
Ad

ಮುದ್ದೇಬಿಹಾಳ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಒಂದು ನಿರ್ದೇಶಕ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ತುಂಬಗಿ ಎಚ್.ಪಿ.ಎಸ್ ಶಾಲೆಯ ಶಿಕ್ಷಕ ಶಂಕರಗೌಡ ಬಿರಾದಾರ ಆಯ್ಕೆಯಾಗಿದ್ದಾರೆ.

ಪಟ್ಟಣದ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಿತು.431 ಒಟ್ಟು ಮತದಾರರಲ್ಲಿ 395 ಮತದಾರರು ತಮ್ಮ ಹಕ್ಕು ಚಲಾಯಿಸಿದರು.ಅದರಲ್ಲಿ ಶಂಕರಗೌಡ ಬಿರಾದಾರಗೆ 217 , ಬಂದಗಿಪಟೇಲ್ ಗಣಿಯಾರ ಅವರಿಗೆ 173 ಮತಗಳು ದೊರೆತವು. ಐದು ಮತಗಳು ಅಸಿಂಧುಗೊಂಡವು. ಶಂಕರಗೌಡ ಬಿರಾದಾರ ಅವರು 44 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾಧಿಕಾರಿ ಎಸ್.ಆರ್.ಕಟ್ಟಿಮನಿ, ಎಆರ್‌ಒ ಬಿ.ಎಚ್.ಹೂಗಾರ ಮಾಹಿತಿ ನೀಡಿದರು.
ಸಹಾಯಕರಾಗಿ ಮಹಾಂತೇಶ ಮಾಗಿ, ಆರ್.ಎಸ್.ಹೊಸೂರ,ರಿಯಾಜ ನಾಯ್ಕೋಡಿ, ಮುತ್ತಣ್ಣ ವಾಲೀಕಾರ ಕಾರ್ಯನಿರ್ವಹಿಸಿದರು.

ವಿಜೇತ ಅಭ್ಯರ್ಥಿಗೆ ಜಿ.ಒ.ಸಿ.ಸಿ ಬ್ಯಾಂಕ್ ನಿರ್ದೇಶಕ ಅರವಿಂದ ಹೂಗಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಚ್.ಮುದ್ನೂರ,ಗ್ರಾಮ ಆಡಳಿತಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ ಜೂಲಗುಡ್ಡ, ತಾಲ್ಲೂಕು ಅಧ್ಯಕ್ಷ ಮನೋಜ ರಾಠೋಡ, ವೆಂಕಟೇಶ ಅಂಬಿಗೇರ, ಎನ್.ಎಸ್.ತುರುಡಗಿ,ಬಿ.ಎಸ್.ಹೊಳಿ,ಎಂ.ಎನ್.ಪಾಟೀಲ್ ಅಭಿನಂದಿಸಿದರು.

ವಿಜಯೋತ್ಸವ: ಅವಿರೋಧ ಆಯ್ಕೆಗೆ ಸಾಕಷ್ಟು ಪ್ರಯತ್ನ ಪಟ್ಟರೂ ಒಂದು ಸ್ಥಾನಕ್ಕೆ ಚುನಾವಣೆ ನಡೆಸುವುದು ಅನಿವಾರ್ಯವಾಯಿತು.ಶಾಂತಿಯುತವಾಗಿ ಚುನಾವಣೆ ನಡೆಸಲಾಗಿದ್ದು ನಮ್ಮ ಪೆನಲ್ ಅಭ್ಯರ್ಥಿ ಶಂಕರಗೌಡ ಬಿರಾದಾರ ಆಯ್ಕೆಯಾಗಿರುವುದು ಖುಷಿ ತಂದಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಳಿಕೋಟಿ ಘಟಕದ ಅಧ್ಯಕ್ಷ ಬಿ.ಟಿ.ವಜ್ಜಲ ತಿಳಿಸಿದರು.ಈ ಸಂದರ್ಭದಲ್ಲಿ ಬೆಂಬಲಿಗರಾದ ಸುರೇಶ ಬೀರಗೊಂಡ, ಸುರೇಶ ವಾಲೀಕಾರ, ರಮೇಶ ಹಿಪ್ಪರಗಿ,ಬಿ.ಎಸ್.ಶೇಖಣ್ಣವರ, ಶ್ರೀಕಾಂತ ಪವಾರ ಇದ್ದರು.ಎಎಸ್‌ಐ ಬಿ.ಡಿ.ಪವಾರ ಭದ್ರತೆ ಒದಗಿಸಿದ್ದರು.


Latest News

ಕಾಶ್ಮೀರದಿಂದ ರಾಜ್ಯಕ್ಕೆ ಮರಳು ಪ್ರವಾಸಿಗರಿಗೆ ನೆರವು ನೀಡುತ್ತಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್

ಕಾಶ್ಮೀರದಿಂದ ರಾಜ್ಯಕ್ಕೆ ಮರಳು ಪ್ರವಾಸಿಗರಿಗೆ ನೆರವು ನೀಡುತ್ತಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್

ಪಹಲ್ಗಾಮ್: ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರನ್ನು ಗುರಿಯಾಗಿರಿಸಿ ನಡೆದ ಭಯೋತ್ಪಾದಕರ ದಾಳಿ ನಂತರ ಕರ್ನಾಟಕ

ದೇಶದ ಋಣ ತೀರಿಸಲು ಯುವಕರು ಮುಂದೆ ಬನ್ನಿ : ಚಕ್ರವರ್ತಿ ಸೂಲಿಬೆಲೆ

ದೇಶದ ಋಣ ತೀರಿಸಲು ಯುವಕರು ಮುಂದೆ ಬನ್ನಿ : ಚಕ್ರವರ್ತಿ ಸೂಲಿಬೆಲೆ

ಗುಳೆದಗುಡ್ಡ : ನಮ್ಮ ಹಿರಿಯರು 5 ಋಣಗಳನ್ನು ತೀರಿಸಲು ಹೆಳಿದ್ದಾರೆ. ಅವುಗಳೆಂದರೆ ದೇವರ ಋಣ,

ಭಾರೀ ಬಿರುಗಾಳಿ,ಆಲಿಕಲ್ಲು ಮಳೆ:4000 ಪಪ್ಪಾಯಿ ಗಿಡಗಳು ನಾಶ, ದ್ರಾಕ್ಷಿ ಬೆಳೆಗೂ ಹಾನಿ

ಭಾರೀ ಬಿರುಗಾಳಿ,ಆಲಿಕಲ್ಲು ಮಳೆ:4000 ಪಪ್ಪಾಯಿ ಗಿಡಗಳು ನಾಶ, ದ್ರಾಕ್ಷಿ ಬೆಳೆಗೂ ಹಾನಿ

ಮುದ್ದೇಬಿಹಾಳ : ತಾಲ್ಲೂಕಿನ ಬಸರಕೋಡದಲ್ಲಿ ಬುಧವಾರ ಸಂಜೆ ಬೀಸಿದ ಭಾರಿ ಬಿರುಗಾಳಿ, ಅಕಾಲಿಕ ಆಲಿಕಲ್ಲು

ವಾರ್ತಾ ಇಲಾಖೆಯಿಂದ ಡಿಜಿಟಲ್‌ ಜಾಹೀರಾತಿಗೆ ಮಾಧ್ಯಮ, ಏಜೆನ್ಸಿಗಳ ನೊಂದಣಿಗೆ ಅರ್ಜಿ ಆಹ್ವಾನ

ವಾರ್ತಾ ಇಲಾಖೆಯಿಂದ ಡಿಜಿಟಲ್‌ ಜಾಹೀರಾತಿಗೆ ಮಾಧ್ಯಮ, ಏಜೆನ್ಸಿಗಳ ನೊಂದಣಿಗೆ ಅರ್ಜಿ ಆಹ್ವಾನ

ಬೆಂಗಳೂರು : ಸರ್ಕಾರದ ನೀತಿ ಮತ್ತು ಯೋಜನೆಗಳನ್ನು ಅಂತರ್ಜಾಲ ಬಳಸುವ ಜನರಿಗೆ ಡಿಜಿಟಲ್‌ ಜಾಹೀರಾತುಗಳ

ನಿವೃತ ಪೊಲೀಸ್ ಅಧಿಕಾರಿ ಪತ್ನಿಯಿಂದಲೇ ಹತ್ಯೆ

ನಿವೃತ ಪೊಲೀಸ್ ಅಧಿಕಾರಿ ಪತ್ನಿಯಿಂದಲೇ ಹತ್ಯೆ

ಬೆಂಗಳೂರುಃ ಕರ್ನಾಟಕದ ನಿವೃತ್ತ ಪೊಲೀಸ್ ಮಹಾ ನಿರ್ದೇಶಕರಾಗಿದ್ದ ಓಂ ಪ್ರಕಾಶ್ ಅವರನ್ನು ಅವರ ಪತ್ನಿಯಿಂದಲೇ ಭೀಕರವಾಗಿ ಹತ್ಯೆಯಾಗಿದ್ದಾರೆ. ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್ ನಿವಾಸದಲ್ಲಿ ಈ ಕೊಲೆ ನಡೆದಿದೆ. ನಿವೃತ ಅಧಿಕಾರಿ ಓಂ ಪ್ರಕಾಶ್ ಕೊಲೆ ಬಗ್ಗೆ ಅವರ ಪತ್ನಿಯೇ ಮಾಹಿತಿಯನ್ನು ನೀಡಿದ್ದಾರೆ. ಸ್ವತಃ ಓಂ ಪ್ರಕಾಶ್ ಅವರ ಪತ್ನಿಯೇ ಅವರನ್ನು ಭೀಕರವಾಗಿ ಕೊಲೆ ಮಾಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ. ಕೊಲೆಯಾದ ಬಳಿಕ ಓಂ ಪ್ರಕಾಶ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು.

ಮೇ.18 ರಂದು ಕಲ್ಯಾಣ ಮಹೋತ್ಸವ :ಸಾಮೂಹಿಕ ವಿವಾಹ : ಹೆಸರು ನೋಂದಣಿಗೆ ಸೂಚನೆ

ಮೇ.18 ರಂದು ಕಲ್ಯಾಣ ಮಹೋತ್ಸವ :ಸಾಮೂಹಿಕ ವಿವಾಹ : ಹೆಸರು ನೋಂದಣಿಗೆ ಸೂಚನೆ

ಮುದ್ದೇಬಿಹಾಳ : ತಮ್ಮ ಪುತ್ರ ಕಿರಣ ಮದರಿ ಅವರ ಕಲ್ಯಾಣ ಮಹೋತ್ಸವದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಮೇ.18 ರಂದು ಆಯೋಜಿಸಲಾಗಿದ್ದು ಆಸಕ್ತ ವಧು ವರರು ತಮ್ಮ ಹೆಸರುಗಳನ್ನು ನೋಂದಾಯಿಸಲು ಕಲ್ಯಾಣ ಮಹೋತ್ಸವ ಸಮೀತಿ ಸಂಚಾಲಕ, ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನ ಎನ್. ಮದರಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಪ್ರಥಮ ದರ್ಜೆ ಗುತ್ತಿಗೆದಾರರೂ ಆಗಿರುವ ಎಂ. ಎನ್. ಮದರಿ ಅವರು, ಉಳ್ಳವರ ಮದುವೆಗಳು ದುಂದುವೆಚ್ಚದಿಂದ