ವಕೀಲ ಮೇಲಿನಕೇರಿ ಮರ್ಡರ್ ಕೇಸ್.. ನಾಲ್ಕೇ ದಿನದಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ ಖಾಕಿಪಡೆ..!

ವಕೀಲ ಮೇಲಿನಕೇರಿ ಮರ್ಡರ್ ಕೇಸ್.. ನಾಲ್ಕೇ ದಿನದಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ ಖಾಕಿಪಡೆ..!

ವಿಜಯಪುರ : ಆ.8 ರಂದು ವಿಜಯಪುರದಲ್ಲಿ ವಕೀಲ ರವಿ ಮೇಲಿನಕೇರಿ (Ravi Melinakeri) ಅವರನ್ನು ಸ್ಕೂಟಿಗೆ ಕಾರು ಡಿಕ್ಕಿ ಹೊಡೆಸಿ ಕೊಲೆಗೈದ ಘಟನೆಗೆ ಸಂಬಂಧಿಸಿದ ವಿಜಯಪುರ ಪೊಲೀಸರು ಆರೋಪಿಗಳನ್ನು ನಾಲ್ಕೇ ದಿನದಲ್ಲಿ ಪತ್ತೆ ಹಚ್ಚಿ ಬಂಧಿಸಿ ನ್ಯಾಯಾಲಯದ ವಶಕ್ಕೆ ಒಪ್ಪಿಸಿದ್ದಾರೆ.

ಘಟನೆ ವಿವರ : ಆ.8 ರಂದು ವಕೀಲ ರವಿ ಮೇಲಿನಕೇರಿ ಅವರು, ಬಾಗಲಕೋಟ ಕ್ರಾಸ್ ಕಡೆಗೆ ಹೋಗುತ್ತಿರುವಾಗ ಪಾಲಿಟೆಕ್ನಿಕ್ ಹಾಸ್ಟೆಲ್ ಹತ್ತಿರ ಯಾರೋ ದುಷ್ಕರ್ಮಿಗಳು ಒಂದು ನಂಬರ್ ಪ್ಲೇಟ್ ಇಲ್ಲದ ಇನೋವಾ ಗಾಡಿಯಲ್ಲಿ ಬಂದು ವಕೀಲ ರವಿ ಇವರಿಗೆ ಹಿಂದಿನಿಂದ ಡಿಕ್ಕಿ ಹೊಡೆಸಿದ್ದು, ಆಗ ರವಿ (Ravi Melinakeri) ಇವರು ಸದರಿ ಇನೋವಾ ಗಾಡಿಯ ಕೆಳಗೆ ಸಿಕ್ಕಿ ಹಾಕಿಕೊಂಡಿದ್ದರು. ಆಗ ಆ ದುಷ್ಕರ್ಮಿಗಳು ತನ್ನ ಇನೋವಾ ಗಾಡಿಯನ್ನು ನಿಲ್ಲಿಸದೇ ಗಾಡಿಯ ಕೆಳಗೆ ಸಿಕ್ಕಿ ಹಾಕಿಕೊಂಡಿದ್ದ ರವಿಯನ್ನು ಹಾಗೆಯೇ ಎಳೆಯಿಸಿಕೊಂಡು ಮುಂದೆ ಹೋಗಿ ಬಲಕ್ಕೆ ತಿರುಗಿ ಬಿಎಲ್‌ಡಿಇ ಆಯುರ್ವೇದಿಕ ಕಾಲೇಜಿನ ಮುಂದೆ ಹಾಯ್ದು ಮನಗೂಳಿ ಅಗಸಿಯಿಂದ ಬಲಕ್ಕೆ ತಿರುಗಿ ಮನಗೂಳಿ ಕಡೆಗೆ ಹೋಗುವ ರಸ್ತೆಯ ಮೇಲೆ ಹೊರಟಾಗ ಇನೋವಾ ಗಾಡಿಯ ಕೆಳಗೆ ಸಿಕ್ಕಿಕೊಂಡಿದ್ದ ವಕೀಲ ರವಿ ಇವರ ಶವವು ಮನಗೂಳಿ ರಸ್ತೆಯ ಮೇಲೆ ಇರುವ ಸ್ಮಶಾಣದ ಹತ್ತಿರ ರಸ್ತೆಯ ಮೇಲೆ ಬಿದ್ದಿತ್ತು.

Join Our Telegram: https://t.me/dcgkannada

ಇದಕ್ಕೆ ಸಂಬಂಧಪಟ್ಟಂತೆ ಮೃತ ರವಿ ಈತನ ಸಹೋದರ ಪ್ರಕಾಶ ಮೇಲಿನಕೇರಿ ಕೊಟ್ಟ ದೂರಿನ ಮೇಲೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ: 161/2024 ಕಲಂ 281, 106(1) ಬಿಎನ್‌ಎಸ್ ಹಾಗೂ 187 ಐಎಮ್‌ವಿ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಸದರಿ ಪ್ರಕರಣದ ತನಿಖಾ ಕಾಲದಲ್ಲಿ ಇದು ರಸ್ತೆ ಅಪಘಾತವಾಗಿರದೇ ಒಂದು ಕೊಲೆ ಪ್ರಕರಣವೆಂದು ಪತ್ತೆ ಹಚ್ಚಿ ಸದರಿ ಕೊಲೆಯ ಪ್ರಮುಖ ಸೂತ್ರಧಾರ ತುಳಸಿರಾಮ ಪಂಡಿತ ಹರಿಜನ ಎನ್ನುವವನನ್ನು ದಸ್ತಗಿರಿ ಮಾಡಿ ವಿಚಾರಣೆಗೆ ಒಳಪಡಿಸಿದ್ದು ಅವನು ತನಗೂ ಮತ್ತು ರವಿಗೂ 4-5 ತಿಂಗಳುಗಳ ಹಿಂದೆ ಜಗಳವಾಗಿ ರವಿಯು ತನ್ನ ಸಹೋದರರ ಜೊತೆ ಸೇರಿ ತನಗೆ ಹೊಡೆದು ಅವಮಾನ ಪಡಿಸಿದ್ದಲ್ಲದೇ ತನ್ನನ್ನು ಕೊಲೆ ಮಾಡುವುದಾಗಿ ಹೇಳುತ್ತಾ ತಿರುಗಾಡುತ್ತಿದ್ದನು.

ಇದನ್ನೂ‌ ಓದಿ: ಅಪರಿಚಿತ ವಾಹನ ಡಿಕ್ಕಿ.. ರೈತ ಸ್ಥಳದಲ್ಲಿಯೇ ದುರ್ಮರಣ..!

ಈಗ ಸುಮಾರು 20 ದಿನಗಳ ಹಿಂದೆ ರವಿ ಮೇಲಿನಕೇರಿ ಇವನು ತನ್ನ ಸಹೋದರರ ಜೊತೆ ಸೇರಿ ಅಲೆಕ್ಸ್ನನ್ನು ಮನೆಯಿಂದ ಕಿಡ್ನಾಪ್ ಮಾಡಿಕೊಂಡು ಒಯ್ದು ಹೊಡೆದು, ತುಳಸಿರಾಮನನ್ನು ನಿನ್ನನ್ನು ಕೊಲೆ ಮಾಡುತ್ತೇವೆ. ತುಳಸಿರಾಮನಿಗೆ ಹೇಳು ಎಂದು ಧಮ್ಮಾಯಿಸಿ ಕಳಿಸಿದ್ದನು. ಆದ್ದರಿಂದ ತಾನು ತನ್ನ ಸ್ನೇಹಿತರಾದ ಅಲೆಕ್ಸ್ ಗೊಲ್ಲರ, ಪ್ರಕಾಶ ಗೊಲ್ಲರ, ಷಣ್ಮುಖ ನಡುವಿನಕೇರಿ, ಜುಮನಾಳದ ಸದ್ದಾಮ್, ಮುರುಗೇಶ ಉಳ್ಳಾಗಡ್ಡಿ, ಅಮೀನ ಶೇಖ್ ಇವರ ಜೊತೆ ಸೇರಿ ರವಿ ಮೇಲಿನಕೇರಿ ಇವನನ್ನು ಕೊಲೆ ಮಾಡುವ ಸಂಚು ರೂಪಿಸಿ, ಆ.8 ರಂದು ಆನಂದ ಅತಾಲಟ್ಟಿ ಇವನು ಸದ್ದಾಮ್‌ನ ಹತ್ತಿರ ಒಂದು ಲಕ್ಷ ರೂ.ಗಳಿಗೆ ಒತ್ತೆ ಇಟ್ಟಿದ್ದ ಇನೋವಾ ಗಾಡಿಯಿಂದ ವಕೀಲ ತನ್ನ ಬಿಳಿ ಬಣ್ಣದ ಸ್ಕೂಟಿಯ ಮೇಲೆ ಹೊರಟಾಗ ಪಾಲಿಟೆಕ್ನಿಕ್ ಹಾಸ್ಟೇಲ್ ಮುಂದೆ ಹಿಂದಿನಿಂದ ಹಾಯಿಸಿ ಅವನಿಗೆ ಕೊಲೆ ಮಾಡಿರುತ್ತಾರೆ ಎಂದು ಒಪ್ಪಿಕೊಂಡಿರುತ್ತಾನೆ.

ಇತರೆ ಆರೋಪಿತರಾದ ಅಲೆಕ್ಸ್ ಗೊಲ್ಲರ, ಷಣ್ಮುಖ ನಡುವಿನಕೇರಿ, ಪ್ರಕಾಶ ಗೊಲ್ಲರ, ಮುರುಗೇಶ ಉಳ್ಳಾಗಡ್ಡಿ ಇವರನ್ನು ಸಹ ಬಂಧಿಸಿ ತನಿಖೆ ಕೈಗೊಳ್ಳಲಾಗಿದೆ. ಕೊಲೆ ಮಾಡುವ ಸಮಯದಲ್ಲಿ ಆ ಗಾಡಿಯಲ್ಲಿ ಅಲೆಕ್ಸ್, ಷಣ್ಮುಖ ಹಾಗೂ ಸದ್ದಾಮ್ ಇದ್ದು ಅಲೆಕ್ಸ್ ಇವನು ಗಾಡಿಯನ್ನು ಓಡಿಸುತ್ತಿದ್ದನು ಎಂದು ತನಿಖೆಯಲ್ಲಿ ದೃಢಪಟ್ಟಿರುತ್ತದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest News

PSI ಪತ್ನಿ ಆತ್ಮಹತ್ಯೆ!

PSI ಪತ್ನಿ ಆತ್ಮಹತ್ಯೆ!

ಬಳ್ಳಾರಿ: PSI ಪತಿ ಹಾಗೂ ಇಬ್ಬರು ಮಕ್ಕಳನ್ನ ರೆಡಿ ಮಾಡಿ, ಧ್ವಜಾರೋಹಣಕ್ಕೆ ಕಳಿಸಿದ ಬಳಿಕ

ಮಹಿಳೆ ಗರ್ಭಕೋಶದಿಂದ 17 ಕೆ.ಜಿ. ಗೆಡ್ಡೆ ತೆಗೆದ ಇಎಸ್‌ಐಸಿ ಆಸ್ಪತ್ರೆ ವೈದ್ಯರು

ಮಹಿಳೆ ಗರ್ಭಕೋಶದಿಂದ 17 ಕೆ.ಜಿ. ಗೆಡ್ಡೆ ತೆಗೆದ ಇಎಸ್‌ಐಸಿ ಆಸ್ಪತ್ರೆ ವೈದ್ಯರು

ಬೆಂಗಳೂರು: ಮಹಿಳೆಯ ಗರ್ಭಕೋಶದಿಂದ ಮಹತ್ವದ ಶಸ್ತ್ರ ಚಿಕಿತ್ಸೆ ನಡೆಸಿದ ರಾಜಾಜಿನಗರದ ಇಎಸ್‌ಐಸಿ, ಎಂಸಿ ಪಿಜಿಐಎಂಎಸ್‌ಆರ್

ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಕೊಡುಗೆ ಅಪಾರ: ಕಲ್ಲಪ್ಪ ಜಂಜಿಗಡ್ಡಿ

ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಕೊಡುಗೆ ಅಪಾರ: ಕಲ್ಲಪ್ಪ ಜಂಜಿಗಡ್ಡಿ

ನಾರಾಯಣಪುರ : ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಕೊಡುಗೆ ಅಪಾರವಾಗಿದೆ ಎಂದು ಕೊಡೇಕಲ್ ಉಪತಶೀಲ್ದಾರ ಕಲ್ಲಪ್ಪ

ಸರಕಾರದ ನಿರ್ಲಕ್ಷಕ್ಕೊಳಗಾದ ಸ್ವಾತಂತ್ರ್ಯ ಹೋರಾಟಗಾರ ಸಂಗಪ್ಪ ಮಂಟೆ

ಸರಕಾರದ ನಿರ್ಲಕ್ಷಕ್ಕೊಳಗಾದ ಸ್ವಾತಂತ್ರ್ಯ ಹೋರಾಟಗಾರ ಸಂಗಪ್ಪ ಮಂಟೆ

ಕೊಡೇಕಲ್ : ‘ಬರೀ ಭ್ರಷ್ಟಾಚಾರ ಮರಾಯ, ನಾನು ಬ್ರಿಟಿಷ್ ಕಾಲದಲ್ಲಿ ಇಂತಹ ಅವ್ಯವಸ್ಥೆ ದುರಾಡಳಿತ

ಪಹಲ್ಗಾಮ್ ದಾಳಿಗೆ ಭಾರತದ ಸಮರ್ಥ ಪ್ರತ್ಯುತ್ತರ : ಶಾಸಕ ನಾಡಗೌಡ

ಪಹಲ್ಗಾಮ್ ದಾಳಿಗೆ ಭಾರತದ ಸಮರ್ಥ ಪ್ರತ್ಯುತ್ತರ : ಶಾಸಕ ನಾಡಗೌಡ

ಮುದ್ದೇಬಿಹಾಳ : ನಮ್ಮಲ್ಲಿರುವ ಆಂತರಿಕ ಭಿನ್ನಭಿಪ್ರಾಯವೇ ದೇಶದ ನಾಗರಿಕರ ಮೇಲಿನ ದಾಳಿಗಳಂತಹ ಘಟನೆಗಳಿಗೆ ವೈರಿ ರಾಷ್ಟ್ರಗಳು ಕೈ ಹಾಕುತ್ತಿವೆ. ನಾವೆಲ್ಲ ಭಾರತ ಅಖಂಡವಾಗಿ ಉಳಿಯುವ ಸಂಕಲ್ಪವನ್ನು ಮಾಡಬೇಕಾಗಿದೆ. ಪಹಲ್ಗಾಮ್ ದಾಳಿಗೆ ಆಪರೇಷನ್ ಸಿಂಧೂರ ಮೂಲಕ ಸಮರ್ಥವಾಗಿ ಭಾರತದ ಸೇನಾಶಕ್ತಿ ಪ್ರತ್ಯುತ್ತರ ಕೊಟ್ಟಿದೆ ಎಂದು ಮೆಲಕು ಹಾಕಬೇಕು ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು. ಪಟ್ಟಣದ ತಾಲ್ಲೂಕು ಆಡಳಿತ ಸೌಧ ಆವರಣದಲ್ಲಿ ಶುಕ್ರವಾರ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು

ಜನಪರ ಆಡಳಿತವನ್ನು ಜನಸಾಮಾನ್ಯರಿಗೆ ತಲುಪಿಸುವುದೇ ನಮ್ಮ ಸರ್ಕಾರದ ಮೂಲ ಉದ್ದೇಶ: ಸಚಿವ ಲಾಡ್

ಜನಪರ ಆಡಳಿತವನ್ನು ಜನಸಾಮಾನ್ಯರಿಗೆ ತಲುಪಿಸುವುದೇ ನಮ್ಮ ಸರ್ಕಾರದ ಮೂಲ ಉದ್ದೇಶ: ಸಚಿವ ಲಾಡ್

ಧಾರವಾಡ, ಆ.15: ಸ್ವಾತಂತ್ರ್ಯ ದಿನವು ಕೇವಲ ರಜಾ ದಿನವಲ್ಲ, ಬದಲಾಗಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಧನ್ಯವಾದ ಹೇಳಲು ಮತ್ತು ಅವರ ಮೌಲ್ಯಗಳನ್ನು ನೆನಪಿಸಿಕೊಳ್ಳಲು ಒಂದು ಅವಕಾಶ. ನಮ್ಮ ಧ್ವಜವನ್ನು ಹಾರಿಸುವುದು, ನಮ್ಮ ಇತಿಹಾಸವನ್ನು ನೆನಪಿಸಿಕೊಳ್ಳುವುದು ಮತ್ತು ಏಕತೆಯ ಮನೋಭಾವವನ್ನು ರೂಢಿಸಿಕೊಳ್ಳುವ ದಿನವಾಗಿದೆ ಎಂದು ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಎಸ್ ಲಾಡ್ ಅವರು ಹೇಳಿದರು. ಧಾರವಾಡ ಜಿಲ್ಲಾಡಳಿತವು ಆರ್ ಎನ್ ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ