Virat Kohli Retirement Plan

Virat Kohli Retirement Plan: ನಿವೃತ್ತಿ ಕುರಿತು ವಿರಾಟ್ ಕೊಹ್ಲಿ ಕ್ಲಾರಿಟಿ

Virat Kohli Retirement Plan: ನಿವೃತ್ತಿ ಕುರಿತು ವಿರಾಟ್ ಕೊಹ್ಲಿ ಕ್ಲಾರಿಟಿ

Virat Kohli Retirement Plan

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ವಿರಾಟ್ ಕಳಪೆ ಫಾರ್ಮ್ ನಿಂದ ನಿವೃತ್ತಿ ಕುರಿತು ಚರ್ಚೆ ಶುರುವಾಗಿದೆ.

ಈ ಸರಣಿಯಲ್ಲಿ 9 ಇನಿಂಗ್ಸ್ ಆಡಿದ್ದ ವಿರಾಟ್ ಕೊಹ್ಲಿ 23.75 ರ ಕಳಪೆ ಸರಾಸರಿಯೊಂದಿಗೆ 190 ರನ್ ಮಾತ್ರ ಕಲೆಹಾಕಿದ್ದಾರೆ. ಈ ಕಳಪೆ ಪ್ರದರ್ಶನದ ಬೆನ್ನಲ್ಲೇ ಕೊಹ್ಲಿ ನಿವೃತ್ತರಾಗುವುದು ಉತ್ತಮ ಎಂಬ ಕೂಗುಗಳು ಕೇಳಿಬಂದಿದ್ದವು. ಆದರೀಗ ವಿರಾಟ್ ಕೊಹ್ಲಿ ತಾವು ಯಾವಾಗ ನಿವೃತ್ತಿ ಆಗುತ್ತೇನೆ ಎಂಬುದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

Join Our Telegram: https://t.me/dcgkannada

ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಪ್ರಮುಖರಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಹೆಸರು ಮುಂಚೂಣಿಯಲ್ಲಿದೆ. ಈ ಇಬ್ಬರು ಹಿರಿಯ ಆಟಗಾರರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರದ ಕಾರಣ ನಿವೃತ್ತಿಯಾಗುವುದು ಉತ್ತಮ ಎಂಬ ಅಭಿಪ್ರಾಯಗಳು ಕೇಳಿ ಬಂದಿದ್ದವು. ಇದರ ಬೆನ್ನಲ್ಲೇ ಕಿಂಗ್ ಕೊಹ್ಲಿ ಸದ್ಯಕ್ಕಂತು ನಿವೃತ್ತರಾಗಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ.

ವಿರಾಟ್ ಕೊಹ್ಲಿ ಸದ್ಯ ನಿವೃತ್ತರಾಗುವ ಯಾವುದೇ ಮನಸ್ಥಿತಿಯಲ್ಲಿಲ್ಲ. ಬದಲಾಗಿ ಇನ್ನೂ ಮೂರು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮುಂದುವರೆಯುವ ಇರಾದೆಯಲ್ಲಿದ್ದಾರೆ. ಅಲ್ಲದೆ 2027 ರವರೆಗೆ ಟೀಮ್ ಇಂಡಿಯಾ ಪರ ಕಣಕ್ಕಿಳಿಯುವ ವಿಶ್ವಾಸ ಹೊಂದಿದ್ದಾರೆ.

ಇಲ್ಲಿ ವಿರಾಟ್ ಕೊಹ್ಲಿ 2027ರ ಏಕದಿನ ವಿಶ್ವಕಪ್ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಲು ಪ್ಲ್ಯಾನ್ ರೂಪಿಸಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಕಿಂಗ್ ಕೊಹ್ಲಿಯನ್ನು ಇನ್ನೂ ಮೂರು ವರ್ಷಗಳ ಕಾಲ ಟೀಮ್ ಇಂಡಿಯಾದಲ್ಲಿ ಕಾಣಬಹುದು.

ಇದನ್ನು ಪುಷ್ಠೀಕರಿಸುವಂತೆ ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿಯ ಬಾಲ್ಯದ ಕೋಚ್ ರಾಜ್​ ಕುಮಾರ್ ಶರ್ಮಾ ಸಹ ಹೇಳಿಕೆ ನೀಡಿದ್ದಾರೆ. ವಿರಾಟ್ ಸದ್ಯ ನಿವೃತ್ತಿಯ ಯೋಚನೆಯಲ್ಲಿಲ್ಲ. ಅವರು ಇನ್ನೂ 5 ವರ್ಷಗಳ ಕಾಲ ಮೈದಾನದಲ್ಲಿ ಕಾಣಿಸಿಕೊಳ್ಳುವ ವಿಶ್ವಾಸವಿದೆ ತಿಳಿಸಿದ್ದರು. ಈ ಮೂಲಕ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಬಳಿಕ ಕೊಹ್ಲಿ ನಿವೃತ್ತಿ ನೀಡಲಿದ್ದಾರೆ ಎಂಬ ವದಂತಿಯನ್ನು ತಳ್ಳಿ ಹಾಕಿದ್ದರು.

ಇದನ್ನೂ ಓದಿ: Prize Money Scholarship: ವಿದ್ಯಾರ್ಥಿಗಳ ಖಾತೆಗೆ 35 ಸಾವಿರ ಜಮಾ!

ಹಾಗೆಯೇ ಟೀಮ್ ಇಂಡಿಯಾದ ಮಾಜಿ ಕೋಚ್ ರವಿ ಶಾಸ್ತ್ರಿ ಕೂಡ ವಿರಾಟ್ ಕೊಹ್ಲಿ ಇನ್ನೂ ಮೂರು ವರ್ಷಗಳ ಕಾಲ ಭಾರತದ ಪರ ಕಣಕ್ಕಿಳಿಯಲಿದ್ದಾರೆ ಎಂದು ತಿಳಿಸಿದ್ದರು. ಇವೆಲ್ಲವನ್ನೂ ಗಮನಿಸಿದರೆ 2027 ರಲ್ಲಿ ಸೌತ್ ಆಫ್ರಿಕಾ, ನಮೀಬಿಯಾ ಹಾಗೂ ಝಿಂಬಾಬ್ವೆ ಜಂಟಿಯಾಗುವ ಆಯೋಜಿಸುವ ಏಕದಿನ ವಿಶ್ವಕಪ್ ಮೂಲಕ ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸಬಹುದು.

Latest News

ಚೆನ್ನೈ ವಿರುದ್ಧ ಸೋಲು : ಪ್ಲೇ ಆಪ್ ನಿಂದ ಕೋಲ್ಕತ್ತ ಔಟ್

ಚೆನ್ನೈ ವಿರುದ್ಧ ಸೋಲು : ಪ್ಲೇ ಆಪ್ ನಿಂದ ಕೋಲ್ಕತ್ತ ಔಟ್

ಕೋಲ್ಕತ್ತ: ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಚೆನ್ನೈ ವಿರುದ್ಧ ಸೋಲುವ ಮೂಲಕ

ನಾಲತವಾಡ ಬಳಿ ಭೀಕರ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ

ನಾಲತವಾಡ ಬಳಿ ಭೀಕರ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ

ನಾಲತವಾಡ: ಕೆಎಸ್ಆರ್.ಟಿಸಿ ಬಸ್ ಗೆ ಬೈಕ್ ಡಿಕ್ಕಿಯಾಗಿ ಸವಾರ ಮೃತಪಟ್ಟಿರುವ ಘಟನೆ ಆರೇಶಂಕರ ಕ್ರಾಸ್

ಅಭ್ಯುದಯ ಶಾಲೆ ವಿದ್ಯಾರ್ಥಿಗಳ ಉತ್ತಮ ಸಾಧನೆ

ಅಭ್ಯುದಯ ಶಾಲೆ ವಿದ್ಯಾರ್ಥಿಗಳ ಉತ್ತಮ ಸಾಧನೆ

ಮುದ್ದೇಬಿಹಾಳ : ಪಟ್ಟಣದ ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆಯಡಿ ನಡೆಯುತ್ತಿರುವ ಮುದ್ದೇಬಿಹಾಳ, ಕೋಳೂರು, ಅಡವಿ

ನಿರ್ಲಕ್ಷ್ಯದ ವಿರುದ್ಧ ಆಕ್ರೋಶ : ಜಾತಿ ಗಣತಿಗೆ ಅಧಿಕಾರಿಗಳ ಅನಾದರ-ಆರೋಪ

ನಿರ್ಲಕ್ಷ್ಯದ ವಿರುದ್ಧ ಆಕ್ರೋಶ : ಜಾತಿ ಗಣತಿಗೆ ಅಧಿಕಾರಿಗಳ ಅನಾದರ-ಆರೋಪ

ಮುದ್ದೇಬಿಹಾಳ : ರಾಜ್ಯ ಸರ್ಕಾರ ಒಳಮೀಸಲಾತಿ ಕಲ್ಪಿಸಲು ಆರಂಭಿಸಿರುವ ಜಾತಿ ಗಣತಿಗೆ ಮುದ್ದೇಬಿಹಾಳ ತಾಲ್ಲೂಕಿನಲ್ಲಿ

ಕೃಷ್ಣಾ ನದಿಯ ನೀರನ್ನು ಕುಡಿಯಲು ಒದಗಿಸಬೇಕು ಮತ್ತು ಗ್ರಾಮದ ಸಮಸ್ಯೆಗಳನ್ನು ಪರಿಹರಿಸಬೇಕು: ಅಂಬೇಡ್ಕರ್ ಸೇನೆ ಒತ್ತಾಯ

ಕೃಷ್ಣಾ ನದಿಯ ನೀರನ್ನು ಕುಡಿಯಲು ಒದಗಿಸಬೇಕು ಮತ್ತು ಗ್ರಾಮದ ಸಮಸ್ಯೆಗಳನ್ನು ಪರಿಹರಿಸಬೇಕು: ಅಂಬೇಡ್ಕರ್ ಸೇನೆ ಒತ್ತಾಯ

ಲಿಂಗಸಗೂರು: ತಾಲ್ಲೂಕಿನ ಚಿತ್ತಾಪೂರ ಗ್ರಾಮದಲ್ಲಿ ಬೋರವೇಲ್ ನೀರು ಕುಡಿಯಲು ಯೋಗ್ಯವಿಲ್ಲದ ಕಾರಣ ಗ್ರಾಮದ ಜನರಿಗೆ ಯೋಗ್ಯವಾದ ಕೃಷ್ಣ ನದಿಯ ನೀರನ್ನು ಒದಗಿಸಬೇಕು ಎಂದು ಸಹಾಯಕ ಆಯುಕ್ತರಿಗೆಅಂಬೇಡ್ಕರ ಸೇನೆಯ ಕಾರ್ಯಕರ್ತರು ಮನವಿ ಸಲ್ಲಿಸಿದರು. ಕಳೆದ ವರ್ಷ ಬೇಸಿಗೆಯಲ್ಲಿ ಚಿತ್ತಾಪೂರ ಗ್ರಾಮದ ಸಂಪೂರ್ಣ ಜನರಿಗೆ ವಾಂತಿ ಬೇಧಿಯಿಂದ ಸಾರ್ವಜನಿಕರು ತತ್ತರಿಸಿ ಹೋಗಿದ್ದರು. ಇಡೀ ರಾಜ್ಯಾದ್ಯಂತ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿತ್ತು. ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕ ಮಟ್ಟದ ಅಧಿಕಾರಿಗಳು ಬೇಟಿ ನೀಡಿ, ಹತೋಟಿಗೆ ತರುವ

ಅಕ್ರಮ ಗಣಿಗಾರಿಕೆ ಗಾಲಿ ಜನಾರ್ಧನ್ ರೆಡ್ಡಿಗೆ 7 ವರ್ಷ ಜೈಲು ಶಿಕ್ಷೆ

ಅಕ್ರಮ ಗಣಿಗಾರಿಕೆ ಗಾಲಿ ಜನಾರ್ಧನ್ ರೆಡ್ಡಿಗೆ 7 ವರ್ಷ ಜೈಲು ಶಿಕ್ಷೆ

ದೆಹಲಿ: ಅನಂತಪುರ ಜಿಲ್ಲೆಯ ಓಬಳಾಪುರಂ ಮೈನಿಂಗ್ ಕಂಪನಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಇದೀಗ ದೆಹಲಿಯ ಸಿಬಿಐ ವಿಶೇಷ ನ್ಯಾಯಾಲಯ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರನ್ನು ಅಪರಾಧಿ ಎಂದು ತೀರ್ಪು ಪ್ರಕಟಿಸಿದೆ. ಇದರ ಬೆನ್ನಲ್ಲೇ ಕೋರ್ಟ್ ಶಿಕ್ಷೆ ಪ್ರಕಟಿಸಿದ್ದು ಶಾಸಕ ಜನಾರ್ಧನ ರೆಡ್ಡಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಓಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅಪರಾಧಿ ಎಂದು ದೆಹಲಿಯ ಸಿಬಿಐ ವಿಶೇಷ ನ್ಯಾಯಾಲಯ