ಮುದ್ದೇಬಿಹಾಳ : ಹಿಂದಿನ ಸರಕಾರದ ಅವಧಿಯಲ್ಲಿ ಈ ರಸ್ತೆ ಕಾಮಗಾರಿಗೆ ಮಂಜೂರಾತಿ ಸಿಕ್ಕಿತ್ತು.ಆದರೆ ಆಗ ಚುನಾವಣಾ ಆರಂಭವಾಗಿತ್ತು.ಚುನಾವಣಾ ಸಮಯದಲ್ಲಿ ಸರಕಾರ ಅನುಮತಿ ಕೊಟ್ಟಿದ್ದನ್ನು ಹಣಕಾಸಿನ ಲಭ್ಯತೆ ಇಲ್ಲದೇ ಕೆಲಸ ತಗೆದುಕೊಂಡಿದ್ದಾರೆ ಎಂದು ಸ್ಥಗಿತಗೊಳಿಸಲು ಸಿದ್ಧರಾಮಯ್ಯನವರ ಸರಕಾರ ಬಂದಾಗ ಸೂಚಿಸಿತ್ತು.ಆದರೆ ನಾನು ಪಕ್ಷದ ವರಿಷ್ಠರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಮುಖ್ಯಮಂತ್ರಿ ಬಳಿ ಅನುಮತಿ ನೀಡಲು ಒತ್ತಾಯಪಡಿಸಿ ಕೆಲಸ ಮಾಡಿಸಿಕೊಂಡು ಬಂದಿದ್ದೇನೆ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.
ಮತಕ್ಷೇತ್ರದ ವನಹಳ್ಳಿ ಗ್ರಾಮದಲ್ಲಿ ಸನ್ 2022-23ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಯೋಜನೆಯಡಿ ವನಹಳ್ಳಿ-ಬಳಗಾನೂರ ಕಾಲುವೆ ರಸ್ತೆಯ ಸುಧಾರಣೆ ಕಾಮಗಾರಿಗೆ ಚಾಲನೆ ನಿಡಿ ಅವರು ಮಾತನಾಡಿದರು.
ಇದರಲ್ಲಿ ರಾಜಕೀಯ ದುರುದ್ದೇಶ ಮಾಡಿಲ್ಲ.ಹಿಂದಿನ ಶಾಸಕರು ಮಾಡಿರುವ ಯೋಜನೆಗಳನ್ನು ತಡೆಯುವ ಕೆಲಸ ಮಾಡುವುದಿಲ್ಲ.ಆಡಳಿತಾತ್ಮಕ ಮಂಜೂರಾತಿ 2024 ರಲ್ಲಿ ಕೊಡಿಸಿದ್ದೇವೆ.ಕೆಲಸ ಆರಂಭಿಸಬೇಕಿತ್ತು . ಆದರೆ ಗುತ್ತಿಗೆದಾರರು ಏಕೆ ಮಾಡಲಿಲ್ಲ ಎಂಬುದು ಗೊತ್ತಿಲ್ಲ.ಇಲಾಖೆ ಹಾಗೂ ಗುತ್ತಿಗೆದಾರರ ಮಧ್ಯೆ ಪ್ರವೇಶ ಮಾಡುವುದಿಲ್ಲ.ಇದರಲ್ಲಿ ರಾಜಕಾರಣ ಮಾಡಬೇಕಾಗಿಲ್ಲ.3.41 ಕೋಟಿ ರೂ. ವೆಚ್ಚದಲ್ಲಿ ಕೆಲಸ ಮಾಡಬೇಕಾಗುತ್ತದೆ.ಅಂದಾಜು 4 ಕಿಮೀ ರಸ್ತೆ ಮಾಡಬೇಕಾಗಿದೆ.ರಸ್ತೆ ಆದರೆ ರೈತರಿಗೆ ಅನುಕೂಲವಾಗಲಿದ್ದು ರೈತರು ಅಡಚಣೆ ಮಾಡಬಾರದು.ಎಲ್ಲೆಲ್ಲಿ ರಸ್ತೆಗಳಾಗಿದೆಯೋ ಅಲ್ಲಲ್ಲಿ ಜಮೀನುಗಳ ಬೆಲೆ ಹೆಚ್ಚಳವಾಗುತ್ತದೆ ಎಂದರು.
ಸಿದ್ಧರಾಮಯ್ಯನವರ ಸರ್ಕಾರದಿಂದ ಬರುವ ತಿಂಗಳಲ್ಲಿ ಐದು ಕೆಜಿ ಅಕ್ಕಿ ನೀಡುತ್ತಿದ್ದು ಉಳಿದಿದ್ದು ಕಿಟ್ ರೂಪದಲ್ಲಿ ಹಂಚಿಕೆ ಮಾಡಲಾಗುತ್ತದೆ.ನನ್ನ ಶಾಸಕತ್ವದ ಅವಧಿಯಲ್ಲಿ 18 ಸಾವಿರ ಮನೆಗಳನ್ನು ಕೊಟ್ಟಿದ್ದೇವೆ.ಇನ್ನೂ ಮನೆಗಳು ಬೇಕು ಎಂಬ ಬೇಡಿಕೆ ಇದೆ.ಮತಕ್ಷೇತ್ರದಲ್ಲಿ ಪಿಎಂಜಿಎಸ್‌ವೈ ಅಡಿ 31 ಕಿ.ಮೀ ರಸ್ತೆ ಮಾಡುತ್ತಿದೆ. 15 ಕೋಟಿ ಗ್ರಾಮೀಣ ರಸ್ತೆ, 20 ಕೋಟಿ ರೂ.ಪಿಡಿಬ್ಲ್ಯುಡಿ, ಒಂದು ಕೋಟಿ ರೂ.ಶಾಲಾ ದುರಸ್ತಿಗೆ ನೀಡಲಾಗಿದೆ.ಸಮುದಾಯ ಭವನಗಳಿಗೆ 4.50 ಕೋಟಿ ನೀಡಿದ್ದೇನೆ.ಶಾಸಕರ ವಿವೇಚನಾ ಕೋಟಾದಲ್ಲಿ 50 ಕೋಟಿ ರೂ.ನೀಡಿದ್ದು ಕೆಲಸಗಳು ಆರಂಭವಾಗುತ್ತವೆ ಎಂದರು.
ನಾವು ಧ್ಚಜ ಕಟ್ಟಿ,ಬಣ್ಣ ಹಚ್ಚಿಕೊಂಡು ಅಡ್ಡಾಡಿ ಎನ್ನುವುದಿಲ್ಲ.ನಾವು ಬದುಕು ಕಟ್ಟಿಕೊಳ್ಳಿ ಎಂದು ಯೋಜನೆಗಳನ್ನು ರೂಪಿಸಿದ್ದೇವೆ.ಪ್ರಿಯಾಂಕ್ ಖರ್ಗೆ, ಶರಣಪ್ರಕಾಶ ಪಾಟೀಲ ನೇತೃತ್ವದಲ್ಲಿ ಕೌಶಲ್ಯ ಅಭಿವೃದ್ಧಿ ಯೋಜನೆಗಳನ್ನು ರೂಪಿಸುತ್ತಿದ್ದಾರೆ ಎಂದರು.
ಶಕ್ತಿ,ಗೃಹಲಕ್ಷ್ಮೀ ಯೋಜನೆಯಿಂದ ಹೆಣ್ಣು ಮಕ್ಕಳಿಗೆ ಸ್ವಾಭಿಮಾನ,ಧೈರ್ಯ ಬಂದಿದೆ ಎಂದರು.ಗ್ರಾಮದ ಮುಖಂಡರಾದ ಮಲ್ಲನಗೌಡ ಕಾಮರೆಡ್ಡಿ, ಬಸನಗೌಡ ಮೇಟಿ,ಬಸನಗೌಡ ಬಸರಕೋಡ
ಸಂಗನಗೌಡ ಬಿರಾದಾರ,ಬಸಯ್ಯ ಹಿರೇಮಠ,ಶಾಂತಕುಮಾರ ಚಟ್ಟೇರ, ಅಯ್ಯನಗೌಡ ನಾಡಗೌಡ,ಬಾವೂರ ಗ್ರಾಪಂ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಪಿಎಂಜಿಎಸ್‌ವೈ ಎಇಇ ಜ್ಞಾನೇಶ ಮುರಾಳ,ಶೇಖರಯ್ಯ ಹಿರೇಮಠ,ಪಿ.ಎಂ.ಜಿ.ಎಸ್.ವೈ ಎಇ ಪ್ರವೀಣ ರಾಠೋಡ ಇದ್ದರು.ಮುದ್ದೇಬಿಹಾಳ : ಹಿಂದಿನ ಸರಕಾರದ ಅವಧಿಯಲ್ಲಿ ಈ ರಸ್ತೆ ಕಾಮಗಾರಿಗೆ ಮಂಜೂರಾತಿ ಸಿಕ್ಕಿತ್ತು.ಆದರೆ ಆಗ ಚುನಾವಣಾ ಆರಂಭವಾಗಿತ್ತು.ಚುನಾವಣಾ ಸಮಯದಲ್ಲಿ ಸರಕಾರ ಅನುಮತಿ ಕೊಟ್ಟಿದ್ದನ್ನು ಹಣಕಾಸಿನ ಲಭ್ಯತೆ ಇಲ್ಲದೇ ಕೆಲಸ ತಗೆದುಕೊಂಡಿದ್ದಾರೆ ಎಂದು ಸ್ಥಗಿತಗೊಳಿಸಲು ಸಿದ್ಧರಾಮಯ್ಯನವರ ಸರಕಾರ ಬಂದಾಗ ಸೂಚಿಸಿತ್ತು.ಆದರೆ ನಾನು ಪಕ್ಷದ ವರಿಷ್ಠರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಮುಖ್ಯಮಂತ್ರಿ ಬಳಿ ಅನುಮತಿ ನೀಡಲು ಒತ್ತಾಯಪಡಿಸಿ ಕೆಲಸ ಮಾಡಿಸಿಕೊಂಡು ಬಂದಿದ್ದೇನೆ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.
ಮತಕ್ಷೇತ್ರದ ವನಹಳ್ಳಿ ಗ್ರಾಮದಲ್ಲಿ ಸನ್ 2022-23ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಯೋಜನೆಯಡಿ ವನಹಳ್ಳಿ-ಬಳಗಾನೂರ ಕಾಲುವೆ ರಸ್ತೆಯ ಸುಧಾರಣೆ ಕಾಮಗಾರಿಗೆ ಚಾಲನೆ ನಿಡಿ ಅವರು ಮಾತನಾಡಿದರು.
ಇದರಲ್ಲಿ ರಾಜಕೀಯ ದುರುದ್ದೇಶ ಮಾಡಿಲ್ಲ.ಹಿಂದಿನ ಶಾಸಕರು ಮಾಡಿರುವ ಯೋಜನೆಗಳನ್ನು ತಡೆಯುವ ಕೆಲಸ ಮಾಡುವುದಿಲ್ಲ.ಆಡಳಿತಾತ್ಮಕ ಮಂಜೂರಾತಿ 2024 ರಲ್ಲಿ ಕೊಡಿಸಿದ್ದೇವೆ.ಕೆಲಸ ಆರಂಭಿಸಬೇಕಿತ್ತು . ಆದರೆ ಗುತ್ತಿಗೆದಾರರು ಏಕೆ ಮಾಡಲಿಲ್ಲ ಎಂಬುದು ಗೊತ್ತಿಲ್ಲ.ಇಲಾಖೆ ಹಾಗೂ ಗುತ್ತಿಗೆದಾರರ ಮಧ್ಯೆ ಪ್ರವೇಶ ಮಾಡುವುದಿಲ್ಲ.ಇದರಲ್ಲಿ ರಾಜಕಾರಣ ಮಾಡಬೇಕಾಗಿಲ್ಲ.3.41 ಕೋಟಿ ರೂ. ವೆಚ್ಚದಲ್ಲಿ ಕೆಲಸ ಮಾಡಬೇಕಾಗುತ್ತದೆ.ಅಂದಾಜು 4 ಕಿಮೀ ರಸ್ತೆ ಮಾಡಬೇಕಾಗಿದೆ.ರಸ್ತೆ ಆದರೆ ರೈತರಿಗೆ ಅನುಕೂಲವಾಗಲಿದ್ದು ರೈತರು ಅಡಚಣೆ ಮಾಡಬಾರದು.ಎಲ್ಲೆಲ್ಲಿ ರಸ್ತೆಗಳಾಗಿದೆಯೋ ಅಲ್ಲಲ್ಲಿ ಜಮೀನುಗಳ ಬೆಲೆ ಹೆಚ್ಚಳವಾಗುತ್ತದೆ ಎಂದರು.
ಸಿದ್ಧರಾಮಯ್ಯನವರ ಸರ್ಕಾರದಿಂದ ಬರುವ ತಿಂಗಳಲ್ಲಿ ಐದು ಕೆಜಿ ಅಕ್ಕಿ ನೀಡುತ್ತಿದ್ದು ಉಳಿದಿದ್ದು ಕಿಟ್ ರೂಪದಲ್ಲಿ ಹಂಚಿಕೆ ಮಾಡಲಾಗುತ್ತದೆ.ನನ್ನ ಶಾಸಕತ್ವದ ಅವಧಿಯಲ್ಲಿ 18 ಸಾವಿರ ಮನೆಗಳನ್ನು ಕೊಟ್ಟಿದ್ದೇವೆ.ಇನ್ನೂ ಮನೆಗಳು ಬೇಕು ಎಂಬ ಬೇಡಿಕೆ ಇದೆ.ಮತಕ್ಷೇತ್ರದಲ್ಲಿ ಪಿಎಂಜಿಎಸ್‌ವೈ ಅಡಿ 31 ಕಿ.ಮೀ ರಸ್ತೆ ಮಾಡುತ್ತಿದೆ. 15 ಕೋಟಿ ಗ್ರಾಮೀಣ ರಸ್ತೆ, 20 ಕೋಟಿ ರೂ.ಪಿಡಿಬ್ಲ್ಯುಡಿ, ಒಂದು ಕೋಟಿ ರೂ.ಶಾಲಾ ದುರಸ್ತಿಗೆ ನೀಡಲಾಗಿದೆ.ಸಮುದಾಯ ಭವನಗಳಿಗೆ 4.50 ಕೋಟಿ ನೀಡಿದ್ದೇನೆ.ಶಾಸಕರ ವಿವೇಚನಾ ಕೋಟಾದಲ್ಲಿ 50 ಕೋಟಿ ರೂ.ನೀಡಿದ್ದು ಕೆಲಸಗಳು ಆರಂಭವಾಗುತ್ತವೆ ಎಂದರು.
ನಾವು ಧ್ಚಜ ಕಟ್ಟಿ,ಬಣ್ಣ ಹಚ್ಚಿಕೊಂಡು ಅಡ್ಡಾಡಿ ಎನ್ನುವುದಿಲ್ಲ.ನಾವು ಬದುಕು ಕಟ್ಟಿಕೊಳ್ಳಿ ಎಂದು ಯೋಜನೆಗಳನ್ನು ರೂಪಿಸಿದ್ದೇವೆ.ಪ್ರಿಯಾಂಕ್ ಖರ್ಗೆ, ಶರಣಪ್ರಕಾಶ ಪಾಟೀಲ ನೇತೃತ್ವದಲ್ಲಿ ಕೌಶಲ್ಯ ಅಭಿವೃದ್ಧಿ ಯೋಜನೆಗಳನ್ನು ರೂಪಿಸುತ್ತಿದ್ದಾರೆ ಎಂದರು.
ಶಕ್ತಿ,ಗೃಹಲಕ್ಷ್ಮೀ ಯೋಜನೆಯಿಂದ ಹೆಣ್ಣು ಮಕ್ಕಳಿಗೆ ಸ್ವಾಭಿಮಾನ,ಧೈರ್ಯ ಬಂದಿದೆ ಎಂದರು.ಗ್ರಾಮದ ಮುಖಂಡರಾದ ಮಲ್ಲನಗೌಡ ಕಾಮರೆಡ್ಡಿ, ಬಸನಗೌಡ ಮೇಟಿ,ಬಸನಗೌಡ ಬಸರಕೋಡ
ಸಂಗನಗೌಡ ಬಿರಾದಾರ,ಬಸಯ್ಯ ಹಿರೇಮಠ,ಶಾಂತಕುಮಾರ ಚಟ್ಟೇರ, ಅಯ್ಯನಗೌಡ ನಾಡಗೌಡ,ಬಾವೂರ ಗ್ರಾಪಂ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಪಿಎಂಜಿಎಸ್‌ವೈ ಎಇಇ ಜ್ಞಾನೇಶ ಮುರಾಳ,ಶೇಖರಯ್ಯ ಹಿರೇಮಠ,ಪಿ.ಎಂ.ಜಿ.ಎಸ್.ವೈ ಎಇ ಪ್ರವೀಣ ರಾಠೋಡ ಇದ್ದರು.