ಬಸವೇಶ್ವರ ಪತ್ತಿನ ಸಹಕಾರಿ ಸಂಘದ ಶಾಖೆ ಉದ್ಘಾಟನೆ: ಶ್ರಮಿಕ ಜನರ ಆರ್ಥಿಕ ಮಟ್ಟದ ಸುಧಾರಣೆಗೆ ಶ್ರಮಿಸಿ-ನಾಡಗೌಡ

ಬಸವೇಶ್ವರ ಪತ್ತಿನ ಸಹಕಾರಿ ಸಂಘದ ಶಾಖೆ ಉದ್ಘಾಟನೆ: ಶ್ರಮಿಕ ಜನರ ಆರ್ಥಿಕ ಮಟ್ಟದ ಸುಧಾರಣೆಗೆ ಶ್ರಮಿಸಿ-ನಾಡಗೌಡ

ಮುದ್ದೇಬಿಹಾಳ : ಗ್ರಾಮೀಣ ಭಾಗದ ಶ್ರಮಿಕರು, ವ್ಯಾಪಾರಸ್ಥರಿಗೆ ಆರ್ಥಿಕವಾಗಿ ಆಸರೆಯಾಗುವ ಕಾರ್ಯ ಮಾಡುವ ಮೂಲಕ ಅವರ ಆರ್ಥಿಕ ಮಟ್ಟದ ವೃದ್ಧಿಗೆ ಸಹಕಾರ ಸಂಸ್ಥೆಗಳು ಶ್ರಮಿಸಬೇಕು ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.

ಪಟ್ಟಣದ ತಂಗಡಗಿ ರಸ್ತೆಯಲ್ಲಿ ಸೋಮವಾರ ಕಮತಗಿಯ ಶ್ರೀ ಬಸವೇಶ್ವರ ಪತ್ತಿನ ಸಹಕಾರಿ ಸಂಘದ ಮುದ್ದೇಬಿಹಾಳ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುದ್ದೇಬಿಹಾಳ ತಾಲ್ಲೂಕು ಆರ್ಥಿಕವಾಗಿ ಸುಧಾರಣೆಯಾಗುತ್ತಿರುವುದಕ್ಕೆ ಇಂದು ಹತ್ತಾರು ಸಹಕಾರಿ ಶಾಖೆಗಳು ಇಲ್ಲಿ ಆರಂಭಗೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆ ತೋರಿಸುತ್ತದೆ.ಸಮಾನ ಮನಸ್ಕರ ಗೆಳೆಯರ ಬಳಗದವರನ್ನು ಕರೆತಂದು ಶಾಖೆ ಆರಂಭಿಸಿರುವುದನ್ನು ಅಭಿನಂದಿಸುವುದಾಗಿ ತಿಳಿಸಿದರು.

ಕಮತಗಿ ಶ್ರೀ ಬಸವೇಶ್ವರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಸವರಾಜ ನರಗುಂದ ಮಾತನಾಡಿ, ನಮ್ಮ ಸಂಘದ ಆರನೇ ಶಾಖೆ ಮುದ್ದೇಬಿಹಾಳದಲ್ಲಿ ಆರಂಭಿಸಿದ್ದೇವೆ.ಏಳನೇ ಶಾಖೆ ನಿಡಗುಂದಿಯಲ್ಲಿ ಆರಂಭಿಸಲಿದ್ದೇವೆ.ನಮ್ಮ ಸಂಘದಿoದ ಕೋರ್ ಬ್ಯಾಂಕಿAಗ್ ವ್ಯವಸ್ಥೆ ಜಾರಿಯಲ್ಲಿದೆ.40 ಕೋಟಿಗೂ ಅಧಿಕ ಬಂಡವಾಳ ನಮ್ಮ ಸಂಘದಲ್ಲಿದೆ ಎಂದು ತಿಳಿಸಿದರು.

ದಿವ್ಯ ಸಾನಿಧ್ಯ ವಹಿಸಿದ್ದ ಕುಂಟೋಜಿ ಭಾವೈಕ್ಯತಾ ಮಠದ ಚೆನ್ನವೀರ ಶಿವಾಚಾರ್ಯರು,ಸಂಘದ ಉಪಾಧ್ಯಕ್ಷ ಸಂಗಮೇಶ ಗಡೇದ,ಕೆಯುಸಿ ಬ್ಯಾಂಕ್ ನಿರ್ದೇಶಕ ಸತೀಶ ಓಸ್ವಾಲ್, ಕಸಾಪ ಮಾಜಿ ಅಧ್ಯಕ್ಷ ಎಂ.ಬಿ.ನಾವದಗಿ,ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅಬ್ದುಲಗಫೂರ ಮಕಾನದಾರ,ಮುದ್ದೇಬಿಹಾಳ ಶಾಖೆಯ ಸಲಹಾ ಸಮೀತಿ ಅಧ್ಯಕ್ಷ ರವಿ ತಡಸದ, ಉಪಾಧ್ಯಕ್ಷ ಬಸವರಾಜ ಮುರಾಳ, ಸದಸ್ಯರಾದ ಅಂಜನಾ ಬಿರಾದಾರ, ಸದು ಮಠ, ಬೀರಪ್ಪ ಯರಝರಿ, ಎಂ.ಎಸ್.ಕತ್ತಿ, ರಾಜು ಪಾತ್ರೋಟ, ಗುರಣ್ಣ ಹತ್ತೂರ, ಹುಲಗೇಶ ಈಳಗೇರ, ಬಸವರಾಜ ಬೆಲ್ಲದ, ಬಸಪ್ಪ ಬಾಗೇವಾಡಿ, ಮಲ್ಲಿಕಾರ್ಜುನ ಬಿರಾದಾರ, ಮಲ್ಲಿಕಾರ್ಜುನ ತೋಟಗಿ, ಸದ್ದಾಂಹುಸೇನ ಕುಂಟೋಜಿ,ಬಸಲಿoಗಪ್ಪ ರಕ್ಕಸಗಿ, ಮಲ್ಲು ಅಪರಾಧಿ, ಸಂಪತ್ತ ಕೋರಿ, ಸಂಗಮ್ಮ ದೇವರಳ್ಳಿ,ಹಣಮಂತ್ರಾಯ ಸಿದ್ಧನಾಥ, ಕೊಟ್ರಯ್ಯ ಹಿರೇಮಠ,ಅಂಬರೀಶ ಬಂಟನೂರ ಮೊದಲಾದವರು ಇದ್ದರು.

Latest News

ಸಂಘಟನೆಗೆ ಆದ್ಯತೆ ನೀಡಿ-ಅಶೋಕ ಚಟ್ಟೇರ

ಸಂಘಟನೆಗೆ ಆದ್ಯತೆ ನೀಡಿ-ಅಶೋಕ ಚಟ್ಟೇರ

ಮುದ್ದೇಬಿಹಾಳ : ಬಣಜಿಗ ಸಮಾಜದ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಬೇಕು.ಸಮಾಜದಲ್ಲಿ ಬೆಳೆಯುತ್ತಿರುವ ಪ್ರೋತ್ಸಾಹ ನೀಡುವ

ಮುದ್ದೇಬಿಹಾಳ : ಬೈಕ್ ಡಿಕ್ಕಿ: ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

ಮುದ್ದೇಬಿಹಾಳ : ಬೈಕ್ ಡಿಕ್ಕಿ: ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

ಮುದ್ದೇಬಿಹಾಳ : ರಸ್ತೆ ಕ್ರಾಸ್ ಮಾಡುತ್ತಿದ್ದ ವೇಳೆ ಬೈಕೊಂದು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ

ಫೆ.14 ರಂದು ನೂತನ ಸ್ಕೂಲ್‌ ಕಟ್ಟಡದ ಉದ್ಘಾಟನೆ:                    ಬಿಎಎಸ್ ಇಂಟರ್‌ನ್ಯಾಶನಲ್ ಸ್ಕೂಲ್‌ಗೆ ಪ್ರಥಮ ವಾರ್ಷಿಕೋತ್ಸವದ ಸಂಭ್ರಮ

ಫೆ.14 ರಂದು ನೂತನ ಸ್ಕೂಲ್‌ ಕಟ್ಟಡದ ಉದ್ಘಾಟನೆ: ಬಿಎಎಸ್ ಇಂಟರ್‌ನ್ಯಾಶನಲ್ ಸ್ಕೂಲ್‌ಗೆ ಪ್ರಥಮ ವಾರ್ಷಿಕೋತ್ಸವದ ಸಂಭ್ರಮ

ಮುದ್ದೇಬಿಹಾಳ : ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಬಿಎಎಸ್ ಇಂಟರ್‌ನ್ಯಾಶನಲ್ ಶಾಲೆಯ ಪ್ರಥಮ ವಾರ್ಷಿಕೋತ್ಸವ ಹಾಗೂ

ಮುದ್ದೇಬಿಹಾಳ : ಬೈಕ್‌ಗೆ ಕಾರು ಡಿಕ್ಕಿ ; ಹಿಂಬದಿ ಸವಾರ ಸಾವು

ಮುದ್ದೇಬಿಹಾಳ : ಬೈಕ್‌ಗೆ ಕಾರು ಡಿಕ್ಕಿ ; ಹಿಂಬದಿ ಸವಾರ ಸಾವು

ಮುದ್ದೇಬಿಹಾಳ : ಬೈಕ್‌ವೊಂದಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಹಿಂಬದಿ ಸವಾರ ಸಾವನ್ನಪ್ಪಿರುವ

ಈ ಬಸ್ ಬೆಲೆಯೇ 39 ಲಕ್ಷ ರೂ.!!                            ಮುದ್ದೇಬಿಹಾಳ : ನಗರ ಸಾರಿಗೆ ಬಸ್‌ನಲ್ಲಿ ಏನೆಲ್ಲ ಸೌಲಭ್ಯವಿದೆ..?

ಈ ಬಸ್ ಬೆಲೆಯೇ 39 ಲಕ್ಷ ರೂ.!! ಮುದ್ದೇಬಿಹಾಳ : ನಗರ ಸಾರಿಗೆ ಬಸ್‌ನಲ್ಲಿ ಏನೆಲ್ಲ ಸೌಲಭ್ಯವಿದೆ..?

ಮುದ್ದೇಬಿಹಾಳ : ಹೈಟೆಕ್ ಸೌಲಭ್ಯವುಳ್ಳ ನಗರ ಸಾರಿಗೆ ಎರಡು ಬಸ್‌ಗಳಿಗೆ ಭಾನುವಾರ ಶಾಸಕ ಸಿ.ಎಸ್.ನಾಡಗೌಡ ಅವರು ಚಾಲನೆ ನೀಡಿದ್ದು ನಗರ ಸಾರಿಗೆಯ ಬಸ್ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಪ್ರಯಾಣಿಕರ ಸ್ನೇಹಿಯಾಗಿರು ಈ ಹೈಟೆಕ್ ಬಸ್‌ನಲ್ಲಿ ನಾಲ್ಕು ಕಡೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು ಸುರಕ್ಷತೆಗೆ ಆದ್ಯತೆ ನೀಡಲಾಗಿದೆ.ನಿಲುಗಡೆ ಸಮಯದಲ್ಲಿ ಪ್ರಯಾಣಿಕರು ಹತ್ತಿದ ಬಳಿಕ ಬಾಗಿಲು ಸ್ವಯಂಚಾಲಿತವಾಗಿ ಮುಚ್ಚಿದ ನಂತರವೇ ಬಸ್ ಮುಂದೆ ಸಾಗಲಿದೆ.ಅಲ್ಲದೇ ಆಯಾ ನಿಲ್ದಾಣಗಳ ಹೆಸರುಗಳನ್ನು ಮರ್ಕ್ಯೂರಿ ಲೈಟಿಂಗ್ ವ್ಯವಸ್ಥೆ

ಮುದ್ದೇಬಿಹಾಳ : ಫೆ.19 ರಂದು ಅದ್ದೂರಿ ಶಿವಾಜಿ ಜಯಂತಿ ಆಚರಣೆಗೆ ನಿರ್ಧಾರ

ಮುದ್ದೇಬಿಹಾಳ : ಫೆ.19 ರಂದು ಅದ್ದೂರಿ ಶಿವಾಜಿ ಜಯಂತಿ ಆಚರಣೆಗೆ ನಿರ್ಧಾರ

ಮುದ್ದೇಬಿಹಾಳ : ಸ್ಥಳೀಯ ಕ್ಷತ್ರೀಯ ಮರಾಠಾ ಸಮಾಜದ ವತಿಯಿಂದ ಫೆ. 19 ರಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಆಚರಣೆ ಕುರಿತು ಸಮಾಜದ ಶ್ರೀ ಅಂಬಾಭವಾನಿ ಮಂದಿರದ ಆವರಣದಲ್ಲಿ ಶುಕ್ರವಾರರಂದು ಜರುಗಿದ ಪೂರ್ವಭಾವಿ ಸಭೆಯಲ್ಲಿ ಕೆಳಗೆ ನೀಡಿದಂತ ವಿವರಣೆಯಂತೆ ನಿರ್ಧರಿಸಲಾಯಿತು. ಅಂದು ಬೆಳಗಿನ ಜಾವ ಶ್ರೀ ಅಂಬಾಭವಾನಿ ಮೂರ್ತಿಗೆ ಮಹಾಭಿಷೇಕ, ಪುಷ್ಪಾರ್ಚನೆ, ಮಹಾಮಂಗಳಾರತಿ ಕಾರ್ಯಕ್ರಮ ಜರುಗುವದಲ್ಲದೇ ನಂತರ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರ ಮೆರವಣಿಗೆ ಕುರಿತು ಬಜಾರ್ ಶ್ರೀ ಹನುಮಾನ್