ಮುಧೋಳ: ”ವಿಶ್ವ ಯೋಗ ದಿನ ಆಚವರಣೆಗೆ ಮಾತ್ರ ಸೀಮಿತವಾಗದೇ ನಿತ್ಯದ ದಿನಚರಿ ಯಾಗಬೇಕು ಪ್ರತಿದಿನವೂ ಯೋಗ ಮಾಡಿ ನಿರೋಗಿಯಾಗಬೇಕು” ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.
ತಾಲೂಕಿನ ನಾಗರಾಳ ಸರಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಶಾಲಾ ಕಾಲೇಜ್‌ಗಳ ಒಕ್ಕೂಟದ ಸಹಯೋಗದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ದುಶ್ಚಟದಿಂದ ದೂರವಿದ್ದು, ಆರೋಗ್ಯ ಹಾಳಾಗದಂತೆ ಕಾಪಾಡಿಕೊಳ್ಳಬೇಕು. ನಾನು ಕೂಡ ನಿತ್ಯವೂ ಯೋಗ ಮಾಡುತ್ತೇನೆ. ಶಾಲಾ ಕಾಲೇಜ್‌ಗಳಲ್ಲಿ ಮಕ್ಕಳಿಗೆ ಯೋಗದ ಮಹತ್ವ ತಿಳಿಸಬೇಕು” ಎಂದು ಹೇಳಿದರು.
ಪದ್ಮಶ್ರೀ ಪುರಸ್ಕೃತೆ ಡಾ.ವಿಜಯಲಕ್ಷ್ಮಿ ದೇಶಮಾನೆ ಮಾತನಾಡಿ ನಿತ್ಯ ಯೋಗ ಮಾಡಿ ಯೋಗ ಮನಸ್ಸನ್ನು ಶಾಂತಗೊಳಿಸುತ್ತದೆ. ಬದುಕಿಗೆ ಆಸರೆಯಾಗುತ್ತದೆ” ಎಂದು ಹೇಳಿದರು.
ಕೊಂಚೂರದ ಸವಿತಾನಂದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಪಾರ್ವತಿ ತೇಲಿ ಮಾಧವಾನಂದ ಶಿಕ್ಷಣ ಸಂಸ್ಥೆಯ ಚೇರಮನ್ ಆರ್.ಟಿ.ಪಾಟೀಲ, ಡಾ.ಶಿವಾನಂದ ಕುಬಸದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಅಪರ ಜಿಲ್ಲಾಧಿಕಾರಿಣ ಅಶೋಕ ತೇಲಿ, ಜಿಪಂ ಉಪಕಾರ್ಯದರ್ಶಿ ಎನ್.ವೈ-ಬಸರಿಗಿಡದ, ಉಪವಿಭಾಗಾಧಿಕಾರಿ ಶ್ವೇತಾ ಬೀಡಕರ್, ಹೆಚ್ಚುವರಿ ಎಸ್ಪಿ ಪ್ರಸನ್ನ ದೇಶಾಯಿ, ಡಿವೈಎಸ್ಪಿ ಸೈಯದ್ ರೋಷನ್, ತಹಸೀಲ್ದಾರ್ ಮಹಾದೇವ ಸನಮುರಿ, ಜಮಖಂಡಿ ತಹಸೀಲ್ದಾರ್ ಸದಾಶಿವ ಮಕ್ಕೋಜಿ, ಹೊಳೆಬಸು ದಂಡಿನ, ತಾಪಂ ಇಒ ಉಮೇಶ ಸಿದ್ದಾಳ, ಬಿಇಒ ಸಮೀರ. ಮುಲ್ಲಾ, ನಾರಾಯಣಗೌಡ ಉತ್ತಂಗಿ, ಸಿಪಿಐ ಮಹಾದೇವ ಶಿರಹಟ್ಟಿ, ಶ್ರೀಶೈಲ್ ಹುನ್ನೂರ ಇತರರು ಪಾಲ್ಗೊಂಡಿದ್ದರು.