‘ರಾಷ್ಟ್ರದ್ವಜ ಹಿಡಿದು ಶತ್ರು ಸಂಹಾರ ಮಾಡ್ತೀನಿ,ಇಲ್ಲಂದ್ರೆ ಮೈಮೇಲೆ ಅದೇ ಧ್ವಜ ಹೊತ್ತು ಬರ‍್ತೀನಿ’

‘ರಾಷ್ಟ್ರದ್ವಜ ಹಿಡಿದು ಶತ್ರು ಸಂಹಾರ ಮಾಡ್ತೀನಿ,ಇಲ್ಲಂದ್ರೆ ಮೈಮೇಲೆ ಅದೇ ಧ್ವಜ ಹೊತ್ತು ಬರ‍್ತೀನಿ’

ಮುದ್ದೇಬಿಹಾಳ : ನಾನು ಸೈನ್ಯಕ್ಕೆ ಸೇರುತ್ತಿದ್ದಂತೆ ನನ್ನ ತಾಯಿ ‘ನೀ ಹೆಣ್ಣು ಮಗಳಾಗಿ ಗಡಿ ಕಾಯೂದ ಹೆಂಗ ಮಾಡ್ತಿ ?’ ಅಂದಾಗ ನಾನು “ಅವ್ವಾ ನೀ ತಲಿಕೆಡಿಸ್ಕೋ ಬ್ಯಾಡ ಬೇ, ನಾ ಅಲ್ಲಿ ಹೋಗಿ ನಮ್ಮ ದೇಶಕ್ಕೆ ಕಂಟಕರಾದವ್ರನ್ನ ಸಂಹಾರ ಮಾಡ್ತೀನಿ ಇಲ್ಲ ಇಲ್ಲಾಂದ್ರ ಅದೇ ಧ್ವಜ ಮೈಮ್ಯಾಲೆ ಹೊತ್ಕೊಂಡು ಬರ್ತಿನಿ” ಎಂದು ಬಿ.ಎಸ್.ಎಫ್‌ಗೆ ಆಯ್ಕೆಯಾಗಿರುವ ತಾಲ್ಲೂಕಿನ ಕಾಶೀಬಾಯಿ ಚಲವಾದಿ ಹೇಳಿದರು.

ಪಟ್ಟಣದ ಕಾರ್ಗಿಲ್ ವೀರಯೋಧರ ಸ್ಮಾರಕ ಸಮಿತಿಯಿಂದ ಈಚೇಗೆ ಹಮ್ಮಿಕೊಂಡಿದ್ದ ಸನ್ಮಾನಕ್ಕೆÀ ಉತ್ತರವಾಗಿ ಅವರು ಮಾತನಾಡಿದರು.

ಭಾರತೀಯ ಸೈನ್ಯದಲ್ಲಿ ಯುವತಿಯರಿಗೂ ಅವಕಾಶ ಸಿಗುತ್ತಿರುವುದು ನಿಜವಾಗಿಯೂ ಹೆಮ್ಮೆಯ ವಿಷಯ.ನಾನು ಹಿಂದುಳಿದ ದಲಿತ ಕುಟುಂಬದಲ್ಲಿ ಜನಿಸಿ ಒಂದನೇ ತರಗತಿಯಿಂದ ಪದವಿ ಶಿಕ್ಷಣದವರೆಗೆ ಸರಕಾರಿ ಶಾಲೆಗಳಲ್ಲಿಯೇ ಶಿಕ್ಷಣ ಕಲಿತಿರುವೆ. ನಾನು ದೇಶ ಸೇವೆಯನ್ನು ಆಯ್ದುಕೊಂಡಿದ್ದೇನೆ. ನನಗೆ ದೇಶದ ಗಡಿಕಾಯುವ ಸೌಭಾಗ್ಯ ಸಿಕ್ಕಿದ್ದಕ್ಕೆ ಇಡೀ ತಾಲೂಕು ಹೆಮ್ಮೆ ಪಟ್ಟಿರುವುದು ನನಗೆ ಶಕ್ತಿ ತುಂಬಿದೆ ಎಂದರು.

ವೇ. ಮಹಾದೇವಯ್ಯ ಶಾಸ್ತ್ರೀಗಳು ಮಾತನಾಡಿ, ಸೈನಿಕರು ತಮ್ಮ ವಯಕ್ತಿಕ ಬದುಕನ್ನು ಬಿಟ್ಟು ದೇಶದೊಳಗಿನ ನಾವೆಲರೂ ನೆಮ್ಮದಿಯಿಂದ ಜೀವನ ನಡೆಸಲು ಗಡಿ ಕಾಯ್ದು ಹೊರಗಿನ ಶತ್ರುಗಳಿಂದ ನಮ್ಮನ್ನು ರಕ್ಷಣೆ ಮಾಡುತ್ತಾರೆ.ಹಾಗೆ ದೇಶದೊಳಗಿನ ಶತ್ರುಗಳ ಬಗ್ಗೆ ನಾವೆಲ್ಲರೂ ನಿಗಾ ಇಡಬೇಕು. ಹಾಗೆ ಸೈನಿಕರ ಕುಟುಂಬದವರನ್ನು ಅತಿ ಹೆಚ್ಚು ಗೌರವದಿಂದ ಕಾಣಬೇಕು ಎಂದರು.

ಮುಖಂಡ ಪುನೀತ ಹಿಪ್ಪರಗಿ,ಹೋರಾಟಗಾರ ಬಸವರಾಜ ನಂದಿಕೇಶ್ವರಮಠ, ಸಾಹಿತಿ ಶಿವಪುತ್ರ ಅಜಮನಿ, ಪತ್ರಕರ್ತ ಪರಶುರಾಮ ಕೊಣ್ಣೂರ, ಮಾಜಿ ಸೈನಿಕ ರೇವಣೆಪ್ಪ ಹರಿಜನ ಮಾತನಾಡಿದರು, ಸಮೀತಿಯ ಅಧ್ಯಕ್ಷ ಶ್ರೀಕಾಂತ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಸಮೀತಿಯ ಪದಾಧಿಕಾರಿಗಳಾದ ಮಹಾಂತೇಶ ಬೂದಿಹಾಳಮಠ, ಚಂದ್ರು ಕಲಾಲ, ಶೇಖರ ಢವಳಗಿ, ರಾಜು ಬಳ್ಳೊಳ್ಳಿ, ಕಾಶಿನಾಥ ಹುಗ್ಗಿ, ಸಂತೋಷ ಬಾದರಬಂಡಿ, ವರ್ತಕರಾದ ಮಾಣಿಕಚಂದ ದಂಡಾವತಿ, ಹುಲ್ಲೂರ ಗ್ರಾಮದ ಭೀಮನಗೌಡ ಬಿರಾದಾರ, ನಬೀಸಾಬ ಕಂಬಾರ, ತಾಲೂಕಾ ಪಿಂಜಾರ ಸಮಾಜದ ಅಧ್ಯಕ್ಷ ಎಂ.ಡಿ.ನದಾಫ್ ಅಮರಗೋಳ, ಮುತ್ತು ಚಲವಾದಿ,ರಾಜು ಮ್ಯಾಗೇರಿ ಹಾಗೂ ಕಾಶಿಬಾಯಿ ಚಲವಾದಿ ಅವರ ಕುಟುಂಬದ ಸದಸ್ಯರು ಇದ್ದರು.

Latest News

ಪತ್ನಿ ಕೊಲೆಗೈದಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ, 1.50 ಲಕ್ಷ ರೂ.ದಂಡ

ಪತ್ನಿ ಕೊಲೆಗೈದಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ, 1.50 ಲಕ್ಷ ರೂ.ದಂಡ

ಮುದ್ದೇಬಿಹಾಳ : ಪತ್ನಿ ತವರು ಮನೆಯಲ್ಲಿದ್ದಿರುವುದನ್ನು ಸಹಿಸದೇ ಆಕೆಗೆ ಮೇಲೆ ಹೊಲಿಗೆ ಮಷಿನ್ ಎತ್ತಿ

ಮಾಜಿ ಶಾಸಕ ನಡಹಳ್ಳಿಗೆ ಶಾಸಕ ನಾಡಗೌಡ ಬುದ್ಧಿಮಾತು: ಕ್ಷೇತ್ರದ ಜನಕ್ಕೆ ಬುದ್ದಿ ಇಲ್ಲ ಎಂದವರಿಗೆ ಸ್ವಾಭಿಮಾನಿ ಮತದಾರರಿಂದ ತಕ್ಕಪಾಠ-ನಾಡಗೌಡ

ಮಾಜಿ ಶಾಸಕ ನಡಹಳ್ಳಿಗೆ ಶಾಸಕ ನಾಡಗೌಡ ಬುದ್ಧಿಮಾತು: ಕ್ಷೇತ್ರದ ಜನಕ್ಕೆ ಬುದ್ದಿ ಇಲ್ಲ ಎಂದವರಿಗೆ ಸ್ವಾಭಿಮಾನಿ ಮತದಾರರಿಂದ ತಕ್ಕಪಾಠ-ನಾಡಗೌಡ

ಮುದ್ದೇಬಿಹಾಳ : ಮತಕ್ಷೇತ್ರದಲ್ಲಿ 2.50 ಲಕ್ಷ ಜನರು ಪಂಚ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.ಪ್ರತಿ

ಬಸವೇಶ್ವರ ಪತ್ತಿನ ಸಹಕಾರಿ ಸಂಘದ ಶಾಖೆ ಉದ್ಘಾಟನೆ: ಶ್ರಮಿಕ ಜನರ ಆರ್ಥಿಕ ಮಟ್ಟದ ಸುಧಾರಣೆಗೆ ಶ್ರಮಿಸಿ-ನಾಡಗೌಡ

ಬಸವೇಶ್ವರ ಪತ್ತಿನ ಸಹಕಾರಿ ಸಂಘದ ಶಾಖೆ ಉದ್ಘಾಟನೆ: ಶ್ರಮಿಕ ಜನರ ಆರ್ಥಿಕ ಮಟ್ಟದ ಸುಧಾರಣೆಗೆ ಶ್ರಮಿಸಿ-ನಾಡಗೌಡ

ಮುದ್ದೇಬಿಹಾಳ : ಗ್ರಾಮೀಣ ಭಾಗದ ಶ್ರಮಿಕರು, ವ್ಯಾಪಾರಸ್ಥರಿಗೆ ಆರ್ಥಿಕವಾಗಿ ಆಸರೆಯಾಗುವ ಕಾರ್ಯ ಮಾಡುವ ಮೂಲಕ

ಸರದಿಯಲ್ಲಿ ನಿಂತು ಶಿವಲಿಂಗದ ದರ್ಶನ;                    ಎಲ್ಲೆಲ್ಲೂ ಅನುರಣಿಸಿದ ಶಿವನಾಮ

ಸರದಿಯಲ್ಲಿ ನಿಂತು ಶಿವಲಿಂಗದ ದರ್ಶನ; ಎಲ್ಲೆಲ್ಲೂ ಅನುರಣಿಸಿದ ಶಿವನಾಮ

ಮುದ್ದೇಬಿಹಾಳ : ಪಟ್ಟಣದಾದ್ಯಂತ ಶಿವರಾತ್ರಿ ಅಂಗವಾಗಿ ಭಕ್ತರು ಭಾನುವಾರ ಸಂಜೆ ಶಿವನ ದೇವಾಲಯಗಳಲ್ಲಿ ಸರದಿಯಲ್ಲಿ

ಫೆ.14 ರಂದು ನೂತನ ಸ್ಕೂಲ್‌ ಕಟ್ಟಡದ ಉದ್ಘಾಟನೆ:                    ಬಿಎಎಸ್ ಇಂಟರ್‌ನ್ಯಾಶನಲ್ ಸ್ಕೂಲ್‌ಗೆ ಪ್ರಥಮ ವಾರ್ಷಿಕೋತ್ಸವದ ಸಂಭ್ರಮ

ಫೆ.14 ರಂದು ನೂತನ ಸ್ಕೂಲ್‌ ಕಟ್ಟಡದ ಉದ್ಘಾಟನೆ: ಬಿಎಎಸ್ ಇಂಟರ್‌ನ್ಯಾಶನಲ್ ಸ್ಕೂಲ್‌ಗೆ ಪ್ರಥಮ ವಾರ್ಷಿಕೋತ್ಸವದ ಸಂಭ್ರಮ

ಮುದ್ದೇಬಿಹಾಳ : ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಬಿಎಎಸ್ ಇಂಟರ್‌ನ್ಯಾಶನಲ್ ಶಾಲೆಯ ಪ್ರಥಮ ವಾರ್ಷಿಕೋತ್ಸವ ಹಾಗೂ ಶಾಲೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಫೆ.14 ರಂದು ಮದ್ಯಾಹ್ನ 3.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಮಹಾಂತಗೌಡ ಬಿರಾದಾರ ತಿಳಿಸಿದರು. ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಬಿಎಎಸ್ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಆಳಂದ,ಜಾಲವಾದ,ನAದವಾಡಗಿ ಹಿರೇಮಠದ ಮಹಾಂತಲಿAಗ ಶಿವಾಚಾರ್ಯರು, ನಂದವಾಡಗಿ ಹಿರೇಮಠದ ಚನ್ನಬಸಯ ಶಿವಾಚಾರ್ಯರು ವಹಿಸುವರು.ಬಿದರಕುಂದಿ-ಕಪ್ಪತಗುಡ್ಡ ಶಿವಯೋಗಾಶ್ರಮದ

ಮುದ್ದೇಬಿಹಾಳ : ಬೈಕ್‌ಗೆ ಕಾರು ಡಿಕ್ಕಿ ; ಹಿಂಬದಿ ಸವಾರ ಸಾವು

ಮುದ್ದೇಬಿಹಾಳ : ಬೈಕ್‌ಗೆ ಕಾರು ಡಿಕ್ಕಿ ; ಹಿಂಬದಿ ಸವಾರ ಸಾವು

ಮುದ್ದೇಬಿಹಾಳ : ಬೈಕ್‌ವೊಂದಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಹಿಂಬದಿ ಸವಾರ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ತಂಗಡಗಿ ರಸ್ತೆಯ ಕೋಳೂರು ಕ್ರಾಸ್‌ನಲ್ಲಿ ಭಾನುವಾರ ನಡೆದಿದೆ. ಕೂಡಲಸಂಗಮ ಮೂಲದ ಶರಣಬಸಯ್ಯ ನಿಜಗುಣಯ್ಯ ಹಿರೇಮಠ(43) ಮೃತಪಟ್ಟಿರುವ ವ್ಯಕ್ತಿ. ಬೈಕ್ ಚಲಾಯಿಸುತ್ತಿದ್ದ ಸವಾರ ಅಮರೇಶ ಸಂಗಪ್ಪ ಗುಗ್ಗರಿಗೂ ಗಂಭೀರವಾದ ಗಾಯಳಾಗಿದ್ದು ಅವರಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ವಿಫ್ಟ್ ಡಿಜೈರ್ ಕಾರ ನಂಬರ್ ಕೆ.ಎ-37, ಎನ್-3584 ಚಾಲಕನು ಮುದ್ದೇಬಿಹಾಳ ಕಡೆಯಿಂದ ಹುನಗುಂದ ಕಡೆಗೆ ಅತೀ ವೇಗವಾಗಿ