ಅಂಗಡಿಯಾತನಿಗೆ ಗನ್ ತೋರಿಸಿ ಹಾಡಹಗಲೇ ಬಂಗಾರದ ಅಂಗಡಿ ದರೋಡೆ

ಅಂಗಡಿಯಾತನಿಗೆ ಗನ್ ತೋರಿಸಿ ಹಾಡಹಗಲೇ ಬಂಗಾರದ ಅಂಗಡಿ ದರೋಡೆ

ವಿಜಯಪುರ : ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದ ಭೂಮಿಕಾ ಜ್ಯುವೆಲ್ಲರಿ ಶಾಪ್‌ಗೆ ಇಬ್ಬರು ಅಪರಿಚಿತ ಮುಸುಕುಧಾರಿಗಳು ನುಗ್ಗಿ ಅಂಗಡಿ ಮಾಲೀಕನಿಗೆ ಗನ್ ತೋರಿಸಿ ಚಿನ್ನಾಭರಣ ದರೋಡೆ ನಡೆಸಿದ ಘಟನೆ ಹಾಡಹಗಲೇ ನಡೆದಿದ್ದು ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಹಲಸಂಗಿಯ ಮಹಾರುದ್ರ ಕಂಚಗಾರ ಎಂಬುವರಿಗೆ ಸೇರಿದ ಬಂಗಾರದ ಅಂಗಡಿ ಮೇಲೆ ಮುಸುಕುಧಾರಿ ವ್ಯಕ್ತಿಗಳು ಇಬ್ಬರೂ ಬೈಕ್ ಮೇಲೆ ಬಂದು ಅಂಗಡಿಯಲ್ಲಿದ್ದ ಬಂಗಾರ ಮತ್ತು ಬೆಳ್ಳಿಯ ಆಭರಣಗಳು ದೋಚಿ ಪರಾರಿಯಾಗಿದ್ದಾರೆ.

ಘಟನೆ ವಿವರ : ಅಂಗಡಿ ಪಕ್ಕದಲ್ಲಿ ಬೈಕ್ ನಿಲ್ಲಿಸಿ ಅಂಗಡಿಯ ಮಾಲೀಕನಾದ ಮಹಾರುದ್ರ ತಂದೆ ಸದಾಶಿವ ಕಂಚಗಾರ ಈತನಿಗೆ ಗನ್ ತೋರಿಸಿ ಆತನ ಬಂಗಾರದ ಅಂಗಡಿಯಲ್ಲಿ ಇದ್ದ ಸುಮಾರು 205 ಗ್ರಾಂ ಬಂಗಾರದ ಆಭರಣ ಮತ್ತು 1 ಕೆಜಿ ಬೆಳ್ಳಿಯನ್ನು ಕಳ್ಳತನ ಮಾಡಿದ್ದು, ಇವರು ಕಳ್ಳತನ ಮಾಡುವ ವೇಳೆಯಲ್ಲಿ ಪಕ್ಕದ ಮೊಬೈಲ್ ಅಂಗಡಿಯ ಅನಿಲ್ ಗಲಗಲಿ ಅವರ ಕೃತ್ಯವನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದನ್ನು ಗಮನಿಸಿದ ಕಳ್ಳರು ಆ ವ್ಯಕ್ತಿಯ ಕಡೆಗೆ ಅಪರಿಚಿತ ಕಳ್ಳನು ಗುಂಡು ಹಾರಿಸಿದ್ದಾನೆ.ಅದು ಆ ವ್ಯಕ್ತಿಯ ಪಕ್ಕದಲ್ಲೇ ಇದ್ದ ಆತ್ಮಲಿಂಗಪ್ಪ ಹೂಗಾರ ಎಂಬಾತನ ಕಾಲಿಗೆ ಗುಂಡು ತಗುಲಿದೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು ಆತನು ಪ್ರಾಣಾಪಾಯದಿಂದ ಪಾರಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ,ಹೆಚ್ಚುವರಿ ಎಸ್ಪಿ ರಾಮನಗೌಡ ಹಟ್ಟಿ, ಡಿವೈಎಸ್ಪಿ ಸದಾಶಿವ ಕಟ್ಟಿಮನಿ, ಸಿಪಿಐ ಪರಶುರಾಮ ಮನಗೂಳಿ, ಝಳಕಿ ಪೋಲಿಸ್ ಠಾಣೆಯ ಪಿಎಸೈ ಮಂಜುನಾಥ ತಿರಕನ್ನವರ, ಚಡಚಣ ಪಿಎಸ್‌ಐ ಸೋಮೇಶ್ ಗೆಜ್ಜಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Latest News

ಪತ್ರಕರ್ತ ಮುರಾಳಗೆ ರಾಜ್ಯಮಟ್ಟದ ಮಹಾಂತ ಶ್ರೀ ಪ್ರಶಸ್ತಿ

ಪತ್ರಕರ್ತ ಮುರಾಳಗೆ ರಾಜ್ಯಮಟ್ಟದ ಮಹಾಂತ ಶ್ರೀ ಪ್ರಶಸ್ತಿ

ಮುದ್ದೇಬಿಹಾಳ : ರಾಯಚೂರಿನ ಸಿದ್ದರಾಮ ಜಮ್ಮಲದಿನ್ನಿ ಕಲ್ಯಾಣ ಮಂಟಪದಲ್ಲಿ ನಡೆದ ಮಾತೋಶ್ರೀ ಮಹಾಂತಮ್ಮ ಶಿವಬಸ್ಸಪ್ಪ

ರಾಜ್ಯಮಟ್ಟದ ಚೆನ್ನಬಸವ ಶ್ರೀ ಪ್ರಶಸ್ತಿ ಪ್ರದಾನ :                   ಶಿಕ್ಷಣ ಸಂಸ್ಥೆ ಬೆಳೆಸುವುದು ಸಾಹಸದ ಕಾರ್ಯ-ಧಮ್ಮೂರಮಠ

ರಾಜ್ಯಮಟ್ಟದ ಚೆನ್ನಬಸವ ಶ್ರೀ ಪ್ರಶಸ್ತಿ ಪ್ರದಾನ : ಶಿಕ್ಷಣ ಸಂಸ್ಥೆ ಬೆಳೆಸುವುದು ಸಾಹಸದ ಕಾರ್ಯ-ಧಮ್ಮೂರಮಠ

ಮುದ್ದೇಬಿಹಾಳ : ನಗರ ಪ್ರದೇಶಗಳಲ್ಲಾದರೆ ಸಂಸ್ಥೆಗಳು ಕೇಳಿದಷ್ಟು ಶುಲ್ಕ ಕೊಡಲು ಪಾಲಕರು ಸಿದ್ಧರಿರುತ್ತಾರೆ.ಅಲ್ಲಿ ಶಿಕ್ಷಣ

ಬಾಗಲಕೋಟೆ, ದಾವಣಗೆರೆ ದಕ್ಷಿಣ ಉಪಕದನಕ್ಕೆ ಮಹೂರ್ತ ಫಿಕ್ಸ್..

ಬಾಗಲಕೋಟೆ, ದಾವಣಗೆರೆ ದಕ್ಷಿಣ ಉಪಕದನಕ್ಕೆ ಮಹೂರ್ತ ಫಿಕ್ಸ್..

ಬೆಂಗಳೂರು: ರಾಜ್ಯದಲ್ಲಿ ಇಬ್ಬರು ಶಾಸಕರ ನಿಧನದಿಂದ ತೆರವಾಗಿದ್ದ ಬಾಗಲಕೋಟೆ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ

ಟಗರಿನ ಕಾಳಗ ಪ್ರಮುಖ ಆಕರ್ಷಣೆ:                              ಮುದ್ದೇಬಿಹಾಳ : ಮಾ.18 ರಂದು ಪಿಲೇಕೆಮ್ಮ ದೇವಿ ಜಾತ್ರಾ ಮಹೋತ್ಸವ

ಟಗರಿನ ಕಾಳಗ ಪ್ರಮುಖ ಆಕರ್ಷಣೆ: ಮುದ್ದೇಬಿಹಾಳ : ಮಾ.18 ರಂದು ಪಿಲೇಕೆಮ್ಮ ದೇವಿ ಜಾತ್ರಾ ಮಹೋತ್ಸವ

ಮುದ್ದೇಬಿಹಾಳ : ಪಟ್ಟಣದ ಪಿಲೇಕೆಮ್ಮ ನಗರದಲ್ಲಿರುವ ಪಿಲೇಕೆಮ್ಮ ದೇವಿ ಜಾತ್ರಾಮಹೋತ್ಸವ ಮಾ.18 ಹಾಗೂ 19ರಂದು

ಪತ್ರಕರ್ತರಾದ ದಫೇದಾರ,ಉಕ್ಕಲಿ,ಹೋರಾಟಗಾರ ನಾಟೀಕಾರ ಸೇರಿ 30 ಜನ ಆಯ್ಕೆ

ಪತ್ರಕರ್ತರಾದ ದಫೇದಾರ,ಉಕ್ಕಲಿ,ಹೋರಾಟಗಾರ ನಾಟೀಕಾರ ಸೇರಿ 30 ಜನ ಆಯ್ಕೆ

ಮುದ್ದೇಬಿಹಾಳ : ತಾಲ್ಲೂಕಿನ ಹುಲ್ಲೂರು ಗ್ರಾಮದ ಚೆನ್ನಬಸವ ಶ್ರೀ ಏಜ್ಯೂಕೇಷನ ರೂರಲ್ ಕಲ್ಚರಲ್ ಸೊಸೈಟಿಯಿಂದ ಪ್ರತಿ ವರ್ಷ ಕೊಡಮಾಡುವ ರಾಜ್ಯಮಟ್ಟದ ಚೆನ್ನಬಸವ ಶ್ರೀ ಪ್ರಶಸ್ತಿಗೆ ಮಾಧ್ಯಮ, ಸಂಕೀರ್ಣ,ಶಿಕ್ಷಣ,ಸಾಮಾಜಿಕ ಹೋರಾಟ ಕ್ಷೇತ್ರಗಳಿಂದ ಒಟ್ಟು 30 ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ.ಎಸ್.ಕೊಪ್ಪ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮುದ್ದೇಬಿಹಾಳ ತಾಲ್ಲೂಕಿನ ಹಂಡರಗಲ್‌ದಲ್ಲಿ ತ್ರಿಕೂಟೇಶ್ವರ ದೇವಸ್ಥಾನದ ಉಳಿವು,ಜೀರ್ಣೋದ್ಧಾರಕ್ಕೆ ಹೋರಾಟ ಮಾಡಿದ ಕುಮಾರಸ್ವಾಮಿ ಹಿರೇಮಠ, ಮಾಧ್ಯಮ ಕ್ಷೇತ್ರದಲ್ಲಿ

ಒಲೆಯ ಮೇಲೆ ರೊಟ್ಟಿ ಬೇಯಿಸಿ ಪ್ರತಿಭಟನೆ:                     ಪ್ರಧಾನಿ ಮೋದಿ ರಾಜೀನಾಮೆ ಕೊಟ್ಟು ಮನೆಗೆ ತೊಲಗಲಿ

ಒಲೆಯ ಮೇಲೆ ರೊಟ್ಟಿ ಬೇಯಿಸಿ ಪ್ರತಿಭಟನೆ: ಪ್ರಧಾನಿ ಮೋದಿ ರಾಜೀನಾಮೆ ಕೊಟ್ಟು ಮನೆಗೆ ತೊಲಗಲಿ

ಮುದ್ದೇಬಿಹಾಳ : ದೇಶವನ್ನು ಆಳುತ್ತಿರುವ ಪ್ರಧಾನ ನರೇಂದ್ರ ಮೋದಿ ಅವರಿಗೆ ಬಡವರು,ಮಧ್ಯಮ ವರ್ಗದವರದ್ದು ಆಲೋಚನೆ ಇಲ್ಲ.ಅಧಿಕಾರಕ್ಕೆ ಬಂದ ಮೊದಲ ದಿನದಿಂದ ಇದುವರೆಗೂ ಏನೂ ಮಾಡಿಲ್ಲ.ಸಿಲಿಂಡರ್ ದೊರೆಯದಂತಹ ಪರಿಸ್ಥಿತಿ ತಂದಿಟ್ಟಿದ್ದು ತುರ್ತು ಸ್ಥಿತಿ ನಿಭಾಯಿಸಲು ಆಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ತೊಲಗಲಿ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಸಚೀನಗೌಡ ಪಾಟೀಲ ಹೇಳಿದರು. ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಎನ್.ಎಸ್.ಯೂ.ಐ., ಯುವ ಕಾಂಗ್ರೆಸ್ ಹಾಗೂ ಮಹಿಳಾ ಕಾಂಗ್ರೆಸ್‌ನಿAದ ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ ಕೇಂದ್ರ