ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿ ಸುಮಲತಾ ಕ್ಷೌರದ ಹಾವೇರಿ ವಿಶ್ವವಿದ್ಯಾಲಯ ಮಹಿಳಾ ಯೋಗಾಸನ ತಂಡಕ್ಕೆ ಆಯ್ಕೆ.

ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿ ಸುಮಲತಾ ಕ್ಷೌರದ ಹಾವೇರಿ ವಿಶ್ವವಿದ್ಯಾಲಯ ಮಹಿಳಾ ಯೋಗಾಸನ ತಂಡಕ್ಕೆ ಆಯ್ಕೆ.

ಶಿಗ್ಗಾಂವ: ಶಿಗ್ಗಾಂವ ನಗರದ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕ್ರೀಡಾಪಟುಗಳು ಯೋಗಾಸನ ಕ್ರೀಡೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ಹಾವೇರಿ ವಿಶ್ವವಿದ್ಯಾಲಯ, ಕೆರೆಮತ್ತಿಹಳ್ಳಿಯಲ್ಲಿ ಇತ್ತೀಚೆಗೆ ನಡೆದ ಯೋಗಾಸನ ಕ್ರೀಡೆಯಲ್ಲಿ ಹಾವೇರಿ ವಿಶ್ವವಿದ್ಯಾಲಯ ಮಹಿಳಾ ತಂಡದ ವಿ.ವಿ ಆಯ್ಕೆ ಪ್ರಕ್ರಿಯೆ ಜರುಗಿದ್ದು, ಈ ಆಯ್ಕೆಯಲ್ಲಿ ಶ್ರೀ ರಂಭಾಪುರಿ ಪದವಿ ಮಹಾವಿದ್ಯಾಲಯದ ಕ್ರೀಡಾಪಟುಗಳು ಭಾಗವಹಿಸಿದ್ದರು. ಇದರಲ್ಲಿ ತೃತೀಯ ಬಿ.ಕಾಂ ವಿದ್ಯಾರ್ಥಿನಿ ಸುಮಲತಾ ಕ್ಷೌರದ ಅವರು ಹಾವೇರಿ ವಿಶ್ವವಿದ್ಯಾಲಯ ಮಹಿಳಾ ಯೋಗಾಸನ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಆಯ್ಕೆಯಾದ ಸುಮಲತಾ ಕ್ಷೌರದ ಅವರು ಕರ್ನಾಟಕದ ಎಸ್. ವ್ಯಾಸ್ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಬೆಂಗಳೂರಿನಲ್ಲಿ 2026ರ ಜನವರಿ 5ರಿಂದ 9ರವರೆಗೆ ನಡೆಯಲಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಯೋಗಾಸನ (ಮಹಿಳಾ) ಪಂದ್ಯಾವಳಿಯಲ್ಲಿ ಹಾವೇರಿ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಲಿದ್ದಾರೆ.

ಈ ಸಾಧನೆಗೆ ಶ್ರೀಮದ್ ರಂಭಾಪುರಿ ಜಗದ್ಗುರುಗಳು ಅವರು ಸುಮಲತಾ ಕ್ಷೌರದ ಅವರಿಗೆ ಶುಭಾಶೀರ್ವಾದಗಳನ್ನು ನೀಡಿದ್ದು, ಮಹಾವಿದ್ಯಾಲಯದ ಆಡಳಿತಾಧಿಕಾರಿಗಳು, ಕಾರ್ಯದರ್ಶಿಗಳು, ಆಡಳಿತ ಮಂಡಳಿಯ ಸದಸ್ಯರು, ಪ್ರಾಚಾರ್ಯರು, ದೈಹಿಕ ಶಿಕ್ಷಣ ನಿರ್ದೇಶಕರು, ಬೋಧಕ ಹಾಗೂ ಬೋಧಕೆತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ವರದಿಗಾರ: ಸೋಮಶೇಖರ ಲಮಾಣಿ

Latest News

ಪೊಲೀಸ್ ಠಾಣೆಯಲ್ಲಿ ಜಾಗೃತಿ ಸಭೆ:                               ಆಭರಣ ಅಂಗಡಿಗಳಲ್ಲಿ ಸುರಕ್ಷತೆ ಹೆಚ್ಚಿಸಿ-PSI ಸಂಜಯ ತಿಪರೆಡ್ಡಿ

ಪೊಲೀಸ್ ಠಾಣೆಯಲ್ಲಿ ಜಾಗೃತಿ ಸಭೆ: ಆಭರಣ ಅಂಗಡಿಗಳಲ್ಲಿ ಸುರಕ್ಷತೆ ಹೆಚ್ಚಿಸಿ-PSI ಸಂಜಯ ತಿಪರೆಡ್ಡಿ

ಮುದ್ದೇಬಿಹಾಳ : ಈಚೇಗೆ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಚಿನ್ನದ ಅಂಗಡಿ ಕಳ್ಳತನ ಪ್ರಕರಣ ವರದಿಯಾದ

ALERT : ಚಹಾ ಪ್ರಿಯರಿಗೆ ಶಾಕಿಂಗ್ ನ್ಯೂಸ್ : ಪದೇ ಪದೇ ಟೀ’ ಬಿಸಿ ಮಾಡಿ ಕುಡಿಯುವುದು ವಿಷಕ್ಕೆ ಸಮ!

ALERT : ಚಹಾ ಪ್ರಿಯರಿಗೆ ಶಾಕಿಂಗ್ ನ್ಯೂಸ್ : ಪದೇ ಪದೇ ಟೀ’ ಬಿಸಿ ಮಾಡಿ ಕುಡಿಯುವುದು ವಿಷಕ್ಕೆ ಸಮ!

ಬೆಂಗಳೂರು: ಇತ್ತೀಚಿನ ಅಧ್ಯಯನಗಳ ಪ್ರಕಾರ, ಚಹಾ ಕುಡಿದ 15 ರಿಂದ 20 ನಿಮಿಷಗಳ ಒಳಗೆ

2026 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ;          ಮುದ್ದೇಬಿಹಾಳ : ಹಸಿರು ತೋರಣ ಗೆಳೆಯರ ಬಳಗಕ್ಕೆ ಗೂಳಿ ಅಧ್ಯಕ್ಷ

2026 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ; ಮುದ್ದೇಬಿಹಾಳ : ಹಸಿರು ತೋರಣ ಗೆಳೆಯರ ಬಳಗಕ್ಕೆ ಗೂಳಿ ಅಧ್ಯಕ್ಷ

ಮುದ್ದೇಬಿಹಾಳ : ಪಟ್ಟಣದ ಹಸಿರು ತೋರಣ ಗೆಳೆಯರ ಬಳಗದ 2026 ನೇ ಸಾಲಿನ ನೂತನ

BREAKING : ನಟ ವಿಜಯ್ ದೇವರಕೊಂಡ- ರಶ್ಮಿಕಾ ಮಂದಣ್ಣ ಮದುವೆಗೆ ಮುಹೂರ್ತ ಫಿಕ್ಸ್.!

BREAKING : ನಟ ವಿಜಯ್ ದೇವರಕೊಂಡ- ರಶ್ಮಿಕಾ ಮಂದಣ್ಣ ಮದುವೆಗೆ ಮುಹೂರ್ತ ಫಿಕ್ಸ್.!

ಬೆಂಗಳೂರು: ಹೀರೋ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆಗೆ ಮುಹೂರ್ತ ಫಿಕ್ಸ್ ಆಗಿದ್ದು,

ಇನಾಂವೀರಾಪೂರದ ಗರ್ಭಿಣಿ ಹತ್ಯೆ : ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ಆಗ್ರಹ

ಇನಾಂವೀರಾಪೂರದ ಗರ್ಭಿಣಿ ಹತ್ಯೆ : ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ಆಗ್ರಹ

ಮುದ್ದೇಬಿಹಾಳ : ಹುಬ್ಬಳ್ಳಿ ತಾಲ್ಲೂಕಿನ ಇನಾಂವೀರಾಪೂರ ಗ್ರಾಮದಲ್ಲಿ ಏಳು ತಿಂಗಳ ಗರ್ಭಿಣಿ ಹತ್ಯೆಗೈದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಡಿಎಸ್‌ಎಸ್ ಕಾದ್ರೋಳ್ಳಿ ಬಣದ ಕಾರ್ಯಕರ್ತರು ಸೋಮವಾರ ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು. ಪಟ್ಟಣದ ತಹಶೀಲ್ದಾರ್ ಕಚೇರಿಗೆ ಆಗಮಿಸಿದ್ದ ಸಂಘಟನೆ ಮುಖಂಡರು ಶಿರಸ್ತೇದಾರ ಎ.ಬಿ.ಬಾಗೇವಾಡಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಅನ್ಯಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಳು ಎಂಬ ಕಾರಣಕ್ಕೆ ಆಕೆಯ ತಂದೆ ಹಾಗೂ ಇತರರು ಸೇರಿ ಗರ್ಭಿಣಿಯನ್ನು ಹತ್ಯೆ ಮಾಡಿದ

ಮುದ್ದೇಬಿಹಾಳ : ಕ್ಷತ್ರೀಯ ಮರಾಠಾ ಸಮಾಜಕ್ಕೆ ನೂತನ ಪದಾಧಿಕಾರಿಗಳು

ಮುದ್ದೇಬಿಹಾಳ : ಕ್ಷತ್ರೀಯ ಮರಾಠಾ ಸಮಾಜಕ್ಕೆ ನೂತನ ಪದಾಧಿಕಾರಿಗಳು

ಮುದ್ದೇಬಿಹಾಳ : ಸ್ಥಳೀಯ ಕ್ಷತ್ರೀಯ ಮರಾಠಾ ಸಮಾಜದ ನೂತನ ಪದಾಧಿಕಾರಿಗಳನ್ನು ಭಾನುವಾರ ಆಯ್ಕೆ ಮಾಡಲಾಯಿತು. ಪಟ್ಟಣದ ಬಸವ ನಗರದ ಅಂಬಾಭವಾನಿ ಮಂದಿರದಲ್ಲಿ ಜರುಗಿದ ಸಭೆಯಲ್ಲಿ ಸಮಾಜದ ಗೌರವಾಧ್ಯಕ್ಷರನ್ನಾಗಿ ರಾಜೇಂದ್ರ ಭೋಸಲೆ, ನೂತನ ಅಧ್ಯಕ್ಷರಾಗಿ ನೇತಾಜಿ ನಲವಡೆ, ಉಪಾಧ್ಯಕ್ಷರನ್ನಾಗಿ ಅಣ್ಣಾಜಿ ಪವಾರ, ರಾಘವೇಂದ್ರ ಘಾಟಗೆ, ಪ್ರದಾನ ಕಾರ್ಯದರ್ಶಿಯಾಗಿ ಡಾ. ಕೃಷ್ಣಾಜಿ ಪವಾರ, ಸಹ ಕಾರ್ಯದರ್ಶಿಯನ್ನಾಗಿ ಹಣಮಂತ ನಲವಡೆ ಹಾಗೂ ಖಜಾಂಚಿಯನ್ನಾಗಿ ರಮೇಶ ಥೋರಾತ, ಸಹ ಖಜಾಂಚಿಯನ್ನಾಗಿ ಅನೀಲ ಪವಾರ,ಸಂಘಟನಾ ಕಾರ್ಯದರ್ಶಿಯನ್ನಾಗಿ ಸಂತೋಷ