ಮುದ್ದೇಬಿಹಾಳ : ಪಟ್ಟಣದ ಬಿದರಕುಂದಿ ರಸ್ತೆಯಲ್ಲಿರುವ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜಿನ ಫಲಿತಾಂಶ ಶೇ.100ರಷ್ಟಾಗಿದೆ.
ಪರೀಕ್ಷೆಗೆ ಕೂತಿದ್ದ 46 ವಿದ್ಯಾರ್ಥಿಗಳಲ್ಲಿ ಎಲ್ಲರೂ ಉತ್ತೀರ್ಣರಾಗಿದ್ದಾರೆ.ಅದರಲ್ಲಿ ಶೇ.95ಕ್ಕೂ ಅಧಿಕ ಅಂಕವನ್ನು 10 ವಿದ್ಯಾರ್ಥಿಗಳು,ಶೇ.90ಕ್ಕೂ ಅಧಿಕ ಅಂಕವನ್ನು 25 ವಿದ್ಯಾರ್ಥಿಗಳು ಶೇ.80 ಕ್ಕೂ ಹೆಚ್ಚು ಅಂಕವನ್ನು 11 ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.
ಶೇ.98 ಅಂಕ ಪಡೆದ ರೋಹನ್ ಸೂಳಿಭಾವಿ ಮುದ್ದೇಬಿಹಾಳ ನಗರಕ್ಕೆ ಪ್ರಥಮ,ಶೇ.97.5 ಅಂಕ ಪಡೆದಿರುವ ಚೆನ್ನಪ್ಪ ಸಜ್ಜನ ದ್ವಿತೀಯ ಹಾಗೂ ಶೇ.97.33 ಅಂಕ ಪಡೆದಿರುವ ಕಾಶೀಂಬಿ ಮುಲ್ಲಾ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಸಂಸ್ಥೆಯ ಮಾರ್ಗದರ್ಶಕರಾದ ಪ್ರೊ.ಎನ್.ಎ.ಬಿರಾಜದಾರ ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಚೇರಮನ್ ಎಂ.ಎಸ್.ಪಾಟೀಲ,ಸAಸ್ಥೆಯ ಆಡಳಿತಾಧಿಕಾರಿಗಳಾದ ಅಮಿತಗೌಡ ಪಾಟೀಲ, ದರ್ಶನಗೌಡ ಪಾಟೀಲ, ಮುಖ್ಯ ವ್ಯವಸ್ಥಾಪಕ ವಿಜಯಕುಮಾರ ಪಾಟೀಲ,ಶಿಕ್ಷಕ ಹೂಗಾರ ಸೇರಿದಂತೆ ಹಲವರು ಇದ್ದರು.ಇದೇ ವೇಳೆ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.







