ಏ.10 ರಿಂದ ಐದು ದಿನಗಳ ಕಾಲ ವಿಜಯಪುರದಲ್ಲಿ ಪುಸ್ತಕ ಮೇಳ

ಏ.10 ರಿಂದ ಐದು ದಿನಗಳ ಕಾಲ ವಿಜಯಪುರದಲ್ಲಿ ಪುಸ್ತಕ ಮೇಳ

ಮುದ್ದೇಬಿಹಾಳ : ವಿಜಯಪುರ ಜಿಲ್ಲೆಯಲ್ಲಿ ಏ.10 ರಿಂದ 14ರವರೆಗೆ ಮೇ ಸಾಹಿತ್ಯ ಮೇಳ ಬಳಗದ ವತಿಯಿಂದ ಬುದ್ಧ,,ಬಸವ ಹಾಗೂ ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಮೇಳದ ಪ್ರಮುಖರಾದ ಅನಿಲ ಹೊಸಮನಿ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ವಿಜಯಪುರದ ದರ್ಬಾರ್ ಹೈಸ್ಕೂಲ್ ಆವರಣದಲ್ಲಿ ಈ ಪುಸ್ತಕ ಮೇಳವನ್ನು ಹಮ್ಮಿಕೊಳ್ಳಲಾಗಿದೆ .ಮೇಳಕ್ಕೆ ಸಾಹಿತ್ಯ ಬಳಗದಿಂದಲೇ ಆರ್ಥಿಕ ಸಂಪನ್ಮೂಲ ಕ್ರೋಢಿಕರಿಸಲಾಗುತ್ತಿದ್ದು ಯಾವುದೇ ರಾಜಕಾರಣಿಯ ಬಳಿ ಇದಕ್ಕಾಗಿ ಕೈಒಡ್ಡಿಲ್ಲ ಎಂದು ತಿಳಿಸಿದರು.

ಮೇಳದಲ್ಲಿ ಸಾಂಸ್ಕೃತಿಕ ಸಮಾವೇಶ,ಐದು ದಿನಗಳ ಲೇಖಕರ ಮತ್ತು ಓದುಗರ ಮಹಾಮೇಳ,ಅದಕ್ಕಾಗಿ ಲೇಖಕರ ಜೊತೆ ಸಂವಾದ,ವಿದ್ಯಾರ್ಥಿ ಯುವ ಜನರ ಚಿಂತನೆ ಇರಲಿದೆ.ದಲಿತಪರ ಚಳವಳಿಗಳಲ್ಲಿ ದಲಿತೇತರರು ಹೆಚ್ಚೆಚ್ಚು ಭಾಗವಹಿಸುವುದು ಇಂದಿನ ಅಗತ್ಯವಾಗಿದ್ದು ಪ್ರಗತಿಪರ ಹೋರಾಟಗಳಲ್ಲಿ ದಲಿತರು ದೊಡ್ಡ ಸಂಖ್ಯೆಯಲ್ಲಿ ಭಾವಹಿಸುವುದು ಅಷ್ಟೇ ಮುಖ್ಯವಾದ ಸಂಗತಿಯಾಗಿದೆ.ಈ ಕಾರ್ಯಕ್ರಮಕ್ಕೆ ಹತ್ತಾರು ಸಂಘಟನೆಗಳು ಜೊತೆಗೂಡಿವೆ ಎಂದು ತಿಳಿಸಿದರು.

ಮಾನವ ಬಂಧುತ್ವ ವೇದಿಕೆ ಸಂಚಾಲಕ ಎಸ್.ಎಂ.ನೆರಬೆAಚಿ ಮಾತನಾಡಿ,ಏಪ್ರೀಲ್ 10 ರಿಂದ ಆರಂಭಗೊಳ್ಳುವ ಪುಸ್ತಕ ಮೇಳದಲ್ಲಿ ಪುಸ್ತಕ ಮೇಳ ಉದ್ಘಾಟನೆ,ಡಾ.ಅಂಬೇಡ್ಕರ್ ವೃತ್ತದಿಂದ ಪುಸ್ತಕ ಮೇಳದ ಸ್ಥಳದವರೆಗೆ ಪುಸ್ತಕಗಳ ಜೊತೆ ಲೇಖಕರ ಮೆರವಣಿಗೆ ನಡೆಯಲಿದೆ.ಏ.11 ರಂದು ಮಹಾತ್ಮಾ ಜ್ಯೋತಿ ಪುಲೆ ಜನ್ಮದಿನ,ಸಾವಿತ್ರಿಬಾಯಿ ಪುಲೆ ಮಾರ್ಗದಿಂದ ಪುಸ್ತಕ ಮೇಳದ ಸ್ಥಳದವರೆಗೆ ಶಿಕ್ಷಕ ದಂಪತಿಗಳ ಮೆರವಣಿಗೆ ನಡೆಸಲಾಗುವುದು.ಏ.12 ರಂದು ಬಸವಾದಿ ಶರಣ ವಚನಗಳ ಕಟ್ಟುಗಳಿಂದಿಗೆ ಬಸವೇಶ್ವರ ವೃತ್ತದಿಂದ ಪುಸ್ತಕ ಮೇಳದ ಸ್ಥಳದವರೆಗೆ ಬಸವಾನುಯಾಯಿಗಳ ಮೆರವಣಿಗೆ ನಡೆಯಲಿದೆ.ಏ.13 ರಂದು ಅಸ್ಪೃಶ್ಯರ ಶಿಕ್ಷಣಕ್ಕಾಗಿ ಶ್ರಮಿಸಿದ ಕಾಕಾ ಕಾರಖಾನೀಸ್ ಸ್ಮರಣೆ, ಅವರ ಬೋಡಿಂಗನಲ್ಲಿದ್ದು ವಿದ್ಯೆ ಪಡೆದವರು, ಅವರ ಕುಟುಂಬಸ್ಥರಿAದ ಕಾಕಾ ಕಾರಖಾನೀಸ್ ಅವರ ಮನೆಯಿಂದ ಪುಸ್ತಕ ಮೇಳದವರೆಗೆ ಮೆರವಣಿಗೆ ನಡೆಸಲಾಗುತ್ತದೆ.ಎ.14 ರಂದು ಡಾ.ಅಂಬೇಡ್ಕರ್ ಜನ್ಮದಿನ ನಿಮಿತ್ಯ ಅಂಬೇಡ್ಕರ್ ವೃತ್ತದಿಂದ ಸಂವಿದಾನ ಪೀಠಿಕೆ ಕಂಠಪಾಠ ಮಾಡಿದ ವಿದ್ಯಾರ್ಥಿ ಹಾಗೂ ಶಿಕ್ಷಕರ ಮೆರವಣಿಗೆ.ಪ್ರತಿ ದಿನ ಸಂಜೆ 4 ರಿಂದ ರಾತ್ರಿ 9 ಗಂಟೆಯವರೆಗೆ ಕವಿಗೋಷ್ಠಿ,ವಿದ್ಯಾರ್ಥಿಗಳಿಂದ ಪುಸ್ತಕದ ಕುರಿತು ಮಾತು ನಡೆಯಲಿದೆ ಎಂದು ತಿಳಿಸಿದರು.

ಹಿರಿಯ ಸಾಹಿತಿ ಶಿವಪುತ್ರಪ್ಪ ಅಜಮನಿ ಮಾತನಾಡಿ, ಎಲ್ಲ ಶೋಷಿತರಿಗೆ ,ಅನ್ಯಾಯಕ್ಕೊಳಗಾದ ಬಡವರಿಗೆ, ಸಮಾಜದ ಮುಖ್ಯವಾಹಿನಿಯಿಂದ ದೂರ ಇರುವವ ಎಲ್ಲರಿಗೂ ಸಂವಿದಾನ ಮುಖ್ಯ ಬಲವಾಗಿದೆ.ಹೊಸ ಅರಿವನ್ನು ವಿಸ್ತರಿಸುವ ಬುದ್ಧ,ಬಸವ, ಅಂಬೇಡ್ಕರ್‌ರ ಓದು ಇಂದಿನ ಅಗತ್ಯ.ಈ ಉದ್ದೇಶದಿಂದ ಹಮ್ಮಿಕೊಂಡಿರುವ ಪುಸ್ತಕ ಮೇಳದ ಯಶಸ್ವಿಗೆ ಸರ್ವರೂ ಶ್ರಮಿಸಬೇಕು ಎಂದು ಹೇಳಿದರು.
ಬಳಗದ ಸದಸ್ಯರಾದ ಚನ್ನು ಕಟ್ಟೀಮನಿ, ಎಸ್.ಎಂ.ಬೇವಿನಗಿಡದ , ಸೋಮು ಧರಿದೇವಿ, ಹುಸೇನ ಮುಲ್ಲಾ, ಸುನೀಲ ಮನಗೂಳಿ, ಇದ್ದರು.

Latest News

ದಿ.ದೇಶಮುಖ ದಂಪತಿ ಪುಣ್ಯಸ್ಮರಣೆ:                                           ಸಕ್ರಿಯ ರಾಜಕಾರಣಕ್ಕೆ ದೇಶಮುಖ ಮನೆತನದ ಕುಡಿ ಮರಳಲಿ-ಕತ್ತಿ

ದಿ.ದೇಶಮುಖ ದಂಪತಿ ಪುಣ್ಯಸ್ಮರಣೆ: ಸಕ್ರಿಯ ರಾಜಕಾರಣಕ್ಕೆ ದೇಶಮುಖ ಮನೆತನದ ಕುಡಿ ಮರಳಲಿ-ಕತ್ತಿ

ಮುದ್ದೇಬಿಹಾಳ : ಕಲುಷಿತಗೊಂಡಿರುವ ರಾಜಕೀಯ ಕ್ಷೇತ್ರದ ಶುದ್ಧೀಕರಣಕ್ಕೆ ದೇಶಮುಖ ಮನೆತನದಂತ ಕುಟುಂಬದವರು ಸಕ್ರಿಯ ರಾಜಕಾರಣದಲ್ಲಿರಬೇಕು

ನನ್ನ ಜನ ರಾಜೀನಾಮೆ ಕೊಡು ಎಂದರೆ ಕೊಡುತ್ತೇನೆ-ಸಿ.ಎಸ್.ನಾಡಗೌಡ

ನನ್ನ ಜನ ರಾಜೀನಾಮೆ ಕೊಡು ಎಂದರೆ ಕೊಡುತ್ತೇನೆ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ತಮಗೆ ಷಡ್ಯಂತ್ರದಿಂದ ಸಚಿವ ಸ್ಥಾನ ಕೈ ತಪ್ಪಿದ್ದು ಇದಕ್ಕಾಗಿ ತಮ್ಮ ಸ್ಥಾನಕ್ಕೆ

ಪತ್ರಕರ್ತ ಗುಲಾಂ ದಫೇದಾರ ನಾಮಪತ್ರ ಸಲ್ಲಿಕೆ:                            ಅಂಜುಮನ್ ಗತವೈಭವ ಮರುಸ್ಥಾಪಿಸಲು ಯತ್ನ-ಅಬ್ದುಲಗಫೂರ್ ಮಕಾನದಾರ

ಪತ್ರಕರ್ತ ಗುಲಾಂ ದಫೇದಾರ ನಾಮಪತ್ರ ಸಲ್ಲಿಕೆ: ಅಂಜುಮನ್ ಗತವೈಭವ ಮರುಸ್ಥಾಪಿಸಲು ಯತ್ನ-ಅಬ್ದುಲಗಫೂರ್ ಮಕಾನದಾರ

ಮುದ್ದೇಬಿಹಾಳ : ಸ್ವಾತಂತ್ರ ಪೂರ್ವದಲ್ಲಿ ಹುಟ್ಟಿರುವ ಅಂಜುಮನ್ ಇಸ್ಲಾಂ ಕಮೀಟಿಯ ಆರಂಭದಲ್ಲಿದ್ದ ವೈಭವವನ್ನು ಮರಳಿ

ಎಕರೆಗೆ 50 ಸಾವಿರ ರೂ.ಪರಿಹಾರ ನೀಡಿ-ಎನ್.ರವಿಕುಮಾರ್

ಎಕರೆಗೆ 50 ಸಾವಿರ ರೂ.ಪರಿಹಾರ ನೀಡಿ-ಎನ್.ರವಿಕುಮಾರ್

ಮುದ್ದೇಬಿಹಾಳ : ರಾಜ್ಯದಲ್ಲಿ ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಭೀಕರ ಬರಗಾಲ ತಲೆದೋರಿದ್ದು ರೈತರ

ಜು.26 ರಂದು ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ:      ನಿವೃತ್ತ ನೌಕರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ

ಜು.26 ರಂದು ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ: ನಿವೃತ್ತ ನೌಕರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ

ಮುದ್ದೇಬಿಹಾಳ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ(ರಿ) ಹಾಗೂ ಮದರಿಯ ಚೈತ್ರಾ ಆರೋಗ್ಯ ಮತ್ತು ಶಿಕ್ಷಣ ಸೇವಾ ಟ್ರಸ್ಟ್(ರಿ) ಸಹಯೋಗದಲ್ಲಿ ಪತ್ರಿಕಾ ಹಾಗೂ ವೈದ್ಯರ ದಿನಾಚರಣೆಯ ಅಂಗವಾಗಿ ಜು.26 ರಂದು ಬೆಳಗ್ಗೆ 10.00ಕ್ಕೆ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಿವೃತ್ತ ನೌಕರರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ, ಪ್ರತಿಭಾ ಪುರಸ್ಕಾರ ಸಮಾರಂಭ ಆಯೋಜಿಸಲಾಗಿದೆ. ಹುನಗುಂದ-ಮುದ್ದೇಬಿಹಾಳದ ಗಚ್ಚಿನಮಠ-ಹೊಸಮಠದ ಅಮರೇಶ್ವರ ದೇವರು ದಿವ್ಯ ಸಾನಿಧ್ಯ ವಹಿಸುವರು.ಕಾನಿಪ ಧ್ವನಿ ರಾಜ್ಯ ಅಧ್ಯಕ್ಷ

650 ಅಂಕ ಪಡೆದ ಮಾನಸಾ ಎಚ್. ಪ್ರಥಮ:                 ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ 190 ಮೆಡಿಕಲ್ ಸೀಟು ನಿರೀಕ್ಷೆ

650 ಅಂಕ ಪಡೆದ ಮಾನಸಾ ಎಚ್. ಪ್ರಥಮ: ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ 190 ಮೆಡಿಕಲ್ ಸೀಟು ನಿರೀಕ್ಷೆ

ಮುದ್ದೇಬಿಹಾಳ : ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜು ಹಾಗೂ ನೀಟ್ ಅಕಾಡೆಮಿಯ 2026ರ ನೀಟ್ ಫಲಿತಾಂಶ ಪ್ರಕಟಗೊಂಡಿದ್ದು 12 ವಿದ್ಯಾರ್ಥಿಗಳು 600ಕ್ಕೂ ಅಧಿಕ ಅಂಕ ಪಡೆದುಕೊಂಡಿದ್ದಾರೆ. ನೀಟ್ ಫಲಿತಾಂಶದ ಕುರಿತು ಮಾಹಿತಿ ನೀಡಿರುವ ಸಂಸ್ಥೆಯ ಚೇರಮನ್ ಎಂ.ಎಸ್.ಪಾಟೀಲ್, ಆಡಳಿತಾಧಿಕಾರಿ ಅಮೀತಗೌಡ ಪಾಟೀಲ ಅವರು, ಈ ಬಾರಿ 190ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಮೆಡಿಕಲ್ ಸೀಟು ದೊರೆಯುವ ನಿರೀಕ್ಷೆ ಇದೆ ಎಂದು ತಿಳಿಸಿದರು.ನೀಟ್‌ನಲ್ಲಿ 500ಕ್ಕೂ ಅಧಿಕ 140 ವಿದ್ಯಾರ್ಥಿಗಳು,