ಒಂದೇ ದಿನ 55 ಕೇಸ್ : ಹೊಸ ವರ್ಷಾಚರಣೆಗೂ ಮುನ್ನ ‘ಕಿಕ್’ ಇಳಿಸಿದ ಪೊಲೀಸರು..!

ಒಂದೇ ದಿನ 55 ಕೇಸ್ : ಹೊಸ ವರ್ಷಾಚರಣೆಗೂ ಮುನ್ನ ‘ಕಿಕ್’ ಇಳಿಸಿದ ಪೊಲೀಸರು..!

ಮುದ್ದೇಬಿಹಾಳ : 2026ರ ಸಂಭ್ರಮವನ್ನು ಮದ್ಯದೊಂದಿಗೆ ಸಂಭ್ರಮಿಸುವವರಿಗೆ ಇಲ್ಲಿನ ಪೊಲೀಸರು ಶಾಕ್ ನೀಡಿದ್ದಾರೆ.ಡಿ.31ರ ರಾತ್ರಿಯವರೆಗೂ ಕುಡಿದು ವಾಹನ ಚಾಲನೆ, ನಿಗದಿತ ಸಂಖ್ಯೆಗಿoತ ಹೆಚ್ಚು ಪ್ರಯಾಣಿಕರ ಸಾಗಾಟ ಹಾಗೂ ಸಂಚಾರ ನಿಯಮಗಳ ಉಲ್ಲಂಘನೆಯ ಅಡಿ ಒಟ್ಟು 55 ಪ್ರಕರಣಗಳನ್ನು ದಾಖಲಿಸಿ ಹೊಸ ವರ್ಷಾಚರಣೆಯ ಸಂಭ್ರಮದಲ್ಲಿದ್ದವರ ಕಾನೂನು ಪಾಠದ ಮೂಲಕ ಕಿಕ್ ಇಳಿಸಿದ್ದಾರೆ.

ಡಿಸಿಜಿ ವೆಬ್ ನ್ಯೂಸ್‌ನೊಂದಿಗೆ ಮಾಹಿತಿ ಹಂಚಿಕೊoಡ ಪಿ.ಎಸ್.ಐ ಸಂಜಯ ತಿಪರೆಡ್ಡಿ, ನಮ್ಮ ಮೇಲಧಿಕಾರಿಗಳು ಸಾಧ್ಯವಾದಷ್ಟು ಶಾಂತಿಯುತ ಹಾಗೂ ಕಾನೂನು ಪರಿಧಿಯಲ್ಲಿ ಹೊಸ ವರ್ಷವನ್ನು ಸ್ವಾಗತಿಸುವವರಿಗೆ ಮುಕ್ತವಾಗಿರಲು ಸಲಹೆ ಮಾಡಿದ್ದು ಕಾನೂನು ಉಲ್ಲಂಘನೆ ಮಾಡುವವರಿಗೆ ದಂಡ ವಿಧಿಸಲು ಸೂಚನೆ ಇದ್ದ ಕಾರಣ ಹೊಸ ವರ್ಷಾಚರಣೆಗೂ ಮುನ್ನ ನಿಗದಿತ ಸಂಖ್ಯೆಗಿoತ ಹೆಚ್ಚು ಪ್ರಯಾಣಿಕರನ್ನು ಸಾಗಿಸುತ್ತಿದ್ದ 32 ವಾಹನಗಳ ಮೇಲೆ,ಸಂಚಾರ ನಿಯಮ ಉಲ್ಲಂಘಿಸಿದ 16 ಕಾರುಗಳು, ಮದ್ಯಪಾನ ಮಾಡಿ ದ್ವಿಚಕ್ರ ಚಲಾಯಿಸುತ್ತಿದ್ದ ಏಳು ಜನರ ಮೇಲೆ ಪ್ರಕರಣ ದಾಖಲಿಸಿದ್ದೇವೆ ಎಂದು ಮಾಹಿತಿ ನೀಡಿದರು.

ಹೊಸ ವರ್ಷದ ಸ್ವಾಗತದ ಅವಧಿಯಲ್ಲಿ ಯಾವುದೇ ಪ್ರಕರಣ ದಾಖಲಿಸಲಿಲ್ಲ.ಜನರ ಸಂಭ್ರಮಕ್ಕೆ ಪೊಲೀಸರು ಅಡ್ಡಿಯನ್ನುಂಟು ಮಾಡದೇ ಸೂಕ್ತ ಬಿಗಿ ಬಂದೋಬಸ್ತ್ ವಹಿಸಿದ್ದರು ಎಂದು ಮಾಹಿತಿ ನೀಡಿದರು.

ಸಿಪಿಐ ಮೊಹ್ಮದ ಫಸಿವುದ್ದೀನ, ಅಪರಾಧ ವಿಭಾಗದ ಪಿಎಸೈ ಆರ್.ಎಸ್.ಭಂಗಿ,ಪೊಲೀಸರು ಕಾರ್ಯಾಚರಣೆಯಲ್ಲಿದ್ದರು.

Latest News

ಹೋಳ್ಕರ್ ಅವಾರ್ಡ್ ಪರೀಕ್ಷೆಗೆ 900 ವಿದ್ಯಾರ್ಥಿಗಳು ಭಾಗಿ : ಪ್ರತಿಭಾನ್ವಿತ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರ-ಎಂ.ಎನ್.ಮದರಿ

ಹೋಳ್ಕರ್ ಅವಾರ್ಡ್ ಪರೀಕ್ಷೆಗೆ 900 ವಿದ್ಯಾರ್ಥಿಗಳು ಭಾಗಿ : ಪ್ರತಿಭಾನ್ವಿತ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರ-ಎಂ.ಎನ್.ಮದರಿ

ಮುದ್ದೇಬಿಹಾಳ : ಬಡ,ಕೂಲಿ ಕಾರ್ಮಿಕರ ಪ್ರತಿಭಾವಂತ ಮಕ್ಕಳು ಉನ್ನತ ಶಿಕ್ಷಣ ಪಡೆದುಕೊಳ್ಳಲು ನಮ್ಮ ವಿದ್ಯಾಸಂಸ್ಥೆಯಿoದ

ಜೀನಿಯಸ್ ಅವಾರ್ಡ್ ಪರೀಕ್ಷೆ: 187 MBBS  ವಿದ್ಯಾರ್ಥಿಗಳ ಸನ್ಮಾನ                                                                         ಆಕ್ಸಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆ ಜ್ಞಾನದ ಜ್ಯೋತಿಯಾಗಿ ಬೆಳೆದಿದೆ-ನಡಹಳ್ಳಿ

ಜೀನಿಯಸ್ ಅವಾರ್ಡ್ ಪರೀಕ್ಷೆ: 187 MBBS ವಿದ್ಯಾರ್ಥಿಗಳ ಸನ್ಮಾನ ಆಕ್ಸಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆ ಜ್ಞಾನದ ಜ್ಯೋತಿಯಾಗಿ ಬೆಳೆದಿದೆ-ನಡಹಳ್ಳಿ

ಮುದ್ದೇಬಿಹಾಳ : ಮುದ್ದೇಬಿಹಾಳ ತಾಲ್ಲೂಕು ಗುರುತಿಸಿಕೊಳ್ಳುವುದೇ ನಾಗರಬೆಟ್ಟದ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಸಾಧನೆಯ ಕಾರಣಕ್ಕಾಗಿ.ಈ

ಎರಡು ಮೇಕೆಗಳು, 20ಕ್ಕೂ ಅಧಿಕ ಕೋಳಿಗಳು ಸಜೀವ ದಹನ

ಎರಡು ಮೇಕೆಗಳು, 20ಕ್ಕೂ ಅಧಿಕ ಕೋಳಿಗಳು ಸಜೀವ ದಹನ

ಮುದ್ದೇಬಿಹಾಳ : ಬಿರು ಬಿಸಿಲಿನ ತಾಪದ ತೀವ್ರತೆಗೆ ಗುಡಿಸಲು ಹಾಗೂ ಜಾನುವಾರು ಕಟ್ಟುವ ಶೆಡ್‌ಗಳಿಗೆ

ಏ.5 ರಂದು ಅಹಿಲ್ಯಾದೇವಿ ಹೋಳ್ಕರ್ ಅವಾರ್ಡ ಪರೀಕ್ಷೆ: ನಮ್ಮದು ಬಡ ಪ್ರತಿಭಾವಂತ ಮಕ್ಕಳನ್ನು ಬೆಳೆಸುವ ಸಂಸ್ಥೆ-ಎಂ.ಎನ್.ಮದರಿ

ಏ.5 ರಂದು ಅಹಿಲ್ಯಾದೇವಿ ಹೋಳ್ಕರ್ ಅವಾರ್ಡ ಪರೀಕ್ಷೆ: ನಮ್ಮದು ಬಡ ಪ್ರತಿಭಾವಂತ ಮಕ್ಕಳನ್ನು ಬೆಳೆಸುವ ಸಂಸ್ಥೆ-ಎಂ.ಎನ್.ಮದರಿ

ಮುದ್ದೇಬಿಹಾಳ : ನಮ್ಮ ಸಂಸ್ಥೆಯ ಆರಂಭದಿAದ ಇಲ್ಲಿಯವರೆಗೂ ಬಡ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಅವರಿಗೆ

ಯಲಗೂರ ಗೋಶಾಲೆಗೆ ಐದು ಟ್ರಾಕ್ಟರ್ ಮೇವು ಕೊಡುಗೆ

ಯಲಗೂರ ಗೋಶಾಲೆಗೆ ಐದು ಟ್ರಾಕ್ಟರ್ ಮೇವು ಕೊಡುಗೆ

ಮುದ್ದೇಬಿಹಾಳ : ಈಚೆಗೆ ಮುದ್ದೇಬಿಹಾಳದಲ್ಲಿ ಜರುಗಿದ್ದ ಹಿಂದೂ ಮಹಾಸಮ್ಮೇಳನದಲ್ಲಿ ಜಮಾಖರ್ಚು ಆಗಿ ಉಳಿತಾಯದ ಹಣದಲ್ಲಿ ಯಲಗೂರಿನ ಗೋಶಾಲೆಗೆ ಇಲ್ಲಿನ ಹಿಂದೂ ಸಮಾಜದ ಬಾಂಧವರು ಐದು ಟ್ರಾö್ಯಕ್ಟರ್‌ನಷ್ಟು ಮೇವು ಕಾಣಿಕೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಪಟ್ಟಣದ ಹನುಮಾನ ದೇವಸ್ಥಾನದಲ್ಲಿ ಬುಧವಾರ ಸಂಜೆ ಮೇವು ತುಂಬಿದ್ದ ಟ್ರಾö್ಯಕ್ಟರ್‌ಗಳಿಗೆ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಯಲಗೂರ ಗೋಶಾಲೆ ಕಾರ್ಯದರ್ಶಿ ವಿಠ್ಠಲ ಬಿರಾದಾರ, ಇದೇ ಮೊದಲ ಬಾರಿಗೆ ಮುದ್ದೇಬಿಹಾಳದ ಹಿಂದೂ ಸಮಾಜದವರು

60 ಲಕ್ಷ ರೂ.ಶಿಷ್ಯವೇತನ ಗೆಲ್ಲುವ ಅವಕಾಶ..!                         ಏ.3 ರಂದು ಎಕ್ಸಪರ್ಟ್ ಟ್ಯಾಲೆಂಟ್ ಅವಾರ್ಡ್-2026 ಪರೀಕ್ಷೆ

60 ಲಕ್ಷ ರೂ.ಶಿಷ್ಯವೇತನ ಗೆಲ್ಲುವ ಅವಕಾಶ..! ಏ.3 ರಂದು ಎಕ್ಸಪರ್ಟ್ ಟ್ಯಾಲೆಂಟ್ ಅವಾರ್ಡ್-2026 ಪರೀಕ್ಷೆ

ಮುದ್ದೇಬಿಹಾಳ : ಉನ್ನತ ಶಿಕ್ಷಣ ದುಬಾರಿ ಎನ್ನುವ ಕಾಲಘಟ್ಟದಲ್ಲಿ ನಮ್ಮ ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಅತ್ಯಂತ ಕೈಗೆಟುಕುವ ದರದಲ್ಲಿ ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಮಠ್ಸ್ ಸಮೂಹ ಶಿಕ್ಷಣ ಸಂಸ್ಥೆಯಿoದ ಪಿಯು ಶಿಕ್ಷಣ ನೀಡಲಾಗುತ್ತಿದ್ದು ಏ.3 ರಂದು 60 ಲಕ್ಷ ರೂ.ಗಳ ಶಿಷ್ಯವೇತನ ಗೆಲ್ಲುವ ಅವಕಾಶವನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಿದೆ. ಈ ಶಾಲೆಯಲ್ಲಿ ಓದಿದ ಹಲವು ವಿದ್ಯಾರ್ಥಿಗಳು ರಾಜ್ಯಮಟ್ಟದ ಸಾಧನೆ ತೋರಿದ್ದು ಅವರಿಗೆ ಪೂರ್ಣ ಶುಲ್ಕದ ವಿನಾಯ್ತಿಯನ್ನು ಸಂಸ್ಥೆಯ ಚೇರಮನ್ ಬಿ.ಜಿ.ಮಠ