60 ಲಕ್ಷ ರೂ.ಶಿಷ್ಯವೇತನ ಗೆಲ್ಲುವ ಅವಕಾಶ..! ಏ.3 ರಂದು ಎಕ್ಸಪರ್ಟ್ ಟ್ಯಾಲೆಂಟ್ ಅವಾರ್ಡ್-2026 ಪರೀಕ್ಷೆ

60 ಲಕ್ಷ ರೂ.ಶಿಷ್ಯವೇತನ ಗೆಲ್ಲುವ ಅವಕಾಶ..! ಏ.3 ರಂದು ಎಕ್ಸಪರ್ಟ್ ಟ್ಯಾಲೆಂಟ್ ಅವಾರ್ಡ್-2026 ಪರೀಕ್ಷೆ

ಮುದ್ದೇಬಿಹಾಳ : ಉನ್ನತ ಶಿಕ್ಷಣ ದುಬಾರಿ ಎನ್ನುವ ಕಾಲಘಟ್ಟದಲ್ಲಿ ನಮ್ಮ ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಅತ್ಯಂತ ಕೈಗೆಟುಕುವ ದರದಲ್ಲಿ ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಮಠ್ಸ್ ಸಮೂಹ ಶಿಕ್ಷಣ ಸಂಸ್ಥೆಯಿoದ ಪಿಯು ಶಿಕ್ಷಣ ನೀಡಲಾಗುತ್ತಿದ್ದು ಏ.3 ರಂದು 60 ಲಕ್ಷ ರೂ.ಗಳ ಶಿಷ್ಯವೇತನ ಗೆಲ್ಲುವ ಅವಕಾಶವನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಿದೆ.

ಈ ಶಾಲೆಯಲ್ಲಿ ಓದಿದ ಹಲವು ವಿದ್ಯಾರ್ಥಿಗಳು ರಾಜ್ಯಮಟ್ಟದ ಸಾಧನೆ ತೋರಿದ್ದು ಅವರಿಗೆ ಪೂರ್ಣ ಶುಲ್ಕದ ವಿನಾಯ್ತಿಯನ್ನು ಸಂಸ್ಥೆಯ ಚೇರಮನ್ ಬಿ.ಜಿ.ಮಠ ನೀಡಿ ಹೃದಯವೈಶಾಲ್ಯತೆ ತೋರಿದ್ದಾರೆ.ಅಲ್ಲದೇ ಕಷ್ಟ ಎಂದು ಬಂದ ಅತ್ಯಂತ ಕಡು ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಶೈಕ್ಷಣಿಕ ದತ್ತು ಯೋಜನೆಯಡಿ ಉಚಿತವಾಗಿ ಓದಿಸುವ ಕಾರ್ಯ ಮಾಡಿದ್ದಾರೆ.

ಎಕ್ಸಪರ್ಟ್ ಟ್ಯಾಲೆಂಟ್ ಅವಾರ್ಡ್ ಪರೀಕ್ಷೆ : ಏ.3 ರಂದು ಬೆಳಗ್ಗೆ 11ಕ್ಕೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ನಾಗರಬೆಟ್ಟದ ಬಸ್ ನಿಲ್ದಾಣ ಬಳಿ ಇರುವ ಎಕ್ಸಪರ್ಟ್ ಕಾಲೇಜು ಆವರಣದಲ್ಲಿ ಎಕ್ಸಪರ್ಟ್ ಟ್ಯಾಲೆಂಟ್ ಅವಾರ್ಡ್ ಪರೀಕ್ಷೆಯನ್ನು ಪ್ರಸಕ್ತ ಎಸ್.ಎಸ್.ಎಲ್.ಸಿ(ಎಸ್.ಎಸ್.ಎಲ್.ಸಿ/ಸಿಬಿಎಸ್‌ಇ/ಐಸಿಎಸ್‌ಸಿ) ಪರೀಕ್ಷೆ ಮುಗಿಸಿದ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದೆ.

ಬಹುಮಾನದ ವಿವರ : ಪ್ರಥಮ ಬಹುಮಾನ ಗಳಿಸುವ ವಿದ್ಯಾರ್ಥಿಗೆ 25 ಸಾವಿರ ರೂ.ನಗದು ಸಮೇತ 2.80 ಲಕ್ಷ ರೂ.ಶಿಷ್ಯವೇತನ, ದ್ವಿತೀಯ ಬಹುಮಾನ ಗಳಿಸುವ ವಿದ್ಯಾರ್ಥಿಗೆ 20 ಸಾವಿರ ರೂ.ನಗದು À ಸಮೇತ 2.75 ಲಕ್ಷ ರೂ.ಶಿಷ್ಯವೇತನ, ತೃತೀಯ ಬಹುಮಾನ ಗಳಿಸುವ ವಿದ್ಯಾರ್ಥಿಗೆ 15 ಸಾವಿರ ರೂ.ನಗದು ಸಮೇತ 2.70 ಲಕ್ಷ ರೂ.ಶಿಷ್ಯವೇತನ,ನಾಲ್ಕನೇ ಬಹುಮಾನ ಪಡೆದುಕೊಳ್ಳುವ ವಿದ್ಯಾರ್ಥಿಗೆ 10 ಸಾವಿರ ರೂ.ನಗದು ಸಮೇತ 2.65 ಲಕ್ಷ ರೂ.ಶಿಷ್ಯವೇತನ,ಐದನೇ ಬಹುಮಾನ ಪಡೆದುಕೊಳ್ಳುವ ವಿದ್ಯಾರ್ಥಿಗೆ 5ಸಾವಿರ ರೂ.ನಗದು ಸಮೇತ 2.60 ಲಕ್ಷ ರೂ.ಶಿಷ್ಯವೇತನ ನೀಡಲಾಗುತ್ತದೆ.ಪ್ರತಿಭಾನ್ವಿತ 20 ವಿದ್ಯಾರ್ಥಿಗಳಿಗೆ ಎರಡು ವರ್ಷ ಉಚಿತ ಶಿಕ್ಷಣ ನೀಡಲಾಗುವುದು ಎಂದು ಸಂಸ್ಥೆಯ ಆಡಳಿತಾಧಿಕಾರಿ ಪ್ರಜ್ವಲ್ ಬಿ.ಮಠ ಮಾಹಿತಿ ನೀಡಿದರು.

ಪರೀಕ್ಷೆಗೆ ಸಂಪರ್ಕ : ಆಸಕ್ತ ವಿದ್ಯಾರ್ಥಿಗಳು ತಮ್ಮ ಹೆಸರು ನೋಂದಾಯಿಸಲು ವಿದ್ಯಾರ್ಥಿ ಹೆಸರು-ಶಾಲೆ ಹೆಸರು-ವಿಳಾಸ-ಮೊಬೈಲ್ ಸಂಖ್ಯೆ ಟೈಪ್ ಮಾಡಿ ಮೊ.9686906101ಗೆ ಎಸ್.ಎಂ.ಎಸ್ ಮಾಡಬಹುದಾಗಿದೆ.

ಕಳೆದ ಐದು ವರ್ಷಗಳಲ್ಲಿ ನಮ್ಮ ಸಂಸ್ಥೆಯಲ್ಲಿ ಓದಿದ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೆಡಿಕಲ್ ಸೀಟು ಪಡೆದುಕೊಂಡು ವಿವಿಧ ವೈದ್ಯಕೀಯ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.ಕೆಲವರು ಇಂಜಿನಿಯರಿAಗ್ ಸೇರಿದಂತೆ ಇನ್ನುಳಿದ ಸ್ಪರ್ಧಾತ್ಮಕ ಕೋರ್ಸ್ಗಳಲ್ಲಿ ಆಯ್ಕೆಯಾಗಿದ್ದಾರೆ.ನಮ್ಮಲ್ಲಿ ಉತ್ತಮ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ನೀಡುವ ಕಾರ್ಯ ಮಾಡುತ್ತಿದ್ದೇವೆ.
––ಬಿ.ಜಿ.ಮಠ, ಅಧ್ಯಕ್ಷರು, ಆಕ್ಸಫರ್ಡ್ ಮಠ್ಸ್ ಸಮೂಹ ಶಿಕ್ಷಣ ಸಂಸ್ಥೆ,ನಾಗರಬೆಟ್ಟ

Latest News

ಡಿಸಿ ಆದೇಶದ ನಂತರವೇ ಕಾರ್ಖಾನೆ ಆರಂಭ-ಹಣಮoತಗೌಡ ಪಾಟೀಲ್

ಡಿಸಿ ಆದೇಶದ ನಂತರವೇ ಕಾರ್ಖಾನೆ ಆರಂಭ-ಹಣಮoತಗೌಡ ಪಾಟೀಲ್

ಮುದ್ದೇಬಿಹಾಳ : ರಾಜ್ಯದ ಸಕ್ಕರೆ ಕಾರ್ಖಾನೆಗಳ ಅಸೋಶಿಯೇಷನ್‌ದಲ್ಲಿ ಯಾವ ತೀರ್ಮಾನ ಕೈಗೊಂಡಿದೆಯೋ ಅದರಂತೆ ನಮ್ಮ

ಮಾಜಿ ಶಾಸಕ ಎ.ಎಸ್;ಪಾಟೀಲ ನಡಹಳ್ಳಿ ಆಕ್ರೋಶ:         ಆಲಮಟ್ಟಿ ಆಣೆಕಟ್ಟು ಎತ್ತರ ವಿರೋಧಿಸಿದ ತೆಲಂಗಾಣಕ್ಕೆ ಕೃಷ್ಣೆ ನೀರು..!

ಮಾಜಿ ಶಾಸಕ ಎ.ಎಸ್;ಪಾಟೀಲ ನಡಹಳ್ಳಿ ಆಕ್ರೋಶ: ಆಲಮಟ್ಟಿ ಆಣೆಕಟ್ಟು ಎತ್ತರ ವಿರೋಧಿಸಿದ ತೆಲಂಗಾಣಕ್ಕೆ ಕೃಷ್ಣೆ ನೀರು..!

ಮುದ್ದೇಬಿಹಾಳ : ತೆಲಂಗಾಣಕ್ಕೆ ಅಧಿಕೃತ ಆದೇಶವಿಲ್ಲದೆ ಸಿಎಂ ಮೌಖಿಕ ಸೂಚನೆ ಮೇರೆಗೆ ಕೃಷ್ಣಾ ನದಿ

ಅ.13 ರಿಂದ ಕಬ್ಬು ಬೆಳೆಗಾರರಿಂದ ಹೋರಾಟ:                           ದೆಹಲಿಯ ಉನ್ನತ ಮಟ್ಟದ ಸಭೆ ವಿಫಲವಾದರೆ ರಾಷ್ಟ್ರೀಯ ಹೆದ್ದಾರಿ ತಡೆ

ಅ.13 ರಿಂದ ಕಬ್ಬು ಬೆಳೆಗಾರರಿಂದ ಹೋರಾಟ: ದೆಹಲಿಯ ಉನ್ನತ ಮಟ್ಟದ ಸಭೆ ವಿಫಲವಾದರೆ ರಾಷ್ಟ್ರೀಯ ಹೆದ್ದಾರಿ ತಡೆ

ಮುದ್ದೇಬಿಹಾಳ : ದೆಹಲಿಯಲ್ಲಿ ಕೇಂದ್ರ ಸರ್ಕಾರ ರೈತ ಸಂಘಟನೆಗಳೊAದಿಗೆ ಅ.12 ರಂದು ನಡೆಯಲಿರುವ ಉನ್ನತಮಟ್ಟದ

ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜನೆ :                    ಪ್ರಜಾಪ್ರಭುತ್ವದ ಮೌಲ್ಯಗಳ ಅರಿವಿಗೆ ಯುವ ಸಂಸತ್ ಮಾದರಿ

ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜನೆ : ಪ್ರಜಾಪ್ರಭುತ್ವದ ಮೌಲ್ಯಗಳ ಅರಿವಿಗೆ ಯುವ ಸಂಸತ್ ಮಾದರಿ

ಮುದ್ದೇಬಿಹಾಳ : ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳ ಕುರಿತು ಅರಿವು ಮೂಡಿಸಲು ಯುವ ಸಂಸತ್ ಮೂಲಕ

ರೈತರನ್ನು ಅಡ್ಡದಾರಿಗೆಳೆಯುವ ಕುತಂತ್ರಕ್ಕೆ ಬಲಿಯಾಗಬೇಡಿ-ಶಾಸಕ ನಾಡಗೌಡ

ರೈತರನ್ನು ಅಡ್ಡದಾರಿಗೆಳೆಯುವ ಕುತಂತ್ರಕ್ಕೆ ಬಲಿಯಾಗಬೇಡಿ-ಶಾಸಕ ನಾಡಗೌಡ

ಮುದ್ದೇಬಿಹಾಳ : ನಮ್ಮ ತಾಲ್ಲೂಕಿನ ರೈತರನ್ನು ಅಡ್ಡ ಹಾದಿಗೆಳೆಯುವ ಕುತಂತ್ರ ನಡೆದಿವೆ. ಕುತಂತ್ರಿಗಳ ಪ್ರಚೋದನೆಗೆ ಒಳಗಾಗಬೇಡಿ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು. ಪಟ್ಟಣದ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಪ್ರಜಾಸೇವಾ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಾನೂ ಸಹ ರೈತನೇ, ವೇದಿಕೆಯಲ್ಲಿರುವ ಇವರೆಲ್ಲ ಅಧಿಕಾರಿಗಳು ರೈತರಾಗಿದ್ದಾರೆ. ಉದ್ದೇಶಪೂರ್ವಕವಾಗಿ ಇಲ್ಲ ಸಲ್ಲದ ಅಪಪ್ರಚಾರ ನಡೆದಿದೆ. ಸರಕಾರ ನಿಮ್ಮ ಪರವಾಗಿಯೇ ಇರುತ್ತದೆ ಎನ್ನುವುದನ್ನು ಮರೆಯಬೇಡಿ. ಶಾಸಕ ನಾಡಗೌಡರಿಗೆ

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್‌ಪಾಸ್ ವಿತರಣೆ:                                          ನೈಜ ಭಾರತದ ಧ್ವನಿ ಗ್ರಾಮೀಣ ಪತ್ರಕರ್ತರು-ಸಚಿವ ಎಂ.ಬಿ. ಪಾಟೀಲ

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್‌ಪಾಸ್ ವಿತರಣೆ: ನೈಜ ಭಾರತದ ಧ್ವನಿ ಗ್ರಾಮೀಣ ಪತ್ರಕರ್ತರು-ಸಚಿವ ಎಂ.ಬಿ. ಪಾಟೀಲ

ವಿಜಯಪುರ : ಗ್ರಾಮೀಣ ಭಾಗದ ಜನರು, ರೈತರು ಹಾಗೂ ಸಾಮಾನ್ಯ ಜನರ ನೈಜ ಸಮಸ್ಯೆಗಳನ್ನು ಬೆಳಕಿಗೆ ತರುವಲ್ಲಿ ಗ್ರಾಮೀಣ ಪತ್ರಕರ್ತರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು ನೈಜ ಭಾರತದ ಧ್ವನಿಯಾಗಿ ಗ್ರಾಮೀಣ ಪತ್ರಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು. ನಗರದ ಗಾಂಧಿ ಭವನದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಗ್ರಾಮೀಣ ಪತ್ರಕರ್ತರ ಉಚಿತ