ಹೋಳ್ಕರ್ ಅವಾರ್ಡ್ ಪರೀಕ್ಷೆಗೆ 900 ವಿದ್ಯಾರ್ಥಿಗಳು ಭಾಗಿ : ಪ್ರತಿಭಾನ್ವಿತ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರ-ಎಂ.ಎನ್.ಮದರಿ

ಹೋಳ್ಕರ್ ಅವಾರ್ಡ್ ಪರೀಕ್ಷೆಗೆ 900 ವಿದ್ಯಾರ್ಥಿಗಳು ಭಾಗಿ : ಪ್ರತಿಭಾನ್ವಿತ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರ-ಎಂ.ಎನ್.ಮದರಿ

ಮುದ್ದೇಬಿಹಾಳ : ಬಡ,ಕೂಲಿ ಕಾರ್ಮಿಕರ ಪ್ರತಿಭಾವಂತ ಮಕ್ಕಳು ಉನ್ನತ ಶಿಕ್ಷಣ ಪಡೆದುಕೊಳ್ಳಲು ನಮ್ಮ ವಿದ್ಯಾಸಂಸ್ಥೆಯಿoದ ಅಗತ್ಯ ಸಹಕಾರ ಒದಗಿಸಲಾಗುವುದು ಎಂದು ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು,ಸಮಾಜ ಸೇವಕರಾದ ಎಂ.ಎನ್.ಮದರಿ ಹೇಳಿದರು.

ಪಟ್ಟಣದ ಅಭ್ಯುದಯ ವಿಜ್ಞಾನ ಹಾಗೂ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಹಿಲ್ಯಾದೇವಿ ಹೋಳ್ಕರ್ ಅವಾರ್ಡ್ ಪರೀಕ್ಷೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಅವರು ಮಾತನಾಡಿದರು.2017ರಿಂದ ಇಲ್ಲಿವರೆಗೆ ವಿವಿಧ ಸಾಧನೆಗಳನ್ನು ಶಾಲೆ ಮಾಡುತ್ತ ಬಂದಿದೆ.ಇಬ್ಬರು ವಿದ್ಯಾರ್ಥಿಗಳು ನಮ್ಮಲ್ಲೂ ಮೆಡಿಕಲ್ ಸೀಟು ಪಡೆದುಕೊಂಡು ಓದುತ್ತಿದ್ದಾರೆ.ಬರಲಿರುವ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಸ್ಥೆಯಿoದ ತರಬೇತಿ ಆರಂಭಿಸಲಾಗುತ್ತದೆ ಎಂದು ಹೇಳಿದರು.

ಧಾರವಾಡದ ಮಾಜಿ ಕುಲಪತಿ ಡಾ.ಎಚ್.ಬಿ.ವಾಲೀಕಾರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಆನಲೈನ್ ಕ್ಲಾಸ್ ನಡೆಸಲಾಗುತ್ತದೆ.ತಂದೆ ತಾಯಿ ಇಲ್ಲದ ಮಕ್ಕಳು,ಅಂಗವಿಕಲ ಮಕ್ಕಳಿದ್ದರೆ ಅವರಿಗೆ ಉಚಿತ ಶಿಕ್ಷಣ ನೀಡಲಾಗುವುದು.ಪ್ರತಿಭೆಗಳನ್ನು ಪೋಷಿಸುವ ಕೆಲಸ ನಿರಂತರವಾಗಿ ನಮ್ಮ ವಿದ್ಯಾಸಂಸ್ಥೆಯಿoದ ಮಾಡಲಾಗುವುದು ಎಂದು ತಿಳಿಸಿದರು.

ಸಂಸ್ಥೆಯ ಆಡಳಿತಾಧಿಕಾರಿ ಕಿರಣ ಮದರಿ ಮಾತನಾಡಿ, ಜಾಣ ವಿದ್ಯಾರ್ಥಿಗಳನ್ನು ಪ್ರವೇಶ ಪಡೆದುಕೊಂಡು ಅವರನ್ನು ಜಾಣರನ್ನಾಗಿ ಮಾಡುವುದು ದೊಡ್ಡ ವಿಷಯವಲ್ಲ.ಆದರೆ ಮಧ್ಯಮ,ಉತ್ತಮ ಶೈಕ್ಷಣಿಕ ಹಿನ್ನೆಲೆ ಇಲ್ಲದ ವಿದ್ಯಾರ್ಥಿಗಳನ್ನು ನಾವು ನಮ್ಮಿಂದ ಸಾಧ್ಯವಾದಷ್ಟು ಮಟ್ಟಿಗೆ ಅವರಿಗೆ ಗುಣಮಟ್ಟದ ಶಿಕ್ಷಣ ನೀಡಿ ಫಲಿತಾಂಶದ ಸುಧಾರಣೆಗೆ ಆದ್ಯತೆ ನೀಡುತ್ತಿದ್ದೇವೆ.ಬರಲಿರುವ ದಿನಗಳಲ್ಲಿ ನೀಟ್ ಲಾಂಗ್‌ಟರ್ಮ್ ತರಬೇತ ಆರಂಭಿಸಲಾಗುತ್ತಿದ್ದು ಇಚ್ಛೆಯುಳ್ಳುವರು ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಶ್ರೀದೇವಿ ಮದರಿ, ಕಾಲೇಜಿನ ಉಸ್ತುವಾರಿಗಳಾದ ರವಿ ಜಗಲಿ, ಲೆಕ್ಕಾಧಿಕಾರಿ ಬಸವರಾಜ ಬಿಜ್ಜೂರ,ಪ್ರಾಚಾರ್ಯ ಎಂ.ಎo.ಧನ್ನೂರ,ಗುಡದಪ್ಪ ಕಮರಿ,ಬಸವರಾಜ ಗೂಡಲಮನಿ,ವೀರೇಶ ಹುಲಿಕೇರಿ,ಪ್ರಶಾಂತ ಬಿರಾದಾರ, ಗೀತಾ ಹುರಕಡ್ಲಿ,ಬಾಲು ಕರೇಕಲ್ಲ, ಭೀಮಣ್ಣ ಪೂಜಾರಿ, ಆರ್.ಎಂ.ಹರನಾಳ,ಚoದ್ರು ಜೋಗಿ ಮೊದಲಾದವರು ಇದ್ದರು.

ಹೋಳ್ಕರ್ ಅವಾರ್ಡ್ ವಿಜೇತರ ಫಲಿತಾಂಶ : ಅಹಿಲ್ಯಾದೇವಿ ಹೋಳ್ಕರ್ ಪರೀಕ್ಷೆಯ ಫಲಿತಾಂಶದಲ್ಲಿ ಮೊದಲ ಸ್ಥಾನವನ್ನು ಮೂವರು ವಿದ್ಯಾರ್ಥಿನಿಯರು ಹಂಚಿಕೊoಡರು.ಬ್ರಿಲಿಯoಟ್ ಶಾಲೆಯ ಗಂಗಮ್ಮ ಕೋಳೂರ, ಪ್ರಾರ್ಥನಾ ಶಾಲೆಯ ಮೈಮುನಾ ಮುದ್ನಾಳ,ಆಕ್ಸಫರ್ಡ್ ಶಾಲೆಯ ತನುಶ್ರೀ ವಾಲೀಕಾರ ಪ್ರಥಮ ಸ್ಥಾನ ಸಮಾನವಾಗಿ ಹಂಚಿಕೊoಡರೆ,ಎರಡನೇ ಸ್ಥಾನವನ್ನು ಚಂದ್ರು ಚಲವಾದಿ, ಮೂರನೇ ಸ್ಥಾನವನ್ನು ಶ್ರೀನಿವಾಸ ಕಟ್ಟಿಮನಿ ಹಾಗೂ ಸಮರ್ಥ ಬಾಗೇವಾಡಿ ಪಡೆದುಕೊಂಡರು.ಉಚಿತ ಶಿಕ್ಷಣಕ್ಕೆ ಆಯ್ಕೆಯಾದ ಅರ್ಪಿತಾ ಎ.ಎಂ., ಪವನ್ ಜೈನಾಪೂರ,ವೀರೇಶ ಗುರಿಕಾರ,ಶ್ರೀನಿಧಿ ಪಾಟೀಲ,ಸೃಜನ ಜಂಗಿ, ಪ್ರತೀಕ್ಷಾ ಹೂಗಾರ,ಭಾರತಿ ದಯಾನಂದ, ಸರಸ್ವತಿ ಅಲಗುಂಡಿ,ಭವಾನಿ ಕುಲಕರ್ಣಿ,ಅಮೃತಾ ಎ.ಎಚ್. ವಿದ್ಯಾರ್ಥಿಗಳು ಆಯ್ಕೆಯಾದರು.ಪರೀಕ್ಷೆಯಲ್ಲಿ 900ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಜರಾಗಿದ್ದರು.ಪಾರದರ್ಶಕವಾಗಿ ಪರೀಕ್ಷೆಯನ್ನು ಕಾಲೇಜಿನ ಸಿಬ್ಬಂದಿ ನಡೆಸಿಕೊಟ್ಟರು.

ಬಡವರಿಗೆ ಅನುಕೂಲ ಒದಗಿಸುವ ಸಂಸ್ಥೆ: ವಿಜೇತರಾದ ಗಂಗಮ್ಮ ಕೋಳೂರ ಹಾಗೂ ಮೈಮುನಾ ಮುದ್ನಾಳ ಮಾತನಾಡಿ, ಸಮಾಜ ಸೇವಕರಾದ ಎಂ.ಎನ್.ಮದರಿ ಅವರು ಕೈಗೊಂಡಿರುವ ಈ ಶೈಕ್ಷಣಿಕ ಸೇವೆ ಬಡ,ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅದೆಷ್ಟೋ ಆಸರೆಯಾಗುತ್ತದೆ.ಕಲಿಯಬೇಕೆನ್ನುವ ಆದರೆ ಆರ್ಥಿಕ ಶಕ್ತಿ ಇಲ್ಲದವರಿಗೆ ಮದರಿ ಅವರು ನೀಡುತ್ತಿರುವ ಉಚಿತ ಶಿಕ್ಷಣವು ಬಹುದೊಡ್ಡ ಆಸರೆಯಾಗಿದೆ ಎಂದು ಸಂತಸ ಹಂಚಿಕೊoಡರು.

Latest News

ಮೈಲೇಶ್ವರದ ಬ್ರಿಲಿಯಂಟ್ ಶಾಲೆಯ ವಿದ್ಯಾರ್ಥಿನಿಗೆ ಪ್ರಶಸ್ತಿ; ಶಿಕ್ಷಣವನ್ನು ಯಾವತ್ತೂ ಹಣದಿಂದ ಅಳೆಯಬೇಡಿ-ಬಸಯ್ಯ ಮಠ

ಮೈಲೇಶ್ವರದ ಬ್ರಿಲಿಯಂಟ್ ಶಾಲೆಯ ವಿದ್ಯಾರ್ಥಿನಿಗೆ ಪ್ರಶಸ್ತಿ; ಶಿಕ್ಷಣವನ್ನು ಯಾವತ್ತೂ ಹಣದಿಂದ ಅಳೆಯಬೇಡಿ-ಬಸಯ್ಯ ಮಠ

ಮುದ್ದೇಬಿಹಾಳ : ಹೆತ್ತ ತಂದೆ ತಾಯಿಗೆ, ಬೆಳೆಸಿದ ಗುರುವಿಗೆ ಹೆಸರು ತರುವುದು ಅವರ ಉಸಿರು

ಏ.4 ರಂದು ಆಕ್ಸಫರ್ಡ್ ಪಾಟೀಲ್ಸ್ ಜೀನಿಯಸ್ ಸ್ಕಾಲರ್‌ಶಿಪ್ ಪರೀಕ್ಷೆ

ಏ.4 ರಂದು ಆಕ್ಸಫರ್ಡ್ ಪಾಟೀಲ್ಸ್ ಜೀನಿಯಸ್ ಸ್ಕಾಲರ್‌ಶಿಪ್ ಪರೀಕ್ಷೆ

ಮುದ್ದೇಬಿಹಾಳ : ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಸಮೂಹ ಶಿಕ್ಷಣ ಸಂಸ್ಥೆಯಿoದ ಏ.4ರಂದು ಆಕ್ಸಫರ್ಡ್

ಏ.10 ರಿಂದ ಐದು ದಿನಗಳ ಕಾಲ ವಿಜಯಪುರದಲ್ಲಿ ಪುಸ್ತಕ ಮೇಳ

ಏ.10 ರಿಂದ ಐದು ದಿನಗಳ ಕಾಲ ವಿಜಯಪುರದಲ್ಲಿ ಪುಸ್ತಕ ಮೇಳ

ಮುದ್ದೇಬಿಹಾಳ : ವಿಜಯಪುರ ಜಿಲ್ಲೆಯಲ್ಲಿ ಏ.10 ರಿಂದ 14ರವರೆಗೆ ಮೇ ಸಾಹಿತ್ಯ ಮೇಳ ಬಳಗದ

ಉಪನ್ಯಾಸಕಿ ಗುರುದೇವಿ ಹಳ್ಳೂರರಿಗೆ ಪಿ.ಎಚ್.ಡಿ ಪ್ರದಾನ

ಉಪನ್ಯಾಸಕಿ ಗುರುದೇವಿ ಹಳ್ಳೂರರಿಗೆ ಪಿ.ಎಚ್.ಡಿ ಪ್ರದಾನ

ಮುದ್ದೇಬಿಹಾಳ : ಮುದ್ದೇಬಿಹಾಳ ಮೂಲದ ಉಪನ್ಯಾಸಕಿ ಗುರುದೇವಿ ಹಳ್ಳೂರ ಅವರು ಶಿಕ್ಷಣಶಾಸ್ತçದಲ್ಲಿ ವಿಜಯಪುರದ ಕರ್ನಾಟಕ

ಬಡ ಮಕ್ಕಳನ್ನು ಬೆಳೆಸುವ ಶಿಕ್ಷಣ ಸಂಸ್ಥೆಗಳನ್ನು ಸಮಾಜ ಬೆಂಬಲಿಸಲಿ-ನಡಹಳ್ಳಿ

ಬಡ ಮಕ್ಕಳನ್ನು ಬೆಳೆಸುವ ಶಿಕ್ಷಣ ಸಂಸ್ಥೆಗಳನ್ನು ಸಮಾಜ ಬೆಂಬಲಿಸಲಿ-ನಡಹಳ್ಳಿ

ಮುದ್ದೇಬಿಹಾಳ : ಗ್ರಾಮೀಣ ಪ್ರದೇಶದಲ್ಲಿರುವ ಬಡವರ ಮಕ್ಕಳ ಶೈಕ್ಷಣಿಕ ಭವಿಷ್ಯ ಕಟ್ಟುತ್ತಿರುವ ಖಾಸಗಿ ಶಾಲೆಗಳನ್ನು ಬೆಂಬಲಿಸುವ ಕಾರ್ಯ ಸಮಾಜ,ಸಂಘಟನೆಗಳು ಮಾಡಬೇಕು ಎಂದು ಸಮಾಜ ಸೇವಕ,ಕಾಂಗ್ರೆಸ್ ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ ಹೇಳಿದರು. ವಿದ್ಯಾಸ್ಪೂರ್ತಿ ಟ್ಯಾಲೆಂಟ್ ಅವಾರ್ಡ್ ಪರೀಕ್ಷೆಯಲ್ಲಿ ವಿಜೇತ ವಿದ್ಯಾರ್ಥಿಗಳ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ಪ್ರಾಚೀನ ಕಾಲದ ಗುರುಕುಲ ಪದ್ಧತಿಯಲ್ಲಿ ಖಾಸಗಿ ಶಾಲೆಗಳು ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಗೆ ವಸತಿ ಕಲ್ಪಿಸಿ ಶಿಕ್ಷಣ ಕೊಡುವ ಕಾರ್ಯ ಮಾಡುತ್ತಿವೆ.ನೌಕರರ ಮಕ್ಕಳು,ಸ್ಥಿತಿವಂತರ

ಮಕ್ಕಳನ್ನು ಕೇವಲ ಅಂಕದ ಚೀಲ ಮಾಡದಿರಿ: ಡಾ. ಎಂ.ಎಂ.ಬೆಳಗಲ್ಲ

ಮಕ್ಕಳನ್ನು ಕೇವಲ ಅಂಕದ ಚೀಲ ಮಾಡದಿರಿ: ಡಾ. ಎಂ.ಎಂ.ಬೆಳಗಲ್ಲ

ಮುದ್ದೇಬಿಹಾಳ : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪಾಲಕರು ಮಕ್ಕಳ ಮೇಲೆ ಅನಗತ್ಯ ಒತ್ತಡ ಹೇರುವುದನ್ನು ಕೈಬಿಡಬೇಕು. ಮಕ್ಕಳನ್ನು ಕೇವಲ ಅಂಕ ತುಂಬುವ ಚೀಲವನ್ನಾಗಿ ಮಾಡುವ ಮನೋಭಾವದಿಂದ ಹೊರಬಂದು, ಅವರಲ್ಲಿ ಜ್ಞಾನ ಮತ್ತು ಸಾಧನೆಯ ಹಸಿವನ್ನು ಬೆಳೆಸಬೇಕು ಎಂದು ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್ಲ ಹೇಳಿದರು. ಪಟ್ಟಣದ ತಂಗಡಗಿ ರಸ್ತೆಯ ಶಿವಾಚಾರ್ಯ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಭಾನುವಾರ ಸ್ವಾಮಿ ವಿವೇಕಾನಂದ ಇಂಟರ್ನ್ಯಾಷನಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಹಾಗೂ