Tungabhadra dam: ಕ್ರಸ್ಟ್ ಗೇಟ್ ಕಟ್ಟಾದ ಬಗ್ಗೆ ಬಿಜೆಪಿಯವರು ಭಾರತ ಸರ್ಕಾರವನ್ನ ಪ್ರಶ್ನೆ ಮಾಡಬೇಕು: ಸಿಎಂ ಸಿದ್ದರಾಮಯ್ಯ‌ ತೀರುಗೇಟು

Tungabhadra dam: ಕ್ರಸ್ಟ್ ಗೇಟ್ ಕಟ್ಟಾದ ಬಗ್ಗೆ ಬಿಜೆಪಿಯವರು ಭಾರತ ಸರ್ಕಾರವನ್ನ ಪ್ರಶ್ನೆ ಮಾಡಬೇಕು: ಸಿಎಂ ಸಿದ್ದರಾಮಯ್ಯ‌ ತೀರುಗೇಟು

ಕೊಪ್ಪಳ: ತುಂಗಭದ್ರಾ ಡ್ಯಾಂನ (Tungabhadra dam) 19ನೇ ಕ್ರಸ್ಟ್ ಗೇಟ್ ಕಟ್ಟಾಗಿರುವ ಕುರಿತು ಕೊಪ್ಪಳದ ಬಸಾಪುರ ಖಾಸಗಿ ವಿಮಾನ ನಿಲ್ದಾಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು, ವಿರೋಧ ಪಕ್ಷ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ಮಾಡಿದರು.

ನಿಮಗೆ ಬೋರ್ಡ್ ಇದೆ ಎಂದು ಗೊತ್ತಾ? ಅದರ ಚೇರ್ ಮನ್ ಭಾರತ ಸರ್ಕಾರ ನೇಮಕ ಮಾಡುತ್ತೆ. ಅವರ ಮೇಲೆ ಆರೋಪ ಮಾಡೋಕೆ ಬಿಜೆಪಿಗೆ ಏನಾಗಿದೆ? ಭಾರತ ಸರ್ಕಾರವನ್ನು ಪ್ರಶ್ನೆ ಮಾಡಬೇಕು ಅಲ್ವಾ? ಎಂದು ಸಿದ್ದರಾಮಯ್ಯ‌ (Siddaramaiah) ಪ್ರಶ್ನಿಸಿದರು.

Join Our Telegram: https://t.me/dcgkannada

ನಾನು ಇದರಲ್ಲಿ ರಾಜಕೀಯ ಮಾಡುವುದಿಲ್ಲ. ಸಿಡಬ್ಲುಸಿ ಅವರು ಅಧಿಕಾರಿಗಳನ್ನು ನೇಮಕ ಮಾಡುತ್ತಾರೆ. ನಮ್ಮ ರಾಜ್ಯದ ಅಧಿಕಾರಿಗಳು, ತೆಲಂಗಾಣ, ಆಂಧ್ರದ ಅಧಿಕಾರಿಗಳು ಇರುತ್ತಾರೆ. ನೀವು ಕೇಳುವುದಕ್ಕೆಲ್ಲ ಉತ್ತರ ಕೊಡೊಕೆ ಆಗಲ್ಲ. ಬಿಜೆಪಿ ಅವರು ರಾಜಕೀಯ ಮಾಡ್ತಾರೆ. ಅದಕ್ಕೆಲ್ಲ ನಾನು ಉತ್ತರ ಕೊಡುವುದಿಲ್ಲ. ಗೇಟ್ ಕಟ್ ಆಗುವುದಕ್ಕೆ ಸರ್ಕಾರದ ಹೊಣಗೇಡಿತನ ಅಂದ್ರ ಹೇಗೆ? ಎಂದು ಮರುಪ್ರಶ್ನೆ ಮಾಡಿದರು.

ಯಾರು ಬೋರ್ಡ್ ನಿರ್ವಹಿಸುತ್ತಾರೆ ಎಂಬುದು ಮುಖ್ಯ. ಬಿಜೆಪಿ ಅವರು ಅದರ ಬಗ್ಗೆ ತಿಳಿದುಕೊಳ್ಳಲಿ. ಕ್ರಸ್ಟ್‌ ಗೇಟ್ ಕಟ್ ಆಗಿದೆ. ಅದರಿಂದ ನೀರು ಪೋಲ್ ಆಗಿದೆ. ಇನ್ನು ಸೆಪ್ಟೆಂಬರ್ ವರೆಗೂ ಮಳೆ ಇದೆ.‌ ಮಳೆಯಿಂದ ಮತ್ತೆ ಜಲಾಶಯ ತುಂಬುತ್ತೆ ಎನ್ನುವ ಆಶಾಭಾವನೆ ಇರಲಿ ಎಂದರು.

ಇದನ್ನೂ ಓದಿ: Viral: ಭಾರತಕ್ಕೆ‌ ಅವಮಾನ‌ ತೋರಿದ ಆರೋಪ‌.. ಮಧ್ಯರಾತ್ರಿ‌ ಕ್ಯಾಬ್ ನಿಂದ ಹೊರದಬ್ಬಿದ ಉಬರ್ ಚಾಲಕ (ವೈರಲ್ ವಿಡಿಯೋ ನೋಡಿ)

ರೈತರ ಹಿತದೃಷ್ಟಿಯಿಂದ ಗೇಟ್ ದುರಸ್ತಿ ಮುಖ್ಯ. ಮಳೆ ಬರುವುದಾಗಿ ಹವಮಾನ ಇಲಾಖೆ ಮನಸ್ಸೂಚನೆ ನೀಡಿದೆ. ಮತ್ತೆ ಮಳೆಯಿಂದ ಜಲಾಶಯ ಭರ್ತಿಯಾಗುತ್ತೆ. ನಾನು ಯಾರು ಮೇಲೂ ಗೂಬೆ ಕೂರಿಸುವುದಿಲ್ಲ ಎಂದ ಸಿಎಂ ಸಿದ್ದರಾಮಯ್ಯ‌ ವಿಪಕ್ಷಗಳ ಪ್ರಶ್ನೆಗೆ ಉತ್ತರಿಸಿದರು.

Latest News

ಸರಕಾರಿ ಮಹಿಳಾ ಕಾಲೇಜು ಮಹಿಳಾ ಶಿಕ್ಷಣಕ್ಕೆ ಮಾದರಿಯಾಗಲಿ: ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌

ಸರಕಾರಿ ಮಹಿಳಾ ಕಾಲೇಜು ಮಹಿಳಾ ಶಿಕ್ಷಣಕ್ಕೆ ಮಾದರಿಯಾಗಲಿ: ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌

ಧಾರವಾಡ, ಮೇ.27: 2014 ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧಾರವಾಡಕ್ಕೆ ಸರ್ಕಾರಿ ಮಹಿಳಾ ಪ್ರಥಮ

ಸಂಚಾರಿ ಆರೋಗ್ಯ ಘಟಕಗಳಿಗೆ ಸಚಿವ ಸಂತೋಷ್‌ ಲಾಡ್‌ ಚಾಲನೆ

ಸಂಚಾರಿ ಆರೋಗ್ಯ ಘಟಕಗಳಿಗೆ ಸಚಿವ ಸಂತೋಷ್‌ ಲಾಡ್‌ ಚಾಲನೆ

ಧಾರವಾಡ, ಮೇ 27: ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಲಾಡ್‌

ಛಲವಾದಿ ಅವರನ್ನು ಗಡಿಪಾರು ಮಾಡಿ: ಶಾಂತ ಕುಮಾರ ಎಮ್ ಕಟ್ಟಿಮನಿ ಆಗ್ರಹ

ಛಲವಾದಿ ಅವರನ್ನು ಗಡಿಪಾರು ಮಾಡಿ: ಶಾಂತ ಕುಮಾರ ಎಮ್ ಕಟ್ಟಿಮನಿ ಆಗ್ರಹ

ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ

ಮಹಿಳಾ ಕಾಂಗ್ರೆಸ್‌ಗೆ ಪಲ್ಲವಿ ನಾಡಗೌಡ ನೇಮಕ

ಮಹಿಳಾ ಕಾಂಗ್ರೆಸ್‌ಗೆ ಪಲ್ಲವಿ ನಾಡಗೌಡ ನೇಮಕ

ಮುದ್ದೇಬಿಹಾಳ : ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾದ ಶಾಸಕ ನಾಡಗೌಡರ

ಜಟ್ಟಗಿಯಲ್ಲಿ ಧರ್ಮಸಭೆ, ಸಾಮೂಹಿಕ ವಿವಾಹ: ಸಾಮೂಹಿಕ ವಿವಾಹಗಳು ಸಮಾಜಕ್ಕೆ ಮಾದರಿ

ಜಟ್ಟಗಿಯಲ್ಲಿ ಧರ್ಮಸಭೆ, ಸಾಮೂಹಿಕ ವಿವಾಹ: ಸಾಮೂಹಿಕ ವಿವಾಹಗಳು ಸಮಾಜಕ್ಕೆ ಮಾದರಿ

ಮುದ್ದೇಬಿಹಾಳ : ಸಾಮೂಹಿಕ ವಿವಾಹಗಳು ಸಮಾಜಕ್ಕೆ ಮಾದರಿಯಾಗಿದ್ದು ಉಳ್ಳವರು ತಮ್ಮ ಮಕ್ಕಳ ಮದುವೆಗಳಲ್ಲಿ ಬಡವರ ಮದುವೆಗಳನ್ನು ಮಾಡಿಕೊಡುವ ಸಂಪ್ರದಾಯ ಆಚರಣೆಯಲ್ಲಿ ತರಬೇಕು ಎಂದು ಯರಝರಿ ಯಲ್ಲಾಲಿಂಗೇಶ್ವರ ಮಠದ ಮಲ್ಲಾರಲಿಂಗ ಸ್ವಾಮೀಜಿ ಹೇಳಿದರು. ತಾಲ್ಲೂಕು ಜಟ್ಟಗಿಯ ಬೆಳ್ಳೇಶ್ವರ ಜಾತ್ರೋತ್ಸವದ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಲವು ವರ್ಷಗಳಿಂದ ಜಟ್ಟಗಿ ಬೆಳ್ಳೇಶ್ವರ ಜಾತ್ರಾ ಮಹೋತ್ಸವದಲ್ಲಿ ಗ್ರಾಮಸ್ಥರೆ ದೇಣಿಗೆ ಸಂಗ್ರಹಿಸಿ ಇಂತಹ ಧಾರ್ಮಿಕ ಕಾರ್ಯ ನಡೆಸುತ್ತಿರುವುದು ಸಮಾಜದಲ್ಲಿರುವ

ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಸನ್ಮಾನ:ಪರೀಕ್ಷೆ ಬಂದಾಗಲೇ ನಿದ್ದೆಗೆಟ್ಟು ಓದಬೇಡಿ- ಕುಲಕರ್ಣಿ

ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಸನ್ಮಾನ:ಪರೀಕ್ಷೆ ಬಂದಾಗಲೇ ನಿದ್ದೆಗೆಟ್ಟು ಓದಬೇಡಿ- ಕುಲಕರ್ಣಿ

ಮುದ್ದೇಬಿಹಾಳ : ವಿದ್ಯಾರ್ಥಿಗಳು ಪರೀಕ್ಷೆಗಳು ಬಂದಾಗಲೇ ನಿದ್ದೆಗೆಟ್ಟು ಹಗಲು ರಾತ್ರಿ ಎನ್ನದೇ ಓದಿದರೆ ನಿರೀಕ್ಷಿತ ಫಲಿತಾಂಶ ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ತೃತೀಯ ರ‍್ಯಾಂಕ್ ಪಡೆದಿರುವ ಆಕ್ಸಫರ್ಡ್ ಪಾಟೀಲ್ಸ್ ಶಾಲೆಯ ವಿದ್ಯಾರ್ಥಿನಿ ಪ್ರಾರ್ಥನಾ ಕುಲಕರ್ಣಿ ಹೇಳಿದರು. ಪಟ್ಟಣದ ಮಾರುತಿ ನಗರದಲ್ಲಿರುವ ಪ್ರತಿಭಾ ಕಿಡ್ಸ್ ಕಿಂಡರ್ ಗಾರ್ಟನ್ ಸ್ಕೂಲ್‌ನಲ್ಲಿ ಭಾನುವಾರ 2025ನೇ ಸಾಲಿನ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು. ನಿದ್ದೆಗೆಟ್ಟು ಓದಿದರೆ ಆರೋಗ್ಯದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.