ನವದೆಹಲಿ: ಭಾರತಕ್ಕೆ ಅಗೌರವಕ್ಕೆ ಧಕ್ಕೆ ತಂದ ಆರೋಪದ ಮೇಲೆ ಉಬರ್ ಚಾಲಕನೊಬ್ಬ ಪಾಕಿಸ್ತಾನಿ ಪ್ರಯಾಣಿಕ ಹಾಗೂ ಆತನ ಭಾರತೀಯ ಸ್ನೇಹಿತೆಯನ್ನು ತಡರಾತ್ರಿ ಕ್ಯಾಬ್‌ನಿಂದ ಹೊರದಬ್ಬಿರುವ ಘಟನೆ ದೆಹಲಿಯಲ್ಲಿ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗಿದೆ.
ಈ ಘಟನೆಯೂ ಆಗಸ್ಟ್ 10ರ ತಡರಾತ್ರಿ ನವದೆಹಲಿಯಲ್ಲಿ ನಡೆದಿದೆ. ಪಾಕಿಸ್ತಾನಿ ಪುರುಷ ಹಾಗೂ ಭಾರತೀಯ ಮಹಿಳೆಯನ್ನು ಕ್ಯಾಬ್‌ನ ಚಾಲಕ ನಡುರಸ್ತೆಯಲ್ಲಿ ಬಿಟ್ಟು ಹೋಗುವುದು ವಿಡಿಯೋದಲ್ಲಿ ಸೆರೆಯಾಗಿದೆ.
Join Our Telegram: https://t.me/dcgkannada
ಕ್ಯಾಬ್ ಚಾಲಕ ಮಹಿಳೆಯನ್ನು ಮುಸ್ಲಿಂ ಎಂದು ಭಾವಿಸಿ, ಇದು ಹಿಂದೂಸ್ತಾನ್, ನಿಮ್ಮ ಪಾಕಿಸ್ತಾನವಲ್ಲ. ನೀವು ಹಲಾಲ್‌ನ ಸಂತತಿಗಳು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದೆಲ್ಲವನ್ನು ರೆಕಾರ್ಡ್ ಮಾಡಿರುವ ಮಹಿಳೆ, “ಈ ವ್ಯಕ್ತಿ ರಾತ್ರಿ 12:30 ಕ್ಕೆ ನಮ್ಮನ್ನು ನಡುರಸ್ತೆಯಲ್ಲಿ ಬಿಟ್ಟು ಹೋಗಿದ್ದಾನೆ” ಎಂದು ತಿಳಿಸಿದ್ದಾರೆ.
"This is Hindustan, not your Pakistan, you are the child of Halala"
— Dhruv Rathee (Parody) (@dhruvrahtee) August 11, 2024
~These are the words of an Uber driver!
In New Delhi, an Uber driver mistook a woman for a Muslim and dropped her on the road at 12:30 AM in the night!
The driver used several abusive languages against the… pic.twitter.com/PlnJrhdOmn
ಮಹಿಳೆ ಹೇಳುವ ಪ್ರಕಾರ, ಆಕೆಯ ಸ್ನೇಹಿತ ಪಾಕಿಸ್ತಾನದಲ್ಲಿರುವ ತನ್ನ ಸಂಬಂಧಿಕರ ಬಗ್ಗೆ ಹಾಗೂ ತಾನು ದೆಹಲಿಗೆ ಬಂದಿರುವ ಬಗ್ಗೆ ಮಾತನಾಡುತ್ತಿದ್ದಾಗ ಕ್ಯಾಬ್ ಚಾಲಕ ತಪ್ಪಾಗಿ ಭಾವಿಸಿ ವಾಗ್ದಾಳಿಯನ್ನು ಪ್ರಾರಂಭಿಸಿದ್ದಾನೆ. ತಮ್ಮ ಮಾತುಗಳನ್ನು ನಿಯಂತ್ರಿಸಿ ಎಂದು ಕೇಳಿದರೂ ಕ್ಯಾಬ್‌ನಿಂದ ಹೊರದಬ್ಬಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಬೈದಿದ್ದಕ್ಕೆ ಲಾರಿ ಚಾಲಕನ ಕೊಂದೇ ಬಿಟ್ರು ಕಾರ್ಮಿಕರು..!
ಈಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ನೆಟ್ಟಿಗರು ನೂರಾರು ಕಾಮೆಂಟ್‌ಗಳನ್ನು ಮಾಡಿದ್ದಾರೆ. ಭಾರತದ ಬಗ್ಗೆ ಅವಹೇಳನ ಮಾಡಿದ ಆರೋಪದ ಬಳಿಕ ಪ್ರಯಾಣಿಕರನ್ನು ಹೊರಹಾಕಿದ್ದಕ್ಕೆ ಹಲವು ಬಳಕೆದಾರರು ಉಬರ್ ಚಾಲಕನನ್ನು ಹೊಗಳಿದ್ದಾರೆ. ಇನ್ನೂ ಕೆಲವರು ಚಾಲಕ ದುರ್ನಡತೆ ತೋರಿದ್ದಾನೆ. ಇಂತಹ ಚಾಲಕರನ್ನು ಕಂಪನಿ ಅಮಾನತು ಮಾಡಬೇಕೆಂದೂ ಆಗ್ರಹಿಸಿದ್ದಾರೆ.