Celebration: ನಂದವಾಡಗಿ ಶಾಲೆಯಲ್ಲಿ ಸಂಭ್ರಮ ಶನಿವಾರ.. ಸಂತಸದಲ್ಲಿ ತೇಲಾಡಿದ ಚಿಣ್ಣರು..

Celebration: ನಂದವಾಡಗಿ ಶಾಲೆಯಲ್ಲಿ ಸಂಭ್ರಮ ಶನಿವಾರ.. ಸಂತಸದಲ್ಲಿ ತೇಲಾಡಿದ ಚಿಣ್ಣರು..

ನಂದವಾಡಗಿ: ಬಾಗಲಕೋಟೆ ಜಿಲ್ಲೆಯ ಇಲಕಲ್ ತಾಲೂಕಿನ ಸರಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ನಂದವಾಡಗಿಯಲ್ಲಿ ಆಗಸ್ಟ್ ತಿಂಗಳಿನ ಸಂಭ್ರಮ (Celebration) ಶನಿವಾರದ ಚಟುವಟಿಕೆಗಳು ಜರುಗಿದವು.

ಮಕ್ಕಳ ವಿಶಿಷ್ಟ ಕೌಶಲ ಅಭಿವೃದ್ಧಿಗಾಗಿ ಅರಿವು ಅನುಭವ ಅವಲೋಕನಗಳ ಮೂಲಕ ಜ್ಞಾನ ಪಡೆಯುವುದು ಇದರ ಮೂಲ ಉದ್ದೇಶ. ಶಾಲೆಯ ಹೊರಗಿನ ಅನುಭವಗಳನ್ನು ಚಟುವಟಿಕೆ ಗಳ ಮೂಲಕ ಒದಗಿಸಲು ವೇದಿಕೆಯಾಗಿದೆ.

Join Out Telegram: https://t.me/dcgkannada

ಪ್ರತಿ ತಿಂಗಳ ಮೂರನೇ ಶನಿವಾರವನ್ನು ಬ್ಯಾಗ ರಹಿತ ದಿನ ಎಂದು ಆಚರಿಸಲು ರಾಷ್ಟ್ರೀಯ ಶಿಕ್ಷಣ ನೀತಿ 2020ರ ಶಿಫಾರಸ್ಸು ಮಾಡಿದೆ. ವರ್ಷದಲ್ಲಿ ಹತ್ತು ದಿನ ವಿವಿಧ ವಿಷಯಗಳ ಮೇಲೆ ಮಕ್ಕಳಿಗಾಗಿಯೇ ಮಕ್ಕಳಿಂದ ಸನ್ನಿವೇಶ ಸೃಷ್ಟಿಸಿ ಕೌಶಲ ಮತ್ತು ಮೌಲ್ಯಗಳನ್ನು ಬೆಳೆಸುವ ಕಾರ್ಯ ಇಲ್ಲಿ ನಡೆಯುತ್ತಿದೆ.

ಈ ತಿಂಗಳಿನ ಆಧುನಿಕ ತಂತ್ರಜ್ಞಾನ ಸಾಧನಗಳು ಮತ್ತು ಅಂತರ್ಜಾಲದ ಸುರಕ್ಷಿತ ಬಳಕೆ ವಿಷಯದ ಕುರಿತು ಚಟುವಟಿಕೆಗಳು ನಡೆದವು. ನಲಿ ಕಲಿ, ನಾಲ್ಕು ಮತ್ತು ಐದು ಹಾಗೂ ಆರು ಮತ್ತು ಏಳು ತರಗತಿಯ ಮಕ್ಕಳನ್ನು ವಿವಿಧ ಗುಂಪುಗಳನ್ನಾಗಿ ಮಾಡಿ ನೀವೇನು ಬಲ್ಲಿರಿ? ಬನ್ನಿ ಚಿತ್ರ ಬಿಡಿಸೋಣ, ನಟಿಸು – ಕಲಿ ಚಟುವಟಿಕೆಗಳನ್ನು ನಿರ್ವಹಿಸಿದರು.

ಇದನ್ನೂ ಓದಿ: Viral news: ಕಸ ಗುಡಿಸುವನ ಬಳಿ ಇದೆ ಕೋಟಿ ಕೋಟಿ ಆಸ್ತಿ..!

ಮಕ್ಕಳು ಉತ್ತಮವಾಗಿ ಭಾಗವಹಿಸಿ ತಮ್ಮ ಅಭಿಪ್ರಾಯ, ಕೌಶಲವನ್ನು ಹಂಚಿಕೊಂಡರು. ಸಂಭ್ರಮ (Celebration) ಶನಿವಾರದ ವಿವಿಧ ಚಟುವಟಿಕೆಗಳ ಮೂಲಕ ಜ್ಞಾನವನ್ನು ಪಡೆದು, ಕಲಿಕೆ ಹಾಗೂ ಬದುಕಿನಲ್ಲಿ ಅನ್ವಯಿಸಿಕೊಳ್ಳಬೇಕು ಎಂದು ಮಾರ್ಗದರ್ಶಿ ಶಿಕ್ಷಕರು ಅಭಿಪ್ರಾಯಪಟ್ಟರು.

ಸಂಭ್ರಮ ಶನಿವಾರ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಗುರುಮಾತೆ ವಿ ಬಿ ಕುಂಬಾರ, ಮಾರ್ಗದರ್ಶಿ ಶಿಕ್ಷಕರಾದ ಜ್ಯೋತಿ, ಜಿ ಆರ್ ನದಾಫ್, ಶಿವಾನಂದ ಬಿ, ಬಸವರಾಜ ಬಲಕುಂದಿ, ಚಂದ್ರಶೇಖರ ಹುತಗಣ್ಣ, ಕುಮಾರಿ ಅಶ್ವಿನಿಕಪ್ಪರದ ಹಾಗೂ ವಿದ್ಯಾರ್ಥಿನಿಯರು ಹಾಜರಿದ್ದರು.

ಕೊನೆಯಲ್ಲಿ ಕಾರ್ಯಕ್ರಮದ ಕುರಿತು ಮಕ್ಕಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.

Latest News

ಸಚಿವ ಸ್ಥಾನಕ್ಕಾಗಿ ಮುದ್ದೇಬಿಹಾಳ ಬಂದ್’ಗೆ  ಉತ್ತಮ ಪ್ರತಿಕ್ರಿಯೆ;                                                                                ಶಾಸಕ ನಾಡಗೌಡರಿಗೆ ಸಚಿವ ಸ್ಥಾನ ನೀಡದಿದ್ದರೆ ಪಕ್ಷತ್ಯಾಗ

ಸಚಿವ ಸ್ಥಾನಕ್ಕಾಗಿ ಮುದ್ದೇಬಿಹಾಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ; ಶಾಸಕ ನಾಡಗೌಡರಿಗೆ ಸಚಿವ ಸ್ಥಾನ ನೀಡದಿದ್ದರೆ ಪಕ್ಷತ್ಯಾಗ

ಮುದ್ದೇಬಿಹಾಳ : ಆರು ಬಾರಿ ಶಾಸಕರಾಗಿರುವ ರಾಜ್ಯದ ಅತ್ಯಂತ ಸರಳ ಸಜ್ಜನಿಕೆಯ ಹಿರಿಯ ರಾಜಕಾರಣಿ,ಯಾವುದೇ

ಶಾಸಕ ನಾಡಗೌಡರಿಗೆ ಸಚಿವ ಸ್ಥಾನ ವಿಳಂಬ:                  ಕಾoಗ್ರೆಸ್‌ಗೆ ಮಹ್ಮದರಫೀಕ ಶಿರೋಳ ರಾಜೀನಾಮೆ

ಶಾಸಕ ನಾಡಗೌಡರಿಗೆ ಸಚಿವ ಸ್ಥಾನ ವಿಳಂಬ: ಕಾoಗ್ರೆಸ್‌ಗೆ ಮಹ್ಮದರಫೀಕ ಶಿರೋಳ ರಾಜೀನಾಮೆ

ಮುದ್ದೇಬಿಹಾಳ : ಕಾಂಗ್ರೆಸ್ ಪಕ್ಷದ ಜಿಲ್ಲಾ ಯುವ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸಕ್ರಿಯ ಕಾರ್ಯಕರ್ತ

ಜೂ.19 ರಂದು ಪಕ್ಷಾತೀತವಾಗಿ ವ್ಯಾಪಾರಸ್ಥರಿಂದ ಮುದ್ದೇಬಿಹಾಳ ಸ್ವಯಂಪ್ರೇರಿತ ಬಂದ್

ಜೂ.19 ರಂದು ಪಕ್ಷಾತೀತವಾಗಿ ವ್ಯಾಪಾರಸ್ಥರಿಂದ ಮುದ್ದೇಬಿಹಾಳ ಸ್ವಯಂಪ್ರೇರಿತ ಬಂದ್

ಮುದ್ದೇಬಿಹಾಳ : ಶಾಸಕ ಸಿ.ಎಸ್.ನಾಡಗೌಡ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಆಗ್ರಹಿಸಿ ಜೂ.19

ಮುದ್ದೇಬಿಹಾಳ : ಬಲವಂತದ ಬಂದ್ ಕರೆ ಅಗತ್ಯವಿಲ್ಲ-ಪಂಪಣ್ಣವರ

ಮುದ್ದೇಬಿಹಾಳ : ಬಲವಂತದ ಬಂದ್ ಕರೆ ಅಗತ್ಯವಿಲ್ಲ-ಪಂಪಣ್ಣವರ

ಮುದ್ದೇಬಿಹಾಳ ; ಮತಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡ ಅವರಿಗೆ ಅವರ ಸರ್ಕಾರದಲ್ಲಿ ಸಚಿವ ಸ್ಥಾನ ದೊರಕಲಿ.ಅವರ

ಮುದ್ದೇಬಿಹಾಳ ; ಹುಲ್ಲೂರು ಎಸ್.ಎನ್.ಡಿ ಪಬ್ಲಿಕ್ ಶಾಲೆಗೆ ತಹಶೀಲ್ದಾರ್ ಭೇಟಿ

ಮುದ್ದೇಬಿಹಾಳ ; ಹುಲ್ಲೂರು ಎಸ್.ಎನ್.ಡಿ ಪಬ್ಲಿಕ್ ಶಾಲೆಗೆ ತಹಶೀಲ್ದಾರ್ ಭೇಟಿ

ಮುದ್ದೇಬಿಹಾಳ : ರಾಜ್ಯಾದ್ಯಂತ ಸೋಮವಾರದಿಂದ ಶಾಲೆಗಳು ಆರಂಭಗೊOಡಿದ್ದು ತಾಲ್ಲೂಕಿನ ಹುಲ್ಲೂರು ಗ್ರಾಮದ ಎಸ್.ಎನ್.ಡಿ ಪಬ್ಲಿಕ್ ಶಾಲೆಯ ಆರಂಭೋತ್ಸವ ಸರಳವಾಗಿ ನಡೆಸಲಾಯಿತು. ಶಾಲೆಯ ಅಧ್ಯಕ್ಷ ಎಂ.ಎಸ್.ಕೊಪ್ಪ ಅವರ ನೇತೃತ್ವದಲ್ಲಿ ಶಿಕ್ಷಕರು ಸರಸ್ವತಿ ದೇವಿ ಚಿತ್ರಕ್ಕೆ ಪೂಜೆ ಸಲ್ಲಿಸಿದರು.ಇದೇ ವೇಳೆ ಶಾಲೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿದ ತಹಶೀಲ್ದಾರ್ ಕೀರ್ತಿ ಚಾಲಕ್ ಅವರು, ಸರಸ್ವತಿ ದೇವಿಗೆ ನಮಿಸಿ ಶಾಲಾ ಮಕ್ಕಳಿಗೆ ಹೂವು ನೀಡಿ ಶಾಲಾ ಆರಂಭೋತ್ಸವಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಇದೇ ವೇಳೆ

ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ:             ಅಸಮರ್ಪಕ ವಿದ್ಯುತ್ ಪೂರೈಕೆ,ಟಿಸಿ ಸಮಸ್ಯೆಗೆ ರೈತರ ಆಕ್ರೋಶ

ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ: ಅಸಮರ್ಪಕ ವಿದ್ಯುತ್ ಪೂರೈಕೆ,ಟಿಸಿ ಸಮಸ್ಯೆಗೆ ರೈತರ ಆಕ್ರೋಶ

ಮುದ್ದೇಬಿಹಾಳ : ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕಳೆದ ಒಂದು ತಿಂಗಳಿನಿoದ ಅಮಸರ್ಪಕ ವಿದ್ಯುತ್ ಪೂರೈಕೆ,ರೈತರಿಗೆ ಟಿಸಿ ಒದಗಿಸುವಲ್ಲಿ ವಿಳಂಬ ಧೋರಣೆ ಖಂಡಿಸಿದ ರೈತರು ಸೋಮವಾರ ಇಲ್ಲಿನ ಹೆಸ್ಕಾಂ ಕಚೇರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ತಾಲ್ಲೂಕಿನ ಅನೇಕ ಗ್ರಾಮಗಳಿಂದ ಬಂದಿದ್ದ ರೈತರು ತಮ್ಮೂರುಗಳಲ್ಲಿ ಎದುರಿಸುತ್ತಿರುವ ವಿದ್ಯುತ್ ಸಂಬoಧಿ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು. ಸಂಘದ ರಾಜ್ಯ ಉಪಾಧ್ಯಕ್ಷ ಶಾಂತಗೌಡ